ಐದು ಮಕ್ಕಳೊಂದಿಗೆ ತಾಯಿಯ ಫೋಟೋಶೂಟ್: ಈಗ ವೈರಲ್

By Shwetha
|

ಸಾಮಾಜಿಕ ತಾಣವೆಂಬುದು ಈಗೀಗ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು ಅತ್ಯಾಶ್ಚರ್ಯಕರ ಸಂಗತಿಗಳಿಗೆ ವೇದಿಕೆಯನ್ನೊದಗಿಸುವ ಕ್ಷೇತ್ರವಾಗಿ ಈಗ ಮೂಡಿಬರುತ್ತಿದೆ. ವಿಸ್ಮಯಪೂರ್ಣವಾಗಿರುವ ಕೌತುಕಮಯ ಅಂಶಗಳನ್ನು ನಾವು ಈ ತಾಣದಲ್ಲಿ ಕಾಣಬಹುದಾಗಿದ್ದು ಇದು ನಮ್ಮನ್ನು ವಿಸ್ಮಯಭರಿತರನ್ನಾಗಿಸಲಿದೆ. ಬರಿಯ ಪೋಸ್ಟ್, ಚಾಟ್, ಫೋಟೋ ಅಪ್‌ಲೋಡ್ ಮೊದಲಾದ ಚಟುಟಿಕೆಗಳನ್ನು ಮೀರಿ ಅಸಾಧ್ಯವಾದುದನ್ನು ಈ ತಾಣದಲ್ಲಿ ನಿರ್ವಹಿಸಬಹುದು ಎಂಬುದನ್ನು ಇದು ತೋರಿಸಿಕೊಟ್ಟಿದೆ.

ಓದಿರಿ: 'ಫಾದರ್ಸ್‌ ಡೇ' ಗೂಗಲ್‌ ಆಡ್‌; ನೋಡಿದ್ರೆ ನೀವು ಕಣ್ಣೀರ್‌ ಹಾಕ್ತೀರೀ..

ಇಂದಿನ ಲೇಖನದಲ್ಲಿ ನಾವು ಇಷ್ಟೊಂದು ಪೀಠಿಕೆ ಹಾಕುತ್ತಿರಲು ವಿಷಯವೊಂದಿದ್ದು ಈ ಸುದ್ದಿ ನಿಮ್ಮಲ್ಲಿ ಒಂದು ನವಿರಾದ ಸಂತಸವನ್ನು ಒಡಮೂಡಿಸುತ್ತದೆ. ಒಬ್ಬ ತಾಯಿ ತನ್ನ ಐದು ಮಕ್ಕಳೊಂದಿಗೆ ತೆಗೆಸಿಕೊಂಡ ಫೋಟೋ ಈದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು ತಾಯಿ ಮಗುವಿನ ಬಾಂಧವ್ಯಕ್ಕೆ ಇನ್ನೊಂದು ಭಾಷ್ಯವನ್ನು ಬರೆದಿದೆ ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ತೋರಿಸಲಿದ್ದು ಇಲ್ಲಿ ಗಮನ ಹರಿಸಿ.

ಫೇಸ್‌ಬುಕ್‌ನಲ್ಲಿ ವ್ಯಾಖ್ಯಾನ

#1

'50 ಕಾಲ್ಬೆರಳು, 50 ಕೈಬೆರಳು, 6 ಹೃದಯಗಳ ಒಮ್ಮೆಲೆ ಬಡಿತ' ಇದು ತಾಯಿ ಕಿಂಬರ್ಲಿ ತ್ಯೂಸಿ (26) ತನ್ನ ಮಕ್ಕಳ ಜನನವನ್ನು ಫೇಸ್‌ಬುಕ್‌ನಲ್ಲಿ ವ್ಯಾಖ್ಯಾನಿಸಿದ ಪರಿ.

ಸಾಮಾಜಿಕ ತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ

#2

ಕಿಂಬರ್ಲಿಗೆ ಈ ಮಕ್ಕಳು ಜನವರಿಯಲ್ಲಿ ಜನಿಸಿದ್ದು, ಅದ್ಭುತ ಫೋಟೋಗ್ರಫಿಗಳ ಮೂಲಕ ತಾಯಿ ತನ್ನ ಕಂದಮ್ಮಗಳನ್ನು ಹೊರಜಗತ್ತಿಗೆ ತೋರಿಸಿದ್ದಾಳೆ ಈಗ ಇದೇ ಸುದ್ದಿ ಸಾಮಾಜಿಕ ತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಕಿಮ್ಸ್‌ನ ಗರ್ಭಾವಸ್ಥೆ ಚಿತ್ರಣ

#3

ಕಿಂಬರ್ಲಿ ಮತ್ತು ಆಕೆಯ ಪತಿ ವ್ಯೂಗ್ ತುಸಿಗೆ ಜನವರಿ 28 ರಂದು ಐವರು ಮಕ್ಕಳು ಜನಿಸಿದ್ದು ಕಿಮ್ಸ್‌ನ ಗರ್ಭಾವಸ್ಥೆ ಚಿತ್ರಣವನ್ನು ವ್ಯೂಗ್ ಸೆರೆಹಿಡಿದು ಅದನ್ನು ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.

ಸರ್ಪ್ರೈಸ್ಡ್ ಬೈ ಫೈವ್

#4

ಸರ್ಪ್ರೈಸ್ಡ್ ಬೈ ಫೈವ್ ಎಂಬ ಅಧಿಕೃತ ಫೇಸ್‌ಬುಕ್ ಪುಟವನ್ನೇ ಈ ದಂಪತಿಗಳು ಆರಂಭಿಸಿದ್ದು ಐದು ಮಕ್ಕಳ ಜನನವನ್ನು ಖುಷಿಯಿಂದಲೇ ಆನಂದಿಸುತ್ತಿದ್ದಾರೆ.

ಐದು ಮಕ್ಕಳ ರೂಪ

#5

ಈಗಾಗಲೇ ಎರಡು ಹೆಣ್ಣು ಮಕ್ಕಳು ದಂಪತಿಗಳಿಗಿದ್ದು ಮೂರನೆಯದ್ದನ್ನು ನಿರೀಕ್ಷಿಸುವಾಗ ಅದು ಐದು ಮಕ್ಕಳ ರೂಪದಲ್ಲಿ ಬರಬಹುದೆಂಬ ನಿರೀಕ್ಷೆಯನ್ನೇ ಇವರು ಹೊಂದಿರಲಿಲ್ಲ. ಐದು ಮಕ್ಕಳಲ್ಲಿ ನಾಲ್ಕು ಹೆಣ್ಣಾಗಿದ್ದು ಒಂದು ಗಂಡು ಮಗುವಾಗಿದೆ.

ಹಂಚಿಕೊಂಡಿದ್ದಾರೆ

#6

ಗರ್ಭಾವಸ್ಥೆಯಲ್ಲಿ ಇದ್ದ ಆತಂಕ, ದುಗುಡ, ಭಾವನೆಗಳು, ಭಯ ಎಲ್ಲವನ್ನೂ ಇವರುಗಳು ಸಾಮಾಜಿಕ ತಾಣದೊಂದಿಗೆ ಹಂಚಿಕೊಂಡಿದ್ದಾರೆ.

ದಿಗ್ಭ್ರಾಂತ

#7

ಮಕ್ಕಳ ಫೋಟೋಗ್ರಾಫ್ ಅನ್ನು ನೋಡಿದ ಫೇಸ್‌ಬುಕ್ ಬಳಕೆದಾರರು ದಿಗ್ಭ್ರಾಂತರಾಗಿದ್ದು ಆಹ್ ಓಹ್ ಎಂಬ ಉದ್ಗಾರವನ್ನು ಹೊಮ್ಮಿಸುತ್ತಿದ್ದಾರೆ.

'ಗೊ ಫಂಡ್ ಪೇಜ್'

#8

ಕಿಮ್‌ನ ಅಜ್ಜಿ 'ಗೊ ಫಂಡ್ ಪೇಜ್' ಅನ್ನು ಆರಂಭಿಸಿದ್ದು ತಮ್ಮ ಮಕ್ಕಳೊಂದಿಗೆ ಸಣ್ಣ ವ್ಯಾನ್‌ನಲ್ಲಿ ಹೋಗಲು ಅದರ ಖರೀದಿಗೆ ಚಂದಾದಾರಿಕೆಯನ್ನು ಅಜ್ಜಿ ಮಾಡುತ್ತಿದ್ದಾರೆ.

ತಾಯಿ ಮಗುವಿನ ಬಾಂಧವ್ಯ

#9

ತಾಯಿ ತನ್ನ ಐದು ಮಕ್ಕಳೊಂದಿಗೆ ತೆಗೆಸಿಕೊಂಡ ಫೋಟೋ ಈದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು ತಾಯಿ ಮಗುವಿನ ಬಾಂಧವ್ಯಕ್ಕೆ ಇನ್ನೊಂದು ಭಾಷ್ಯವನ್ನು ಬರೆದಿದೆ

ಚಿತ್ರಕೃಪೆ:https://www.facebook.com/erinelizabeth.com.au/posts/1010892185632418:0

Most Read Articles
Best Mobiles in India

English summary
"50 fingers 50 toes, 6 hearts beating at once" - that's how mum Kimberley Tucci, 26, described the birth of her 'surprise' quintuplets on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more