Subscribe to Gizbot

ಕೇಂಬ್ರಿಜ್ ಪ್ರಕರಣ ಎಫೆಕ್ಟ್!..ಶೀಘ್ರವೇ ಭಾರೀ ಬದಲಾಗಲಿದೆ ಫೇಸ್‌ಬುಕ್‌!!

Written By:

ಕೇಂಬ್ರಿಜ್ ಅನಲಿಟಿಕಾ ಕಂಪೆನಿಯಿಂದ ಫೇಸ್‌ಬುಕ್ ಬಳಕೆದಾರರ ವಯಕ್ತಿಕ ಮಾಹಿತಿ ದುರುಪಯೋಗವಾದ ನಂತರ ಇದೀಗ ಫೇಸ್‌ಬುಕ್ ಎಚ್ಚೆತ್ತುಕೊಂಡಿದೆ. ಬಳಕೆದಾರರಿಗೆ ತಮ್ಮ ಮಾಹಿತಿಯ ಮೇಲೆ ಹೆಚ್ಚಿನ ನಿಯಂತ್ರಣ ನೀಡುವುದಕ್ಕಾಗಿ 'ಪ್ರೈವೆಸಿ ಸೆಟಿಂಗ್‌ ಟೂಲ್‌'ಗಳನ್ನು ಸಂಪೂರ್ಣವಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಫೇಸ್‌ಬುಕ್‌ ತಿಳಿಸಿದೆ.

ಫೇಸ್‌ಬುಕ್ ಬಳಕೆದಾರರಿಗೆ ಈ ಮೊದಲು ಇದ್ದದ್ದಕ್ಕಿಂತ ಹೆಚ್ಚಿನ ನಿಯಂತ್ರಣವನ್ನು ಫೇಸ್‌ಬುಕ್ ನೀಡಲು ಮುಂದಾಗಿದ್ದು, ಬಳಕೆದಾರರಿಗೆ ಹೊಸದಾಗಿ 'ಪ್ರೈವೆಸಿ ಶಾರ್ಟ್‌ಕಟ್‌ ಮೆನು' ಆಯ್ಕೆಯನ್ನು ನೀಡಲಾಗುವುದು. ಫೇಸ್‌ಬುಕ್‌ ಖಾತೆಯ ಸುರಕ್ಷತೆಯನ್ನು ಹೆಚ್ಚಿಸಲಾಗುವುದು ಎಂದು ಪ್ರೈವೆಸಿ ವಿಭಾಗದ ಮುಖ್ಯಾಧಿಕಾರಿ ಎರಿನ್ ಏಗನ್ ಹೇಳಿದ್ದಾರೆ.

ಕೇಂಬ್ರಿಜ್ ಪ್ರಕರಣ ಎಫೆಕ್ಟ್!..ಶೀಘ್ರವೇ ಭಾರೀ ಬದಲಾಗಲಿದೆ ಫೇಸ್‌ಬುಕ್‌!!

ಫೇಸ್‌ಬುಕ್‌ನಲ್ಲಿ ಪ್ರೈವೆಸಿ ಸೆಟಿಂಗ್ಸ್ ಮತ್ತು ಇತರ ‍ಪ್ರಮುಖ ಟೂಲ್‌ಗಳನ್ನು ಗುರುತಿಸುವುದೇ ಕಷ್ಟ ಎಂಬ ಬಳಕೆದಾರರ ಸಮಸ್ಯೆ ನಮಗೆ ಅರ್ಥವಾಗಿದೆ. ಹಾಗಾಗಿ ಬಳಕೆದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡಲೇಬೇಕಿದೆ ಎಂದು ಎರಿನ್ ಏಗನ್ ಅವರು ಫೇಸ್‌ಬುಕ್‌ನಲ್ಲಿ ಭಾರೀ ಬದಲಾವಣೆ ತರುವ ಬಗ್ಗೆ ಸೂಚನೆ ನೀಡಿದ್ದಾರೆ.!!

ಕೇಂಬ್ರಿಜ್ ಪ್ರಕರಣ ಎಫೆಕ್ಟ್!..ಶೀಘ್ರವೇ ಭಾರೀ ಬದಲಾಗಲಿದೆ ಫೇಸ್‌ಬುಕ್‌!!

ಫೇಸ್‌ಬುಕ್ ಸೇವಾ ನಿಯಮಗಳು ಹಾಗೂ ದತ್ತಾಂಶ ನೀತಿಯನ್ನು ಪರಿಷ್ಕರಿಸಿ, ಫೇಸ್‌ಬುಕ್‌ನಲ್ಲಿ ಬಳಕೆದಾರರ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಮತ್ತು ಬಳಕೆದಾರರ ದತ್ತಾಂಶಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಹೆಚ್ಚಿನ ಪಾರದರ್ಶಕತೆ ತರಲಾಗುವುದು ಎಂದು ಎರಿನ್ ಏಗನ್ ಅವರು ತಿಳಿಸಿದ್ದಾರೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಹಾಗಾಗಿ, ಬಳಕೆದಾರರಿಗಿನ್ನು ಫೇಸ್‌ಬುಕ್‌ ಪುಟದ ಚಟುವಟಿಕೆಗಳನ್ನು ಯಾರು ನೋಡಬಹುದು ಎಂಬುದರ ಮೇಲೆ ನಿಯಂತ್ರಣ ಹಾಗೂ ಜಾಹೀರಾತು ಕಾಣಿಸಬಹುದು ಎಂಬುದನ್ನು ನಿರ್ಧರಿಸುವ ಅವಕಾಶ ಬಳಕೆದಾರರಿಗೆ ದೊರಕಲಿದೆ. ಇನ್ನು ಫೇಸ್‌ಬುಕ್‌ನಲ್ಲಿ ಸಂಗ್ರಹವಾಗಿರುವ ವೈಯಕ್ತಿಕ ಮಾಹಿತಿಯ ಶೋಧ, ಡೌನ್‌ಲೋಡ್‌ ಮತ್ತು ಅಳಿಸುವಿಕೆ ಸುಲಭವಾಗಲಿದೆ.

ಓದಿರಿ: ಗೂಗಲ್ ನಮ್ಮೆಲ್ಲಾ ಮಾಹಿತಿಗಳನ್ನು ಹೇಗೆ ಸಂಗ್ರಹಿಸುತ್ತದೆ ಗೊತ್ತಾ?..ಪ್ರೈವೆಸಿ ಎಲ್ಲಿದೆ?!

English summary
The company is clamping down on potentially vulnerable ad practices.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot