ವೊಡಾಫೋನ್+ಐಡಿಯಾ VS ಜಿಯೋ!..ಜಾಲತಾಣದಲ್ಲೇ ನಡೆಯಿತು ಕೋಳಿ ಜಗಳ!!

  |

  ಭಾರತೀಯ ಟೆಲಿಕಾಂ ಕಂಪೆನಿಗಳ ಜಿದ್ದಾಜಿದ್ದಿ ಇದೀಗ ಕೇವಲ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಶುರುವಾಗಿದೆ. ಇಷ್ಟು ದಿನಗಳು ಕೇವಲ ಮಾಧ್ಯಮ ಪ್ರಕಟಣೆಗಳಲ್ಲಿ ದೂರು ದುಮ್ಮಾನಗಳನ್ನು ಪ್ರಕಟಿಸುತ್ತಿದ್ದ ಎರಡು ದಿಗ್ಗಜ ಟೆಲಿಕಾಂ ಕಂಪೆನಿಗಳು, ಈಗ ನಾಜೂಕಾಗಿಯೇ ಪರಸ್ಪರ ಕಾಲೆಳೆದುಕೊಂಡಿರುವ ಘಟನೆ ಟ್ವಿಟ್ಟರ್‌ನಲ್ಲಿ ನಡೆದಿದೆ.

  ವ್ಯಾಪಾರ-ವ್ಯವಹಾರ ಎಂದ ಮೇಲೆ ಜಿದ್ದಾಜಿದ್ದಿ ಸಹಜ. ಆದರೆ, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಈಗ ಪೈಪೋಟಿ ಮತ್ತಷ್ಟು ಹೆಚ್ಚಿದ್ದು, ವೊಡಾಪೋನ್, ಐಡಿಯಾ ಮತ್ತು ಜಿಯೋ ನಡುವೆ ಕೋಳಿ ಜಗಳ ನಡೆದಿದೆ. ವೊಡಾಪೋನ್​ ಮತ್ತು ಐಡಿಯಾ ವಿಲೀನವಾಗಿರುವ ಬಗ್ಗೆ ವೊಡಾಪೋನ್ ಟ್ವಿಟ್ಟಿಸಿದ್ದ ಒಂದು ಟ್ವಿಟ್ ಅನ್ನು ಜಿಯೋ ಕಾಲೆಳೆದಿದ್ದು ಜನರಿಂದ ಮೆಚ್ಚುಗೆಯನ್ನು ಪಡೆದಿದೆ.

  ವೊಡಾಫೋನ್+ಐಡಿಯಾ VS ಜಿಯೋ!..ಜಾಲತಾಣದಲ್ಲೇ ನಡೆಯಿತು ಕೋಳಿ ಜಗಳ!!

  ವೊಡಾಪೋನ್ ಇಂಡಿಯಾ ತನ್ನ ಟ್ವಿಟ್ಟರ್​ ಖಾತೆಯಲ್ಲಿ "Yeah @Idea. It's time we made it official https://www.vodafoneidea.com."ಎಂದು ಟ್ವಿಟ್ಟಿಸಿ ವೊಡಾಪೋನ್​ ಮತ್ತು ಐಡಿಯಾ ವಿಲೀನವಾಗಿರುವ ಬಗ್ಗೆ ಸಂತಸವನ್ನು ಹಂಚಿಕೊಂಡಿತ್ತು. ವೊಡಾಪೋನ್​ ಮತ್ತು ಐಡಿಯಾ ಅಫಿಷಿಯಲ್ ಆಗಿ ವಿಲೀನವಾಗಿರುವ ಬಗ್ಗೆ ಟ್ವಿಟ್ಟಿಗರಿಗೆ ಮಾಹಿತಿ ನೀಡುವಂತಹ ಟ್ವಿಟ್ ಇದಾಗಿತ್ತು.

  41st Reliance AGM: WhatsApp for JioPhone, JioPhone 2, and Jio Giga Fiber

  ಆದರೆ, ಈ ಟ್ವಿಟ್ ಅನ್ನು ನೋಡಿ ಸುಮ್ಮನಿರದ ಅಂಬಾನಿ ಒಡೆತನದ ಜಿಯೋ ಈ ಟ್ವೀಟ್​ಗೆ ತನ್ನದೇ ಆದ ರೀತಿಯಲ್ಲಿ ರೀ-ಟ್ವೀಟ್​ ಮಾಡಿ ಛೇಡಿಸಿದೆ. "Bringing people together since 2016. ❤️@VodafoneIN @Idea #WithLoveFromJio ಎಂದಿರುವ ಜಿಯೋ ಮಾತಿನ ಹಿಂದೆ ವ್ಯಂಗ್ಯೋಕ್ತಿಯನ್ನು ಸಹ ಹೇಳಿತ್ತು. ಇದು ಎರಡು ಕಂಪೆನಿಗಳ ನಡುವೆ ಕೋಳಿಜಗಳಕ್ಕೆ ಕಾರಣವಾಗಿತ್ತು.

  ಇದಾದ ನಂತರ ಐಡಿಯಾ ಟ್ಟಿಟ್ ಮೂಲಕ "Hey, @VodafoneIN you know they're all talking about us." ಎಂದು ಟ್ವಿಟ್ಟಿಸುವ ಮೂಲಕ ಜಿಯೋಗೆ ಟಾಂಗ್ ನೀಡಿದೆ. ಜಿಯೋ ಮಾತಿನ ಹಿಂದೆ ವ್ಯಂಗ್ಯೋಕ್ತಿಯನ್ನು ಗುರುತಿಸಿರುವ ಐಡಿಯಾ ಕಂಪೆನಿ, ನಾವು ಒಂದಾಗಿರುವುದರಿಂದ ಅವರೆಲ್ಲರೂ ನಮ್ಮ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಜಿಯೋಗೆ ಏಟು ನೀಡಿದೆ.

  ಇನ್ನು ಈ ಕೋಳಿ ಜಗಳವನ್ನು ಟ್ವಿಟ್ಟಿಗರು ಸಹ ಎಂಜಾಯ್ ಮಾಡಿದ್ದು, ಐಡಿಯಾ ಟ್ವೀಟ್​ಗೆ 2017 ರೀ ಟ್ವೀಟ್​ ಹಾಗೂ 800 ಲೈಕ್​ಗಳನ್ನು ನೀಡಿದ್ದಾರೆ, ವೋಡಾಫೋನ್​ ಟ್ವೀಟ್​ಗೆ 580 ರಿಟ್ವೀಟ್​ ಹಾಗೂ 1600 ಲೈಕ್​ಗಳು ಬಂದಿದೆ. ಆದರೆ ಇಲ್ಲಿಯೂ ಜಿಯೋವೇ ಪಾರಮ್ಯ ಮೆರೆದಿದ್ದು, ಜಿಯೋ ಮಾಡಿರುವ ಟ್ವೀಟ್​ 5100 ಬಾರಿ ರೀಟ್ವೀಟ್ ಆಗಿ, 9500 ಲೈಕ್​ಗಳನ್ನು ಪಡೆದುಕೊಂಡಿದೆ.

  English summary
  Reliance Jio on August 31, 2018 made fun of the recent Idea-Vodafone merger in India, on Twitter. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more