ಭವಿಷ್ಯದಲ್ಲಿ ನೀವು ಯಾರನ್ನು ಅನ್‌ಫಾಲೊ ಮಾಡಬೇಕೆಂದು ಹೇಳಲಿದೆ ಟ್ವಿಟ್ಟರ್‌!!

|

ನಕಲಿ ಸುದ್ದಿಗಳನ್ನು ಹುಟ್ಟಿಹಾಕುವಂತಹ ಟ್ವಿಟ್ ಖಾತೆಗಳು ನಿಮ್ಮ ಫಾಲೊ ಲೀಸ್ಟ್‌ನಲ್ಲಿದ್ದರೆ ಅದನ್ನು ತಿಳಿಸಿಕೊಡುವ ಕೆಲಸಕ್ಕೆ ಟ್ವಿಟ್ಟರ್ ಮುಂದಾಗಲಿದೆ. ನಕಲಿ ಸುದ್ದಿಗಳನ್ನು ತಡೆಯಲು ಹೊಸ ಅಸ್ತ್ರವನ್ನು ಬಳಸಲು ಮುಂದಾಗಿರುವ ಸಾಮಾಜಿಕ ಜಾಲತಾಣ ಟ್ವಿಟರ್​, ಟ್ವಿಟ್ಟರ್ ಬಳಕೆದಾರರಿಗೆ ನಕಲಿ ಖಾತೆಗಳ ಬಗ್ಗೆ ಸತತ ಎಚ್ಚರಿಕೆ ನೀಡಲಿದೆ ಎಂದು ಹೇಳಲಾಗಿದೆ.

ಹೊಸದಾಗಿ ಫೀಚರ್ ಒಂದನ್ನು ಪರಿಚಯಿಸುವ ಮೂಲಕ, ನಕಲಿ ಸುದ್ದಿಕೋರರನ್ನು ನೀವು ಫಾಲೋ ಮಾಡುತ್ತಿದ್ದರೆ ಅವರನ್ನು ಅನ್​ಫಾಲೊ ಮಾಡುವಂತೆ ಮುಂದಿನ ದಿನಗಳಲ್ಲಿ ಸ್ವತಃ ಟ್ವಿಟರ್​ ನಿಮಗೆ ಸಂದೇಶ ರವಾನಿಸಲಿದೆ. ಪರೀಕ್ಷಾರ್ಥವಾಗಿ ಈಗಾಗಲೇ ಕೆಲ ವ್ಯಕ್ತಿಗಳಿಗೆ ಈ ಅಪ್​ಡೇಟ್​ನ್ನು ಬಿಡುಗಡೆ ಮಾಡಿದೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ಭವಿಷ್ಯದಲ್ಲಿ ನೀವು ಯಾರನ್ನು ಅನ್‌ಫಾಲೊ ಮಾಡಬೇಕೆಂದು ಹೇಳಲಿದೆ ಟ್ವಿಟ್ಟರ್‌!!

ಮಾಧ್ಯಮಗಳು ವರದಿ ಮಾಡಿರುವಂತೆ, ಟ್ವಿಟರ್​ ಖಾತೇದಾರಮನು ಯಾವುದೇ ಸಮಾಜಘಾತಕ ಸಂದೇಶಗಳನ್ನು ಸಾರುತ್ತಿರುವ ಅಥವಾ ಇನ್ನಾವುದೇ ಕೋಮುಗಲಬೆ ಪ್ರಚೋದಿಸುವಂತಹ ಸಂದೇಶಗಳನ್ನು ಹರಡುವ ಖಾತೆಗಳನ್ನು ಫಾಲೋ ಮಾಡುತ್ತಿದ್ದರೆ ಅವುಗಳನ್ನು ಅನ್​ಫಾಲೋ ಮಾಡುವಂತೆ ಸ್ವತಃ ಟ್ವಿಟರ್​ ಅವರಿಗೆ ಸಂದೇಶಗಳನ್ನು ರವಾನಿಸಲಿದೆ ಎಂದು ಹೇಳಲಾಗಿದೆ.

ಈ ನೂತನ ಅಪ್​ಡೇಟ್​ ಕುರಿತು ಟ್ವಿಟರ್​ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದ್ದು, ನಕಲಿ ಸುದ್ದಿಯನ್ನು ತಡೆಗಟ್ಟಲು ಈ ಕ್ರಮ ಅತ್ಯಗತ್ಯ ಎಂದ ಸಂಸ್ಥೆ ಮೂಲಗಳು ತಿಳಿಸಿವೆ. ಸುಳ್ಳು ಸುದ್ದಿಗಳನ್ನು ಹರಡುವ ನಕಲಿ ಖಾತೆಗಳನ್ನು ಗುರುತಿಸಿ ಅವುಗಳನ್ನು ಬ್ಲಾಕ್​ ಮಾಡುತ್ತಿದ್ದ ಟ್ವಿಟ್ಟರ್, ಈಗ ಬಳಕೆದಾರರಿಂದಲೂ ಕೂಡ ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಭವಿಷ್ಯದಲ್ಲಿ ನೀವು ಯಾರನ್ನು ಅನ್‌ಫಾಲೊ ಮಾಡಬೇಕೆಂದು ಹೇಳಲಿದೆ ಟ್ವಿಟ್ಟರ್‌!!

ನಕಲಿ ಸುದ್ದಿಗಳನ್ನು ಹರಡದಂತೆ ತಡೆಯಲು ಭಾರತದಲ್ಲಿ ವಾಟ್ಸ್‌ಆಪ್ ಮೇಲೆ ಮೇಲಿನಿಂದ ಮೇಲೆ ಒತ್ತಡವನ್ನು ಏರುತ್ತಿರುವ ಸಮಯದಲ್ಲೇ ಈ ನೂತನ ಅಪ್​ಡೇಟ್​ ಅನ್ನು ಟ್ವಿಟ್ಟರ್ ಬತರುತ್ತಿರುವುದು ಸಂತಸದ ಸುದ್ದಿಯಾಗಿದೆ. ಆದರೆ, ಅಪಾಯಕಾರಿ ಟ್ವಿಟರ್​ ಖಾತೆಗಳನ್ನು ಟ್ವಿಟ್ಟರ್ ಸಂಸ್ಥೆ ಯಾವ ರೀತಿ ಗುರುತಿಸುತ್ತದೆ ಎಂಬುನ್ನು ನಾವು ಇನ್ನಷ್ಟೇ ತಿಳಿಯಬೇಕಿದೆ.

ಓದಿರಿ: ಏನಿದು 'ಡಾರ್ಕ್‌ವೆಬ್'?..ಇದನ್ನು ಸರ್ಚ್ ಮಾಡಿದರೆ ನೀವು ಜೈಲು ಸೇರುವುದೇಕೆ?!

Best Mobiles in India

English summary
Going forward, like Twitter suggests its users about which account to follow, it may soon start suggesting users to 'unfollow' particular accounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X