Subscribe to Gizbot

ಯೂಟ್ಯೂಬ್ ಹುಟ್ಟಿದ್ದು ಹೇಗೆ?..ಯೂಟ್ಯೂಬ್ ಹುಟ್ಟಲು ಕಾರಣಗಳೇನು ಗೊತ್ತಾ?!!

Written By:

ಈಗೆಲ್ಲಾ ಯೂಟ್ಯೂಬ್ ಎಂದರೇನು ಎಂದು ಕೇಳಿದರೆ ಚಿಕ್ಕ ಮಕ್ಕಳು ಕೂಡ ಕೂಡ ವಿಡಿಯೋ ಜಾಲತಾಣ ಎಂದು ಹೇಳಿಬಿಡುತ್ತವೆ. ಇನ್ನು ಸ್ವಲ್ಪ ತಿಳಿದವರು ಪ್ರಖ್ಯಾತ ಇಂಟರ್‌ನೆಟ್ ಜಾಲತಾಣ ಗೂಗಲ್‌ನ ವಿಡಿಯೋ ತಾಣ ಎಂದು ಹೇಳಿಬಿಡುತ್ತಾರೆ. ಆದರೆ, ನಿಮಗೆ ಗೊತ್ತಾ?.ಪ್ರಖ್ಯಾತ ವಿಡಿಯೋತಾಣ ಯೂಟ್ಯೂಬ್ ಹುಟ್ಟಿಹಾಕಿದ್ದು ಗೂಗಲ್ ಅಲ್ಲ.!!

ಹೌದು, ಗೂಗಲ್ ಕಂಪೆನಿ ಯೂಟ್ಯೂಬ್ ಅನ್ನು ಖರೀದಿಸುವ ಮುನ್ನವೇ ಯೂಟ್ಯೂಬ್ ಜನ್ಮ ತಾಳಿ ಭಾರೀ ಹೆಸರುವಾಸಿಯಾಗಿತ್ತು. ಹುಟ್ಟಿದ ಒಂದು ವರ್ಷದಲ್ಲಿಯೇ ಬಿರುಸಿನಿಂದ ಬೆಳೆಯುತ್ತಿದ್ದ ಯೂಟ್ಯೂಬಿನ ಮೇಲೆ ದೊಡ್ಡ ದೊಡ್ಡ ಕಂಪನಿಗಳಾದ ಯಾಹೂ, ಮೈಕ್ರೋಸಾಪ್ಟ್, ಗೂಗಲ್ನ ಕಣ್ಣುಗಳು ಬಿದ್ದು, ಕೊನೆಗೆ ಯೂಟ್ಯೂಬ್ 1.65 ಬಿಲಿಯನ್ ಡಾಲರ್‌ಗೆ ಗೂಗಲ್ ಪಾಲಾಯಿತು.!!

ಯೂಟ್ಯೂಬ್ ಹುಟ್ಟಿದ್ದು ಹೇಗೆ?..ಯೂಟ್ಯೂಬ್ ಹುಟ್ಟಲು ಕಾರಣಗಳೇನು ಗೊತ್ತಾ?!!

ಹಾಗಾದರೆ, ಯೂಟ್ಯೂಬ್ ಹುಟ್ಟಿಹಾಕಿದ್ದು ಯಾರು? ಅವರಿಗೇಕೆ ಯೂಟ್ಯೂಬ್ ಬೇಕಾಗಿತ್ತು? ಯೂಟ್ಯೂಬ್ ಹುಟ್ಟಿದ್ದು ಹೇಗೆ? ಎಂಬ ಕುತೋಹಲ ನಿಮ್ಮನ್ನು ಕಾಡುತ್ತಿದೆಯೇ? ಇಂದಿನ ಲೇಖನದಲ್ಲಿ ಯೂಟ್ಯೂಬ್ ಹುಟ್ಟು, ಬೆಳವಣಿಗೆ ಮತ್ತು ಇನ್ನಿತರೆ ಏನೆಲ್ಲಾ ವಿಶೇಷ ಅಂಶಗಳನ್ನು ಯೂಟ್ಯೂಬ್ ಹೊಂದಿದೆ ಎಂಬುದನ್ನು ತಿಳಿದುಕೊಳ್ಳೋಣ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂಟ್ಯೂಬ್ ಹುಟ್ಟಿದ್ದು ಯಾವಾಗ?

ಯೂಟ್ಯೂಬ್ ಹುಟ್ಟಿದ್ದು ಯಾವಾಗ?

ಈಗಿರುವಂತೆ ಯಾರು ಬೇಕಾದರು ಹೊಸದೊಂದು ಜಾಲತಾಣವನ್ನು ತೆರೆದು ವೀಡಿಯೋಗಳನ್ನು ಉಳಿದವರಿಗೆ ಹಂಚಿಕೊಳ್ಳುವಂತಹ ಆಯ್ಕೆ ಮೊದಲು ಇರಲಿಲ್ಲ. ಯಾಹೂ, ಗೂಗಲ್, ಮೈಕ್ರೋಸಾಪ್ಟ್ ನಂತಹ ದೊಡ್ಡ ಕಂಪನಿಗಳು ಮಾತ್ರ ತಮ್ಮ ಮಾಹಿತಿ ಹಾಗೂ ಸುದ್ದಿಗಳನ್ನು ಹಂಚಿಕೊಳ್ಳುವ ತಾಕತ್ತನ್ನು ಹೊಂದಿದ್ದ ಸಮಯ 2005ರಲ್ಲಿ ಯೂಟ್ಯೂಬ್ ಹುಟ್ಟಿತ್ತು.!!

ಯೂಟ್ಯೂಬ್ ಹುಟ್ಟಿಹಾಕಿದ್ದು ಯಾರು?

ಯೂಟ್ಯೂಬ್ ಹುಟ್ಟಿಹಾಕಿದ್ದು ಯಾರು?

ವೀಡಿಯೋಗಳನ್ನು ಹಂಚಿಕೊಳ್ಳಲು ನೆರವಾಗುವ ಜಾಲತಾಣವನ್ನು ಹೊರತರಬೇಕು ಎಂಬ ಪ್ರಯತ್ನದಲ್ಲಿದ್ದ ಚ್ಯಾಡ್ ಹರ್ಲಿ(Chad Hurley), ಸ್ಟೀವ್ ಚೆನ್ (Steve Chen) ಹಾಗೂ ಜಾವೆದ್ ಕರೀಮ್ (Jawed Karim) ಎಂಬ ಮೂವರು ಸೇರಿ ಹುಟ್ಟುಹಾಕಿದ ಕಂಪನಿಯೇ ಯೂಟ್ಯೂಬ್!

ಅವರಿಗೇಕೆ ಯೂಟ್ಯೂಬ್ ಬೇಕಾಗಿತ್ತು?

ಅವರಿಗೇಕೆ ಯೂಟ್ಯೂಬ್ ಬೇಕಾಗಿತ್ತು?

ಕ್ಯಾಲಿಪೋರ್ನಿಯಾದ ಪೇಪಾಲ್(PayPal) ಕಂಪನಿಯಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಹೊಸದೇನಾದರು ಮಾಡಬೇಕು ಎಂಬ ತುಡಿತವಿದ್ದ ಮೂವರು ಮಾರುಕಟ್ಟೆಯ ಬೇಡಿಕೆಗಳನ್ನು ಅರಿತು ಕೆಲಸ ಮಾಡಿದರು. ಈ ಸಮಯದಲ್ಲಿ ಅವರ ನಡುವೆ ನಡೆದ ಹಲವು ಸಂಗತಿಗಳೂ ಯೂಟ್ಯೂಬ್ ಹುಟ್ಟಲು ಕಾರಣವಾಗಿತ್ತು.!!

ಯೂಟ್ಯೂಬ್ ಹುಟ್ಟಲು ಮುಖ್ಯ ಕಾರಣಗಳೇನು?

ಯೂಟ್ಯೂಬ್ ಹುಟ್ಟಲು ಮುಖ್ಯ ಕಾರಣಗಳೇನು?

ಇಂಡೋನೇಶಿಯಾಕ್ಕೆ ಅಪ್ಪಳಿಸಿದ ಸುನಾಮಿಯ ಕುರಿತು ಇಡೀ ಜಗತ್ತೇ ಮಾತನಾಡಿದರೂ ಆ ಬಗ್ಗೆ ವಿವರ ತಿಳಿಯಬಯಸಿದ್ದ ಕರೀಮ್‍ಗೆ ಯಾವ ವೀಡಿಯೋ ಆಗಲಿ ಸುದ್ದಿತುಣುಕಾಗಲಿ ಮಿಂದಾಣಗಳಲ್ಲಿ ಸಿಕ್ಕಿರಲಿಲ್ಲ. ಹೀಗೆಯೇ, 2004 ರಲ್ಲಿ ಟೆಕ್ಸಾಸ್ ನಲ್ಲಿ ನಡೆದ ಸೂಪರ್ ಬೌಲ್ ಕಾರ‍್ಯಕ್ರಮದಲ್ಲಿ, ಹಾಡುಗಾರ್ತಿ ಜಾನೆಟ್ ಜಾಕ್ಸನ್ ಬಟ್ಟೆಯನ್ನು ಕೈತಪ್ಪಿ ಎಳೆದಿದ್ದ ಜಸ್ಟಿನ್ ಟಿಂಬರಲೇಕ್ ಕುರಿತ ವಿಡಿಯೋಗಳು ಸಿಗದೇ ಇರುವುದು ಸಹ ಯೂಟ್ಯೂಬ್ ಹುಟ್ಟಿಗೆ ಕಾರಣವಾಗಿದ್ದವು.!!

ಯೂಟ್ಯೂಬ್ ಹುಟ್ಟಿದ್ದು ಹೇಗೆ?

ಯೂಟ್ಯೂಬ್ ಹುಟ್ಟಿದ್ದು ಹೇಗೆ?

ಪೆಬ್ರವರಿ, 14 2005 ರಂದು www.youtube.com ಎಂಬ ನೆಲೆಯ ಹೆಸರನ್ನು ನೋಂದಾಯಿಸಲಾಯಿತು. ಹೆಚ್ಚು ಹಣವನ್ನು ಸಹ ಹೊಂದಿರದ ಯೂಟ್ಯೂಬ್ ಹರಿಕಾರರು ತಮ್ಮ ತಮ್ಮ ಮನೆಗಳಿಂದಲೇ ಮೊದಲ ಕೆಲಸವನ್ನು ಆರಂಭಿಸಿದರು. 2005ರ ಹೊತ್ತಿಗೆ ಸೆಕೋಯ ಕ್ಯಾಪಿಟಲ್ಎಂಬ ಹೂಡಿಕೆದಾರ ಕಂಪನಿ, 11.5 ಮಿಲಿಯನ್ ಡಾಲರ್ ಹಣ ಹೂಡಿದ ನಂತರ ಕಂಪೆನಿಯ ಹಣೆಬರಹವೇ ಬದಲಾಗಿತ್ತು.!!

How to Check Your Voter ID Card Status (KANNADA)
ಪ್ರಸ್ತುತ ಯೂಟ್ಯೂಬ್!!

ಪ್ರಸ್ತುತ ಯೂಟ್ಯೂಬ್!!

ನವೆಂಬರ್ 13, 2006 ಹೊತ್ತಿನಲ್ಲಿ ಯೂಟ್ಯೂಬಿನಲ್ಲಿ 65 ಮಂದಿ ಕೆಲಸ ಮಾಡುತ್ತಿದ್ದರು. ಅಂದು 1.65 ಬಿಲಿಯನ್ ಡಾಲರ್‌ಗೆ ಯೂಟ್ಯೂಬಿನ ಮಾರಾಟವಾಯಿತು. ನಂತರ ಇದೀಗ ಆಲ್ಪಾಬೆಟ್ (Alphabet Inc) ಎಂಬ ಕಂಪನಿಯೊಂದನ್ನು ಗೂಗಲ್ ಹುಟ್ಟುಹಾಕಿದೆ. ಹಾಗಾಗಿ ಅಲ್ಪಾಬೆಟ್ ಕಂಪನಿಯ ಅಡಿಯಲ್ಲಿ ಯೂಟ್ಯೂಬ್ ಈಗ ಕೆಲಸ ಮಾಡುತ್ತಿದೆ ಇನ್ನೂ ಎತ್ತರಕ್ಕೆ ಬೆಳೆಯುವ ಹಮ್ಮುಗೆಗಳನ್ನು ಹಾಕಿಕೊಂಡಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The domain name "YouTube.com" was activated on February 14, 2005 with video upload options being integrated on April 23, 2005. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot