ಒಬ್ಬ ವ್ಯಕ್ತಿಯಿಂದಲೇ ಫೇಸ್‌ಬುಕ್‌ನಲ್ಲಿ ಎರಡೆರಡೂ ಬಾರಿ ಮೋಸ..! 1 ಲಕ್ಷ ರೂ. ವಂಚನೆ..!

By Gizbot Bureau
|

ಡಿಜಿಟಲ್‌ ಯುಗ ಬೆಳೆದಂತೆಲ್ಲ, ಸೈಬರ್‌ ಕ್ರೈಂ, ವಂಚನೆ ಪ್ರಕರಣಗಳು ಹೆಚ್ಚುತ್ತಲೆ ಇವೆ. ಹೌದು, ಇತ್ತೀಚಿಗಷ್ಟೇ ಥಾಣೆಯ ನಿವಾಸಿಯೊಬ್ಬ ಒಬ್ಬನೇ ವ್ಯಕ್ತಿಯಿಂದ ಎರಡೆರಡು ಬಾರಿ ವಂಚನೆಗೊಳಪಟ್ಟಿದ್ದಾನೆ. ವಂಚನೆಗೊಳಗಾದ ವ್ಯಕ್ತಿ ಪೀಠೋಪಕರಣಗಳನ್ನು ಮಾರಾಟ ಮಾಡಲು, ಫೇಸ್‌ಬುಕ್‌ನಲ್ಲಿ ಜಾಹೀರಾತನ್ನು ಪೋಸ್ಟ್ ಮಾಡಿದ್ದಾರೆ.

ಜಾಹೀರಾತು ಪೋಸ್ಟ್‌

ಜಾಹೀರಾತು ಪೋಸ್ಟ್‌ ಮಾಡಿದ ನಂತರ, ಆ ವ್ಯಕ್ತಿ ಖರೀದಿದಾರರಿಂದ ಕರೆ ಪಡೆದಿದ್ದು, ಅವರು ಪೇಟಿಎಂ ಮತ್ತು ಗೂಗಲ್‌ ಪೇನಂತಹ ಮೊಬೈಲ್ ವ್ಯಾಲೆಟ್‌ಗಳ ಮೂಲಕ ಪಾವತಿಗೆ ಮುಂದಾಗಿದ್ದಾರೆ. ಇದು ವಂಚನೆಗೆ ದಾರಿಮಾಡಿಕೊಟ್ಟಿದೆ. ಈ ಹಗರಣದ ಬಗ್ಗೆ ಒಂದಿಷ್ಟು ಅಂಶಗಳನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಅವಶ್ಯವಾಗಿದೆ.

ವಂಚಕನಿಂದ ಜಾಹೀರಾತುಗಳ ಸರ್ಚಿಂಗ್‌

ವಂಚಕನಿಂದ ಜಾಹೀರಾತುಗಳ ಸರ್ಚಿಂಗ್‌

ಮೋಸಗಾರರು ಫೇಸ್‌ಬುಕ್, ಓಎಲ್‌ಎಕ್ಸ್‌, ಕ್ವಿಕ್ಕರ್‌ ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಜಾಹೀರಾತುಗಳನ್ನು ಹುಡುಕುತ್ತಾರೆ.

ಜಾಹೀರಾತುದಾರರ ಸಂಪರ್ಕ

ಜಾಹೀರಾತುದಾರರ ಸಂಪರ್ಕ

ಜಾಹೀರಾರುಗಳನ್ನು ಹುಡುಕಿದ ನಂತರ, ಸಂಭಾವ್ಯ ಗುರಿಯನ್ನು ಗುರುತಿಸಿ ಉತ್ಪನ್ನವನ್ನು ಖರೀದಿಸಲು ‘ಜಾಹೀರಾತುದಾರರನ್ನು' ಸಂಪರ್ಕಿಸುತ್ತಾರೆ

ಚೌಕಾಶಿ ಮಾಡಲ್ಲ

ಚೌಕಾಶಿ ಮಾಡಲ್ಲ

ಸಂತ್ರಸ್ತ ತನ್ನ ಉತ್ಪನ್ನವನ್ನು ಯಾವುದೇ ದರದಲ್ಲಿ ಮಾರಾಟ ಮಾಡಿದರು, ವಂಚಕನು ಚೌಕಾಶಿ ಮಾಡುವುದಿಲ್ಲ.

ಯುಪಿಐನಲ್ಲಿ ವಂಚನೆ

ಯುಪಿಐನಲ್ಲಿ ವಂಚನೆ

ವಂಚಕ, ಉತ್ಪನ್ನವನ್ನು ಖರೀದಿಸುವಂತೆ ನಟಿಸುತ್ತಾ, ಯುಪಿಐ ಮೂಲಕ ಪಾವತಿಸುವ ಮೂಲಕ ವಸ್ತುಗಳನ್ನು ಕಾಯ್ದಿರಿಸಲು ಒಪ್ಪುತ್ತಾನೆ.

ಮನಿ ರಿಕ್ವೆಸ್ಟ್

ಮನಿ ರಿಕ್ವೆಸ್ಟ್

ಯುಪಿಐನಲ್ಲಿಯೇ ಹಗರಣ ನಡೆಯುವುದು. ವಂಚಕ ಹಣ ಕಳುಹಿಸುವ ಬದಲು, ಸಂತ್ರಸ್ತನಿಗೆ ಮನಿ ರಿಕ್ವೆಸ್ಟ್ ಕಳುಹಿಸುತ್ತಾನೆ.

ಪೇಟಿಎಂನಲ್ಲಿ ಮನಿ ರಿಕ್ವೆಸ್ಟ್

ಪೇಟಿಎಂನಲ್ಲಿ ಮನಿ ರಿಕ್ವೆಸ್ಟ್

ಪೀಠೋಪಕರಣಗಳಿಗಾಗಿ ಪೇಟಿಎಂ ಮೂಲಕ ಹಣ ಪಾವತಿಸುತ್ತೇನೆ ಎಂದಿರುವ ವಂಚಕ, ಸಂತ್ರಸ್ತನಿಂದ ಹಣವನ್ನು ವಿನಂತಿಸಿದ್ದಾನೆ. ಸಂತ್ರಸ್ತ ತಾನು ಹಣವನ್ನು ಪಡೆಯುತ್ತಿದ್ದೇನೆ ಎಂದು ಭಾವಿಸಿ, ಒಟಿಪಿಯನ್ನು ನೀಡಿದ್ದಾನೆ. ಮರುಕ್ಷಣದಲ್ಲಿಯೇ ಹಣ ಅವನ ಖಾತೆಯಿಂದ ಡೆಬಿಟ್ ಆಗಿದೆ.

ತಪ್ಪೊಪ್ಪಿಕೊಂಡು ಮತ್ತೊಂದು ವಂಚನೆ

ತಪ್ಪೊಪ್ಪಿಕೊಂಡು ಮತ್ತೊಂದು ವಂಚನೆ

ತನ್ನ ಖಾತೆಯಿಂದ ಹಣವನ್ನು ಪೇಟಿಎಂ ಮೂಲಕ ಕಡಿತಗೊಳಿಸಲಾಗಿದೆ ಎಂದು ಸಂತ್ರಸ್ತ ಹೇಳಿದಾಗ, ವಂಚಕ ಕ್ಷಮೆಯಾಚಿಸಿದ್ದಾನೆ ಮತ್ತು ಅದನ್ನು ಗೂಗಲ್‌ ಪೇ ಮೂಲಕ ಮರುಪಾವತಿ ಮಾಡುವಂತೆ ನಟಿಸಿದ್ದಾನೆ. ನಂತರ, ವಂಚಕ ಗೂಗಲ್ ಪೇನಲ್ಲಿ ಮತ್ತೆ ಅದೇ ಮೊತ್ತವನ್ನು ವಿನಂತಿಸಿದ್ದು, ಸಂತ್ರಸ್ತ ಮತ್ತೆ ಹಣವನ್ನು ಕಳೆದುಕೊಂಡಿದ್ದಾನೆ.

1.01 ಲಕ್ಷ ರೂ. ವಂಚನೆ

1.01 ಲಕ್ಷ ರೂ.ಗಳನ್ನು ಕಳೆದುಕೊಂಡ ನಂತರ, ವಂಚಕ ಮತ್ತೊಂದು ಸಲ ಮರುಪಾವತಿ ಮಾಡುವುದಾಗಿ ಹೇಳಿದ್ದಾನೆ. ಆಗ, ಸಂತ್ರಸ್ತನಿಗೆ ನಾನು ಮೋಸಕ್ಕೆ ಒಳಗಾಗಿದ್ದೇನೆ ಎಂಬುದು ಅರಿವಾಗಿದೆ.

ವಂಚಕರಿಗೆ ಬೆಸ್ಟ್ ಆಯ್ಕೆ

ಹಣ ಪಡೆಯುವ ಬದಲು ಪಾವತಿಸುತ್ತಿದ್ದೇವೆ ಎಂಬುದನ್ನು ತಿಳಿಯದೆ ಇರುವುದು ವಂಚಕರಿಗೆ ಬೆಸ್ಟ್ ಆಯ್ಕೆಯಾಗಿದೆ. ಯುಪಿಐ ಅಪ್ಲಿಕೇಶನ್‌ಗಳಲ್ಲಿನ ರಿಕ್ವೆಸ್ಟ್‌ ಮನಿ ಫೀಚರ್‌ ವಂಚಕರ ಉತ್ತಮ ಸ್ನೇಹಿತನಾಗಿದೆ.

ಹಣ ಪಡೆಯಲು ಒಟಿಪಿ ಅಗತ್ಯವಿಲ್ಲ

ಹಗರಣಗಳನ್ನು ತಡೆಗಟ್ಟಲು ಒಂದು ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ. ಹಣ ಕಳುಹಿಸಲು ಒಟಿಪಿ ಅಗತ್ಯವಿದೆಯೇ ಹೊರತು, ಹಣ ಸ್ವೀಕರಿಸಲು ಅಲ್ಲ ಎಂಬುದು ಅರಿವಿರಲಿ.

Most Read Articles
Best Mobiles in India

Read more about:
English summary
Man Gets Cheater For Rs. 1 Lakh On Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X