ಇನ್ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಹಣ ವರ್ಗಾಯಿಸಿ!!

By Suneel
|

ನಿಮ್ಮದು ಯಾವುದೇ ಬ್ಯಾಂಕ್‌ ಆಗಿದ್ದರೂ ಪರವಾಗಿಲ್ಲಾ. ಅಥವಾ ನೀವು ಮೂರಕ್ಕಿಂತ ಹೆಚ್ಚು ಬ್ಯಾಂಕ್‌ಗಳ ಖಾತೆ ಹೊಂದಿದ್ದರೂ ಪರವಾಗಿಲ್ಲಾ. ಹಣ ವರ್ಗಾವಣೆಗಾಗಿ ಆ ಮೂರು ಬ್ಯಾಂಕ್‌ಗಳ ನೆಟ್‌ಬ್ಯಾಂಕಿಂಗ್‌ ಅನ್ನು ತೆರೆಯುವ ಅವಶ್ಯಕತೆ ಇಲ್ಲಾ. ಏಕೆ ಅಂದ್ರೆ ಇನ್ಮುಂದೆ ಫೇಸ್‌ಬುಕ್‌ ಮೆಸೇಂಜರ್‌ ಅಪ್ಲಿಕೇಶನ್‌ನಲ್ಲೇ ಹಣ ವರ್ಗಾಯಿಸಬಹುದಾಗಿದೆ ಹಾಗೂ ಇತರರಿಂದ ಹಣ ಸ್ವೀಕರಿಸಬಹುದಾಗಿದೆ. ಹೌದು. ವಿಶೇಷ ಏನಪ್ಪಾ ಅಂದ್ರೆ ಈ ಹಣ ವರ್ಗಾವಣೆ ಸೇವೆ ಉಚಿತ ಹಾಗೂ ಹೆಚ್ಚು ಸುರಕ್ಷತ ವಿಧಾನವಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನ ಓದಿ ತಿಳಿಯಿರಿ.

1

1

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಒಡೆತನದ ಮೆಸೇಂಜರ್‌ ಆಪ್‌ನಲ್ಲಿ ಇನ್ನುಮುಂದೆ ಉಚಿತವಾಗಿ ಹಣ ವರ್ಗಾವಣೆ ಮಾಡಬಹುದಂತೆ. ಈ ಸೇವೆಯನ್ನು ಫೇಸ್‌ಬುಕ್ ಅತಿ ಶೀಘ್ರದಲ್ಲಿ ಜಾರಿಗೊಳಿಸಲಿದ್ದು, ಈ ಸೇವೆ ಪಡೆಯಲು ಹಣ ಪಡೆಯುವವರು ಮತ್ತು ಹಣ ಸ್ವೀಕರಿಸುವವರ ಡೆಬಿಟ್‌ ಕಾರ್ಡ್ ಮಾತ್ರ ಅಗತ್ಯವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

2

2

ಫೇಸ್‌ಬುಕ್‌ ಮೆಸೇಂಜರ್‌ ಆಪ್‌ನಲ್ಲಿ ಈಗಾಗಲೇ ಅಮೇರಿಕ ಜನತೆ ಹಣವನ್ನು ಇತರರ ಖಾತೆಗೆ ವರ್ಗಾಯಿಸುವ ಇತರರಿಂದ ಸ್ವೀಕರಿಸುವ ಅವಕಾಶ ಹೊಂದಿದೆ ಎಂದು ಟೆಕ್ನಾಲಜಿ ವೆಬ್‌ಸೈಟ್‌ CNET.com ವರದಿ ಮಾಡಿದೆ. ಈ ಸೇವೆಯನ್ನು ಈಗ ಇತರ ದೇಶಗಳಿಗೂ ಸಹ ವಿಸ್ತರಿಸುವ ನಿರೀಕ್ಷೆಯನ್ನು ಫೇಸ್‌ಬುಕ್‌ ಹೊಂದಿದೆ.

3

3

ಅಮೇರಿಕದಲ್ಲಿ ಮೆಸೇಂಜರ್‌ ಮೂಲಕ ಹಣ ವರ್ಗಾಯಿಸುವ ಸೇವೆಯನ್ನು ಆರಂಭಿಸುವ ಮೊದಲು, ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌"ಮೆಸೇಂಜರ್ "payments processor" ನ ಒಂದು ಭಾಗವಾಗಲು ಬಯಸಿದ್ದರು" ಎಂದು ಹೇಳಿದ್ದರು.

4

4

ಎಲ್ಲಾ ಬ್ಯಾಂಕ್‌ಗಳು ಸಹ ನೆಟ್‌ಬ್ಯಾಂಕಿಂಕ್‌ ಸೇವೆ, ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಹೊಂದಿವೆ. ಆದರೂ ಸಹ ಫೇಸ್‌ಬುಕ್‌ ತನ್ನ ಮೆಸೇಂಜರ್‌ ಆಪ್‌ನಲ್ಲಿ ಹಣ ವರ್ಗಾಯಿಸುವ ಸುಲಭ ಮಾರ್ಗವನ್ನು ಪರಿಚಯಿಸುತ್ತಿದೆ. ವಿಶೇಷ ಅಂದ್ರೆ ಮೆಸೇಂಜರ್‌ ಆಪ್‌ನಲ್ಲಿ ಉಚಿತ ಹಣ ವರ್ಗಾವಣೆ ಸೇವೆ ಲಭ್ಯವಿದೆ. ವರ್ಗಾವಣೆಗಾಗಿ ಪಿನ್‌ ಆಧಾರಿತ ಸುರಕ್ಷತೆ ಸಹ ದೊರೆಯಲಿದೆ. ಫೇಸ್‌ಬುಕ್‌ ತನ್ನ ಉದ್ದಿಮೆಯ ಪ್ರಮುಖ ಸುರಕ್ಷತೆ ನೀಡಲಿದೆ.

5

5

ಆಂಡ್ರಾಯ್ಡ್‌ ಬಳಕೆದಾರರು ಮೆಸೇಂಜರ್‌ನಲ್ಲಿ ಹಣ ವರ್ಗಾವಣೆ ಸೇವೆ ಬಳಸಲು ಮೊದಲಿಗೆ ತಮ್ಮ ಡೆಬಿಟ್‌ ಕಾರ್ಡ್‌ ಅನ್ನು ಸೇರಿಸಬೇಕು. Profile>>Payments>>Add New Debit Card ಈ ರೀತಿಯ ಆಯ್ಕೆಗಳ ಮುಖಾಂತರ ಡೆಬಿಟ್‌ ಕಾರ್ಡ್‌ ವ್ಯವಸ್ಥೆಗೊಳಿಸಬೇಕು.

6

6

ಹಣ ವರ್ಗಾಯಿಸುವ ಸೇವೆಯು ಚಾಟಿಂಗ್‌'ಗೆ ಸಹ ಅವಕಾಶ ನೀಡಲಿದ್ದು, ನೀವು ಹಣ ಕಳುಹಿಸುವವರ, ಸ್ವೀಕರಿಸುವವರ ನಡುವೆ ಚಾಟಿಂಗ್‌ ಮಾಡಬಹುದಾಗಿದೆ. ಹಣ ವರ್ಗಾಯಿಸಲು ಈ ವಿಧಾನ ಅನುಸರಿಸಿ. Payments>>Next>>Pay>> enter amount>>tap on pay. ನಂತರದಲ್ಲಿ ಹಣ ಸ್ವೀಕರಿಸಿ ಎಂದು "Request" ಬಟನ್‌ ಮೇಲೆ ಟ್ಯಾಪ್‌ ಮಾಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಕಣ್ಮನ ಸೆಳೆಯುವ ಮಾರ್ಕ್ ಜುಕರ್ ಬರ್ಗ್ ಅಂದದ ಅರಮನೆಕಣ್ಮನ ಸೆಳೆಯುವ ಮಾರ್ಕ್ ಜುಕರ್ ಬರ್ಗ್ ಅಂದದ ಅರಮನೆ

ಜಾಹೀರಾತಿನಲ್ಲೂ ನಡೆದಿರುವ ಫೋಟೋಶಾಪ್ ತಪ್ಪುಗಳುಜಾಹೀರಾತಿನಲ್ಲೂ ನಡೆದಿರುವ ಫೋಟೋಶಾಪ್ ತಪ್ಪುಗಳು

ಇಂಟರ್ನೆಟ್‌ನಲ್ಲಿ ವೈರಲ್‌ ಆದ ಹುಲಿ ಯಾವುದು ಗೊತ್ತಾ?ಇಂಟರ್ನೆಟ್‌ನಲ್ಲಿ ವೈರಲ್‌ ಆದ ಹುಲಿ ಯಾವುದು ಗೊತ್ತಾ?

ಇಂಟರ್ನೆಟ್‌ ಸ್ಟಾರ್‌ ಆದ 2 ತಿಂಗಳ ಮಗುಇಂಟರ್ನೆಟ್‌ ಸ್ಟಾರ್‌ ಆದ 2 ತಿಂಗಳ ಮಗು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Soon, send payments via Facebook Messenger. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X