ಸರಕಾರ ಬೆಂಬಲಿತ ವೀಡಿಯೋಗಳಿಗೆ ಲೇಬಲ್ ನೀಡಲಿರುವ ಯೂಟ್ಯೂಬ್

ಯೂಟ್ಯೂಬ್ ತನ್ನ ಪ್ಲ್ಯಾಟ್ಫಾರ್ಮ್ ನಲ್ಲಿ ಪ್ರಸಾರವಾಗುವ ಸರಕಾರ ಬೆಂಬಲಿತ ಪ್ರಸಾರಕರ ವೀಡಿಯೋಗಳ ಕೆಳಗೆ ಡಿಸ್ಕ್ಲೈಮರ್ ನೀಡಲು ಪ್ರಾರಂಭಿಸಿದೆ.

By Tejaswini P G
|

ಸರಕಾರದಿಂದ ಹಣಕಾಸಿನ ಬೆಂಬಲ ಪಡೆಯುವ ಪ್ರಸಾರಗಳಿಗೆ ಯೂಟ್ಯೂಬ್ ಲೇಬಲ್ ನೀಡಲು ಪ್ರಾರಂಭಿಸಿದ್ದು ತನ್ನ ಆನ್ಲೈನ್ ವೀಡಿಯೋ ಶೇರಿಂಗ್ ಪ್ಲ್ಯಾಟ್ಫಾರ್ಮ್ನಲ್ಲಿ ಬರುವ ಕಂಟೆಂಟ್ ನ ಬಗ್ಗೆ ಹೆಚ್ಚು ಕಟ್ಟುನಿಟ್ಟಾಗಿರುವ ಭರವಸೆಯನ್ನು ಈಡೇರಿಸ ಹೊರಟಿದೆ. ಈ ಫೀಚರ್ ಮೊದಲಿಗೆ ಯುಎಸ್ ನಲ್ಲಿ ಜಾರಿಗೆ ಬಂದಿದ್ದು, ಸರಕಾರದಿಂದ ಅಥವಾ ಸಾರ್ವಜನಿಕರಿಂದ ಹಣ ಪಡೆಯುವ ನ್ಯೂಸ್ ಪ್ರಸಾರಕರು ಅಪ್ಲೋಡ್ ಮಾಡುವ ವೀಡಿಯೋಗಳ ಕೆಳಗೆ ಸೂಚನೆಯನ್ನು ನೀಡಲಾಗುವುದು ಎಂದು ಯೂಟ್ಯೂಬ್ ನ್ಯೂಸ್ ನ ಸೀನಿಯರ್ ಪ್ರಾಡಕ್ಟ್ ಮ್ಯಾನೇಜರ್ ಆದ ಜೆಫ್ ಸಾಮೆಕ್ ಅವರು ತಮ್ಮ ಬ್ಲಾಗ್ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಸರಕಾರ ಬೆಂಬಲಿತ ವೀಡಿಯೋಗಳಿಗೆ ಲೇಬಲ್ ನೀಡಲಿರುವ ಯೂಟ್ಯೂಬ್


"ನಮ್ಮ ಬಳಕೆದಾರರು ಯೂಟ್ಯೂಬ್ನಲ್ಲಿ ವೀಕ್ಷಿಸುವ ವಾರ್ತೆಗಳ ಮೂಲಗಳ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ನೀಡುವುದೇ ನಮ್ಮ ಉದ್ದೇಶ. ನ್ಯೂಸ್ ನಮಗೆ ಬಹಳ ಮುಖ್ಯವಾದ ಅಂಶವಾಗಿದ್ದು, ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ಪ್ರಸಾರವಾಗುವ ವಾರ್ತೆಗಳು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಅಗತ್ಯ " ಎಂದು ಸಾಮೆಕ್ ಹೇಳಿದ್ದಾರೆ. ಈ ಹೆಜ್ಜೆ ಮಾಸ್ಕೋ ದ ಉದ್ದೇಶಗಳನ್ನು ಪ್ರಸಾರ ಮಾಡುವುದೆಂಬ ಟೀಕೆಗೊಳಗಾಗಿರುವ ರಶ್ಯಾ ಬೆಂಬಲಿತ RT ಮತ್ತು ಇಂತಹ ಇತರ ಪ್ರಸಾರಕರ ವೀಡಿಯೋಗಳ ಮೇಲೆ ಪ್ರಭಾವ ಬೀರಲಿದೆ.

ಬ್ಲಾಗ್ಪೋಸ್ಟ್ ನಲ್ಲಿರುವ ಸ್ಕ್ರೀನ್ಶಾಟ್ ನಲ್ಲಿ ಯುಎಸ್ ಸರಕಾರ ಬೆಂಬಲಿತ ರೇಡಿಯೋ ಫ್ರೀ ಏಶಿಯಾ ಕುರಿತು ಡಿಸ್ಕ್ಲೈಮರ್ ನೀಡಲಾಗಿದೆ. ಸರಕಾರ ಬೆಂಬಲಿತ ನ್ಯೂಸ್ ಸಂಸ್ಥೆಗಳಾದ BBC ಮತ್ತು AFP ಮತ್ತು ಯುಎಸ್ ಆಧಾರಿತ ಸಾರ್ವಜನಿಕ ಪ್ರಸಾರಕರನ್ನೂ ಕೂಡ ಈ ಮೂಲಕ ಗುರುತಿಸಲಾಗುವುದು.

ಸರಕಾರ ಬೆಂಬಲಿತ ನ್ಯೂಸ್ ಪ್ರಸಾರಗಳ ಜೊತೆಗೆ ತೋರಿಸಲಾಗುವ ನೋಟೀಸ್ ಗಳಲ್ಲಿ ವಿಕಿಪೀಡಿಯ ಆನ್ಲೈನ್ ಎನ್ಸೈಕ್ಲೋಪೀಡಿಯಾ ಗೆ ಲಿಂಕ್ಗಳನ್ನು ನೀಡಲಾಗುವುದು. ಬಳಕೆದಾರರು ಈ ಮೂಲಕ ಈ ವರದಿಗಳನ್ನು ನೀಡುವ ಸಂಸ್ಥೆಗಳ ಹಿನ್ನಲೆಯನ್ನು ತಿಳಿಯಬಹುದಾಗಿದೆ ಎಂದು ಸಾಮೆಕ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಸಧ್ಯಕ್ಕೆ ಈ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು ಭವಿಷ್ಯದಲ್ಲಿ ಬಳಕೆದಾರರ ಅನಿಸಿಕೆಗಳ ಮೇಲೆ ಇದನ್ನು ಪರಿಷ್ಕರಿಸಲಾಗುವುದು.

ಸಾಮೆಕ್ ಅವರು ಹೇಳುವಂತೆ ಉತ್ತಮ ಮತ್ತು ಅಧಿಕೃತ ಮಾಹಿತಿಯನ್ನಷ್ಟೇ ನೀಡುವ ಸಲುವಾಗಿ ಯೂಟ್ಯೂಬ್ ಕಳೆದ ವರ್ಷ ತನ್ನ ಪ್ಲ್ಯಾಟ್ಫಾರ್ಮ್ ನಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ.

ಜಪಾನ್ ನಲ್ಲಿ ಕಾಫಿ ಮಾಡಿಕೊಡುವ ರೋಬೋಟ್: ಒಂದು ಕಾಫಿ ಬೆಲೆ ಎಷ್ಟು..?ಜಪಾನ್ ನಲ್ಲಿ ಕಾಫಿ ಮಾಡಿಕೊಡುವ ರೋಬೋಟ್: ಒಂದು ಕಾಫಿ ಬೆಲೆ ಎಷ್ಟು..?

How to find out where you can get your Aadhaar card done (KANNADA)

ಈ ವರ್ಷ ಈ ಕುರಿತು ನಿಯಮಗಳನ್ನು ತನ್ನ ಪ್ಲ್ಯಾಟ್ಫಾರ್ಮ್ ನಲ್ಲಿ ಹೆಚ್ಚು ಕಟ್ಟುನಿಟ್ಟಾಗಿ ಜಾರಿಗೆ ತರುವುದೇ ಯೂಟ್ಯೂಬ್ ನ ಆದ್ಯತೆಯಾಗಿದೆ ಎಂದು ಚೀಫ್ ಎಕ್ಸಿಕ್ಯೂಟಿವ್ ಸುಸಾನ್ ವೊಜಿಕಿ ಅವರು ಹೇಳಿದ್ದಾರೆ.

"ಯಾವ ಸೃಜನಶೀಲತೆ ಮತ್ತು ಅನಿರೀಕ್ಷಿತತೆ ಯೂಟ್ಯೂಬ್ ನ ಶಕ್ತಿಯಾಗಿದೆಯೋ ಅದೇ ಕೆಲವು ನತದೃಷ್ಟಕರ ಸಂದರ್ಭಗಳಿಗೆ ಕಾರಣವಾಗಬಹುದು. ಹಾಗಾಗಿ ನಾವು ಈ ಕುರಿತು ಸ್ಪಷ್ಟ, ತಿಳುವಳಿಕೆಯುಳ್ಳ ಮತ್ತು ತತ್ವಯುಕ್ತ ನಿಲುವು ತಳೆಯಬೇಕಾಗಿದೆ " ಎಂದು ವೊಜಿಕಿ ಅವರು ಆನ್ಲೈನ್ ಪೋಸ್ಟ್ ಒಂದರಲ್ಲಿ ಕಮೆಂಟ್ ಮಾಡಿದ್ದಾರೆ.

Best Mobiles in India

Read more about:
English summary
YouTube has started labeling news broadcasts that are funded by the government as it promised to be stricter about content at the online-video sharing platform. This feature, which is currently being rolled out in the US, shows notices below videos uploaded by news broadcasters that receive government or public money.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X