ಇನ್ನು ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಡಾಕ್ಟರ್‌ಗಳನ್ನು ಸಂಪರ್ಕಿಸಿ

Written By:

ಸಾಮಾಜಿಕ ತಾಣ ದೈತ್ಯ ಫೇಸ್‌ಬುಕ್‌ ಈಗ ತನ್ನ ಮೆಸೇಂಜರ್‌ ಅಪ್ಲಿಕೇಶನ್‌ನಲ್ಲಿ ಮೊದಲ ಬಾರಿಗೆ " ಚಾಟ್‌ಬೋಟ್ಸ್‌" ಅನ್ನು ಪರಿಚಯಿಸಿದೆ. ಅಲ್ಲದೇ ಇದು ಆನ್‌ಲೈನ್‌ ಡಾಕ್ಟರ್‌ ಜೊತೆಗಿನ ಸಂವಹನ ವೇದಿಕೆ ಸಹ ಆಗಿದೆ.ಅಂದಹಾಗೆ ಮೊದಲ ಚಾಟ್‌ಬೋಟ್‌ ಆಗಿ ಲೈಬ್ರೇಟ್ (Lybrate) ತನ್ನ ಬೋಟ್‌ ಅನ್ನು ಮೊದಲು ಪ್ರಕಟಗೊಳಿಸಿದೆ. ಇನ್ನುಮುಂದೆ ಡಾಕ್ಟರ್‌ಗಳಿಂದ ಯಾವುದೇ ಸಲಹೆ ಪಡೆಯಲು ಪೇಸ್‌ಬುಕ್‌ ಮಸೇಂಜರ್‌ ಬೋಟ್‌ ಉಪಯೋಗಿಸಿ ಆರೋಗ್ಯ ಮಾಹಿತಿಗಳ ಅಪ್‌ಡೇಟ್‌ ಪಡೆಯಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದ ಸ್ಲೈಡ್‌ನಲ್ಲಿ ತಿಳಿಯಿರಿ.

ಓದಿರಿ:ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಲೈಬ್ರೇಟ್‌ ಬೋಟ್‌( Lybrate Bot)

ಲೈಬ್ರೇಟ್‌ ಬೋಟ್‌( Lybrate Bot)

ಲೈಬ್ರೇಟ್‌ ಬೋಟ್‌( Lybrate Bot)

ಅಂದಹಾಗೆ ಲೈಬ್ರೇಟ್‌ ಬೋಟ್‌ ಫೇಸ್‌ಬುಕ್‌ ಮೆಸೇಂಜರ್‌ ಆಪ್‌ನಲ್ಲಿ ಮತ್ತೊಂದು ಚಾಟ್‌ ಲೀಸ್ಟ್‌ ಆಗಿದೆ. ಇದು ಡಾಕ್ಟರ್‌ಗಳಿಂದ ಆರೋಗ್ಯ ಕುರಿತ ಸಲಹೆಗಳು ಮತ್ತು ಮಾಹಿತಿಯನ್ನು ತಿಳಿಯಲು ಸಂವಹನ ಕಲ್ಪಿಸುತ್ತದೆ.

 ಪ್ರಶ್ನೆಗಳಿಗೆ ಉತ್ತರ

ಪ್ರಶ್ನೆಗಳಿಗೆ ಉತ್ತರ

ಪ್ರಶ್ನೆಗಳಿಗೆ ಉತ್ತರ

ಲೈಬ್ರೇಟ್‌ ಚಾಟ್‌ನಲ್ಲಿ ಡಾಕ್ಟರ್‌ ಪ್ರಶ್ನೆಗಳ ಆಧಾರಿತವಾಗಿ ಉತ್ತರಿಸುತ್ತಾರೆ. ಸಮಯವು ಸಹ ಪ್ರಶ್ನೆಗಳ ಆಧಾರಿತವಾಗಿ ಇರುತ್ತದೆ. ಬಳಕೆದಾರರು ಉಚಿತವಾಗಿ ಬೋಟ್‌ ಅನ್ನು ಮೆಸೇಂಜರ್‌ ಆಪ್‌ಗೆ ಲಾಗಿನ್‌ ಆಗಿ http://m.me/lybrate ಕ್ಲಿಕ್ ಮಾಡುವುದರ ಮೂಲಕ ಸೇರಿಸಬಹುದಾಗಿದೆ.

ಆರೋಗ್ಯ

ಆರೋಗ್ಯ

ಆರೋಗ್ಯ

ಬೋಟ್‌ ಮೆಸೇಂಜರ್‌ನಲ್ಲಿ "Health Quiz" ಅಭಿವೃದ್ದಿಪಡಿಸಲಾಗಿದ್ದು, ಹಲವು ರೀತಿಯ ಆರೋಗ್ಯದ ಸಲಹೆಗಳ ಬಗ್ಗೆ ಎಚ್ಚರಿಗೆ ನೀಡಲು ಈ ವ್ಯವಸ್ಥೆ ಮಾಡಲಾಗಿದೆ.

ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌

ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌

ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌

ಲೈಬ್ರೇಟ್‌ ಕೇವಲ ಮೆಸೇಂಜರ್‌ನಲ್ಲಿ ಮಾತ್ರವಲ್ಲದೇ ಸ್ಮಾರ್ಟ್‌ಫೋನ್‌ಗಳಿಗೆ ಅಪ್ಲಿಕೇಶನ್‌ ಆಗಿ ದೊರೆಯಬಲ್ಲದು. ಭಾರತದಾದ್ಯಂತ 50 ಕ್ಕೂ ಹೆಚ್ಚು ವಿಶೇಷ ತಜ್ಞರನ್ನು ಒಳಗೊಂಡಂತೆ 100,000 ಡಾಕ್ಟರ್‌ಗಳು ಈ ವೇದಿಕೆಯಲ್ಲಿ ಇರುವುದಾಗಿ ಹೇಳಲಾಗಿದೆ.

ಬೋಟ್‌

ಬೋಟ್‌

ಬೋಟ್‌

ಫೇಸ್‌ಬುಕ್‌ ಮತ್ತು ಮೈಕ್ರೋಸಾಫ್ಟ್‌ ನಡುವೆ ಸಾಮಾಜಿಕ ಬೋಟ್‌ ಅಭಿವೃದ್ದಿಪಡಿಸುವುದು ಸ್ಪರ್ಧೆಯಾಗಿತ್ತು. ಫೇಸ್‌ಬುಕ್‌ ಮೆಸೇಂಜರ್‌ನಲ್ಲಿ ಅಭಿವೃದ್ದಿಪಡಿಸಿದರೆ, ಮೈಕ್ರೋಸಾಫ್ಟ್‌ ಸ್ಕೈಪಿಯಲ್ಲಿ ಅಭಿವೃದ್ದಿ ಪಡಿಸಲಿದೆ. ಇದು ಸರಳವಾಗಿ ಉದ್ದೇಶಗಳ ಈಡೇರಿಕೆಗಾಗಿ ಡಾಕ್ಟರ್‌ಗಳೊಂದಿಗೆ ಸಂವಹನ ಮಾಡಲು ಸಹಾಯವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Now consult doctors on Facebook Messenger.Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot