ಶೀಘ್ರದಲ್ಲೇ ವಾಟ್ಸಾಪ್‌ನಿಂದ ಲ್ಯಾಂಡ್‌ಲೈನ್ ಕರೆ

By Shwetha
|

ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೊಸ ಹೊಸ ಫೀಚರ್‌ಗಳನ್ನು ಪ್ರಸ್ತುತಪಡಿಸುವ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಇದೀಗ ತಾನೇ ಬಂದ ಸುದ್ದಿ ಎಂಬಂತೆ ಜಪ್ರಿಯ ಇಂಟರ್ನೆಟ್ ಅಪ್ಲಿಕೇಶನ್ ಸೇವೆಗಳಾದ ಸ್ಕೈಪ್, ವಾಟ್ಸಾಪ್ ಅಥವಾ ವೈಬರ್ ಅನ್ನು ಬಳಸಿಕೊಂಡು ಲ್ಯಾಂಡ್‌ಲೈನ್ ಅಥವಾ ಮೊಬೈಲ್ ಫೋನ್ ಸಂಖ್ಯೆಗಳನ್ನು ಡಯಲ್ ಮಾಡಲು ಸಾಧ್ಯವಿರುವುದಾಗಿ ಮೂಲಗಳು ತಿಳಿಸಿವೆ.

ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗಳು ಮತ್ತು ಟೆಲಿಕಾಮ್ ಆಪರೇಟರ್‌ಗಳು ಒಪ್ಪಂದವನ್ನು ಮಾಡಿಕೊಂಡಿದ್ದು ಇಂತಹ ಸೌಲಭ್ಯವನ್ನು ಜನರಿಗೆ ಒದಗಿಸುವ ಮಹತ್ವದ ಯೋಜನೆಯನ್ನು ಚಾಲನೆ ಮಾಡಿದೆ. ಬನ್ನಿ ಇಂದಿನ ಲೇಖನದಲ್ಲಿ ಈ ಮಾಹಿತಿಯ ಬಗ್ಗೆ ಇನ್ನಷ್ಟು ವಿವರಗಳನ್ನು ಅರಿತುಕೊಳ್ಳೋಣ.

#1

#1

ಧ್ವನಿ ಕರೆಗಳಿಗೆ ಕಡಿಮೆ ದರದ ವ್ಯವಸ್ಥೆ ಇದ್ದು ಕಡಿಮೆ ಗುಣಮಟ್ಟದ ಇಂಟರ್ನೆಟ್‌ನಲ್ಲೂ ಈ ಸೌಲಭ್ಯ ಒದಗಿ ಬರಲಿದೆ.

#2

#2

ದೇಶದಲ್ಲಿ ಹೆಚ್ಚು ಕಡಿಮೆ ಬ್ರಾಡ್‌ಬ್ಯಾಂಡ್ ವ್ಯವಸ್ಥೆ ಇದ್ದರೂ ಇಂಟರ್ನೆಟ್ ಗುಣಮಟ್ಟದಲ್ಲಿ ಕೊರತೆ ಇದ್ದಾಗಲೂ ಈ ಸೌಲಭ್ಯವನ್ನು ಜನರು ಬಳಸಬಹುದಾಗಿದೆ.

#3

#3

ಗ್ರಾಹಕ ಸ್ನೇಹಿ ಯೋಜನೆಯಾಗಿರುವ ಈ ಸೇವೆಯು ಐಎಸ್‌ಪಿಎಸ್ ಮತ್ತು ಟೆಲಿಕಾಮ್ ಆಪರೇಟರ್‌ಗಳ ನಡುವೆ ಇಂಟರ್ ಕನೆಕ್ಟ್ ಒಪ್ಪಂದಗಳನ್ನು ಮಾಡಲು ಅನುಮತಿಸಲಿದೆ.

#4

#4

ಮುಕೇಶ್ ಅಂಬಾನಿಯವರ ರಿಲಾಯನ್ಸ್ ಜಿಯೊ ಇನ್‌ಫೊಕಾಮ್ ದೇಶಾದ್ಯಂತ ಸೇವೆಯನ್ನು ಆರಂಭಿಸಲಿದೆ.

#5

#5

ರಿಲಾಯನ್ಸ್ ಜಿಯೊ ತನ್ನ 4 ಜಿ ನೆಟ್‌ವರ್ಕ್‌ನಲ್ಲಿ ಧ್ವನಿ ಕರೆಯನ್ನು ಒದಗಿಸು ಯೋಜನೆಯಲ್ಲಿದೆ.

#6

#6

ಇದರ ಚಂದಾದಾರರು ಲ್ಯಾಂಡ್‌ಲೈನ್ ಅಥವಾ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಯಾವುದೇ ಸರ್ವೀಸ್ ಪ್ರೊವೈಡರ್ ಅನ್ನು ಬಳಸಿಕೊಂಡು ಎಮ್‌ಟಿಎನ್‌ಎಲ್ ಅಥವಾ ಬಿಎಸ್‌ಎನ್‌ಎಲ್‌ನಿಂದ ಏರ್‌ಸೆಲ್, ವೋಡಾಫೋನ್ ಅಥವಾ ಐಡಿಯಾ ಸೆಲ್ಯುಲಾರ್‌ಗೆ ಕರೆಮಾಡಬಹುದಾಗಿದೆ.

#7

#7

ಈ ಯೋಜನೆಯು ಸದ್ಯದಲ್ಲಿಯೇ ಆರಂಭವಾಗಲಿದೆ ಎಂಬುದಾಗಿ ಟೆಲಿಕಾಮ್ ಕಮೀಷನ್ ಮೂಲಗಳು ತಿಳಿಸಿವೆ.

#8

#8

ಇಂಟರ್ನೆಟ್ ಕರೆಗಳ ಮೇಲೆ ಕೇಂದ್ರೀಕರಿಸುವುದು ದೊಡ್ಡ ಸವಾಲು ಎಂದೆನಿಸಿದ್ದು ಇದು ಭದ್ರತಾ ಅಪಾಯಗಳನ್ನು ಉಂಟುಮಾಡಲಿದೆ ಆದ್ದರಿಂದ ಗ್ರಾಹಕರ ಸುರಕ್ಷತೆಗೂ ಗಮನ ಹರಿಸಲಿದೆ.

#9

#9

ಡೇಟಾ ವೇಗ ಹೆಚ್ಚಾದಂತೆ ಮತ್ತು ಸ್ಮಾರ್ಟ್‌ಫೋನ್ ಮಾರಾಟ ಏರಿಕೆಯಾದಂತೆ ಧ್ವನಿ ಕರೆಗಳಲ್ಲಿ ವ್ಯಾಪಕ ಪ್ರಗತಿ ಕಂಡುಬರಲಿದೆ ಎಂಬುದು ಅಧಿಕೃತ ವಲಯದಿಂದ ತಿಳಿದು ಬಂದ ಮಾಹಿತಿಯಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ನೀವು ತಿಳಿದಿರದ ಗೂಗಲ್ ಮ್ಯಾಪ್ಸ್ ಫೀಚರ್ಸ್</a><br /><a href=ಫೋನ್ ಬ್ಯಾಟರಿ ಸಮಸ್ಯೆಯೇ? ಇಲ್ಲಿದೆ ಟಾಪ್ ಟಿಪ್ಸ್
ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು" title="ನೀವು ತಿಳಿದಿರದ ಗೂಗಲ್ ಮ್ಯಾಪ್ಸ್ ಫೀಚರ್ಸ್
ಫೋನ್ ಬ್ಯಾಟರಿ ಸಮಸ್ಯೆಯೇ? ಇಲ್ಲಿದೆ ಟಾಪ್ ಟಿಪ್ಸ್
ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು" />ನೀವು ತಿಳಿದಿರದ ಗೂಗಲ್ ಮ್ಯಾಪ್ಸ್ ಫೀಚರ್ಸ್
ಫೋನ್ ಬ್ಯಾಟರಿ ಸಮಸ್ಯೆಯೇ? ಇಲ್ಲಿದೆ ಟಾಪ್ ಟಿಪ್ಸ್
ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು

Best Mobiles in India

English summary
You may soon be able to dial landline or mobile phone numbers from popular internet apps..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X