ಟ್ವಿಟರ್ ಬಹಿಷ್ಕರಿಸಲು ಇಂದು ವಿಶ್ವದಾಧ್ಯಂತ ಪ್ರತಿಭಟನೆ!!..ಏಕೆ ಗೊತ್ತಾ?

ಅಕ್ಟೋಬರ್‌ 14 ಅಂದರೆ ಇಂದು ಟ್ವಿಟರ್ ಬಹಿಷ್ಕರಿಸಿ (#boycotttwitter) ಎಂಬ ಹ್ಯಾಶ್‌ಟ್ಯಾಗ್ ಪ್ರತಿಭಟನೆ ನಡೆಯುತ್ತಿದ್ದು, ಈ ಹ್ಯಾಶ್‌ಟ್ಯಾಗ್ ಪ್ರತಿಭಟನೆಗೆ ಜಾಗತಿಕವಾಗಿ ವ್ಯಾಪಕ ಬೆಂಬಲ ಸಿಗುತ್ತಿದೆ.

|

ಸದಾ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುವ ಪ್ರಾಖ್ಯಾತ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮತ್ತೊಂದು ಗುರುತರ ಆರೋಪಕ್ಕೆ ಗುರಿಯಾಗಿದೆ. ಅಭಿವ್ಯಕ್ತಿ ಸ್ವಾಂತ್ರಕ್ಕೆ ಧಕ್ಕೆ ತಂದಿರುವ ಆರೋಪಕ್ಕೆ ಟ್ವಿಟ್ಟರ್ ಸಿಲುಕಿದ್ದು, ಸೋಶಿಯಲ್ ಮೀಡಿಯಾದಲ್ಲಿ #boycotttwitter ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡ್ ಆಗಿ ಹರಿದಾಡುತ್ತಿದೆ.!!

ಟ್ವಿಟರ್ ಬಹಿಷ್ಕರಿಸಲು ಇಂದು ವಿಶ್ವದಾಧ್ಯಂತ ಪ್ರತಿಭಟನೆ!!..ಏಕೆ ಗೊತ್ತಾ?

ಅಮೆರಿಕದ ಪ್ರೊಡ್ಯೂಸರ್‌ ಹಾರ್ವೆ ವೈನ್‌ಸ್ಟೀನ್ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬುದಾಗಿ ಹಾಲಿವುಡ್‌ ನಟಿ ಮ್ಯಾಕ್‌ ಗೌನ್ ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು. ಆದರೆ, ಮ್ಯಾಕ್‌ಗೌನ್ ಟ್ವಿಟರ್ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆಕೆಯ ಟ್ವಿಟರ್ ಅಕೌಂಟ್ ರದ್ದು ಮಾಡಿದೆ.!!

ಇದರಿಂದ ಸಿಟ್ಟಾಗಿರುವ ಟ್ವಿಟರ್ ಬಳಕೆದಾರರು ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾತಂತ್ರ್ಯವಿದೆ. ಈ ರೀತಿಯಾಗಿ ಮಾಡುವುದಾದರೆ ಟ್ವಿಟ್ಟರ್‌ನಂತರ ಸಾಮಾಜಿಕ ಜಾಲತಾಣದ ಅವಶ್ಯಕತೆ ಏನಿದೆ ಎಂದು ಪ್ರತಿಭಟನೆಯ ರೂಪವಾಗಿ ಟ್ವಿಟರ್ ಬಹಿಷ್ಕರಿಸಿ ಎಂದು ಕರೆ ನೀಡಿದ್ದಾರೆ.!!

ಅಕ್ಟೋಬರ್‌ 14 ಅಂದರೆ ಇಂದು ಟ್ವಿಟರ್ ಬಹಿಷ್ಕರಿಸಿ (#boycotttwitter) ಎಂಬ ಹ್ಯಾಶ್‌ಟ್ಯಾಗ್ ಪ್ರತಿಭಟನೆ ನಡೆಯುತ್ತಿದ್ದು, ಈ ಹ್ಯಾಶ್‌ಟ್ಯಾಗ್ ಪ್ರತಿಭಟನೆಗೆ ಜಾಗತಿಕವಾಗಿ ವ್ಯಾಪಕ ಬೆಂಬಲ ಸಿಗುತ್ತಿದೆ. ನಿಮಗೂ ಟ್ವಿಟ್ಟರ್ ಮಾಡಿದ್ದು ತಪ್ಪು ಎಂದೆನಿಸಿದರೆ ನೀವು ಸಹ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದು.!!

Best Mobiles in India

English summary
The protest has been sparked by Twitter briefly suspending the actress Rose McGowan's account .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X