Subscribe to Gizbot

ಟ್ವಿಟರ್‌ನಲ್ಲಿ ಫಾಲೋವರ್‌ಗಳನ್ನು ಹೆಚ್ಚಿಸಿಕೊಳ್ಳಬೇಕೆ? ಈ ಟಿಫ್ಸ್ ಫಾಲೋ ಮಾಡಿ

Written By:

ಸಾಮಾಜಿಕ ಜಾಲತಾಣಗಳು ಇಂದು ಕೇವಲ ಮಾಹಿತಿ ಪ್ರಸಾರಕಲ್ಲದೇ ಕಂಪನಿ, ಸಂಸ್ಥೆ, ಹಲವು ಬ್ರ್ಯಾಂಡ್‌ಗಳಿಗೆ ಉತ್ತಮ ಮಾರುಕಟ್ಟೆಯಾಗಿ ರೂಪುಗೊಂಡಿವೆ. ಅಂತಹ ತಾಣಗಳಲ್ಲಿ ಟ್ವಿಟರ್‌ ಸಹ ಒಂದು. ಹೆಚ್ಚು ಸ್ಪೋರ್ಟ್‌ಮೆನ್‌ಗಳು, ಸಿನಿಮಾ ಸೆಲೆಬ್ರಿಟಿಗಳು, ಸಾಹಿತಿಗಳು ಟ್ವಿಟರ್‌ ಬಳಕೆದಾರರಾಗಿದ್ದಾರೆ.

ಟ್ವಿಟರ್‌ನಲ್ಲಿ ಫಾಲೋವರ್‌ಗಳನ್ನು ಹೆಚ್ಚಿಸಿಕೊಳ್ಳಬೇಕೆ? ಈ ಟಿಫ್ಸ್ ಫಾಲೋ ಮಾಡಿ

ಪ್ರಸ್ತುತದಲ್ಲಿ ಫೇಸ್‌ಬುಕ್‌ ನಂತರದಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅಫೀಸಿಯಲ್‌ ಸೈಟ್‌ ಆಗಿ ಟ್ವಿಟರ್‌ ಬಳಸಲ್ಪಡುತ್ತಿದೆ. ಟ್ವಿಟರ್‌ನಲ್ಲಿ ನೀವು ಇತರರನ್ನು ಫಾಲೋ ಮಾಡಬಹುದು. ಹಾಗೂ ನಿಮ್ಮನ್ನು ಇತರರು ಫಾಲೋ ಮಾಡಬಹುದು. ಟ್ವಿಟರ್‌(Twitter) ಅಧಿಕವಾಗಿ ಸೆಲೆಬ್ರಿಟಿಗಳಿಂದ ಬಳಸಲ್ಪಡುತ್ತಿದ್ದು, ನೀವು ಇತರರನ್ನು ಫಾಲೋ ಮಾಡ ಬಹುದು. ಆದರೆ ನಿಮ್ಮನ್ನು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಫಾಲೋ ಮಾಡಲು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ಟಾಪ್‌ ಸಲಹೆಗಳನ್ನು ನೀಡುತ್ತಿದೆ.

ಗೂಗಲ್‌ ಖಾತೆ ಸುರಕ್ಷತೆಗಾಗಿ ಈ 5 ಟಿಪ್ಸ್‌ಗಳನ್ನು ಮಿಸ್‌ಮಾಡದೇ ಬಳಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವಿಟರ್ ಬಯೋಡಾಟಾ

ಟ್ವಿಟರ್ ಬಯೋಡಾಟಾ

ನಿಮ್ಮ ಸ್ವವಿರಗಳನ್ನು ನೀಡುವುದರ ಜೊತೆಗೆ ನೀವು ಎಂತಹ ಮಾಹಿತಿಯನ್ನು ಹೆಚ್ಚು ಇಷ್ಟಪಡುತ್ತೀರಿ ಎಂಬುದನ್ನು ತಿಳಿಸಿ. ಹಾಗೂ ಟ್ವೀಟ್‌ ಮಾಡುವ ವಿಷಯಗಳನ್ನು ಬಳಕೆದಾರರನ್ನು ಸ್ಫೂರ್ತಿಗೊಳಿಸುವಂತಿರಲಿ.

ಇತರನ್ನು ಫಾಲೋ ಮಾಡಿ

ಇತರನ್ನು ಫಾಲೋ ಮಾಡಿ

ನೀವು ಟ್ವಿಟರ್ ಬಳಕೆದಾರರಲ್ಲಿ ಶೇಕಡ 10 ಬಳಕೆದಾರರನ್ನಾದರು ಫಾಲೋ ಮಾಡಿದಲ್ಲಿ ಮಾತ್ರ ನಿಮ್ಮನ್ನು ಇತರರು ಫಾಲೋ ಮಾಡಲು ಅವಕಾಶ ಇರುತ್ತದೆ. ಆದ್ದರಿಂದ ನಿಮ್ಮ ಆಸಕ್ತಿ ಬಳಕೆದಾರರನ್ನು ಹೆಚ್ಚಿನದಾಗಿ ಫಾಲೋ ಮಾಡಿ.

ಚಟುವಟಿಕೆ ಅಧಿಕವಾಗಿರಲಿ

ಚಟುವಟಿಕೆ ಅಧಿಕವಾಗಿರಲಿ

ಟ್ವೀಟ್‌ ಮಾಡುವ ಮಾಹಿತಿಯ ವೆಬ್‌ಲಿಂಕ್‌ ಅನ್ನು ಪ್ರೊಫೈಲ್‌ಗೆ ನೀಡಬೇಡಿ. ನೇರವಾಗಿ ಮಾಹಿತಿಯು ಓದುಗರಿಗೆ ಸಿಗುವಂತೆ ಸಂದೇಶವನ್ನು ನೀಡಿ. ಮಾಹಿತಿಗಳು ಹೆಚ್ಚು ನಿಖರ ಮತ್ತು ಗಂಭೀರವಾಗಿರಲಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಚು ಒಡನಾಟ

ಹೆಚ್ಚು ಒಡನಾಟ

ಇತರರು ಟ್ವೀಟ್‌ ಮಾಡಿದ್ದಲ್ಲಿ ಪ್ರತಿಕ್ರಿಯೆ ಆಗಿ ಕಾಮೆಂಟ್, ಪ್ರಶ್ನೆ, ಅಭಿಪ್ರಾಯಗಳನ್ನು ತಿಳಿಸಿ. ಹಾಗೂ ಚರ್ಚೆಗಳಲ್ಲಿ ಭಾಗಿಯಾಗಿ.

ಮಾಹಿತಿ ನೀಡುವವರಾಗಿ

ಮಾಹಿತಿ ನೀಡುವವರಾಗಿ

ಹೊಸ ಫಾಲೋವರ್ಸ್‌ಗಳನ್ನು ಪಡೆಯಲು ನೀವು ಮಾಹಿತಿಯ ಮೂಲವಾಗಿರಬೇಕು. ಆದ್ದರಿಂದ ನೀವು ಹೆಚ್ಚು ಹೆಚ್ಚು ಹೊಸ ಮಾಹಿತಿಗಳನ್ನು ಟ್ವೀಟ್‌ ಮಾಡುತ್ತಿರಿ.

ಕೀ ವರ್ಡ್‌ ಮತ್ತು ಹ್ಯಾಶ್ಟ್ಯಾಗ್‌

ಕೀ ವರ್ಡ್‌ ಮತ್ತು ಹ್ಯಾಶ್ಟ್ಯಾಗ್‌

ನಿಮ್ಮ ಮಾಹಿತಿಗಳು ಹೆಚ್ಚು ಸರ್ಚ್‌ ಆಗಲು ಯಾವಾಗಲು ಕೀ ವರ್ಡ್‌ಗಳನ್ನು ಬಳಸಿರಿ. ಮಾಹಿತಿ ಯಾವುದಾದರೊಂದು ಸಿಂಬಲ್‌ ಕೀ ವರ್ಡ್‌ಗಳಿಂದ ಬಳಸುತ್ತಿದ್ದಲ್ಲಿ ನಿಮ್ ಮಾಹಿತಿ ಹೆಚ್ಚು ಸರ್ಚ್‌ಬಾರ್‌ನಲ್ಲಿ ಹುಡುಕಲು ಹೆಚ್ಚು ಸಹಾಯಕವಾಗುತ್ತದೆ.

ರೀಟ್ವೀಟ್‌

ರೀಟ್ವೀಟ್‌

ಇತರರ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಿದ್ದಲ್ಲಿ ನಿಮ್ಮನ್ನು ಇತರರು ಹೆಚ್ಚು ಇಷ್ಟಪಡುತ್ತಾರೆ. ಹಾಗೂ ಇತರೆ ಬಳಕೆದಾರರು ಸಹ ನಿಮ್ಮನ್ನು ಫಾಲೋ ಮಾಡಲ ಮುಂದಾಗುತ್ತಾರೆ. ರೀಟ್ವೀಟ್‌ಮಾಡುವ ಸಂದೇಶ ಆಸಕ್ತಿಕರವಾಗಿರಲಿ.

ಸಹಜವಾಗಿರಲಿ

ಸಹಜವಾಗಿರಲಿ

ನಿಮ್ಮ ಚರ್ಚೆಗಳು ಟ್ವೀಟ್‌ನಲ್ಲಿ ಸಹಜವಾಗಿರಲಿ. ಹಾಗೂ ಇತರರು ಸಂವಾದ ಮಾಡಿದ ಹೇಳಿಕೆಗಳು ನಿಮ್ಮ ಟ್ವೀಟ್‌ಗಳ ಜೊತೆಗಿರಲಿ.

ನಿರುಪಯುಕ್ತ ಮತ್ತು ಮಾರಾಟ

ನಿರುಪಯುಕ್ತ ಮತ್ತು ಮಾರಾಟ

ಟ್ವಿಟರ್‌ ಖಾತೆ ತೆರೆದು ನಿರುಪಯುಕ್ತವಾಗಿ ಇಡಬೇಡಿ. ಟ್ವಿಟರ್‌ನಲ್ಲಿ ಇತರರಿಗೆ ವಸ್ತುಗಳನ್ನು ಮಾರಾಟ ಮಾಡಲು ಬಯಸಿದ್ದಲ್ಲಿ 10 ಟ್ವೀಟ್‌ಗಳನ್ನು ಮಾಡಿ ಬೇಕಾದರೂ ನಿಮ್ಮ ಮಾರಾಟ ಪ್ರಕ್ರಿಯೆ ವೃದ್ಧಿಸಿಕೊಳ್ಳಿ. ಕಾರಣ ಟ್ವಿಟರ್ ಮಾರ್ಕೆಟಿಂಗ್‌ ಕ್ಷೇತ್ರವು ಹೌದು.

ನಿರ್ದೇಶನಗಳನ್ನು ನೀಡಿ

ನಿರ್ದೇಶನಗಳನ್ನು ನೀಡಿ

ನಿಮ್ಮ ಆಸಕ್ತ ವಿಷಯಗಳನ್ನು ಇತರರಿಗೆ ನಿರ್ದೇಶನ ನೀಡಿದಲ್ಲಿ ನೀವು ಇನ್ನೊಬ್ಬರಿಂದ ಫಾಲೋ ಆಗಲು ಗುರುತಿಸಿಕೊಳ್ಳುತ್ತೀರಿ. ಟ್ವಿಟರ್‌ನಲ್ಲಿ ನಿಮ್ಮ ಸೇವೆಯು ಇತರರು ಫಾಲೋ ಮಾಡಲು ಉಪಯುಕ್ತ ಮಾರ್ಗವಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Just Follow these symple steps to increase your Twitter followers. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot