Subscribe to Gizbot

90,000 ನಕಲಿ ಲೈಂಗಿಕ ಖಾತೆ ಬಂದ್ ಮಾಡಿದ ಟ್ವಿಟರ್

Posted By: Prathap T

ನಕಲಿ ಬೋಟ್ನೆಟ್ ಅಭಿಯಾನ ಮೂಲಕ ಲೈಂಗಿಕ ಭರವಸೆವನ್ನು ನೀಡುವ ಬಳಕೆದಾರರನ್ನು ದಿಕ್ಕುತಪ್ಪಿಸುತ್ತಿದೆ ಎಂದು ಯುಎಸ್ ಮೂಲದ ಡಿಜಿಟಲ್ ಸೆಕ್ಯುರಿಟಿ ಕಂಪನಿ ಎಚ್ಚರಿಸಿದ ಬೆನ್ನಲ್ಲೇ ಕಾರ್ಯ ಪ್ರವೃತ್ತರಾದ ಭದ್ರತಾ ಸಂಸ್ಥೆ ಜೀರೋಫೋಕ್ಸ್ ನಕಲಿ ಖಾತೆಗಳನ್ನು ಪತ್ತೆ ಹಚ್ಚಿ ಮೈಕ್ರೋ-ಬ್ಲಾಗಿಂಗ್ ವೆಬ್ಸೈಟ್ ಮೂಲಕ ಸುಮಾರು 90,000 ಖಾತೆಗಳನ್ನು ಬಳಕೆಯಾಗದಂತೆ ಬಂದ್ ಮಾಡುವಲ್ಲಿ ಯಶಸ್ವಿಯಾಗಿದೆ.

90,000 ನಕಲಿ ಲೈಂಗಿಕ ಖಾತೆ ಬಂದ್ ಮಾಡಿದ ಟ್ವಿಟರ್

'ಸಿರೆನ್' ಎಂದು ಸುಳ್ಳು ಸಂಸ್ಥೆ ತೆರೆದು ಬಾಟ್ನೆಟ್ ಅಭಿಯಾನದ ಖಾತೆಗಳನ್ನು ತೆರೆದು ಸಾಮಾಜಿಕ ನೆಟ್ವರ್ಕ್ನಲ್ಲಿ ದಾಖಲಾದ ದೊಡ್ಡ ದುರುದ್ದೇಶಪೂರಿತ ಪ್ರಚಾರಗಳಲ್ಲಿ ಈ ಸಂಸ್ಥೆಯು ಒಂದಾಗಿದೆ" ಎಂದು ಜೀರೋಫೋಕ್ಸ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಬರೆದುಕೊಂಡಿದೆ.

ಜೀರೋಫೋಕ್ಸ್ ಕಂಪ್ಯೂಟರ್ ದೃಷ್ಟಿ ಮತ್ತು ನೈಸರ್ಗಿಕ ಭಾಷಾ ಸಂಸ್ಕರಣ ಕ್ರಮಾವಳಿಗಳ್ನು ಅನುಸರಿಸಿ 'ಸಿರೆನ್' ಸಂಸ್ಥೆ ಬಗ್ಗೆ ಕಾರ್ಯಾಚರಣೆ ನಡೆಸಿ 90,000 ಖಾತೆಗಳಿಂದ ಸುಮಾರು 8,500,000 ಟ್ವೀಟ್ಗಳನ್ನು ಗುರುತಿಸಲಾಗಿದೆ. ಸಿರೆನ್ ಹಾಕಿದ ಪೋಸ್ಟ್ ಗಳಿಗೆ ಬಲಿಪಶುಗಳಾದ 30,000,000 ಕ್ಕಿಂತ ಹೆಚ್ಚು ಮಂದಿ ಕ್ಲಿಕ್ ಮಾಡುವ ಮೂಲಕ ನಿರೀಕ್ಷೆಗೂ ಮೀರಿದ ಯಶಸ್ವಿ ಕಂಡಿತ್ತು.

ಬಾಟ್ನೆಟ್ ಬಳಕೆದಾರರನ್ನು ಟ್ರ್ಯಾಕ್ ಮಾಡಿದಾಗ ಗೂಗಲ್ ಸಂಕ್ಷಿಪ್ತ URL ಗಳನ್ನು ಬಳಸುವುದರಿಂದ ಈ ಡೇಟಾವನ್ನು ಜೀರೋಫೋಕ್ಸ್ ಸಂಗ್ರಹಿಸಿದೆ. ಕಳೆದ ವಾರ ಟ್ವಿಟರ್ ಮತ್ತು ಗೂಗಲ್ ಭದ್ರತಾ ತಂಡಗಳೆರಡಕ್ಕೂ ವರದಿಗಳನ್ನು ವರದಿ ಮಾಡಿತು, ಅವರು ಅಪರಾಧದ ಖಾತೆಗಳನ್ನು ಮತ್ತು ಲಿಂಕ್ಗಳನ್ನು ಕೂಡಲೇ ತೆಗೆದುಹಾಕಿದರು, 'ಸಿರೆನ್' ಬೋಟ್ನೆಟ್ ಅನ್ನು ಸಮಗ್ರವಾಗಿ ತೆಗೆದುಹಾಕುವಲ್ಲಿ ಯಶಸ್ವಿಯಾಗಿದೆ.

ಸುಮಾರು 90,000 ಖಾತೆಗಳೆಲ್ಲವೂ ಮಹಿಳೆಯೊಬ್ಬಳು ಪ್ರೊಫೈಲ್ ಕ್ರಿಯೇಟ್ ಮಾಡಿ ಮಹಿಳೆ ಭಾವಚಿತ್ರ ಹಾಗೂ ನಕಲಿ ಹೆಸರು ಹಾಕಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉತ್ತೇಜಿಸುವ, ಪ್ರಚೋದಿಸುವ ಹಾಗೂ ಉದ್ವೇಗಕ್ಕೆ ಒಳಗಾಗುವಂತೆ ಪೋಸ್ಟ್ ಮಾಡುವ ಮೂಲಕ ನೋಡುಕರನ್ನು ಆಕರ್ಷಿಸುವಂತ ಮಾಡಲಾಗುತ್ತಿತ್ತು ಎನ್ನಲಾಗಿದೆ.

WhatsApp Tips !! ವಾಟ್ಸ್ಆಪ್ ಇದ್ದರೇ ಸಾಕು, ಏನೆನೋ ಮಾಡಬಹುದು...!!!
ಸಾಮಾನ್ಯವಾಗಿ ಲೈಂಗಿಕ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಟ್ವಿಟರ್ಗಳು ಸ್ಪಷ್ಟವಾದ ಪಠ್ಯದೊಂದಿಗೆ ಪೋಸ್ಟ್ ಮಾಡಲಾಗಿರುತ್ತದೆ. ಆದರೆ, ಈ ನಕಲಿ ಖಾತೆಗಳಲ್ಲಿ ಅಸ್ಪಷ್ಟ, ಅಪ್ರಬುದ್ಧ ಇಂಗ್ಲೀಷ್ ಬಳಕೆ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. "ನೀವು ನನ್ನನ್ನು ಭೇಟಿಯಾಗಲು ಬಯಸುವಿರಾ?" ಅಥವಾ "ನಾಚಿಕೆ ಪಟ್ಟುಕೊಳ್ಳಬೇಡಿ ಪುಷ್ ಮಾಡಿ’ ಎಂಬ ಲಿಂಕ್ ಗಳನ್ನು ಹಾಕಲಾಗಿತ್ತು. ಒಂದು ಲಿಂಕ್ ಕ್ಲಿಕ್ ಮಾಡಿದ ನಂತರ, ಬಳಕೆದಾರರಿಗೆ ಪುನರ್ನಿರ್ದೇಶನಗಳ ಸರಣಿಯನ್ನು ನೀಡಲಾಗುತ್ತದೆ.

ಅಂತಿಮ ಮರುನಿರ್ದೇಶನ ವೆಬ್ಸೈಟ್ಗಳು ಚಂದಾದಾರಿಕೆ ಅಶ್ಲೀಲತೆ, ವೆಬ್ಕ್ಯಾಮ್ ಅಥವಾ ನಕಲಿ ಡೇಟಿಂಗ್ ವೆಬ್ಸೈಟ್ಗಳಿಗೆ ಸೈನ್ ಅಪ್ ಮಾಡಲು ಬಳಕೆದಾರರನ್ನು ಪ್ರೋತ್ಸಾಹಿಸಿವೆ ಈ ವಿಧದ ವೆಬ್ಸೈಟ್ಗಳು ಕಾನೂನು ಬದ್ಧವಾಗಿದ್ದರೂ ಕೂಡ, ವಂಚನೆಗಳೆಂದು ತಿಳಿದುಬಂದಿದೆ. ಶೇಕಡಾವಾರು ಬ್ಲಾಗ್ ಗಳು ನಗ್ನ ಅಥವಾ ಅರೆ ನಗ್ನ ಚಿತ್ರಗಳೊಂದಿಗೆ ಮಹಿಳೆಯರ ಹೆಸರಿನಿಂದ ಇರುತ್ತಿತ್ತು ಎನ್ನಲಾಗಿದೆ.

ಸೈರನ್ ನಟರ ವಿಷಯದಲ್ಲಿ, ಟ್ವಿಟರ್ ಖಾತೆಗಳ ಒಂದು ದೊಡ್ಡ ಭಾಗವು ಸ್ವಯಂ-ಘೋಷಿತ ಬಳಕೆದಾರರು ರಷ್ಯಾ ಭಾಷೆ ಬಳಸುತ್ತಿದ್ದರು ಎನ್ನಲಾಗಿದೆ. ಕಳಪೆ ಇಂಗ್ಲೀಷ್, ಅಸಂಬದ್ಧ ಪಠ್ಯ ಮತ್ತು ತಾಂತ್ರಿಕವಾಗಿ ಪ್ರವೀಣವಾಗಿದ್ದು ಬಹುಶಃ ಯುರೋಪ್ ಈಸ್ಟರ್ನ್ ಭಾಗದಲ್ಲಿ ನೆಲೆಗೊಂಡಿರುವ ಒಂದು ಗುಂಪು ಈ ರೀತಿಯ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಜೀರೋಫೋಕ್ಸ್ ಹೇಳಿಕೊಂಡಿದೆ.

Read more about:
English summary
Dubbed as 'SIREN', the fake botnet campaign promising online sex was discovered by ZeroFOX on Twitter.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot