Just In
- 2 hrs ago
ರೈಲ್ವೆ 'ಗ್ರೂಪ್ ಡಿ' ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 'ವಿ ಟೆಲಿಕಾಂ'ನಿಂದ ಸಿಹಿಸುದ್ದಿ!
- 12 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- 16 hrs ago
ಭಾರತದಲ್ಲಿ ರಿಯಲ್ಮಿ ಟೆಕ್ಲೈಫ್ ಬಡ್ಸ್ T100 ಲಾಂಚ್ ಡೇಟ್ ಫಿಕ್ಸ್!
- 17 hrs ago
ಲಾಂಚ್ಗೆ ಸಜ್ಜಾಗಿದೆ 'ಮೊಟೊರೊಲಾ ರೇಜರ್'!..ಗ್ಯಾಲಕ್ಸಿ Z ಫೋಲ್ಡ್ 4ಗೆ ಟಾಂಗ್!
Don't Miss
- News
Breaking: ಬ್ಲಾಕ್ ಮ್ಯಾಜಿಕ್ ಟೀಕೆ; ಮೋದಿ ವಿರುದ್ಧ ರಾಹುಲ್ ಕಿಡಿ
- Finance
ವಿಐ App ಬಳಸಿ ರೈಲ್ವೆಯ ಗ್ರೂಪ್ ಡಿ ಪರೀಕ್ಷೆಗೆ ಸಿದ್ಧತೆ ಹೇಗೆ?
- Movies
ಮತ್ತೊಂದು ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ
- Lifestyle
ಉಪ್ಪಿನಕಾಯಿ ರುಚಿಗ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಗೊತ್ತಾ!
- Automobiles
ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ
- Sports
ಆ ಇಬ್ಬರು ಸ್ಟಾರ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಜಯವರ್ಧನೆ ಕಳವಳ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ರಿಪಬ್ಲಿಕ್ ಡೇ ಸೇಲ್ ಆಯೋಜಿಸಿತು ಫ್ಲಿಪ್‌ಕಾರ್ಟ್!!..ಏನೆಲ್ಲಾ ಕೊಡುಗೆಗಳು?
ಭಾರತದ ಇ ಕಾಮರ್ಸ್ ಮಾರುಕಟ್ಟೆಯ ದೈತ್ಯ ಫ್ಲಿಪ್‌ಕಾರ್ಟ್ ಸಂಸ್ಥೆ ಸದಾ ಆಫರ್‌ಗಳನ್ನು ನೀಡುತ್ತಲೇ ಇರುತ್ತದೆ. ಯಾವುದೇ ಹಬ್ಬ ಬರಲಿ, ಯಾವುದಾದರರು ವಿಶೇಷ ದಿನ ಬರಲಿ ಆ ಸಮಯದಲ್ಲಿ ಫ್ಲಿಪ್‌ಕಾರ್ಟ್ ಸ್ಪೆಷಲ್ ಡಿಸ್ಕೌಂಟ್‌ಗಳನ್ನು ನೀಡುವುದು ಗ್ಯಾರಂಟಿ.! ಆನ್‌ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣವಾಗಿರುವ ಫ್ಲಿಪ್‌ಕಾರ್ಟ್ ಇದೀಗ ಗಣರಾಜ್ಯೋತ್ಸವದ ಅಂಗವಾಗಿ ಭಾರಿ ಧಮಾಕ ನೀಡುತ್ತಲಿದೆ!

ಹೌದು, ಗಣರಾಜ್ಯೋತ್ಸವದ ಅಂಗವಾಗಿ ಫ್ಲಿಪ್‌ಕಾರ್ಟ್ ಆಯೋಜಿಸಿರುವ 'ರಿಪಬ್ಲಿಕ್ ಡೇ ಸೇಲ್' ಮೇಳವು ಇದೇ ಜನವರಿ 20 ರಿಂದ 22ರ ವರೆಗೂ ನಡೆಯಲಿದೆ. ಈ ಮೇಳದಲ್ಲಿ ಗೃಹ ಬಳಕೆಯ ವಸ್ತುಗಳು, ಗ್ಯಾಜೆಟ್ಸ್, ಸೇರಿದಂತೆ ಅನೇಕ ವಸ್ತುಗಳ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಒಳಗೊಂಡಂತೆ ಇನ್ನೂ ಅನೇಕ ವಿಶೇಷ ಆಫರ್‌ಗಳನ್ನು ಗ್ರಾಹಕರಿಗೆ ನೀಡಲಾಗಿದೆ. ಹಾಗಾದರೇ, ಫ್ಲಿಪ್‌ಕಾರ್ಟ್ 'ರಿಪಬ್ಲಿಕ್ ಡೇ ಸೇಲ್' ಆಫರ್‌ಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ.

ಫಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಸ್ಪೆಷಲ್ ಆಫರ್
ಫ್ಲಿಪ್‌ಕಾರ್ಟ್‌ನಲ್ಲಿ ಸದಸ್ಯರಾಗಿರುವವರಿಗೆ ಈ ರಿಪಬ್ಲಿಕ್ ಡೇ ಸೇಲ್ ಮೇಳದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೇ ಈ ಸದಸ್ಯರಿಗೆ ಒಂದು ದಿನ ಮೊದಲೆ ಭಾಗವಹಿಸುವ ಅವಕಾಶ ನೀಡಲಾಗುವುದು ಅಂದರೇ ಜನವರಿ 19 ರಾತ್ರಿ 8 ಗಂಟೆಯಿಂದಲೇ ಮೇಳದಲ್ಲಿ ಭಾಗವಹಿಸುವ ಅರ್ಹತೆಯನ್ನು ತನ್ನ ಸದಸ್ಯೆರಿಗೆ ಸಂಸ್ಥೆ ನೀಡಿದೆ.

ಗ್ಯ್ರಾಂಡ್ ಆಗಿದೆ ಫ್ಲಿಪ್‌ಕಾರ್ಟ್ ಬ್ಯ್ರಾಂಡ್ ಆಫರ್
ಈ ಭರ್ಜರಿ ಮೇಳದಲ್ಲಿ ಫ್ಲಿಪ್‌ಕಾರ್ಟ್ ಸಂಸ್ಥೆಯು ತನ್ನ ಸ್ವಂತ ಬ್ಯ್ರಾಂಡ್ ಉತ್ಪನ್ನಗಳ ಮೇಲೂ ಭಾರಿ ಡಿಸ್ಕೌಂಟ್ ಮತ್ತು 70% ವರೆಗೆ ವಿಶೇಷ ಕೊಡುಗೆಗಳನ್ನು ನೀಡಿದೆ. ಹೀಗಾಗಿ ಆನ್‌ಲೈನ್ ಖರೀದಿ ಇಷ್ಟಪಡುವ ಗ್ರಾಹಕರು ಈ ಮೇಳವನ್ನು ಎದುರುನೋಡುತ್ತಿದ್ದಾರೆ.

SBI ಆಫರ್ ಏನು?
ಫ್ಲಿಪ್‌ಕಾರ್ಟ್ ಆಯೋಜಿಸಿರುವ ರಿಪಬ್ಲಿಕ್ ಡೇ ಸೇಲ್' ಮೇಳದಲ್ಲಿ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಕ್ಯಾಶ್ ಪೇಮೆಂಟ್ ಮಾಡಿದರೇ ಅಂತಹ ಗ್ರಾಹಕರಿಗೆ 10% ಇನ್‌ಸ್ಟಂಟ್ ಡಿಸ್ಕೌಂಟ್‌ವಿಶೇಷ ರಿಯಾಯಿತಿ ದೊರೆಯುತ್ತದೆ. ಈ ಆಫರ್ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಭಾರಿ ಖುಷಿ ತಂದು ಕೊಟ್ಟಿದೆ.

ಬ್ಲಾಕ್‌ಬಸ್ಟರ್ ಡೀಲ್ ಧಮಾಕ್!
ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್, ಮತ್ತು ಇತರೆ ಫ್ಯಾಶನ್ ಉತ್ಪನ್ನಗಳ ಮೇಲೆ ಈ ಬ್ಲಾಕ್‌ಬಸ್ಟರ್ ಆಫರ್ ಅನ್ವಯಿಸುತ್ತದೆ. ಇದರಲ್ಲಿ ಟಿವಿ ಮತ್ತು ಗೃಹ ಬಳಕೆ ಉಪಕರಣಗಳ ಮೇಲೆ 75% ವರೆಗೂ ಆಫರ್ ನೀಡಲಾಗಿದೆ. ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ಗಳಿವೆ ಮತ್ತು ಪ್ರತಿ 8 ತಾಸಿಗೊಮ್ಮೆ ಹೊಸ ಡೀಲ್ ಈ ಆಫರ್‌ನಲ್ಲಿ ಲಭ್ಯವಿರಲಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸ್‌ಸರಿಸ್ ಮೇಲೆ ಭಾರಿ ಕೊಡುಗೆ.
ಗಣರಾಜ್ಯೋತ್ಸವದ ಈ ವಿಶೇಷ ರಿಪಬ್ಲಿಕ್ ಡೇ ಸೇಲ್' ಮೇಳದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಮತ್ತು ಬಿಡಿಭಾಗಗಳ ಮೇಲೆ ಶೇ.80% ವರೆಗೆ ಭರ್ಜರಿ ರಿಯಾಯಿತಿಯ ಕೊಡುಗೆಗಳು ಗ್ರಾಹಕರಿಗೆ ದೊರೆಯಲಿವೆ ಎಂದು ಫ್ಲಿಪ್‌ಕಾರ್ಟ್ ತನ್ನ ಜಾಹಿರಾತಿನಲ್ಲಿ ತಿಳಿಸಿದೆ. ಇದು ಗ್ರಾಹಕರಿಗೆ ದೊಡ್ಡ ಸಡಗರವನ್ನು ನೀಡಿದೆ ಎನ್ನಬಹುದು.

ಸ್ಪೆಷಲ್ 26!
ಗಣರಾಜ್ಯೋತ್ಸವದ ಅಂಗವಾಗಿ ಫ್ಲಿಪ್‌ಕಾರ್ಟ್ ಆಯೋಜಿಸಿರುವ ಈ ಮೇಳದಲ್ಲಿ 'ಸ್ಪೆಷಲ್ 26' ಹೆಸರಿನ ಆಫರ್ ನೀಡಲಾಗಿದ್ದು, ಈ ಆಫರ್‌ನಲ್ಲಿ ಪ್ರತೀ ಖರೀದಿಯ ಮೇಲೆ ಎಕ್ಸ್‌ಟ್ರಾ 26% ಆಫರ್ ನೀಡಲಾಗುತ್ತಿರುವುದು ವಿಶೇಷ. ಆದರೆ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಈ 'ಸ್ಪೆಷಲ್ 26' ಆಫರ್ ಲಭ್ಯವಿರುತ್ತದೆ.

ಇತರೆ ಆಫರ್‌ಗಳು
ಮೇಳದಲ್ಲಿ 1450 ರೂಪಾಯಿಗಳ ಖರೀದಿ ಮೇಲೆ 10% ವರೆಗೆ ಡಿಸ್ಕೌಂಟ್ ಮತ್ತು 1950 ರೂಪಾಯಿಗಳ ಖರೀದಿಯ ಮೇಲೆ 15% ರಿಯಾಯಿತಿ ನೀಡಲಾಗುತ್ತಿದೆ. ಇದರೊಂದಿಗೆ ಯಾವುದೇ ಮೂರು ಉತ್ಪನ್ನಗಳನ್ನು ಖರೀದಿಸಿದರೇ ಶೇ. 10% ರಷ್ಟು ಡಿಸ್ಕೌಂಟ್ ನೀಡಲಾಗುತ್ತದೆ ಮತ್ತು ನಾಲ್ಕು ಉತ್ಪನ್ನಗಳನ್ನು ಖರೀದಿಸಿದರೇ 15% ರಿಯಾಯಿತಿ ಪಡೆಯುವ ಕೊಡುಗೆಗಳು ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ದೊರೆಯಲಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086