ಫೇಸ್‌ಬುಕ್ ಬಳಸಲು ಭಾರತೀಯ ಸೈನಿಕರಿಗಿರುವ ಈ 10 ನಿಯಮಗಳು ನಿಮಗೆ ಗೊತ್ತಾ?!

  ದೇಶದ ಗಡಿಯಲ್ಲಿ ಆಕ್ರಮಣಕಾರರ ಗುಂಡಿಗೆ ಎದೆಕೊಟ್ಟು ನಿಲ್ಲುವ ನಮ್ಮ ಸೈನಿಕನಿಗೂ ಆಸೆ ಆಕಾಂಕ್ಷೆಗಳು ಇರುತ್ತವೆ. ನಮ್ಮನ್ನು ಕಾಪಾಡುವ ಸೈನಿಕನು ಕೂಡ ಮನುಷ್ಯನೇ ಅಲ್ಲವೇ?. ಆದರೆ, ಸೈನಿಕನು ಇಂತಹ ಆಸೆ ಆಕಾಂಕ್ಷೆ ಎಲ್ಲವನ್ನು ಪಕ್ಕಕ್ಕಿಟ್ಟು ದೇಶಕ್ಕಾಗಿ ಹೋರಾಡುತ್ತಿರುತ್ತಾನೆ. ಇವುಗಳಲ್ಲಿ ನಮ್ಮ ಅಚ್ಚು ಮೆಚ್ಚಿನ ಸಾಮಾಜಿಕ ಜಾಲತಾಣಗಳು ಸಹ ಸೇರಿಕೊಂಡಿವೆ.!

  ಹೌದು, ಇಂದಿನ ಜಮಾನದಲ್ಲಿ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸ್‌ಆಪ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ನೀವು ಬಳಸದೇ ಇರಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿಯೂ ಸೈನಿಕನು ಇವುಗಳಿಂದ ಸ್ವಲ್ಪ ದೂರ ಉಳಿಯಬೇಕಿದೆ. ನಮ್ಮ ಸೈನಿಕರು ಸಾಮಾಜಿಕ ಜಾಲತಾಣಗಳನ್ನು ಬಳಸಬಹುದಾದರೂ ಅಹ ಅವುಗಳ ಬಳಕೆಗೆ ಮಿತಿಯನ್ನು ಏರಲಾಗಿದೆ.

  ಫೇಸ್‌ಬುಕ್ ಬಳಸಲು ಭಾರತೀಯ ಸೈನಿಕರಿಗಿರುವ ಈ 10 ನಿಯಮಗಳು ನಿಮಗೆ ಗೊತ್ತಾ?!

  ದೇಶದ ಭದ್ರತೆ ಮತ್ತು ಸುರಕ್ಷತಾ ದೃಷ್ಟಿಯಿಂದ ಸೈನ್ಯವು ತನ್ನ ಸಿಬ್ಬಂದಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಡಬಹುದಾದ ಮತ್ತು ಮಾಡಬಾರದ ಕಾರ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಡುವೆ ನಡೆದಿದ್ದ ಕೆಲವು ಅಹಿತಕರ ಘಟನೆಗಳ ನಂತರ ಭಾರತೀಯ ಸೈನಿಕರು ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲಾ ಮಾಡಬಾರದು ಎಂಬ ವಿಷಯಗಳು ಈ ಪಟ್ಟಿಯಲ್ಲಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1

  ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮದಗಳಲ್ಲಿ ಅಶ್ಲೀಲ ವಿಷಯಗಳನ್ನು ನೋಡುವುದನ್ನು ಕಟ್ಟುನಿಟ್ಟಾದ ನಿಷೇಧಿಸಲಾಗಿದೆ.

  2

  ಶಸ್ತ್ರಾಸ್ತ್ರವನ್ನು ಹಿಡಿದಿರುವ ಚಿತ್ರಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಲು ಸೈನಿಕರಿಗೆ ಅನುಮತಿ ಇಲ್ಲ. ಸಾಮಾನ್ಯ ಉಡುಪುಗಳಲ್ಲಿಯೂ ಸಹ!

  3

  ಸೇನಾ ಸಮವಸ್ತ್ರವನ್ನು ಹೊಂದುವುದು ಹೆಮ್ಮೆಪಡುವ ವಿಷಯ.ಆದರೆ, ವಾಟ್ಸ್‌ಆಪ್ ಅಥವಾ ಫೇಸ್‌ಬುಕ್‌ನಲ್ಲಿ ಸಮವಸ್ತ್ರದ ಚಿತ್ರಗಳನ್ನು ಪ್ರದರ್ಶಿಸದಿರುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.

  4

  ಬಹುಮಾನಗಳನ್ನು ನೀಡುವ ಆಮಿಷಗಳನ್ನು ಒಡ್ಡುವ ಆನ್‌ಲೈನ್ ವೆಬ್‌ಸೈಟ್‌ಗಳಿಂದ ದೂರವಿರಲು ಸೈನಿಕರಿಗೆ ಸಲಹೆ ನೀಡಲಾಗುತ್ತದೆ.

  5

  ಸಮವಸ್ತ್ರದಲ್ಲಿರುವ ಚಿತ್ರಗಳ ಮೇಲಿನ ನಿರ್ಬಂಧ ಮಾತ್ರವಲ್ಲದೇ, ಸೇನಾ ಸಿಬ್ಬಂದಿ ತಮ್ಮ ಅಧಿಕೃತ ಹೆಸರು ಮತ್ತು ಹುದ್ದೆಯ ಬಗ್ಗೆ ಜಾಲತಾಣಗಳಲ್ಲಿ ಬಹಿರಂಗಪಡಿಸಬಾರದು ಎಂದು ಸಲಹೆ ನೀಡಲಾಗಿದೆ

  6

  ಫೇಸ್‌ಬುಕ್‌ನಲ್ಲಿ ಅಪರಿಚಿತ ಜನರ ಫ್ರೆಂಡ್ ಡಿಕ್ಷೆಸ್ಟ್ ಅನ್ನು ಅಕ್ಸೆಪ್ಟ್ ಮಾಡುವುದನ್ನು ಸಹ ಸೈನಿಕರಿಗೆ ನಿಷೇಧಿಸಲಾಗಿದೆ.

  7

  ಸೂಕ್ಮ ಯುದ್ಧ ಪ್ರದೇಶಗಳಂತಹ ಜಾಗದಲ್ಲಿ ಕಾರ್ಯನಿರ್ವಹಿಸುವ ಸ್ಥಳದ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವುದನ್ನು ನಿಷೇಧಿಸಲಾಗಿದೆ.

  8

  ಸೈನಿಕರ ಹೊರತಾಗಿ, ಸೈನ್ಯದ ಅಧಿಕಾರಿಗಳ ವೃತ್ತಿಯ ವಿವರಗಳನ್ನು ಯಾವುದೇ ರೀತಿಯಲ್ಲಿ ಅವರ ಕುಟುಂಬಗಳು ಸಹ ಬಹಿರಂಗಪಡಿಸದಂತೆ ನೋಡಿಕೊಳ್ಳಬೇಕಿದೆ.

  9

  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಚಿತ್ರವನ್ನು ಪೋಸ್ಟ್ ಮಾಡಿದರೂ, ಆ ಚಿತ್ರದಲ್ಲಿ ಯಾವುದೇ ಸೇನಾ ಸಂಬಂಧಿತ ವಿಷಯ ಹೊಂದಿರಬಾರದು, ಜಾಗ, ಯುದ್ದವಿಮಾನ ಎಲ್ಲವೂ.

  10

  ಸೈಬರ್ ದಾಳಿಯಿಂದ ರಕ್ಷಣೆ ಪಡೆಯಲು, ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ಗಳಲ್ಲಿ ಯಾವುದೇ ಮಿಲಿಟರಿ ಸಂಬಂಧಿತ ವಿಷಯವನ್ನು ಉಳಿಸದಂತೆ ಸೈನ್ಯವು ಕಟ್ಟುನಿಟ್ಟಾಗಿ ಸಲಹೆ ನೀಡಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  In the wake of the security lapse and the devastating attacks, the Army has issued a list of dos and don'ts for personnel that sound more like instructions for teenagers using social media sites. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more