ಸ್ಕಲ್‌ ಬ್ರೇಕರ್‌ ಚಾಲೆಂಜ್‌ ವಿಡಿಯೋ ಡಿಲೀಟ್‌ಗೆ ಸರ್ಕಾರ ಸೂಚನೆ..! ಏನೀದು ಚಾಲೆಂಜ್‌..?

By Gizbot Bureau
|

'ಸ್ಕಲ್ ಬ್ರೇಕರ್’ ಚಾಲೆಂಜ್ ಎಂದು ಕರೆಯಲ್ಪಡುವ ವಿಡಿಯೋಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ ಅಳಿಸಿ ಹಾಕುವಂತೆ ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಟಿಕ್‌ಟಾಕ್, ಯೂಟ್ಯೂಬ್, ಟ್ವಿಟ್ಟರ್, ಫೇಸ್‌ಬುಕ್ ಮತ್ತು ಶೇರ್‌ಚಾಟ್‌ಗಳಿಗೆ ಮನವಿ ಮಾಡಿದೆ. ಈ ಚಾಲೆಂಜ್‌ನಿಂದಾಗಿ ವಿಶ್ವದಾದ್ಯಂತ ವಿದ್ಯಾರ್ಥಿಗಳು ತಲೆಗೆ ಗಂಭೀರ ಗಾಯಗಳನ್ನು ಮಾಡಿಕೊಂಡಿದ್ದಾರೆ. ಈ ಚಾಲೆಂಜ್‌ ಟಿಕ್‌ಟಾಕ್‌ನಲ್ಲಿ ಮೊದಲು ಜನಪ್ರಿಯಗೊಂಡಿದೆ. ಸ್ಕಲ್‌ ಬ್ರೇಕರ್‌ ಚಾಲೆಂಜ್‌ನಲ್ಲಿ ಮೂರು ಜನ ಏಕಕಾಲದಲ್ಲಿ ಗಾಳಿಯಲ್ಲಿ ನೆಗೆಯುತ್ತಾರೆ. ಮಧ್ಯದವನನ್ನು ಎರಡು ಬದಿಯಲ್ಲಿರುವವರು ಬೀಳಿಸಲು ಪ್ರಯತ್ನಿಸುತ್ತಾರೆ.

ಚಾಲೆಂಜ್‌

ಈ ಚಾಲೆಂಜ್‌ನಿಂದ ತಲೆಗೆ ಗಂಭೀರ ಗಾಯಗಳು, ಮೂಳೆ ಮುರಿಯುವ ಮತ್ತು ವ್ಯಕ್ತಿಯ ತಲೆಬುರುಡೆಗೆ ಪೆಟ್ಟು ಬೀಳುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಕಳೆದ ವಾರ ನಡೆದ ಸಭೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಅಂತಹ ವಿಡಿಯೋಗಳನ್ನು ತೆಗೆಯುವಂತೆ ಸೂಚನೆ ನೀಡಿದೆ. ಈ ಮೂಲಕ ಅಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಅಪಾಯಕಾರಿ ಆಟ

ಇದು ಅಪಾಯಕಾರಿ ಆಟ, ಅಪ್ರಾಪ್ತ ವಯಸ್ಕರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾರ್ವಜನಿಕ ಸುರಕ್ಷತೆಯ ವಿಷಯವಾಗಿರುವುದರಿಂದ ಸ್ಕಲ್‌ ಬ್ರೇಕ್‌ ಸವಾಲಿನ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ತ್ವರಿತವಾಗಿ ತೆಗೆದುಹಾಕಬೇಕು ಎಂದು ಸಚಿವಾಲಯ ಹೇಳಿದೆ.

ಅಪಾಯಕಾರಿ

ಇಂತಹ ಅಪಾಯಕಾರಿ ಕ್ರಮಗಳನ್ನು ನಿಯಂತ್ರಿಸಲು ಆನ್‌ಲೈನ್ ಜಾಗೃತಿ ಅಭಿಯಾನ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಚಿವಾಲಯ ಮನವಿ ಮಾಡಿದೆ. ಇನ್ನು, ಟಿಕ್‌ಟಾಕ್‌ನಲ್ಲಿ ಈ ಚಾಲೆಂಜ್‌ #Skullbreakerchallenge ಎಂಬ ಹ್ಯಾಶ್‌ಟ್ಯಾಗ್‌ನಡಿಯಲ್ಲಿ 4.8 ಮಿಲಿಯನ್ ವೀಕ್ಷಣೆ ಕಂಡಿದೆ.

ಕಂಪನಿ

ಕಂಪನಿಯ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದರಿಂದ ಟಿಕ್‌ಟಾಕ್‌ ಈ ವಿಡಿಯೋವನ್ನು ತೆಗೆದಿದೆ. ಅದಲ್ಲದೇ, ಅಪಾಯಕಾರಿ ಸಾಹಸಗಳಲ್ಲಿ ಭಾಗವಹಿಸದಂತೆ ಬಳಕೆದಾರರಿಗೆ ಎಚ್ಚರಿಕೆಯನ್ನು ಸಹ ಟಿಕ್‌ಟಾಕ್‌ ನೀಡಿದೆ. ಬಳಕೆದಾರರು ಚಾಲೆಂಜ್‌ ವಿಡಿಯೋಗಳನ್ನು ಹುಡುಕಿದಾಗಲೆಲ್ಲಾ ಈ ಎಚ್ಚರಿಕೆ ಆಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

Most Read Articles
Best Mobiles in India

English summary
Facebook, TikTok, YouTube Asked To Delete These Videos: Here's Why.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X