ಖಾಲಿ ಟ್ವೀಟ್ ಮಾಡೋದು ಹೇಗೆ ಗೊತ್ತಾ?..ವೈರಲ್ ಆಗಿದೆ 'ಟ್ವಿಟ್ಟರ್' ಚೇಷ್ಟೆ!!

|

ಪ್ರಖ್ಯಾತ ಜಾಲತಾಣ ಟ್ವಿಟ್ಟರ್‌ನಲ್ಲಿ ಖಾಲಿ ಟ್ವೀಟ್ ಮಾಡಲು ಯಾರಿಗೂ ಸಾಧ್ಯವಿಲ್ಲ. ಕನಿಷ್ಠ ಒಂದು ಅಕ್ಷರ, ಒಂದು ಸಂಖ್ಯೆ ಅಥವಾ ಬೇರೇನೋ ಇರಲೇ ಬೇಕು. ಖಾಲಿ ಬಿಟ್ಟರೆ ಪೋಸ್ಟ್‌ ಮಾಡುವ ಆಯ್ಕೆಯೇ ಸಿಗುವುದಿಲ್ಲ. ಆದರೆ, ಟ್ವಿಟರ್ ಖಾಲಿಯಿರುವ ಒಂದು ಟ್ವೀಟ್ ಮಾಡುವ ಮೂಲಕ ಟ್ರೋಲ್‌ಗೆ ಗುರಿಯಾಗಿದೆ. ಖಾಲಿ ಟ್ವೀಟ್ ನೆಟ್ಟಿಗರಲ್ಲಿ ಹೊಸ ಕುತೂಹಲ ಸೃಷ್ಟಿಸಿದೆ.

ಹೌದು, ನವೆಂಬರ್‌ 29ರಂದು ಟ್ವಿಟ್ಟರ್‌ ತನ್ನ ಅಫಿಷಿಯಲ್ ಟ್ವಿಟ್ಟರ್ ಅಕೌಂಟ್‌ನಲ್ಲಿ ಖಾಲಿ ಟ್ವಿಟ್ ಒಂದನ್ನು ಮಾಡಿದೆ. ಟ್ವಿಟ್ಟರ್ ಟ್ವಿಟ್ ಮಾಡಿದ ಈ ಖಾಲಿ ಟ್ವೀಟ್ ಅನ್ನು ಇದುವರೆಗೆ 42 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ ಮತ್ತು 1.6 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ನಂತರ ಆ ಖಾಲಿ ಟ್ವಿಟ್ ಅನ್ನು ಟ್ವೀಟಿಗರು ಟ್ರೋಲ್ ಮಾಡಲು ಶುರುಮಾಡಿದ್ದಾರೆ.

ಖಾಲಿ ಟ್ವೀಟ್ ಮಾಡೋದು ಹೇಗೆ ಗೊತ್ತಾ?..ವೈರಲ್ ಆಗಿದೆ 'ಟ್ವಿಟ್ಟರ್' ಚೇಷ್ಟೆ!!

ಟ್ರೋಲ್ ಮಾಡಿದ ತನ್ನ ಬಳಕೆದಾರರಿಗೆ ಮತ್ತೆ 'ಖಾಲಿ ಟ್ವೀಟ್ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ?' ಎಂದು ಟ್ವಿಟ್ಟರ್ ಸಂಸ್ಥೆ ಮತ್ತೊಮದು ಟ್ವೀಟ್ ಮಾಡಿದೆ. ಖಾಲಿ ಬಿಟ್ಟರೆ ಟ್ವಿಟ್ ಪೋಸ್ಟ್‌ ಮಾಡುವ ಆಯ್ಕೆಯೇ ಸಿಗುವುದಿಲ್ಲ ಮತ್ತೆ ಇದು ಹೇಗೆ ಸಾಧ್ಯ ಎಂದು ಟ್ವಿಟ್ಟರ್ ಬಳಕೆದಾರರು ತಲೆ ಕೆಡಿಸಿಕೊಂಡಿದ್ದು, ಟ್ವಿಟರ್‌ನವರು ಉತ್ತರಿಸುತ್ತಾರೆ ಎಂದು ಕಾದುಕುಳಿತಿದ್ದಾರೆ.

ಇನ್ನು ಟ್ವಿಟರ್ ಖಾಲಿಯಿರುವ ಒಂದು ಟ್ವೀಟ್ ಮಾಡಿರುವುದನ್ನು ಟ್ವಿಟ್ಟಿಗರು ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ. ನಗು ತರಿಸುವಂತೆ ಟ್ರೋಲ್ ಮಾಡುತ್ತಿರುವ ನೆಟ್ಟಿಗರ ಕ್ರಿಯಾಶೀಲತೆ ತಲೆದೂಗುವಂತಿದೆ. ಟ್ವಿಟ್ಟರ್ ಮಾಡಿದ ಒಂದು ಖಾಲಿ ಟ್ವಿಟ್ ಇಷ್ಟು ಟ್ರೋಲ್ ಆಗಲಿದೆ ಎಂದು ಟ್ವಿಟ್ಟರ್ ಸಂಸ್ಥೆ ಕೂಡ ಊಹೆ ಮಾಡಿರಲಿಲ್ಲ ಎಂಬಂತಿವೆ ಜನರ ಟ್ವಿಟ್‌ಗಳು.

Best Mobiles in India

English summary
Recently, Twitter posted an blank tweet from their official handle and people couldn't stop themselves from trolling it right away.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X