Subscribe to Gizbot

ಭಯೋತ್ಪಾದನೆ ಪ್ರಚಾರ: 235,000 ಟ್ವಿಟರ್ ಖಾತೆಗಳು ಬ್ಲಾಕ್‌

Written By:

ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಗ್ರಹಿಸುವ ಪ್ರಯತ್ನದಲ್ಲಿ ಮೈಕ್ರೋ ಬ್ಲಾಗಿಂಗ್‌ ವೆಬ್‌ಸೈಟ್‌ 'ಟ್ವಿಟರ್' ಮಹತ್ತರವಾದ ಕೆಲಸವನ್ನು ಮಾಡಿದೆ. ಹೌದು, ಟ್ವಿಟರ್‌ ನೀತಿ ಉಲ್ಲಂಘಿಸಿ ಕಳೆದ ಆರು ತಿಂಗಳಿಂದ ಭಯೋತ್ಪಾದನೆ ಚಟುವಟಿಕೆಗಳನ್ನು ಪ್ರಚಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ 235,000 ಖಾತೆಗಳನ್ನು 'ಟ್ವಿಟರ್' ಹೆಚ್ಚುವರಿಯಾಗಿ ಬ್ಲಾಕ್‌ ಮಾಡಿದೆ.

ಭಯೋತ್ಪಾದನೆ ಪ್ರಚಾರ: 235,000 ಟ್ವಿಟರ್ ಖಾತೆಗಳು ಬ್ಲಾಕ್‌

ಟ್ವಿಟರ್‌ 125,000 ಖಾತೆಗಳನ್ನು ಈ ವರ್ಷದಲ್ಲಿ ಬ್ಲಾಕ್‌ ಮಾಡುವ ಬಗ್ಗೆ ಮಾಹಿತಿ ಪ್ರಕಟಣೆ ಮಾಡಿದೆ. ಅಂದಹಾಗೆ ಬ್ಲಾಕ್‌ ಆಗಲಿರುವ ಖಾತೆಗಳು ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದನ ಗುಂಪಿಗೆ ಸಂಬಂಧಿಸಿದ ಖಾತೆಗಳಾಗಿವೆ.

2015 ರ ಮಧ್ಯಾಂತರ ಅವಧಿಯಿಂದ ಇದುವರೆಗೆ ಬ್ಲಾಕ್‌ ಮಾಡಿದ ಟ್ವಿಟರ್‌ಗಳ ಸಂಖ್ಯೆ 360,000 ಕ್ಕೆ ಏರಲಿದೆ. ಮೀನಿಂಗ್‌ಫುಲ್ ರಿಸಲ್ಟ್‌ ನೀಡಲು ಟ್ವಿಟರ್‌ ಪ್ರಮುಖ ಕಾರ್ಯಚಟುವಟಿಕೆಗಳನ್ನು ಕೈಗೊಂಡಿರುವುದಾಗಿ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಶುಕ್ರವಾರ ಹೇಳಿದೆ.

ಭಯೋತ್ಪಾದನೆ ಪ್ರಚಾರ: 235,000 ಟ್ವಿಟರ್ ಖಾತೆಗಳು ಬ್ಲಾಕ್‌

ಕಳೆದ ವರ್ಷದಿಂದ ದಿನನಿತ್ಯ ಅಮಾನತುಗೊಳ್ಳುವ ಟ್ವಿಟರ್‌ ಖಾತೆಗಳ ಸಂಖ್ಯೆ ಶೇಕಡ 80 ಕ್ಕೆ ಏರಿದೆ. ಅಮಾನತು ಕಾರ್ಯಾಚರಣೆ ಭಯೋತ್ಪಾದಕರ ದಾಳಿಯ ನಂತರ ತಕ್ಷಣವಾಗಿ ನಡೆಯುತ್ತಿದೆ. ಅಮಾನತು ಕಾರ್ಯಾಚರಣೆಗಾಗಿ ಟ್ವಿಟರ್‌ನ ಜಾಗತಿಕ ಸಾರ್ವಜನಿಕ ನಿಯಮದ ಗುಂಪು 'ಆನ್‌ಲೈನ್‌ ಹಿಂಸಾತ್ಮಕ ಚಟುವಟಿಕೆಗಳ ವಿರೋಧಿ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಟ್ವಿಟರ್‌ನ 10ನೇ ಹುಟ್ಟುಹಬ್ಬ: 10 ಕುತೂಹಲಕಾರಿ ವಿಷಯಗಳು

English summary
Twitter blocks additional 235,000 accounts linked to promoting terrorism. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot