ಪಕ್ಷಗಳನ್ನು ಗೆಲ್ಲಿಸುತ್ತಿರುವುದು ವೋಟ್‌ ಬ್ಯಾಂಕ್ ಅಲ್ಲ..! ಸೋಷಿಯಲ್ ಮೀಡಿಯಾ ಬ್ಯಾಂಕ್..!

By Avinash
|

ಇನ್ನೇನು ಕೆಲವೇ ತಿಂಗಳಲ್ಲಿ ಭಾರತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲು ಇಂಟರ್‌ನೆಟ್‌ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ ಬಹಳ ದೊಡ್ಡದು ಎಂದರೇ ತಪ್ಪಿಲ್ಲ. ಸಾಮಾಜಿಕ ಜಾಲತಾಣಗಳ ಪ್ರಭಾವ ಭಾರತದಲ್ಲಿ ಸಾಕಷ್ಟು ವಿಸ್ತರಿಸಿದ್ದು, ಸ್ಮಾರ್ಟ್‌ಫೋನ್‌ ಬಳಕೆಯ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆಯಲ್ಲೂ ಸೋಷಿಯಲ್ ಮೀಡಿಯಾ ಪ್ರಮುಖ ವೇದಿಕೆ ಆಗಿತ್ತು.

ಆದ್ದರಿಂದಲೇ ಎಲ್ಲಾ ಪಕ್ಷಗಳು ಸಾಮಾಜಿಕ ಜಾಲತಾಣ ವಿಭಾಗವನ್ನು ಹೊಂದಿದ್ದು, ಅನೇಕ ರೀತಿಯ ಸೋಷಿಯಲ್ ಮೀಡಿಯಾ ತಂತ್ರಗಳನ್ನು ಎಣೆದು ಶತ್ರುಪಕ್ಷವನ್ನು ಬಗ್ಗು ಬಡಿಯಲು ಕಾರ್ಯತಂತ್ರವನ್ನು ರೂಪಿಸುತ್ತಿವೆ. ಸೋಷಿಯಲ್ ಮೀಡಿಯಾ ಸಮರ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರವಾಗಿದ್ದರೂ ಅನೇಕ ಪ್ರಾದೇಶಿಕ ಪ್ರಾಬಲ್ಯ ಹೊಂದಿದ ಪಕ್ಷಗಳು ಈ ಸೋಷಿಯಲ್ ಮೀಡಿಯಾ ಸಮರದಲ್ಲಿ ವಿರೋಧಿ ಪಕ್ಷಗಳ ಹಿನ್ನಡೆಯನ್ನು ಜನರ ಮುಂದಿಡುತ್ತಿವೆ. ಇದರಿಂದ ಬಹುದೊಡ್ಡ ಪರಿಣಾಮವು ಸಹ ಉಂಟಾಗುತ್ತಿದೆ.

ಸದ್ಯಕ್ಕೆ ವೋಟ್‌ ಬ್ಯಾಂಕ್‌ಗಿಂತ ಸೋಷಿಯಲ್ ಮೀಡಿಯಾ ಬ್ಯಾಂಕ್ ಮುಖ್ಯ..!

ಅದಕ್ಕಾಗಿಯೇ ಸಾಮಾಜಿಕ ಜಾಲತಾಣಗಳನ್ನು ಯಾವ ಪಕ್ಷ ಪರಿಣಾಮಕಾರಿಯಾಗಿ ಬಳಸಿ ಯಶಸ್ವಿಯಾಗುತ್ತಿದೆ. ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಪಕ್ಷಗಳು ಎಷ್ಟು ಫಾಲೋವರ್ಸ್‌ ಹೊಂದಿದ್ದಾರೆ ಎಂಬುದರ ಸಮಗ್ರ ವಿವರ ಇಲ್ಲಿದೆ.

ಬಿಜೆಪಿ ಮುಂದು

ಬಿಜೆಪಿ ಮುಂದು

ಸದ್ಯ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯಲ್ಲಿ ಮುಂದಿದೆ. ಅಮಿತ್ ಮಾಳವಿಯಾ ನೇತೃತ್ವದಲ್ಲಿ ಬಿಜೆಪಿ ಐಟಿ ಸೆಲ್ ಬಹಳ ಚುರುಕಾಗಿಯೇ ಕೆಲಸ ಮಾಡುತ್ತಿದೆ. ಜುಲೈ 31ಕ್ಕೆ ಬಿಜೆಪಿಯ ಫೇಸ್‌ಬುಕ್ ಪೇಜ್ ಲೈಕ್ ಸಂಖ್ಯೆ 1,46,28,882 ಮೀರಿದೆ. ಟ್ವಿಟರ್‌ನಲ್ಲಿ ಹಿಂಬಾಲಕರ ಸಂಖ್ಯೆ 99,46,061 ಮೀರಿದೆ.

ಕಾಂಗ್ರೆಸ್‌ಗೆ ಹಿನ್ನಡೆ

ಕಾಂಗ್ರೆಸ್‌ಗೆ ಹಿನ್ನಡೆ

ಬಹಳ ಹಿಂದಿನಿಂದಲೂ ರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ನಿರ್ವಹಣೆಯಲ್ಲಿ ಎಡವಿರುವುದು ಸ್ಪಷ್ಟವಾಗುತ್ತದೆ. ಸದ್ಯ ಕನ್ನಡದ ನಟಿ ರಮ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್ ಕಾರ್ಯನಿರ್ವಹಿಸುತ್ತಿದೆ. ಸದ್ಯ ಕಾಂಗ್ರೆಸ್ ಫೇಸ್‌ಬುಕ್ ಪೇಜ್ ಲೈಕ್ ಸಂಖ್ಯೆ 48,69,459 ಇದ್ದು, 44,80,043 ಹಿಂಬಾಲಕರನ್ನು ಟ್ವಿಟರ್‌ನಲ್ಲಿ ಹೊಂದಿದೆ.

ಶೈನ್ ಆಗ್ತಿದೆ ಎಎಪಿ

ಶೈನ್ ಆಗ್ತಿದೆ ಎಎಪಿ

ಭ್ರಷ್ಟಾಚಾರ ವಿರೋಧಿ ಅಲೆಯಿಂದ ದೆಹಲಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಾರ್ಟಿ ಸೋಷಿಯಲ್ ಮೀಡಿಯಾದಲ್ಲಿ ಶೈನ್ ಆಗ್ತಿದೆ. ಇತ್ತೀಚೆಗೆ ಮುನ್ನೆಲೆಗೆ ಬಂದಿದ್ದರೂ ಸಹ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದೆ. ಸದ್ಯ ಫೇಸ್‌ಬುಕ್‌ನಲ್ಲಿ 34,83,960 ಫೇಜ್‌ ಲೈಕ್ ಹೊಂದಿದ್ದು, ಟ್ವಿಟರ್‌ನಲ್ಲಿ 46,65,613 ಫಾಲೋವರ್ಸ್ ಹೊಂದಿದೆ.

ಜೆಡಿಎಸ್‌ ಸಾಧನೆ ಅಷ್ಟಕ್ಕಷ್ಟೇ

ಜೆಡಿಎಸ್‌ ಸಾಧನೆ ಅಷ್ಟಕ್ಕಷ್ಟೇ

ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗರುವ ಜೆಡಿಎಸ್ ಸದ್ಯ ಕಾಂಗ್ರೆಸ್ ಸ್ನೇಹದೊಂದಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ಹಿಡಿದಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ ಸಾಧನೆ ಅಷ್ಟಕ್ಕಷ್ಟೇ. ಸದ್ಯ ಜೆಡಿಎಸ್ ಫೇಸ್‌ಬುಕ್‌ ಪೇಜ್ 87,475 ಲೈಕ್ ಹೊಂದಿದ್ದರೆ, ಟ್ವಿಟರ್‌ನಲ್ಲಿ 1,05,897 ಹಿಂಬಾಲಕರನ್ನು ಹೊಂದಿದೆ.

ಶರದ್‌ ಪವಾರ್ ಎನ್‌ಸಿಪಿ ಪಾಸ್‌

ಶರದ್‌ ಪವಾರ್ ಎನ್‌ಸಿಪಿ ಪಾಸ್‌

ಶರದ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಾರ್ಟಿ ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಉತ್ತಮವಾಗಿದೆ. ಕೆಲವೇ ಕೆಲವು ಪ್ರದೇಶಗಳಲ್ಲಿ ಬಾಹುಳ್ಯ ಹೊಂದಿರುವ ಎನ್‌ಸಿಪಿ ಸದ್ಯ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ 517,812 ಲೈಕ್ ಹೊಂದಿದೆ. ನಿಯಮಿತವಾಗಿ ಪೋಸ್ಟ್‌ಗಳನ್ನು ಮಾಡಿ ಜನರನ್ನು ತಲುಪವ ಪ್ರಯತ್ನ ಮಾಡುತ್ತಿದೆ. ಟ್ವಿಟರ್‌ನಲ್ಲಿ 2,48,711 ಹಿಂಬಾಲಕರನ್ನು ಹೊಂದಿದೆ.

ಮಮತಾ ಟಿಎಂಸಿಯೂ ಗುಡ್‌

ಮಮತಾ ಟಿಎಂಸಿಯೂ ಗುಡ್‌

ಸದ್ಯ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದೆ. ಪ್ರಾದೇಶಿಕ ಪಕ್ಷವಾದ ಟಿಎಂಸಿಯು ಸದ್ಯ ಫೇಸ್‌ಬುಕ್‌ನಲ್ಲಿ 4,89,687 ಪೇಜ್ ಲೈಕ್ ಹೊಂದಿದೆ. ಟ್ವಿಟರ್‌ನಲ್ಲಿ 1,75,437 ಫಾಲೋವರ್ಸ್‌ ಹೊಂದಿದೆ.

ಸಿಪಿಐ (ಎಂ) ಸದ್ದು ಕೇಳ್ತಿಲ್ಲ

ಸಿಪಿಐ (ಎಂ) ಸದ್ದು ಕೇಳ್ತಿಲ್ಲ

ಭಾರತದುದ್ದಕ್ಕೂ ಸಿಪಿಐ ಪಕ್ಷ ತನ್ನ ಹೆಸರನ್ನು ಅಸ್ತಿತ್ವದಲ್ಲಿಟ್ಟುಕೊಂಡಿದೆ. ಆದರೆ, ಸೋಷಿಯಲ್ ಮೀಡಿಯಾದ ಸಾಧನೆ ಹೇಳಿಕೊಳ್ಳುವಂಗಿಲ್ಲ. ಫೇಸ್‌ಬುಕ್‌ನಲ್ಲಿ 3,55,289 ಪೇಜ್‌ ಲೈಕ್ ಹೊಂದಿದೆ. ಟ್ವಿಟರ್‌ನಲ್ಲಿ 1,91,460 ಫಾಲೋವರ್ಸ್‌ ಹೊಂದಿದೆ.

ಆನೆಯ ಹಾದಿ ನಡಿತಿಲ್ಲ

ಆನೆಯ ಹಾದಿ ನಡಿತಿಲ್ಲ

ಮಾಯಾವತಿ ನೇತೃತ್ವದ ಬಿಎಸ್‌ಪಿಯ ಹಾದಿ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇನು ಚೆನ್ನಾಗಿಲ್ಲ. ಆನೆ ನಡೆಯುತ್ತಿರುವ ಹಾದಿಯಲ್ಲಿ ಸೋಷಿಯಲ್ ಮೀಡಿಯಾ ಕಾಣುತ್ತಿಲ್ಲ. ಫೇಸ್‌ಬುಕ್‌ನಲ್ಲಿ 1,24,249 ಪೇಜ್ ಲೈಕ್ ಹೊಂದಿದ್ದು, ಟ್ವಿಟರ್‌ನಲ್ಲಿ ಕೇವಲ 6,387 ಫಾಲೋವರ್ಸ್ ಹೊಂದಿದೆ.

Best Mobiles in India

English summary
Indian political parties and social media bank. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X