ಶಿಯೋಮಿ ಮಿ ಪ್ಯಾಡ್ 3: 4GB RAM, 6,600 mAh ಬ್ಯಾಟರಿ

Written By:

ಸ್ಮಾರ್ಟ್‌ಫೋನುಗಳ ಮೇಲೆಯೇ ಹೆಚ್ಚಿನ ಗಮವನ್ನು ಕೇಂದ್ರಿಕರಿಸಿಕೊಂಡಿರುವ ಶಿಯೋಮಿ ಟ್ಯಾಬ್ಲೆಟ್ ಕಡೆಗೂ ಮುಖ ಮಾಡಿದೆ. ಶಿಯೋಮಿ ಮಿ ಪ್ಯಾಡ್ 3 ಅನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಗೂ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಿಯೋಮಿ ಮಿ ಪ್ಯಾಡ್ 3: 4GB RAM, 6,600 mAh ಬ್ಯಾಟರಿ

ಓದಿರಿ: ಜಿಯೋ ಸಿಮ್, ಫೋನ್, ಡಿಟಿಹೆಚ್ ನಂತರ ಬರುತ್ತಿದೆ 'ಜಿಯೋ 4G ಲ್ಯಾಪ್‌ಟಾಪ್'

ಕಳೆದ ವರ್ಷ ಶಿಯೋಮಿ ಮಿ ಪ್ಯಾಡ್ 2 ಬಿಡುಗಡೆ ಮಾಡಿದ ಶಿಯೋಮಿ, ಈಗ ಪ್ಯಾಡ್ 3 ಲಾಂಚ್‌ಗೆ ಸಿದ್ಧತೆ ನಡೆಸಿದೆ. ಸುಮಾರು 14,100 ರೂಗಳಿಗೆ ದೊರೆಯಲಿರುವ ಪ್ಯಾಡ್ 3 ಟಾಬ್ಲೆಟ್, 7.9 ಇಂಚಿನ 2048×1536 p ರೆಸಲ್ಯೂಷನ್ ಹೊಂದಿರುವ ಡಿಸ್‌ಪ್ಲೇಯನ್ನು ಹೊಂದಿದೆ.

2.1GHz ಮಿಡಿಯಾ ಟೆಕ್ MT8176 ಹೆಕ್ಸಾ ಕೋರ್ ಪ್ರೋಸೆಸರ್ ನೊಂದಿಗೆ ವೇಗದ ಕಾರ್ಯಚರಣೆಗೆ 4GB RAM ಇದೆ. ಜೊತೆಗೆ 64GB ಇಂರ್ಟನಲ್ ಮೆಮೊರಿ ಈ ಟ್ಯಾಬ್ಲೆಟ್‌ನಲ್ಲಿದೆ. ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿರುವ ಕ್ಯಾಮೆರಾ 5MPಯದ್ದಾಗಿದೆ.

ಶಿಯೋಮಿ ಮಿ ಪ್ಯಾಡ್ 3: 4GB RAM, 6,600 mAh ಬ್ಯಾಟರಿ

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಉತ್ತಮ ಬ್ಯಾಟರಿ ಬ್ಯಾಕ್‌ಅಪ್ ಹೊಂದಿರುವ ಈ ಟ್ಯಾಬ್ಲೆಟ್‌ನಲ್ಲಿ 6,600 mAh ಬ್ಯಾಟರಿ ಅಳವಡಿಸಲಾಗಿದೆ. ಈ ಟ್ಯಾಬ್ MIUI 8ನಲ್ಲಿ ಕಾರ್ಯನಿರ್ವಹಿಸಲಿದೆ. ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. 4G VoLTE ಸಪೋರ್ಟ್ . Wi-Fi 802.11ac, Bluetooth 4.1, ಮತ್ತು USB Type-C ಪೋರ್ಟ್‌ ಹೊಂದಿದೆ.

Read more about:
English summary
Xiaomi has put these rumors to rest by launching the Mi Pad 3 in China. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot