ಬರಾಕ್ ಒಬಾಮ ಟ್ವೀಟ್‌ಗೆ ದಾಖಲೆಯ ಲೈಕ್ಸ್..ಏನದು ಟ್ವಿಟ್ ಗೊತ್ತಾ?

Written By:

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಮಾಡಿದ ಒಂದು ಟ್ವೀಟ್, ಈವರೆಗೆ ಅತಿಹೆಚ್ಚು ಲೈಕ್ಸ್ ಪಡೆದ ಟ್ವೀಟ್ ಎಂಬ ದಾಖಲೆ ಮಾಡಿದೆ.! ದಕ್ಷಿಣ ಆಫ್ರಿಕಾದ ಗಾಂಧಿ ನೆಲ್ಸನ್ ಮಂಡೇಲಾ ಅವರು ತಮ್ಮ 'ಲಾಂಗ್ ವಾಕ್ ಟು ಫ್ರೀಡಮ್' ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಈ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.!!

ಈವರೆಗೂ ಈ ಟ್ವೀಟ್ ಅನ್ನು 40 ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದು, ಹಳೆಯ ಟ್ವಿಟರ್ ದಾಖಲೆಗಳನ್ನೆಲ್ಲಾ ಈ ಒಂದು ಟ್ವಿಟ್ ಮುರಿದುಹಾಕಿದೆ.!! ಇನ್ನು ಇದೇ ಟ್ವಿಟ್ ಅನ್ನು ಈವರೆಗೂ 16 ಲಕ್ಷ ಜನರು ಮರು ಟ್ವೀಟ್ ಮಾಡಿದ್ದಾರೆ. ಅತಿ ಹೆಚ್ಚು ಬಾರಿ ಮರುಟ್ವೀಟ್ ಆದ ಪಟ್ಟಿಯಲ್ಲಿ ಇದು 2ನೇ ಸ್ಥಾನದಲ್ಲಿದೆ.

ಬರಾಕ್ ಒಬಾಮ ಟ್ವೀಟ್‌ಗೆ ದಾಖಲೆಯ ಲೈಕ್ಸ್..ಏನದು ಟ್ವಿಟ್ ಗೊತ್ತಾ?

ಯಾರೊಬ್ಬರೂ ಹುಟ್ಟುತ್ತಲೇ ಚರ್ಮದ ಬಣ್ಣ, ಅಥವಾ ಧರ್ಮ ಹಿನ್ನೆಲೆಯ ಕಾರಣಕ್ಕೆ ಇನ್ನೊಬ್ಬ ವ್ಯಕ್ತಿಯನ್ನು ದ್ವೇಷಿಸುವುದಿಲ್ಲ ಎಂಬ ಮಾತು ಟ್ವೀಟ್‌ನಲ್ಲಿದ್ದು, ಆ ಟ್ವೀಟ್ ಜೊತೆಗೆ ವಿವಿಧ ಜನಾಂಗದ ಮಕ್ಕಳು ಇಣುಕಿ ನೋಡುತ್ತಿರುವ ಕಿಟಕಿಯ ಕಡೆ ಒಬಾಮ ನೋಡುತ್ತಿರು ಒಂದು ಛಾಯಾಚಿತ್ರವನ್ನೂ ಹಾಕಿದ್ದಾರೆ.!

ಪ್ರಪಂಚದೆಲ್ಲೆಡೆ ಜನಾಂಗಿಯ ದ್ವೇಷ ಹರಡುತ್ತಿರುವ ಸಮಯದಲ್ಲಿ , ಅದರಲ್ಲಿಯೂ ಚಾರ್ಲಟ್ಸ್‌ವಿಲ್ಲೆಯಲ್ಲಿ ನಡೆದ ಹಿಂಸಾಚಾರದ ಬಳಿಕ ಒಬಾಮಾ ಈ ಟ್ವಿಟ್ ಮಾಡಿದ್ದು, ಟ್ವಿಟ್ಟಿಗರು ಒಬಾಮರನ್ನು ಭಾವನಾತ್ಮಕವಾಗಿ ಅಭಿನಂದಿಸಿದ್ದಾರೆ.!!English summary
tweet by former President Barack Obama that has become the most liked in Twitter's history.to know more visit to kannada.gizbot.com
Please Wait while comments are loading...
Opinion Poll

Social Counting