Subscribe to Gizbot

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3 ಟಾಪ್ ಎಂಡ್ ಟ್ಯಾಬ್ಲೆಟ್: ಏನಿದರ ವಿಶೇಷತೆ..? ಬೆಲೆ ಎಷ್ಟು..?

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟವೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲೇ ಟ್ಯಾಬ್ಲೆಟ್‌ಗಳ ಬೇಡಿಕೆಯೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಟ್ಯಾಬ್ಲೆಟ್ ಮಾರುಕಟ್ಟೆಯೂ ವಿಸ್ತಾರವಾಗುತ್ತಾ ಸಾಗಿದೆ. ಇದಕ್ಕಾಗಿಯೇ ಆಪಲ್ ಸಹ ಹೊಸದಾಗಿ ಐಪ್ಯಾಡ್ ಸರಣಿಯನ್ನು ಪರಿಚಯಿಸಿತ್ತು, ಇದಕ್ಕೇ ಸ್ಪರ್ಧೆ ನೀಡುವ ಸಲುವಾಗಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3 ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3 ಟಾಪ್ ಎಂಡ್ ಟ್ಯಾಬ್ಲೆಟ್: ಏನಿದರ ವಿಶೇಷತೆ.?

ಓದಿರಿ: ಟೆಲಿಕಾಂ ವಲಯದಲ್ಲೇ ಹವಾ ಎಬ್ಬಿಸಿದ BSNL ನೀಡಿರುವ 'ದಿ ಬೆಸ್ಟ್' ಆಫರ್ ...!!!

ಇದು ನೇರವಾಗಿ ಆಪಲ್ ಐಪ್ಯಾಡ್ ಪ್ರೋ 9.7 ಇಂಚಿಗೆ ಸ್ಪರ್ಧೆಯನ್ನು ನೀಡಲಿದ್ದು, ಇದು ಸಹ ಪ್ರೀಮಿಯಮ್ ಟ್ಯಾಬ್ಲೆಟ್ ಆಗಿದೆ. ಈ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3 ಕುರಿತ ಸಂಫೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಟ್ಟು ಎರಡು ಬಣ್ಣದಲ್ಲಿ ಲಭ್ಯ:

ಒಟ್ಟು ಎರಡು ಬಣ್ಣದಲ್ಲಿ ಲಭ್ಯ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3 ಎರಡು ಬಣ್ಣದಲ್ಲಿ ಲಭ್ಯವಿದ್ದು, ಬ್ಲಾಕ್ ಮತ್ತು ಸಿಲ್ವರ್ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ದೊರೆಯಲಿದೆ. 6mm ದಪ್ಪವಿದ್ದು, 434 ಗ್ರಾಮ್ ತೂಕವಾಗಿದೆ. ಇದು ಕೈನಲ್ಲಿ ಹಿಡಿದುಕೊಳ್ಳಲು ಉತ್ತಮ ಅನುಭವನ್ನು ನೀಡಲಿದೆ. ಹಿಂಭಾಗದ ಕವರ್ ಗ್ಲಾಸ್ ಫಿಸಿಷಿಂಗ್ ಹೊಂದಿದೆ ಎನ್ನಲಾಗಿದೆ. ನೋಡಲು ಪ್ರೀಮಿಯಂ ಲುಕ್ ಹೊಂದಿದೆ.

9.7 ಇಂಚಿನ ಡಿಸ್‌ಪ್ಲೇ:

9.7 ಇಂಚಿನ ಡಿಸ್‌ಪ್ಲೇ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3 ನಲ್ಲಿ 9.7 ಇಂಚಿನ ಪರದೆಯನ್ನು ಕಾಣಬಹುದಾಗಿದೆ. ಇದು ಸುಪರ್ ಅಮೊಲೈಡ್ ಡಿಸ್‌ಪ್ಲೇಯಾಗಿದ್ದು, 2048x1536 ರೆಸಲ್ಯೂಷನ್ ಗುಣಮಟ್ಟವನ್ನು ಇದು ಹೊಂದಿದೆ ಎನ್ನಲಾಗಿದೆ. ಇದು HDR ವಿಡಿಯೋಗಳನ್ನು ಪ್ಲೇ ಮಾಡಲಿದೆ. ವಿವಿಧ ಭಾಗಗಳಿಂದ ನೋಡಲು ಈ ಡಿಸ್‌ಪ್ಲೇ ಉತ್ತಮವಾಗಿ ಕಾಣಲಿದೆ.

4GB RAM ಮತ್ತು 32 GB ROM:

4GB RAM ಮತ್ತು 32 GB ROM:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3 ನಲ್ಲಿ 4GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ಕಾಣಬಹದಾಗಿದ್ದು, ಸ್ನಾಪ್‌ಡ್ರಾಗನ್ 820 ಪ್ರೋಸೆಸರ್ ಇದರಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಮೆಮೊರಿ ಹಾಕಿಕೊಳ್ಳುವ ಆಯ್ಕೆಯನ್ನು ನೀಡಲಾಗಿದ್ದು, 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವು ಇದರಲ್ಲಿದೆ.

13 MP ಮತ್ತು 5MP ಕ್ಯಾಮೆರಾವನ್ನು ಕಾಣಬಹುದು:

13 MP ಮತ್ತು 5MP ಕ್ಯಾಮೆರಾವನ್ನು ಕಾಣಬಹುದು:

ಇದಲ್ಲದೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3ನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ LED ಫ್ಲಾಷ್ ಸಹ ನೀಡಲಾಗಿದೆ. ಇನ್ನು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕಾರಿಯಾಗಿದೆ.

ಆಂಡ್ರಾಯ್ಡ್ ನ್ಯಾಗಾ. 6000mAh ಬ್ಯಾಟರಿ:

ಆಂಡ್ರಾಯ್ಡ್ ನ್ಯಾಗಾ. 6000mAh ಬ್ಯಾಟರಿ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3 ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ 6000mAh ಬ್ಯಾಟರಿಯನ್ನು ಈ ಟ್ಯಾಬಿನಲ್ಲಿ ಕಾಣಬಹುದಾಗಿದೆ. ಇದು ಉತ್ತಮ ಬ್ಯಾಕಪ್ ಹೊಂದಿರಲಿದೆ ಎನ್ನಲಾಗಿದೆ. ಇದು 12 ಗಂಟೆಗಳ ಒಂದೇ ಚಾರ್ಜ್ ನಲ್ಲಿ ಕಾರ್ಯನಿರ್ವಹಿಸಲು ಇದು ಶಕ್ತವಾಗಿದೆ.

ಇದರೊಂದಿಗೆ S ಪೆನ್:

ಇದರೊಂದಿಗೆ S ಪೆನ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಟ್ಯಾಬ್ S3 ನೊಂದಿಗೆ ಆಡ್ವಾನ್ಸ್ S ಪೆನ್ ದೊರೆಯಲಿದೆ. ಇದನ್ನು ಚಾರ್ಜ್ ಮಾಡುವ ಇಲ್ಲವೇ ಪೇರ್ ಮಾಡುವ ಅವಶಕ್ಯತೆ ಇಲ್ಲ ಎನ್ನಲಾಗಿದೆ. ಇದು ಕ್ರಿಯೆಟಿವ್ ಕೆಲಸಗಳಿಗೆ ಹೆಚ್ಚಿನ ಸಹಾಯ ಮಾಡಲಿದೆ. ಇದು ಕೈನಲ್ಲಿ ಹಿಡಿದುಕೊಂಡು ಬರೆಯಲು ಇದು ಉತ್ತಮ ಅನುಭವನ್ನು ನೀಡಲಿದೆ. ಈ ಟ್ಯಾಬಿನ ಬೆಲೆ ಬಂದು ರೂ.47,990 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Samsung has introduced a new high-end Android powered Samsung Galaxy Tab S3 tablet in the market. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot