Subscribe to Gizbot

ಫೇಸ್‌ಬುಕ್‌ನಿಂದ ಲೋಕಲ್ ನ್ಯೂಸ್: ಟುಡೇ ಇನ್ ಶೀಘ್ರವೇ ಲಾಂಚ್..!

Written By:

ಫೇಸ್‌ಬುಕ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ ಅನ್ನು ನೀಡಲು ಮುಂದಾಗಿದೆ. ಹೊಸದಾಗಿ ಲೋಕಲ್ ನ್ಯೂಸ್ ಅನ್ನು ತನ್ನ ಬಳಕೆದಾರರಿಗೆ ಟುಡೇ ಇನ್ ಎನ್ನುವ ಆಯ್ಕೆಯನ್ನು ನೀಡಲಿದೆ. ಇದು ಬಳಕೆದಾರರಿಗೆ ತಮ್ಮ ಸುತ್ತಮುತ್ತಲಿನ ನಡೆಯುವ ಸುದ್ದಿಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ ಎನ್ನಲಾಗಿದೆ.

ಫೇಸ್‌ಬುಕ್‌ನಿಂದ ಲೋಕಲ್ ನ್ಯೂಸ್: ಟುಡೇ ಇನ್ ಶೀಘ್ರವೇ ಲಾಂಚ್..!

ಇದು ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳು, ಸುದ್ಧಿಗಳು ಸೇರಿದಂತೆ ಎಲ್ಲಾ ಮಾದರಿಯ ವಿಷಯಗಳನ್ನು ತನ್ನ ಬಳಕೆದಾರರಿಗೆ ತಲುಪಿಸುವ ಕಾರ್ಯವನ್ನು ಫೇಸ್‌ಬುಕ್ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಇದು ಅಮೆರಿಕಾದ ಕೆಲವು ಸಿಟಿಗಳಲ್ಲಿ ಪರೀಕ್ಷೆಯನ್ನು ನಡೆಸುತ್ತಿದೆ. ಶೀಘ್ರವೇ ಭಾರತದಲ್ಲಿಯೂ ಈ ಆಯ್ಕೆ ಕಾಣಿಸಿಕೊಳ್ಳದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9+: ಐಫೋನ್ X ಇದರ ಮುಂದೆ ಏನೇನು ಇಲ್ಲ..!

ಟುಡೇ ಇನ್ ಫೀಚರ್ ಅನ್ನು ನೀಡುತ್ತಿರುವ ಫೇಸ್‌ಬುಕ್ ಈ ಬಾರಿ ಮಿಷಿನ್ ಲರ್ನಿಂಗ್ (ಯಾಂತ್ರಿಕ ಕಲಿಕೆ)ಯನ್ನು ಬಳಸಿಕೊಂಡು ಕಾರ್ಯಚರಣೆಯನ್ನು ನಡೆಸಲಿದೆ ಎನ್ನಲಾಗಿದೆ. ಇದಕ್ಕಾಗಿ ಲೋಕಲ್ ಕಂಟೆಟ್ ಟಿಮ್ ವೊಂದನ್ನು ಫೇಸ್‌ಬುಕ್ ಕಟ್ಟಲಿದೆ ಎನ್ನಲಾಗಿದೆ.

ಫೇಸ್‌ಬುಕ್‌ನಿಂದ ಲೋಕಲ್ ನ್ಯೂಸ್: ಟುಡೇ ಇನ್ ಶೀಘ್ರವೇ ಲಾಂಚ್..!

ಇದು ಫೇಸ್‌ಬುಕ್ ಜರ್ನಲಿಸಮ್ ಆರಂಭಕ್ಕೆ ಮೊದಲ ಹಂತ ಎನ್ನಲಾಗಿದೆ. ಅಲ್ಲದೇ ಇದು ಫೇಕ್ ನ್ಯೂಸ್ ಗಳನ್ನು ತೆಗೆದುಹಾಕಲು ನಡೆಸುತ್ತಿರುವ ಕಾರ್ಯದ ಮೊದಲ ಹಂತವು ಆಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಫೇಸ್ ಬುಕ್ ಬಳಕೆದಾರರು ಹೊಸ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಿದೆ.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!

ಓದಿರಿ: ವೋಚರ್ ಬಳಸಿ ಕಡಿಮೆ ಬೆಲೆಯಲ್ಲಿ ಜಿಯೋ ರಿಚಾರ್ಜ್ ಮಾಡಿಸುವುದು ಹೇಗೆ...?

English summary
Facebook Testing Local News Section Called 'Today In'. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot