TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಫೇಸ್‌ಬುಕ್ ಬಗೆಗಿನ 12 ಕುತೂಹಲಕಾರಿ ವಿಷಯಗಳು ಬಹಿರಂಗ
ಫೇಸ್‌ಬುಕ್ 12ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ಫೇಸ್‌ಬುಕ್ ಬಳಕೆದಾರರಿಗೆಲ್ಲಾ ತಿಳಿದಿರಬಹುದು. ಇದೇ ಖುಷಿಯಲ್ಲಿ ಫೇಸ್‌ಬುಕ್ ತನ್ನ ಬಗೆಗಿನ 12 ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದೆ. ಪ್ರಪಂಚದಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು ಅಂದ್ರೆ ಚೀನ. ಆದ್ರೆ ಫೇಸ್‌ಬುಕ್ ಚೀನ ಜನಸಂಖ್ಯೆಯನ್ನು ಮೀರಿಸಿ ಅಲ್ಲಿನ ಜನಸಂಖ್ಯೆಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದೆ. ಹಾಗಾದರೆ ಬನ್ನಿ ಫೇಸ್‌ಬುಕ್ ಬಗೆಗಿನ ಕುತೂಹಲಕಾರಿ ವಿಷಯಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.
1
ಫೇಸ್‌ಬುಕ್‌ಗೆ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಫೇಸ್‌ಬುಕ್ ಪ್ರಸ್ತುತದಲ್ಲಿ 1.6 ಶತಕೋಟಿ ದಿನನಿತ್ಯ ಬಳಕೆದಾರರನ್ನು ಹೊಂದಿದೆ. 2015 ರ ಮಧ್ಯಾಂತರದಲ್ಲಿ ಫೇಸ್‌ಬುಕ್ 125 ಶತಕೋಟಿ ಬಳಕೆದಾರರನ್ನು ಹೊಂದಿತ್ತು. 2016 ರಲ್ಲಿ ಭಾರತದಲ್ಲಿ ಫೇಸ್‌ಬುಕ್ 161 ಶತಕೋಟಿ ದಾಟುವ ನಿರೀಕ್ಷೆ ಹೊಂದಿದೆ.
2
ಫೇಸ್‌ಬುಕ್‌ಗೆ ಭಾರತ ಅತಿದೊಡ್ಡ ಮಾರುಕಟ್ಟೆ. ಆದರೆ ಅಮೇರಿಕ ಮಾತ್ರ ತನ್ನ ಲಾಭಕ್ಕೆ ಉತ್ತಮ ಮಾರುಕಟ್ಟೆಯಾಗಿದೆ.
3
ಮೌಲ್ಯ ಪ್ರತಿ ತ್ರೈಮಾಸಿಕದಲ್ಲಿ ಪ್ರಪಂಚದಾದ್ಯಂತ ಪ್ರತಿ ಫೇಸ್‌ಬುಕ್ ಬಳಕೆದಾರನಿಂದ $3.73 (251.87 ರೂ) ಮೌಲ್ಯವನ್ನು ಸಂಪಾದಿಸಲಾಗುತ್ತದೆಯಂತೆ. ಇದನ್ನು ಇತ್ತೀಚಿನ ಲಾಭದ ವರದಿಯ ಪ್ರಕಾರ ಹೇಳಲಾಗಿದೆ.
4
ಫೇಸ್‌ಬುಕ್ 2010ರಲ್ಲಿ ಫೇಸ್‌ಬುಕ್ ಮೂಲದ ಬಗ್ಗೆ ನಿರ್ಮಿಸಲಾದ "ದಿ ಸೋಶಿಯಲ್ ನೆಟ್‌ವರ್ಕ್" ಸಿನಿಮಾವು 4 ಗೋಲ್ಡೆನ್‌ಗೋಬ್ಸ್‌ಪ್ರಶಸ್ತಿ ಪಡೆದಿದ್ದು, ಅಲ್ಲದೇ ಉತ್ತಮ ಸಿನಿಮಾ ಮತ್ತು ಉತ್ತಮ ನಿರ್ದೇಶನ ಪ್ರಶಸ್ತಿಯನ್ನು ಪಡೆದಿದೆ. ಇನ್ನೊಂದು ವಿಶೇಷತೆ ಎಂದರೆ 3 ಆಸ್ಕರ್ ಪ್ರಶಸ್ತಿಯನ್ನು ಉತ್ತಮ ಸ್ಕ್ರೀನ್ ಪ್ಲೇ ಗಾಗಿ ಪಡೆದಿದೆ.
5
ಫೇಸ್‌ಬುಕ್ 2008ರಲ್ಲಿ ಟಾಪ್ ಮೊದಲ ಸಾಮಾಜಿಕ ಜಾಲತಾಣವಾಗಿ ಹೊರಹೊಮ್ಮಿತು.
6
ಫೇಸ್‌ಬುಕ್ ಮೊದಲ ಬಂಡವಾಳ ಹೂಡಿಕೆಯಾಗಿ $500,000 (33,765,225 ರೂಪಾಯಿಗಳು) ಹಣವನ್ನು ಪೇಪಾಲ್ ಸಹ-ಸಂಸ್ಥಾಪಕರಾದ ಪೀಟರ್ ಥಿಯೆಲ್‌ರಿಂದ ಪಡೆಯಿತು.
7
ಸರ್ಚ್ ಇಂಜಿನ್ ಗೂಗಲ್ ಅನ್ನು ದಿಕ್ಕರಿಸಿ, 2007 ರಲ್ಲಿ ಫೇಸ್‌ಬುಕ್ ತನ್ನ 1.7% ಪಾಲನ್ನು $240 ಮೌಲ್ಯಕ್ಕೆ ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡಿತು.
8
ನವೆಂಬರ್ 2013 ರಲ್ಲಿ ಸ್ನಾಪ್‌ಚಾಟ್ ಮೆಸೇಜಿಂಗ್ ಆಪ್ ಫೇಸ್‌ಬುಕ್‌ನ $3 ಬಿಲಿಯನ್ (202 ಶತಕೋಟಿ) ಸ್ವಾಧೀನ ಪ್ರಸ್ತಾವವನ್ನು ತಿರಸ್ಕರಿಸಿತು. ನಂತರದಲ್ಲಿ ಫೇಸ್‌ಬುಕ್‌ನ ದೊಡ್ಡ ಸ್ವಾಧೀನತೆಗಳೆಂದರೆ ಇನ್ಸ್ಟಗ್ರಾಂ $1 ಬಿಲಿಯನ್ (2012), ವಾಟ್ಸಾಪ್ 19 ಬಿಲಿಯನ್( 2014), ಓಕುಲಸ್ ವಿಆರ್$2 ಬಿಲಿಯನ್ (2014).
9
2011 ಜೂನ್‌ನಲ್ಲಿ ಯೂರೋಪ್‌ನ ಐಸ್‌ಲ್ಯಾಂಡ್ ದೇಶ ತನ್ನ ದೇಶದಲ್ಲಿನ ಜನರಿಂದ ಫೇಸ್‌ಬುಕ್ ಮತ್ತು ಟ್ವಿಟರ್‌ಮೂಲಕ ಸಲಹೆಗಳನ್ನು ಸ್ವೀಕರಿಸಿ ಸಂವಿಧಾನವನ್ನು ಪುನರ್‌ರಚಿಸಿತು.
10
ಫೇಸ್‌ಬುಕ್ ಯುಆರ್‌ಎಲ್‌ನ ಮುಂದೆ ನಂಬರ್ 4 ಅನ್ನು ಸೇರಿಸುವುದರೊಂದಿಗೆ ಫೇಸ್‌ಬುಕ್ ಸಿಇಓ ಮಾರ್ಕ್ ಜುಕರ್‌ಬರ್ಗ್‌ರವರ ಫೇಸ್‌ಬುಕ್ ಪೇಜ್‌ಗೆ ನೇರವಾಗಿ ಹೋಗಬಹುದಾಗಿದೆ. ಇದು ಇನ್ನೊಂದು ವಿಶೇಷತೆಯಾಗಿದೆ. ಉದಾಹರಣೆಗೆ www.facebook.com/4
11
ಫೇಸ್‌ಬುಕ್, ಡೊಮೇನ್ ಮಾಲಿಕನದು. ಅದು ತನ್ನನ್ನೇ ತಾನು ಹೀಗಳೆಯಲು "I hate Facebook" ಬಟನ್‌ಹೊಂದಿದೆ. ಆದರೆ ಅದಕ್ಕೆ ಬಟನ್ ಹೊತ್ತಲು ನೀವು ಲೈಕ್ ಬಟನ್ ಅನ್ನೇ ಪ್ರೆಸ್ ಮಾಡಬೇಕು.
12
ಫೇಸ್‌ಬುಕ್‌ನ ಪ್ರಾಥಮಿಕ ಬಣ್ಣ ನೀಲಿಯಾಗಿದ್ದು, ಜುಕರ್‌ಬರ್ಗ್ ಸಂದರ್ಶನವೊಂದರಲ್ಲಿ ನೀಲಿ ಬಣ್ಣ ನನಗೆ ಅತಿ ಹೆಚ್ಚು ಇಷ್ಟವಾದ ಬಣ್ಣ, ಆದ್ದರಿಂದ ನಾನು ಎಲ್ಲವನ್ನು ನೀಲಿಯಲ್ಲಿಯೇ ನೋಡುತ್ತೇನೆ ಎಂದಿದ್ದಾರೆ.
ಗಿಜ್‌ಬಾಟ್
ಫೇಸ್‌ಬುಕ್ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?
ಎಚ್ಚರ! ನಿಮ್ಮ ಫೇಸ್‌ಬುಕ್ ಮೇಲು ಹದ್ದಿನ ಕಣ್ಣು
ಇನ್ನು ಮುಂದೆ ಫೇಸ್‌ಬುಕ್ ಮೆಸೇಂಜರ್‌ನಲ್ಲೂ ಡಾಕ್ಟರ್‌ಗಳನ್ನು ಸಂಪರ್ಕಿಸಿ
ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಕನ್ನಡ ಮೀಮ್ಸ್ ಫೋಟೋಗಳು
ಗಿಜ್‌ಬಾಟ್