Subscribe to Gizbot

ಕನ್ನಡಕ್ಕಾಗಿ ಮತ್ತೊಂದು ಸುತ್ತಿನ ಟ್ವಿಟರ್ ಅಭಿಯಾನ ಆರಂಭ: ನೀವು ಭಾಗಿಯಾಗಿ..!

Written By:

ದಿನ ಕಳೆದಂತೆ ದೇಶದಲ್ಲಿ ಪ್ರಾದೇಶಿಕ ಭಾಷೆಗಳ ಪ್ರಾಬಲ್ಯವು ಅಧಿಕವಾಗುತ್ತಿದ್ದು, ಗೂಗಲ್ ಸೇರಿಂದತೆ ಎಲ್ಲಾ ಟೆಕ್ ಕಂಪನಿಗಳು, ಮಾಧ್ಯಮಗಳು ಪ್ರಾದೇಶಿಕ ಭಾಷೆಗಳಲ್ಲಿಯೇ ತಮ್ಮ ಸೇವೆಯನ್ನು ನೀಡುತ್ತಿವೆ. ಇದೇ ಮಾದರಿಯಲ್ಲಿ ಎಲ್ಲಾ ಮಾದರಿಯ ಟಿವಿ ಚಾನಲ್‌ಗಳು ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡುತ್ತಿವೆ, ಪಕ್ಕದ ತಮಿಳು-ತೆಲುಗಿಗೆ ಹೆಚ್ಚಿನ ಆಧ್ಯತೆ ದೊರೆಯುತ್ತಿದೆ. ಆದರೆ ಕನ್ನಡ ಮಾತ್ರ ಕಡೆಗಣನೆಯಾಗುತ್ತಿದೆ.

ಕನ್ನಡಕ್ಕಾಗಿ ಮತ್ತೊಂದು ಸುತ್ತಿನ ಟ್ವಿಟರ್ ಅಭಿಯಾನ ಆರಂಭ: ನೀವು ಭಾಗಿಯಾಗಿ..!

ಇದಕ್ಕಾಗಿ ಮತ್ತೆ ಕನ್ನಡ ಡಬ್ಬಿಂಗ್ ಪರ ಅಭಿಯಾನ ಆರಂಭವಾಗಿದ್ದು, ತಮಿಳು-ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಸೇವೆಯನ್ನು ನೀಡುತ್ತಿರುವ ನ್ಯಾಷಿನಲ್ ಜಿಯೋಗ್ರಾಫಿಕ್ (National Geographic) ಚಾನೆಲ್ ಶೀಘ್ರವೇ ಕನ್ನಡ ಭಾಷೆಯಲ್ಲಿ ಪ್ರಸಾರವಾಗಬೇಕು ಎಂದು ಆಗ್ರಹಿಸಿ ಟ್ವಿಟ್ಟರ್ ಅಭಿಯಾನವೊಂದನ್ನು ಶುರು ಮಾಡಲಾಗಿದೆ.

ಓದಿರಿ: ತಿಂಗಳ ಸಂಬಳ ಪಡೆಯುತ್ತಿದ್ದ ಪೇಟಿಎಂ ನೌಕರರು ಈಗ ಕೋಟ್ಯಾಧಿಪತಿಗಳು..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕನ್ನಡದಲ್ಲಿಯೇ..!

ಕನ್ನಡದಲ್ಲಿಯೇ..!

ಜ್ಞಾನ ಮತ್ತು ಮನರಂಜನೆ ಕನ್ನಡಿಗರಿಗೆ ಕನ್ನಡದಲ್ಲೇ ದೊರೆಯಬೇಕೆಂದು ಕನ್ನಡಿಗರ ಒಂದು ಬಳಗ ಡಬ್ಬಿಂಗ್ ಪರ ಸೋಶಿಯಲ್ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ನಲ್ಲಿ ಅಭಿಯಾನ ಶುರು ಮಾಡಿದೆ. ಕನ್ನಡ ಗ್ರಾಹಕರ ಕೂಟ ಈ ಅಭಿಯಾನ ಹಮ್ಮಿಕೊಂಡಿದೆ.

ಟ್ವಿಟ್ಟರ್ ಅಭಿಯಾನ:

ಟ್ವಿಟ್ಟರ್ ಅಭಿಯಾನ:

ಇಂದು ಸಂಜೆ ಐದು ಗಂಟೆಯಿಂದ ಟ್ವಿಟ್ಟರ್ ನಲ್ಲಿ ಈ ಅಭಿಯಾನಕ್ಕೆ ಜೋರಾಗಿ ಚಾಲನೆ ಸಿಗಲಿದೆ. ನೀವು ಡಬ್ಬಿಂಗ್ ಬೆಂಬಲಿಸುವವರಾಗಿದ್ದರೆ, ನಿಮಗೂ ಕನ್ನಡದಲ್ಲಿ ನ್ಯಾಷಿನಲ್ ಜಿಯೋಗ್ರಾಫಿಕ್ (National Geographic) ಚಾನೆಲ್ಅನ್ನು ನೋಡಬೇಕು ಎನ್ನುವ ಆಸೆಯಿದ್ದರೆ ಟ್ವಿಟ್ಟರ್ ಅಭಿಯಾನದಲ್ಲಿ ಭಾಗಿಯಾಗಿ ನಿಮ್ಮ ಕೊಡುಗೆಯನ್ನು ನೀಡಬಹುದಾಗಿದೆ.

ನೀವು ಭಾಗಿಯಾಗಿ:

ನೀವು ಭಾಗಿಯಾಗಿ:

ನೀವು ಸಹ ಕನ್ನಡ ನ್ಯಾಷಿನಲ್ ಜಿಯೋಗ್ರಾಫಿಕ್ (National Geographic) ಚಾನೆಲ್ಗಾಗಿ ಬೆಂಬಲ ಸೂಚಿವುದಾದರೆ ಟ್ವಿಟರ್ ನಲ್ಲಿ #NGCINKannada ಎಂಬ ಹ್ಯಾಷ್ ಟ್ಯಾಗ್‌ಅನ್ನು ಬಳಕೆ ಮಾಡಿಕೊಂಡು ನಿಮ್ಮ ಅಭಿಪ್ರಾಯವನ್ನು ದಾಖಲಿಸಿ @NatGeo ಎಂದು ಟೈಪಿಸಿ ನ್ಯಾಷಿನಲ್ ಜಿಯೋಗ್ರಾಫಿಕ್ (National Geographic) ಚಾನೆಲ್ಗೆ ತಲುಪುವಂತೆ ಟ್ವಿಟ್ ಮಾಡಿರಿ.

How to find out where you can get your Aadhaar card done (KANNADA)
ಯಶಸ್ವಿಯಾದರೆ..?

ಯಶಸ್ವಿಯಾದರೆ..?

ನ್ಯಾಷಿನಲ್ ಜಿಯೋಗ್ರಾಫಿಕ್ (National Geographic) ಚಾನೆಲ್ ನಿಮ್ಮ ಟ್ವಿಟರ್ ಅಭಿಯಾನಕ್ಕೆ ಪ್ರತಿಕ್ರಿಯೇ ನೀಡಿದರೆ ಶೀಘ್ರವೇ ನಮ್ಮ ಮಕ್ಕಳು ನ್ಯಾಷಿನಲ್ ಜಿಯೋಗ್ರಾಫಿಕ್ ಚಾನೆಲ್ಅನ್ನು ಕನ್ನಡದಲ್ಲಿಯೇ ನೋಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
twitter campaign for kannada national geographic channel. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot