Subscribe to Gizbot

ಟ್ವಿಟ್ಟರ್‌ನಲ್ಲಿ ಬಂದಿದೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ!!..ಏನಿದು?

Written By:

ಫೇಸ್‌ಬುಕ್ ಬಳಕೆದಾರರಿಗೆ ಹೋಲಿಸಿದರೆ ಟ್ವಿಟ್ಟರ್ ಬಳಕೆದಾರರ ಸಂಖ್ಯೆ ಕಡಿಮೆ ಇದೆ. ಹಾಗಾಗಿ, ಟ್ವಿಟ್ಟರ್ ಹೊಸ ಹೊಸ ಬದಲಾವಣೆಗಳನ್ನು ತರುವ ಮೂಲಕ ಫೇಸ್‌ಬುಕ್‌ನಂತೆಯೇ ಜನಪ್ರಿಯವಾಗಲು ಮುಂದಾಗಿದೆ.! ಹಾಗಾಗಿಯೇ, ಟ್ವಿಟರ್ ಬಳಕೆದಾರರನ್ನು ಸೆಳೆಯಲು ಮತ್ತೊಂದು ಹೊಸ ಫೀಚರ್ ನೀಡಿದೆ.!!

ಏಕಕಾಲದಲ್ಲಿ ಹಲವು ಟ್ವೀಟ್‌ಗಳನ್ನು ರೂಪಿಸಬಹುದಾದ ಮತ್ತು ಏಕಕಾಲದಲ್ಲಿ ಅವಗಳನ್ನು ಪೋಸ್ಟ್ ಕೂಡ ಮಾಡಬಹುದಾದ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ ಇದೀಗ ಟ್ವಿಟ್ಟರ್‌ನಲ್ಲಿ ಬಂದಿದೆ. ಇದರಿಂದ ಬಳಕೆದಾರ ತನ್ನ ಟ್ವೀಟ್ ಗಳಿಗೆ ಒಂದು, ಎರಡು, ಮೂರು ಎಂದು ಹೀಗೆ ಅಂಕಿಗಳನ್ನು ನೀಡುವ ಸಮಸ್ಯೆ ತಪ್ಪಲಿದೆ.!!

ಟ್ವಿಟ್ಟರ್‌ನಲ್ಲಿ ಬಂದಿದೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ!!..ಏನಿದು?

ಟ್ವಿಟ್ಟರ್ ಬಳಕೆದಾರ ಒಂದಕ್ಕಿಂತ ಹೆಚ್ಚು ಟ್ವೀಟ್ ಗಳನ್ನು ಏಕಕಾಲದಲ್ಲಿ ಸೃಷ್ಟಿ ಮಾಡುವ ಈ ಸೌಲಭ್ಯ ಟ್ವಿಟರ್ ವೆಬ್‌ಸೈಟ್ ಮತ್ತು ಆಪ್ ಎರಡರಲ್ಲಿಯೂ ಲಭ್ಯವಿದ್ದು, ಬಳಕೆದಾರರು ಟ್ವೀಟ್ ಮಾಡುವಾಗ ಕಂಪೋಸರ್ ಕೆಳಗೆ ಕಾಣಿಸುವ ಪ್ಲಸ್ ಎಂಬ ಚಿನ್ಹೆಯನ್ನು ಒತ್ತಿದರೆ ಮತ್ತೊಂದು ಟ್ವೀಟ್ ಕಂಪೋಸಿಂಗ್ ಆಯ್ಕೆ ತೆರೆದುಕೊಳ್ಳುತ್ತದೆ.!!

ಟ್ವಿಟ್ಟರ್‌ನಲ್ಲಿ ಬಂದಿದೆ ಮಲ್ಟಿ ಥ್ರೆಡ್ ಟ್ವೀಟ್ ಆಯ್ಕೆ!!..ಏನಿದು?

ಇತ್ತೀಚಿಗಷ್ಟೇ ಟ್ವಿಟರ್ ತನ್ನ ಪದಮಿತಿಯನ್ನು 140ರಿಂದ 280 ಪದಗಳಿಗೆ ಏರಿಕೆ ಮಾಡಿತ್ತು. ಇದು ಬಳಕೆದಾರರಿಗೆ ಭಾರಿ ಇಷ್ಟವಾಗಿತ್ತು. ಇದರ ಬೆನ್ನಲ್ಲೇ ಟ್ವಿಟರ್ ಬಳಕೆದಾರರ ಸಂಖ್ಯೆ 330 ಮಿಲಿಯನ್ ದಾಟಿತ್ತು. ಇನ್ನು ಈ ಹೊಸ ಥ್ರೆಡ್ ಟ್ವೀಟ್ ಫೀಚರ್ ಟ್ವಿಟ್ಟರ್ ಬಳಕೆದಾರರನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಂದೇಹವಿಲ್ಲ.!!

ಓದಿರಿ: ಚೀನೀ ಮೊಬೈಲ್ ಕಂಪೆನಿಗಳಿಗೆ ಸರ್ಕಾರದಿಂದ ಬಿಗ್ ಶಾಕ್!..ಭಾರತದಲ್ಲಿ ಪಾರಮ್ಯಕ್ಕೆ ಬ್ರೇಕ್!!

English summary
After increasing the character count in a tweet, Twitter has found a new way to let people express themselves.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot