Subscribe to Gizbot

ನೂಡಲ್ಸ್ ಮಾರುವ ಶೂಟರ್‌ಗೆ ಬದುಕಿನ ಭರವಸೆಯಾದ ಫೇಸ್‌ಬುಕ್

Written By:

ಇದೊಂದು ಕಥೆಯಲ್ಲ ಜೀವನಕ್ಕೆ ಅತೀ ಸಮೀಪದಲ್ಲಿ ನಡೆದಿರುವ ಘಟನೆ. ನೀವು ಬರಿಯ ಫೋಟೋ ಶೇರ್ ಮಾಡಲು, ಪೋಸ್ಟ್ ಹಂಚಿಕೊಳ್ಳಲು, ಚಾಟ್ ಮಾಡಲು ಬಳಸುವ ಸಾಮಾಜಿಕ ಮಾಧ್ಯಮ ಇಂದು ಆರ್ಥಿಕತೆಯಿಂದ ನರಳುತ್ತಿರುವವರಿಗೆ ಸಹಾಯ ಮಾಡುತ್ತಿದೆ. ಅವರನ್ನು ಸಮಾಜದ ಪ್ರಮುಖ ರಂಗಕ್ಕೆ ತಂದು ಅವರ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದೆ.

ಓದಿರಿ: ಬಡ ಹುಡುಗನ ಬದುಕನ್ನೇ ಬದಲಾಯಿಸಿದ ಫೇಸ್‌ಬುಕ್ ತಾಣ

ಬೀದಿ ಬದಿಯಲ್ಲಿ ಓದುತ್ತಿದ್ದ ಒಬ್ಬ ಹುಡುಗನಿಗೆ ಫೇಸ್‌ಬುಕ್ ಯಾವ ಬಗೆಯಲ್ಲಿ ಸಹಾಯ ಮಾಡಿತು ಎಂಬ ಸುದ್ದಿಯನ್ನು ನೀವು ಓದಿರುತ್ತೀರಿ ಅಂತಹುದೇ ಒಂದು ಮಹತ್ತರ ಕಾರ್ಯವನ್ನು ಇಂದು ಫೇಸ್‌ಬುಕ್ ಮಾಡಿದೆ. ಲಾಜಿಕಲ್ ಇಂಡಿಯನ್ ಸೈಟ್ ಮಾಡಿದ ಈ ಕಾರ್ಯವು ಒಬ್ಬ ಕ್ರೀಡಾಪಟುವಿಗೆ ಉದ್ಯೋಗ ದೊರಕಿಸುವಲ್ಲಿ ನೆರವಾಗಿದೆ. ಬನ್ನಿ ಅದು ಹೇಗೆ ಎಂಬುದನ್ನು ಸ್ಲೈಡರ್ ಮೂಲಕ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪುಷ್ಪಾ ಗುಪ್ತಾ

ರಾಷ್ಟ್ರೀಯ ಶೂಟರ್

ರಾಷ್ಟ್ರೀಯ ಶೂಟರ್ ಪುಷ್ಪಾ ಗುಪ್ತಾ ಜೀವನ ನಿರ್ವಹಣೆಗಾಗಿ ರಸ್ತೆಬದಿಯಲ್ಲಿ ನೂಡಲ್ಸ್ ತಯಾರಿಸುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಲಾಜಿಕಲ್ ಇಂಡಿಯನ್ ಸೈಟ್ ಆಕೆಯ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದು ಜನರ ಬೆಂಬಲವನ್ನು ಪಡೆಯುವುದರ ಜೊತೆಗೆ ಆಕೆಗೆ ಅದೃಷ್ಟದ ಬಾಗಿಲು ತೆರೆದಿದೆ.

ಕ್ಷಿಪ್ರಗತಿಯಲ್ಲಿ ಪ್ರಸಾರ

ಸುದ್ದಿ ಕ್ಷಿಪ್ರಗತಿಯಲ್ಲಿ ಪ್ರಸಾರ

ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಸುದ್ದಿ ಕ್ಷಿಪ್ರಗತಿಯಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ಗುಜರಾತ್ ಸ್ಟೇಟ್ ಫರ್ಟಿಲೈಜರ್ ಕಾರ್ಪೊರೇಶನ್ ಆಕೆಗೆ ಉದ್ಯೋಗವನ್ನು ಆಫರ್ ಮಾಡಿದ್ದು ಆಕೆಯ ಶಿಕ್ಷಣಕ್ಕೂ ಈ ಸಂಸ್ಥೆ ನೆರವು ನೀಡಲಿದೆ.

ವೃತ್ತಿ ಜೀವನ

ಶೂಟಿಂಗ್ ವೃತ್ತಿ ಜೀವನ

ಶೂಟಿಂಗ್ ವೃತ್ತಿ ಜೀವನಕ್ಕೂ ಜಿಎಸ್‌ಎಫ್‌ಸಿ ಬೆಂಬಲ ನೀಡುವುದಾಗಿ ತಿಳಿಸಿದೆ.

ಲಾಜಿಕಲ್ ಇಂಡಿಯನ್

ಲಾಜಿಕಲ್ ಇಂಡಿಯನ್ ಪೋಸ್ಟ್

ಲಾಜಿಕಲ್ ಇಂಡಿಯನ್ ಪೋಸ್ಟ್ ಮಾಡಿದ್ದ ಪೋಸ್ಟ್ ಇಲ್ಲಿದೆ

ದೊರೆತ ಮೆಡಲ್‌ಗಳನ್ನು ತೂಗುಹಾಕಿರುವುದು

ಮೆಡಲ್ ತೂಗುಹಾಕಿ

ಗ್ರಾಹಕರನ್ನು ತನ್ನ ಅಂಗಡಿಯತ್ತ ಸೆಳೆಯುವುದಕ್ಕಾಗಿ ಆಕೆ ತನಗೆ ದೊರೆತ ಮೆಡಲ್‌ಗಳನ್ನು ತೂಗುಹಾಕಿರುವುದು

ಲೈಕ್ ಮತ್ತು ಶೇರ್

ಹೆಮ್ಮೆಯ ಕ್ರೀಡಾಪಟು

ದೇಶದ ಹೆಮ್ಮೆಯ ಕ್ರೀಡಾಪಟುವೊಬ್ಬಳು ಜೀವನ ನಿರ್ವಹಣೆಗಾಗಿ ನೂಡಲ್ಸ್ ಶಾಪ್ ನಡೆಸುತ್ತಿರುವ ಚಿತ್ರವು ತಾಣದಲ್ಲಿ ಬಿತ್ತರವಾಗುತ್ತಿದ್ದಂತೆಯೇ ಜನರು ಇದನ್ನು ಹೆಚ್ಚುಚ್ಚು ಲೈಕ್ ಮತ್ತು ಶೇರ್ ಮಾಡಿ ಆಕೆಗೆ ಭಾಗ್ಯದ ಬಾಗಿಲು ತೆರೆಯುವಂತೆ ಮಾಡಿದ್ದಾರೆ.

ತಾಣ

ಲೈಕ್‌, ಕಮೆಂಟ್‌, ಶೇರ್‌

ಈ ಪೋಸ್ಟ್ ತಾಣದಲ್ಲಿ 4,388 ಲೈಕ್‌ಗಳನ್ನು, 148 ಕಮೆಂಟ್‌ಗಳನ್ನು ಮತ್ತು 937 ಶೇರ್‌ಗಳನ್ನು ಪಡೆದುಕೊಂಡಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
National Shooter Pushpa Gupta, who has to sell noodles for her survival After her news got widely shared on social media, Gujarat State Fertilizer Corporation (GSFC) has offered her a job in their corporation after completion of her studies.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot