ಸಾವನ್ನು ಸಂಭ್ರಮಿಸುವವರ ಪೋಸ್ಟ್ ಡಿಲೀಟ್ ಮಾಡಲಿದೆ 'ಫೇಸ್‌ಬುಕ್'!

|

'ಅವರು ಸತ್ತಿದ್ದರಿಂದ ನನಗೆ ತುಂಬಾ ಖುಷಿಯಾಗಿದೆ' ಅಥವಾ "ಅವರು ಸತ್ತಿದ್ದು ಒಳ್ಳೆಯದೇ ಆಯಿತು" ಎಂಬ ಭಯಾನಕ ಬರಹಗಳು ಇನ್ಮುಂದೆ ಫೇಸ್‌ಬುಕ್ ಪುಟದಲ್ಲಿ ಇರುವುದಿಲ್ಲ. ಏಕೆಂದರೆ, ಸಾಮಾಜಿಕ ನೆಟ್‌ವರ್ಕ್ ದೈತ್ಯ ಫೇಸ್‌ಬುಕ್ ಈಗ ನಿಧನರಾದ ಮತ್ತು ಸ್ಮರಣೀಯ ಪ್ರೊಫೈಲ್‌ಗಳಿಂದ ಇಂತಹ ಭಯಾನಕ ಕಾಮೆಂಟ್‌ಗಳನ್ನು ತೆಗೆದುಹಾಕುತ್ತದೆ ಎಂದು ತಿಳಿದುಬಂದಿದೆ. ಇದು ಸಾವಿನ ಮನೆಯ ಅಥವಾ ಕುಟುಂಬಗಳಿಗೆ ಹೆಚ್ಚು ಸಹನೀಯವಾಗುವಂತೆ ಮಾಡಿದೆ.

ಹೌದು, ಫೇಸ್‌ಬುಕ್‌ ಯಾವುದಾದರೂ ವ್ಯಕ್ತಿಯ ಸಾವಿನ ಸುದ್ದಿ, ಪೋಸ್ಟ್‌ ಅನ್ನು ಅಣಕಿಸಿ, ಸಂಭ್ರಮಿಸಿ ಪೋಸ್ಟ್ ಹಾಕಿದರೆ ಅದನ್ನು ಫೇಸ್‌ಬುಕ್ ಇನ್ನು ಕಿತ್ತುಹಾಕಲಿದೆ. ಸೆಲೆಬ್ರಿಟಿ ನಿಧನರಾದಾಗ, ಇಲ್ಲವೇ ಸಮಾಜದಲ್ಲಿ ಪ್ರಮುಖರು ಸಾವನ್ನಪ್ಪಿದರೆ, ಫೇಸ್‌ಬುಕ್‌ನಲ್ಲಿ ಅವರ ಸಾವಿನ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕುವ ಮತ್ತು ಕಾಮೆಂಟ್ ಹಾಕುವ ಪ್ರವೃತ್ತಿ ಇತ್ತೀಚಿಗೆ ಹೆಚ್ಚಾಗುತ್ತಿದ್ದು, ಅದನ್ನು ತಡೆಯುವ ಸಲುವಾಗಿ ಫೇಸ್‌ಬುಕ್ ಸಂಸ್ಥೆ ಮುಂದಾಗಿದೆ.

ಸಾವನ್ನು ಸಂಭ್ರಮಿಸುವವರ ಪೋಸ್ಟ್ ಡಿಲೀಟ್ ಮಾಡಲಿದೆ 'ಫೇಸ್‌ಬುಕ್'!

"ಅವಳು ಸತ್ತರೆ ನನಗೆ ತುಂಬಾ ಖುಷಿಯಾಗಿದೆ" ಎಂಬಂತಹ ಪೋಸ್ಟ್‌ಗಳು ಸಾಂಪ್ರದಾಯಿಕವಾಗಿ ಸಾಮಾಜಿಕ ಮಾಧ್ಯಮ ಕಂಪನಿಯ ಸ್ವಯಂ-ಚಾಲಿತ "ಸಮುದಾಯ ಮಾನದಂಡಗಳನ್ನು" ಉಲ್ಲಂಘಿಸುವುದಿಲ್ಲ. ಆದರೂ ಸಹ ವ್ಯಕ್ತಿಯ ಸಾವು ಹೊಗಳುವ ಅಥವಾ ಬೆಂಬಲಿಸುವ ಕಾಮೆಂಟ್‌ಗಳನ್ನು ಫೇಸ್‌ಬುಕ್ ಇನ್ನು ಮುಂದೆ ಅನುಮತಿಸುವುದಿಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಇದು ಒಂದು ನೈತಿಕ ಮಾನದಂಡವೆಂದು ಅನುಸರಿಸಲಾಗುತ್ತದೆ.

ಸತ್ತಿರುವ ವ್ಯಕ್ತಿಯ ಫೇಸ್‌ಬುಕ್‌ ವಾಲ್‌ನಲ್ಲಿ ಇತರರು ಯಾವುದಾದರೂ ನಿಂದನೆಯ ಪೋಸ್ಟ್, ಕಾಮೆಂಟ್ ಹಾಕಿದರೆ ಅದನ್ನು ಅವರ ಸಂಬಂಧಿಕರು ರಿಪೋರ್ಟ್ ಮಾಡಬಹುದಾಗಿದೆ. ಫೇಸ್‌ಬುಕ್‌ನ ವಿಷಯ ವ್ಯವಸ್ಥಾಪಕ ತಂಡದ ಸಹಾಯಕ ವ್ಯವಸ್ಥಾಪಕ ಲಾರಾ ಹೆರ್ನಾಂಡೆಜ್ ಅವರು, ಮೆನ್ಲೊ ಪಾರ್ಕ್‌ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಯಾವುದೇ ಕುಟುಂಬದ ಸದಸ್ಯರು ಈಗ ಸತ್ತವರ ಪರವಾಗಿ ಕಿರುಕುಳವನ್ನು ವರದಿ ಮಾಡಬಹುದು ಎಂದು ಹೇಳಿದ್ದಾರೆ.

ಸಾವನ್ನು ಸಂಭ್ರಮಿಸುವವರ ಪೋಸ್ಟ್ ಡಿಲೀಟ್ ಮಾಡಲಿದೆ 'ಫೇಸ್‌ಬುಕ್'!

ಈ ರೀತಿಯ ಘಟನೆಗಳು ನಡೆದಾಗ, ಸತ್ತವರ ಕುಟುಂಬಕ್ಕೆ ಆಗುವ ನೋವಿನ ಅನುಭವ ಎಂದು ನಮಗೆ ತಿಳಿದಿದೆ. ಫೇಸ್‌ಬುಕ್ ಟೈಮ್‌ಲೈನ್‌ನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸಾರ್ವಜನಿಕರಿಂದ ಸ್ನೇಹಿತರಿಗೆ ಮಾತ್ರ ಬದಲಾಯಿಸಲು ಕುಟುಂಬಗಳಿಗೆ ವಿನಂತಿಸಲು ನಾವು ನಮ್ಮ ನೀತಿಗಳನ್ನು ನವೀಕರಿಸಿದ್ದೇವೆ. ಇದು ಖಾಸಾಗಿ ನಿಂದನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಲಾರಾ ಹೆರ್ನಾಂಡೆಜ್ ಅವರು ತಿಳಿಸಿದ್ದಾರೆ.

ಓದಿರಿ: ಭಾರತದ ಬಾಹ್ಯಾಕಾಶ ನಿಲ್ದಾಣದ ಸುದ್ದಿ ಕೇಳಿ ಇಡೀ ವಿಶ್ವಕ್ಕೇ ಅಚ್ಚರಿ!..ಏಕೆ ಗೊತ್ತಾ?

Best Mobiles in India

English summary
"When this happens, we know it is a painful experience for the family of the deceased. "we've updated our policies to allow families to request to change the privacy settings of the timeline from public to friends only. This helps alleviate abuse.".to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X