ನೀವು ಫೇಸ್‌ಬುಕ್ ಆಪ್‌ ಡಿಲೀಟ್ ಮಾಡಬೇಡಿ; ಫೇಸ್‌ಬುಕ್ಕೇ ಆಪ್‌ ಡಿಲೀಟ್ ಮಾಡಲಿದೆ..!

|

ಕೋಟಿ ಕೋಟಿ ಬಳಕೆದಾರರ ಮಾಹಿತಿಯೂ ಲೀಕ್ ಆಗಿರುವ ನಂತರದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಿರುವ ಫೇಸ್‌ಬುಕ್, ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದೆ. ತನ್ನ ಬಳಕೆದಾರರಿಗೆ ಅರಿಯದೇ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಹಲವು ಆಪ್‌ಗಳನ್ನು ಡಿಲೀಟ್ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಸುಮಾರು 200ಕ್ಕೂ ಹೆಚ್ಚು ಆಪ್‌ಗಳನ್ನು ಡಿಲೀಟ್ ಮಾಡಿದೆ. ಈ ಮೂಲಕ ಬಳಕೆದಾರರ ಸುರಕ್ಷತೆಗೆ ಮಹತ್ವದ ನಿರ್ಧಾರವನ್ನು ಕೈ ಗೊಂಡಿದೆ.

ನೀವು ಫೇಸ್‌ಬುಕ್ ಆಪ್‌ ಡಿಲೀಟ್ ಮಾಡಬೇಡಿ; ಫೇಸ್‌ಬುಕ್ಕೇ ಆಪ್‌ ಡಿಲೀಟ್ ಮಾಡಲಿದೆ..!

ಓದಿರಿ: ಅಂಬಾನಿ ಹೊಸ ಪ್ಲಾನ್: ಜಿಯೋದಿಂದಾಗಿ ಮುಳುಗಿ ಹೋಗಲಿದೆ TV ಲೋಕ..!

ಫೇಸ್‌ಬುಕ್ ನೊಂದಿಗೆ ಸಂಪರ್ಕ ಹೊಂದಿದ್ದ ಕೆಲವು ಆಪ್ ಗಳು ಬಳಕೆದಾರರ ಮಾಹಿತಿಯನ್ನು ಕಳ್ಳತನ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ದೈತ್ಯ ಫೇಕ್ ಆಪ್‌ ಗಳ ವಿರುದ್ಧ ಸಮರ ಸಾರಿದ್ದು, 200 ಆಪ್ ಗಳನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಫೇಸ್‌ಬುಕ್ ಬಳಕೆಯೂ ಸುಲಭವಾಗಲಿದೆ. ಅಲ್ಲದೇ ಡೇಟಾ ಲೀಕ್ ಆಗಲಿದೆ ಎನ್ನುವ ಭಯವನ್ನು ಬಿಡಬಹುದಾಗಿದೆ.

ಕಳ್ಳತನ:

ಕಳ್ಳತನ:

ಫೇಸ್‌ಬುಕ್‌ನಲ್ಲಿ ನಿಮ್ಮ ಗರ್ಲ್ ಫ್ರೆಂಡ್ ಯಾರು, ಯಾವಾಗ ಸಾಯಿತ್ತಿರಾ, ನಿಮ್ಮ ಹಿರೋ ಯಾರು ಎನ್ನುವ ಹಲವು ಕ್ವೀಜ್‌ಗಳ ಮಾದರಿಯ ಆಪ್‌ಗಳು ಕಾಣಿಸಿಕೊಂಡಿದ್ದವು. ಇವುಗಳ ಬಳಕೆದಾರರ ಮಾಹಿತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಳ್ಳತನ ಮಾಡುತ್ತಿದ್ದವು ಎನ್ನಲಾಗಿದೆ.

ತನಿಖೆ:

ತನಿಖೆ:

ಬಳೆದಾರರ ಮಾಹಿತಿಯನ್ನು ಕಳ್ಳತನವನ್ನು ಮಾಡುತ್ತಿರುವ ಆಪ್‌ಗಳ ವಿರುದ್ಧ ತನಿಖೆಯನ್ನು ನಡೆಸುವುದಾಗಿ ಈ ಹಿಂದೆಯೇ ಫೇಸ್‌ಬುಕ್ CEO ಮಾರ್ಕ್ ಜುಕರ್ ಬರ್ಗ್ ತಿಳಿಸಿದ್ದರು. ಸದ್ಯ ಇದರಂತೆ ತನಿಖೆಯನ್ನು ನಡೆಸಿ, ಸುಮಾರು 200 ಆಪ್‌ಗಳನ್ನು ಡಿಲೀಟ್ ಮಾಡಲಾಗಿದೆ.

ಸಾವಿರಾರು ಆಪ್‌ಗಳು:

ಸಾವಿರಾರು ಆಪ್‌ಗಳು:

ಫೇಸ್‌ಬುಕ್‌ನಲ್ಲಿ ಬಳಕೆದಾರು ಬಳಸುತ್ತಿರುವ ಸುಮಾರು ಸಾವಿರ ಆಪ್ ಗಳನ್ನು ಫೇಸ್‌ಬುಕ್ ತಂಡವು ಪರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಈ ಪೈಕಿ 200 ಆಪ್ ಗಳು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದವು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವುಗಳನ್ನು ಡಿಲೀಟ್ ಮಾಡುವ ನಿರ್ಧಾರವನ್ನು ಮಾಡಲಾಗಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
ಮಾಹಿತಿ ದುರುಪಯೋಗ..?

ಮಾಹಿತಿ ದುರುಪಯೋಗ..?

ಸದ್ಯ ಡಿಲೀಟ್ ಮಾಡಿರುವ ಆಪ್‌ಗಳನ್ನು ಸುಮ್ಮನೆ ಬಿಡದ ಫೇಸ್‌ಬುಕ್, ಈ ಆಪ್‌ಗಳ ವಿರುದ್ಧ ತನಿಖೆಯನ್ನು ನಡೆಸಲಿದೆ ಎನ್ನಲಾಗಿದ್ದು, ಇದರಲ್ಲಿ ಬಳಕೆದಾರರ ಮಾಹಿತಿಯನ್ನು ದುರುಪಯೋಗವನ್ನು ಮಾಡಿಕೊಂಡಲ್ಲಿ ಕ್ರಮವನ್ನು ಜರುಗಿಸಲಿದೆ ಎನ್ನಲಾಗಿದೆ.

Best Mobiles in India

English summary
Facebook Suspends 200 Apps That May Have Mishandled Your Data. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X