ವಾಟ್ಸಾಪ್‌ನ ಐದು ಹೊಸ ಫೀಚರ್ಸ್! ಟ್ರೈ ಮಾಡಿದ್ದೀರಾ?

By Shwetha
|

ಅಂತರಾಷ್ಟ್ರೀಯವಾಗಿ ಫೇಸ್‌ಬುಕ್ ಆಡಳಿತದಲ್ಲಿರುವ ವಾಟ್ಸಾಪ್ ಇದೀಗ ಹೆಚ್ಚು ಸುಭದ್ರ ಅಪ್ಲಿಕೇಶನ್ ಎಂಬ ಮನ್ನಣೆಗೆ ಪಾತ್ರವಾಗಿದೆ. ಫೇಸ್‌ಬುಕ್ ಮತ್ತು ವಾಟ್ಸಾಪ್ ಹೊಸ ಹೊಸ ಫೀಚರ್‌ಗಳನ್ನು ಪ್ರಸ್ತುತಪಡಿಸುತ್ತಿವೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಚಾಟ್ ಮಾಡುವುದು ಮಾತ್ರವಲ್ಲದೆ, ವಾಟ್ಸಾಪ್ ಬಳಕೆದಾರರು ಇದೀಗ ಫೋಟೋಗಳನ್ನು ಎಡಿಟ್ ಮಾಡಬಹುದಾಗಿದೆ, ಫೇಸ್‌ಬುಕ್‌ನಲ್ಲಿ ಬಳಸುವಂತೆ ಕಮೆಂಟ್ ಮಾಡಬಹುದು ಅಂತೆಯೇ ಗುಂಪಿನಲ್ಲಿ ಸ್ನೇಹಿತರನ್ನು ಟ್ಯಾಗ್ ಮಾಡುವುದು ಹಾಗೂ ಮತ್ತಷ್ಟನ್ನು ಕಾರ್ಯನಿರ್ವಹಿಸಬಹುದಾಗಿದೆ.

ಓದಿರಿ: ಜಿಯೋ ಸಿಮ್: ಅನುಕೂಲ ಮತ್ತು ಅನಾನುಕೂಲಗಳು

ಇಂದಿನ ಲೇಖನದಲ್ಲಿ ನೀವು ಈ ಹಿಂದೆ ಟ್ರೈ ಮಾಡದೇ ಇರುವ ವಾಟ್ಸಾಪ್‌ನ ಇನ್ನೊಂದಿಷ್ಟು ಹೊಸ ಫೀಚರ್‌ಗಳ ವಿವರಗಳನ್ನು ನಾವು ನೀಡುತ್ತಿದ್ದು ಅವುಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಓದಿರಿ: ಜಿಯೋ ಸಿಮ್ ಬಳಸಿಕೊಂಡು 2ಜಿ, 3ಜಿ ಫೋನ್‌ನಲ್ಲಿ ಕರೆಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ವೀಡಿಯೊ ಕರೆಗಳು

ವಾಟ್ಸಾಪ್‌ನಲ್ಲಿ ವೀಡಿಯೊ ಕರೆಗಳು

ಹೆಚ್ಚು ಚರ್ಚಿತ ಸುದ್ದಿಯಾಗಿದ್ದು ವಾಟ್ಸಾಪ್ ವೀಡಿಯೊ ಕರೆಗಳು ಈಗ ಅಧಿಕೃತ ಎಂದೆನಿಸಿದೆ. ವಾಯ್ಸ್ ಕಾಲ್ ಅಲ್ಲದೆ ಈಗ ವಾಟ್ಸಾಪ್ ಬಳಕೆದಾರರು ವೀಡಿಯೊ ಕರೆಗಳನ್ನು ನಿರ್ವಹಿಸಬಹುದಾಗಿದೆ.

ಫೋಟೋ ಎಡಿಟಿಂಗ್ ಅಪ್ಲಿಕೇಶನ್

ಫೋಟೋ ಎಡಿಟಿಂಗ್ ಅಪ್ಲಿಕೇಶನ್

ವಾಟ್ಸಾಪ್ ಬಳಕೆದಾರರು ಸ್ನ್ಯಾಪ್‌ಚಾಟ್‌ನಂತೆಯೇ ಫೋಟೋಗಳನ್ನು ಎಡಿಟ್ ಮಾಡಿಕೊಳ್ಳಬಹುದಾಗಿದೆ. ವಾಟ್ಸಾಪ್‌ನೊಂದಿಗೆ, ಇಮೋಜಿ ಸೇರ್ಪಡೆ, ಟೆಕ್ಟ್ಸ್ ಐಕಾನ್ ಮತ್ತು ಪೈಂಟ್ ಬ್ರಶ್ ಬಳಕೆ ಹೀಗೆ ಫೋಟೋಗಳನ್ನು ಇನ್ನಷ್ಟು ಆಸಕ್ತಿಕರ ಮತ್ತು ಮೋಜಿನದ್ದಾಗಿ ನಿಮಗೆ ಪರಿವರ್ತಿಸಿಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂವಾದಗಳನ್ನು ಇನ್ನಷ್ಟು ಇಂಟರಾಕ್ಟೀವ್ ಆಗಿ ಮಾಡುವುದು

ಸಂವಾದಗಳನ್ನು ಇನ್ನಷ್ಟು ಇಂಟರಾಕ್ಟೀವ್ ಆಗಿ ಮಾಡುವುದು

ಗ್ರೂಪ್ ಚಾಟ್‌ನಲ್ಲಿ ಯಾರು ಏನು ಹೇಳುತ್ತಿದ್ದಾರೆ, ಯಾರಿಗೆ ಹೇಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. @mention ಫೀಚರ್ ವ್ಯಕ್ತಿಗೆ ಚಾಟ್ ಅವರಿಗೆ ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ ಅಂತೆಯೇ ದೀರ್ಘ ಚಾಟ್ ಇತಿಹಾಸವನ್ನು ಓದುವುದರಿಂದ ಬಿಡುಗಡೆ ಮಾಡುತ್ತದೆ.

ಖೋಟ್ ಮೆಸೇಜಸ್

ಖೋಟ್ ಮೆಸೇಜಸ್

ಗ್ರೂಪ್‌ನಲ್ಲಿರುವ ಯಾರಾದರೂ ಕಳುಹಿಸಿದ ಹಿಂದಿನ ಸಂದೇಶವನ್ನು ಖೋಟ್ ಮಾಡಲು, ಇದಕ್ಕಾಗಿ ಸಂದೇಶದ ಮೇಲೆ ದೀರ್ಘವಾಗಿ ಒತ್ತಿದಾಗ ರಿಪ್ಲೈ ಕಾಣಿಸಿಕೊಳ್ಳುತ್ತದೆ. ಈ ಐಕಾನ್ ಮೇಲೆ ಕ್ಲಿಕ್ಕಿಸಿ, ನಿಮ್ಮ ಉತ್ತರವನ್ನು ಟೈಪ್ ಮಾಡಿ ಮತ್ತು ಅದನ್ನು ಕಳುಹಿಸಿ.

ಸಂದೇಶಗಳನ್ನು ಬೋಲ್ಡ್, ಇಟಾಲಿಕ್ ಮಾಡುವುದು ಅಂತೆಯೇ ಬೇಡದ ಚಾಟ್‌ಗಳನ್ನು ಸ್ಟ್ರೈಕ್ ತ್ರೂ ಮಾಡುವುದು

ಸಂದೇಶಗಳನ್ನು ಬೋಲ್ಡ್, ಇಟಾಲಿಕ್ ಮಾಡುವುದು ಅಂತೆಯೇ ಬೇಡದ ಚಾಟ್‌ಗಳನ್ನು ಸ್ಟ್ರೈಕ್ ತ್ರೂ ಮಾಡುವುದು

ನಿಮ್ಮ ಸಂದೇಶವನ್ನು ಬೋಲ್ಡ್, ಇಟಾಲಿಕ್ ಮತ್ತು ಚಾಟ್‌ಗಳನ್ನು ಸ್ಟ್ರೈಕ್ ಮಾಡುವುದು ಹೀಗೆ ಬೇರೆ ವೈಶಿಷ್ಟ್ಯತೆಗಳನ್ನು ಇದರಲ್ಲಿ ನಿಮಗೆ ಪ್ರಯೋಗಿಸಬಹುದಾಗಿದೆ. ಸಂದೇಶವನ್ನು ಬೋಲ್ಟ್ ಮಾಡಲು (*) ಇದನ್ನು ಬಳಸಿ, ಇಟಾಲಿಕ್ಸ್‌ಗೋಳಿಸಲು (_) ಇದನ್ನು ಬಳಸಿ ಇನ್ನು ಸ್ಟ್ರೈಕ್ ತ್ರೂ ಮಾಡಲು (~) ಈ ಗುರುತನ್ನು ಬಳಸಿಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are a few features that WhatsApp has come up with which the messaging giant is all set to make WhatsApp even more interesting and fun! Take a look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X