ಇನ್ನು ಮುಂದೆ ಫೇಸ್‌ಬುಕ್‌ನಲ್ಲೇ ಫುಡ್ ಆರ್ಡರ್ ಮಾಡಿರಿ..!!!

ಇನ್ನು ಮುಂದೆ ಫೇಸ್‌ಬುಕ್‌ನಲ್ಲೇ ಆನ್‌ಲೈನ್ ಫುಡ್ ಆರ್ಡಾರ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

|

ಸಾಮಾಜಿಕ ಜಾಲತಾಣ ಫೇಸ್‌ಬುಕ್ ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಕೇವಲ ಸಾಮಾಜಿಕ ಜಾಲತಾಣವಾಗಿ ಉಳಿಯದೆ ಸಂಪರ್ಕ ಸಾಧನವಾಗಿಯೂ ಬೆಳೆಯುತ್ತಿದೆ. ಹೊಸದಾಗಿ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಕೊಳ್ಳುವ ಮತ್ತು ಮಾರುವ ಆಯ್ಕೆಯನ್ನು ಮಾಡಿಕೊಟ್ಟಿತ್ತು . ಈಗ ಅದೇ ಮಾದರಿಯಲ್ಲಿ ಮತ್ತೊಂದು ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ.

ಇನ್ನು ಮುಂದೆ ಫೇಸ್‌ಬುಕ್‌ನಲ್ಲೇ ಫುಡ್ ಆರ್ಡರ್ ಮಾಡಿರಿ..!!!

ಓದಿರಿ: ಜಿಯೋದಿಂದ ಕಾಲೇಜು ಹುಡುಗರಿಗೆ ಭರ್ಜರಿ ಆಫರ್..!!

ಸದ್ಯ ಮಾರುಕಟ್ಟೆಯಲ್ಲಿ ಆನ್‌ಲೈನ್ ಫುಡ್ ಡಿಲಿವರಿಯೂ ಹೆಚ್ಚಿನ ಬೆಳವಣಿಗೆಯು ಹೆಚ್ಚಿನ ದರವನ್ನು ಹೊಂದಿದ್ದು, ಮೆಟ್ರೋ ನಗರಗಳಲ್ಲಿ ಆನ್‌ಲೈನ್ ಫುಡ್ ಆರ್ಡರ್ ಮಾಡುವವರ ಸಂಖ್ಯೆಯೂ ಹೆಚ್ಚಿದೆ ಎಂದೇ ಹೇಳಬಹುದು. ಇದನ್ನು ತನ್ನ ಬಂಡವಾಳವಾಗಿ ಬಳಸಿಕೊಳ್ಳಲು ಮುಂದಾಗಿರುವ ಫೇಸ್‌ಬುಕ್, ಇನ್ನು ಮುಂದೆ ಫೇಸ್‌ಬುಕ್‌ನಲ್ಲೇ ಆನ್‌ಲೈನ್ ಫುಡ್ ಆರ್ಡಾರ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

ಮೊದಲಿಗೆ ಅಮೇರಿಕಾದಲ್ಲಿ:

ಮೊದಲಿಗೆ ಅಮೇರಿಕಾದಲ್ಲಿ:

ಸದ್ಯ ಈ ಸೇವೆಯನ್ನು ಫೇಸ್‌ಬುಕ್ ಅಮೇರಿಕಾದಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಅಲ್ಲಿ ಯಶಸ್ವಿಯಾದ ನಂತರದಲ್ಲಿ ಭಾರತದಲ್ಲೂ ಈ ಸೇವೆಯನ್ನು ಪರಿಚಯಿಸುವ ಯೋಜನೆಯನ್ನು ರೂಪಿಸಿದೆ. ಫೇಸ್‌ಬುಕ್ ಇದಕ್ಕಾಗಿ ಡೆಲಿವರಿ .ಕಾಮ್ ಮತ್ತು ಸ್ಲೇಸ್ ಎಂಬ ಎರಡು ಆನ್‌ಲೈನ್ ಫುಡ್ ಡೆಲಿವರಿ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ.

ಆಪ್ ಮತ್ತು ಡೆಸ್ಕ್ ಟಾಪ್ ನಿಂದ ಆರ್ಡರ್:

ಆಪ್ ಮತ್ತು ಡೆಸ್ಕ್ ಟಾಪ್ ನಿಂದ ಆರ್ಡರ್:

ಫೇಸ್‌ಬುಕ್ ಆಪ್ ಮತ್ತು ಡೆಸ್ಕ್ ಟಾಪ್ ನಿಂದಲೂ ನೀವು ಫುಡ್ ಆರ್ಡರ್ ಮಾಡಬಹುದಾಗಿದೆ. ಇದಕ್ಕಾಗಿ ಆರ್ಡರ್ ಫುಡ್ ಎಂಬ ಆಯ್ಕೆಯೊಂದನ್ನು ನೀಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ರೆಸ್ಟೋರೆಂಟ್‌ಗಳ ಲಿಸ್ಟ್ ವೊಂದು ದೊರೆಯಲಿದೆ. ಅಲ್ಲಿ ಕ್ಲಿಕ್ ಮಾಡಿದರೆ ಫೇಸ್‌ಬುಕ್ ನಿಂದ ಹೊರ ಬಂದು ಹೊಸದೊಂದು ತಾಣದಲ್ಲಿ ನಿಮ್ಮ ನೆಚ್ಚಿನ ಖಾದ್ಯವನ್ನು ಆಯ್ಕೆ ಮಾಡಿಕೊಂಡು ಪೇಮೆಂಟ್ ಸಹ ಮಾಡಬಹುದಾಗಿದೆ.

ಮುಂದಿನ ವರ್ಷದಿಂದ ಭಾರತದಲ್ಲಿ:

ಮುಂದಿನ ವರ್ಷದಿಂದ ಭಾರತದಲ್ಲಿ:

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಅಕ್ಟೋಬರ್ ನಲ್ಲಿ ಫೇಸ್‌ಬುಕ್ ಈ ಹೊಸ ಆಯ್ಕೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಲಿದ್ದು, ಇದಕ್ಕಾಗಿ ಸ್ಮಾರ್ಟ್ ಆರ್ಡರ್ ಎನ್ನುವ ಹೊಸ ಆಯ್ಕೆಯನ್ನು ನೀಡಲಿದೆ. ಒಟ್ಟಿನಲ್ಲಿ ಸದಾ ಒಂದಲ್ಲ ಒಂದು ಹೊಸ ಆಲೋಚನೆಯೊಂದಿಗೆ ಬರುವ ಫೇಸ್‌ಬುಕ್‌ನ ಈ ಹೊಸ ಪ್ರಯತ್ನ ಎಷ್ಟು ಮಟ್ಟದಲ್ಲಿ ಹಿಟ್ ಆಗಲಿದೆ ಎಂಬುದನ್ನು ಕಾದು ನೋಡಬೇಗಾಗಿದೆ. ಈ ಹೊಸ ಆಯ್ಕೆ ಭಾರತಕ್ಕೆ ಮುಂದಿನ ವರ್ಷದಲ್ಲಿ ಕಾಣಿಸಿಕೊಂಡರೆ ಆಚ್ಚರಿ ಪಡಬೇಕಾಗಿಲ್ಲ.

Best Mobiles in India

Read more about:
English summary
latest efforts at making the social networking platform all inclusive, the company has rolled out a new ‘Order Food’ option for select users. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X