ಚಿಲ್ಲರೆ ವ್ಯಾಪಾರಿಗಳಿಂದ ಶಾಪಿಂಗ್ ಡಾಟಾ ಕಲೆಹಾಕುವ ಫೇಸ್ ಬುಕ್

By Gizbot Bureau
|

ಟಾಪ್ ರೀಟೈಲರ್ ಗಳ ಜೊತೆಗೆ ಫೇಸ್ ಬುಕ್ ಕೈಜೋಡಿಸಿದ್ದು ರೀಟೈಲ್ ಸ್ಟೋರ್ ಗಳಲ್ಲಿ ಗ್ರಾಹಕರು ಏನನ್ನು ಖರೀದಿಸುತ್ತಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣವು ಡಾಟಾವನ್ನು ಕಲೆಹಾಕಲಿದೆ. ನಿರ್ಧಿಷ್ಟ ಜಾಹೀರಾತುಗಳಿಗಾಗಿ ಫೇಸ್ ಬುಕ್ ಇದೀಗ ಕೆಲವು ಗ್ರಾಹಕರನ್ನು ಆ ಮೂಲಕ ಟಾರ್ಗೆಟ್ ಮಾಡುವ ಸಾಧ್ಯತೆ ಇದೆ.

ಬ್ಯುಸಿನೆಸ್ ಇನ್ ಸೈಡರ್ ವರದಿ:

ಬ್ಯುಸಿನೆಸ್ ಇನ್ ಸೈಡರ್ ವರದಿ:

ಬ್ಯುಸಿನೆಸ್ ಇನ್ ಸೈಡರ್ ವರದಿಯು ಹೇಳುವ ಪ್ರಕಾರ ಕೇವಲ ಆನ್ ಲೈನ್ ಶಾಪಿಂಗ್ ಮಾತ್ರವೇ ಅಲ್ಲ, ಗ್ರಾಹಕರು ಇನ್-ಸ್ಟೋರ್ ನಲ್ಲಿ ಏನನ್ನು ಖರೀದಿಸುತ್ತಾರೆ ಎಂಬುದು ಮತ್ತು ಆ ಗ್ರಾಹಕರನ್ನು ಜಾಹೀರಾತುಗಳ ಮೂಲಕ ಟಾರ್ಗೆಟ್ ಮಾಡುವುದು ಫೇಸ್ ಬುಕ್ ನ ಪ್ರಮುಖ ಉದ್ದೇಶವಾಗಿದ್ದು ಅದಕ್ಕಾಗಿಯೇ ಈ ಟ್ರ್ಯಾಕ್ ರೆಕಾರ್ಡ್ ಮತ್ತು ಡಾಟಾವನ್ನು ಕಲೆಹಾಕುವುದಕ್ಕೆ ಫೇಸ್ ಬುಕ್ ಮುಂದಾಗಿದೆ.

ಜಾಹೀರಾತುಗಳಿಗಾಗಿ ಟಾರ್ಗೆಟ್:

ಜಾಹೀರಾತುಗಳಿಗಾಗಿ ಟಾರ್ಗೆಟ್:

ರೀಟೈಲ್ ಕಂಪೆನಿಗಳು ಫೇಸ್ ಬುಕ್ ಗೆ ಹೆಸರು, ಫೋನ್ ನಂಬರ್ ಮತ್ತು ಇಮೇಲ್ ವಿಳಾಸ ಜೊತೆಗೆ ಗ್ರಾಹಕರು ಯಾವ ಪ್ರೊಡಕ್ಟ್ ನ್ನು ಖರೀದಿಸಿದ್ದಾರೆ ಎಂಬುದನ್ನು ಕಳುಹಿಸಿ ಕೊಡುತ್ತದೆ. ಇದರ ಆಧಾರದಲ್ಲಿ ಜನರನ್ನು ಬ್ಯುಸಿನೆಸ್ ಜಾಹೀರಾತುಗಳಿಗಾಗಿ ಟಾರ್ಗೆಟ್ ಮಾಡಲಾಗುತ್ತದೆ.

ಲಾಭ:

ಲಾಭ:

ಜಾಹೀರಾತುಗಳ ಮಾರಾಟದಲ್ಲಿಯೇ ಫೇಸ್ ಬುಕ್ ಹೆಚ್ಚಿನ ಸಂಪಾದನೆಯನ್ನು ಮಾಡುತ್ತದೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ(ಜುಲೈ-ಸೆಪ್ಟೆಂಬರ್) ಫೇಸ್ ಬುಕ್ ನ ಆದಾಯ $17.6 ಬಿಲಿಯನ್ ಮತ್ತು ಇದರಲ್ಲಿ ಜಾಹೀರಾತುಗಳಿಂದ ಬಂದಿರುವ ಆದಾಯ $17.3 ಬಿಲಿಯನ್. ಕಂಪೆನಿ ಹೇಳುವ ಪ್ರಕಾರ ಪ್ರತಿಯೊಂದು ಇಂಡಸ್ಟ್ರಿಯ ಸಾಮಾನ್ಯ ಅಭ್ಯಾಸ ಇದಾಗಿದೆ.

ರೆಡ್ ಇಟ್ ನಲ್ಲಿ ಹಂಚಿಕೆ:

ರೆಡ್ ಇಟ್ ನಲ್ಲಿ ಹಂಚಿಕೆ:

ಕಂಪೆನಿಯ ವಕ್ತಾರರು ಹೇಳುವ ಪ್ರಕಾರ ಚಿಲ್ಲರೆ ವ್ಯಾಪಾರಿಗಳು ಅಂಗಡಿಯಲ್ಲಿನ ಖರೀದಿಯಂತೆ ಇವೆಂಟ್ ಗಳನ್ನು ಹಂಚಿಕೊಳ್ಳುವ ಮೂಲಕ ಫೇಸ್ ಬುಕ್ ನಲ್ಲಿ ಜಾಹೀರಾತುಗಳೊಂದಿಗೆ ತಮ್ಮ ಗ್ರಾಹಕರನ್ನು ತಲುಪುದಕ್ಕೆ ಸಾಧ್ಯವಾಗುತ್ತದೆ. ಹಲವಾರು ಬಳಕೆದಾರರು ಈಗಾಗಲೇ ರೆಡ್ ಇಟ್ ನಂತರ ಸಾಮಾಜಿಕ ಜಾಲತಾಣದ ಫ್ಲ್ಯಾಟ್ ಫಾರ್ಮ್ ನಲ್ಲಿ ಫೇಸ್ ಬುಕ್ ನ ಉದ್ದೇಶಿತ ಜಾಹೀರಾತಿನ ಬಗ್ಗೆ ಪೋಸ್ಟ್ ಮಾಡಿದ್ದಾರೆ.ಮ್ಯಾಕಿ ಮತ್ತು ಡಿಕ್ ನ ಕ್ರೀಡಾ ಸಾಮಗ್ರಿಗಳು ಈಗಾಗಲೇ ಫೇಸ್ ಬುಕ್ ನೊಂದಿಗೆ ಕೈಜೋಡಿಸಿರುವ ಚಿಲ್ಲರೆ ವ್ಯಾಪಾರಿಗಳಾಗಿದ್ದಾರೆ.

ಬಳಕೆದಾರರನ್ನು ಟಾರ್ಗೆಟ್ ಮಾಡುವ ಬಗ್ಗೆ ಒಪ್ಪಿಕೊಂಡ ಫೇಸ್ ಬುಕ್:

ಬಳಕೆದಾರರನ್ನು ಟಾರ್ಗೆಟ್ ಮಾಡುವ ಬಗ್ಗೆ ಒಪ್ಪಿಕೊಂಡ ಫೇಸ್ ಬುಕ್:

ಭದ್ರತಾ ವಿಚಾರಕ್ಕಾಗಿ ತನ್ನ ಬಳಕೆದಾರರು ನೀಡಲಾಗಿರುವ ಫೋನ್ ನಂಬರ್ ನ್ನು ಫೇಸ್ ಬುಕ್ ತನ್ನ ಜಾಹೀರಾತುದಾರರನ್ನು ಗುರಿಯಾಗಿಸುವುದಕ್ಕಾಗಿ ಬಳಸುತ್ತದೆ ಎಂಬ ಬಗ್ಗೆ ಕಳೆದ ವರ್ಷವೇ ಒಪ್ಪಿಕೊಂಡಿದೆ.

ಎರಡು ಯುಎಸ್ ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರು ನಡೆಸಿದ ಸಂಶೋಧನಾ ಕಾರ್ಯಗಳನ್ನು ಗಿಜ್ಮೊಡೋ ವರದಿ ಮಾಡಿದ ಬಳಿಕ ವಯಕ್ತಿಕವಾಗಿ ಯಾವುದೇ ಬಳಕೆದಾರನೂ ಕೂಡ ತನ್ನ ವಯಕ್ತಿಕ ಮಾಹಿತಿಯನ್ನು ಇತರರಿಗ ನೀಡುವುದಕ್ಕೆ ಒಪ್ಪಿಗೆ ನೀಡದೇ ಇದ್ದರೂ ಕೂಡ ಬಳಕೆದಾರರ ಫೋನ್ ಸಂಖ್ಯೆಯನ್ನು ಗ್ರಾಹಕರನ್ನು ಜಾಹೀರಾತಿಗಾಗಿ ಟಾರ್ಗೆಟ್ ಮಾಡುವುದಕ್ಕೆ ಬಳಸಲಾಗುತ್ತದೆ ಎಂಬುದನ್ನು ಫೇಸ್ ಬುಕ್ ಒಪ್ಪಿಕೊಂಡಿದೆ.

ಹಂತಗಳ ಪರಿಚಯ:

ಹಂತಗಳ ಪರಿಚಯ:

ಜುಲೈ ನಲ್ಲಿ ಫೇಸ್ ಬುಕ್ ಹೊಸದಾಗಿ ಕೆಲವು ಹಂತಗಳನ್ನು ಪರಿಚಯಿಸಿದ್ದು ತನ್ನ ಫ್ಲ್ಯಾಟ್ ಫಾರ್ಮ್ ನಲ್ಲಿ ಹೇಗೆ ಜಾಹೀರಾತು ಟಾರ್ಗೆಟ್ ಗಳು ಗ್ರಾಹಕರ ಮಾಹಿತಿಯನ್ನು ಆಧರಿಸಿ ನಡೆಯುತ್ತದೆ ಎಂಬ ಗ್ರಾಹಕರು ತಿಳಿದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಪಾರದರ್ಶಕತೆ ಮತ್ತು ಕಂಟ್ರೋಲ್:

ಹೆಚ್ಚಿನ ಪಾರದರ್ಶಕತೆ ಮತ್ತು ಕಂಟ್ರೋಲ್ ನ್ನು ನೀಡುವ ಉದ್ದೇಶದಿಂದ ಸಾಮಾಜಿಕ ನೆಟ್ ವರ್ಕಿಂಗ್ ದೈತ್ಯ ಬಳಕೆದಾರರಿಗೆ ಜಾಹೀರಾತು ಟಾರ್ಗೆಟ್ ಬಗ್ಗೆ ಹೆಚ್ಚು ಆಳವಾಗಿ ತಿಳಿದುಕೊಳ್ಳುವುದಕ್ಕೆ ಮತ್ತು ವಿಶೇಷ ಜಾಹೀರಾತುಗಳಲ್ಲಿ ಕುತೂಹಲ ಅಥವಾ ಕೆಟಗರಿಯ ಮ್ಯಾಚಿಂಗ್ ಬಗ್ಗೆ ಮಾಹಿತಿ ನೀಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಕಸ್ಟಮೈಜ್ ಮಾಡಲು ಅವಕಾಶ:

ಫೇಸ್ ಬುಕ್ ನಲ್ಲಿ ಜಾಹೀರಾತುಗಳು ನಿಮಗೆ ತೋರಿಸುತ್ತದೆ ಎಂಬುದನ್ನು ತಿಳಿಯುವುದಕ್ಕಾಗಿ ಪ್ರೈವೆಸಿ ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಆಡ್ ಪ್ರಿಫರೆನ್ಸ್ ನ್ನು ಕ್ಲಿಕ್ ಮಾಡಿ. ಫೇಸ್ ಬುಕ್ ನಿಮಗೆ ಯಾವ ರೀತಿಯ ಜಾಹೀರಾತುಗಳನ್ನು ತೋರಿಸಬೇಕು ಎಂಬ ಬಗ್ಗೆ ಕಸ್ಟಮೈಸೇಷನ್ ಮಾಡುವುದಕ್ಕೆ ಇಲ್ಲಿ ನಿಮಗೆ ಅವಕಾಶವಿರುತ್ತದೆ.

Best Mobiles in India

Read more about:
English summary
Facebook Now Tracks in-store shopping data

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X