Subscribe to Gizbot

ಇಮೇಜ್‌ ಕ್ರಾಪ್‌ ಮಾಡದೇ ವಾಟ್ಸಾಪ್ ಪ್ರೊಫೈಲ್‌ ಪಿಕ್ ಸೆಟ್ ಹೇಗೆ?

Written By:

ವಾಟ್ಸಾಪ್ ಪ್ರಪಂಚದಲ್ಲೇ ಅತಿದೊಡ್ಡ ಪ್ರಖ್ಯಾತ ಮೆಸೇಜಿಂಗ್‌ ಆಪ್‌. ವಾಟ್ಸಾಪ್‌ ಇಂದಿಗೂ ಸಹ ಬಳಕೆದಾರರ ಉತ್ತಮ ಅನುಭವಕ್ಕಾಗಿ ಹೊಸ ಹೊಸ ಫೀಚರ್‌ಗಳನ್ನು ಆಡ್‌ ಮಾಡುತ್ತಲೇ ಇದೆ.

ಇಮೇಜ್‌ ಕ್ರಾಪ್‌ ಮಾಡದೇ ವಾಟ್ಸಾಪ್ ಪ್ರೊಫೈಲ್‌ ಪಿಕ್ ಸೆಟ್ ಹೇಗೆ?

ಆಂಡ್ರಾಯ್ಡ್ ವಾಟ್ಸಾಪ್‌ ಬಳಕೆದಾರರು ಇಂದಿಗೂ ಸಹ ವಾಟ್ಸಾಪ್‌ನಲ್ಲಿ ಇಷ್ಟಪಡದ ಒಂದು ಫೀಚರ್ ಎಂದರೆ ಪ್ರೊಫೈಲ್‌ ಪಿಚ್ಚರ್‌ ಕ್ರಾಪಿಂಗ್'. ವಾಟ್ಸಾಪ್‌ ಪ್ರಾಥಮಿಕವಾಗಿ 192*192p ರೆಸಲ್ಯೂಶನ್‌ನ ಫೋಟೋವನ್ನು ಪ್ರೊಫೈಲ್‌ ಇಮೇಜ್‌ ಆಗಿ ಸೆಟ್‌ ಮಾಡಲು ಅವಕಾಶ ನೀಡಿದೆ. ಇಮೇಜ್‌ ಇದಕ್ಕಿಂತ ಹೆಚ್ಚಿನ ರೆಸಲ್ಯೂಶನ್‌ ಇದ್ದಲ್ಲಿ ಕ್ರಾಪ್‌ ಮಾಡಲೇಬೇಕು.

ವಾಟ್ಸಾಪ್‌ನಲ್ಲಿ ಸೆಂಡ್ ಆದ, ಆದರೆ ಡಿಲಿವರಿಯಾಗದ ಮೆಸೇಜ್‌ ಡಿಲೀಟ್‌ ಹೇಗೆ?

ಅಂದಹಾಗೆ ವಾಟ್ಸಾಪ್‌(WhatsApp) ಬಳಕೆದಾರರು ನಾವು ತಿಳಿಸುವ ಟ್ರಿಕ್ಸ್‌ಗಳನ್ನು ಬಳಸಿ ಸಂಪೂರ್ಣ ಇಮೇಜ್ ಅನ್ನು ಕ್ರಾಪ್ ಮಾಡದೇ ವಾಟ್ಸಾಪ್ ಪ್ರೊಫೈಲ್ ಪಿಕ್‌ ಸೆಟ್‌ ಮಾಡಬಹುದಾಗಿದೆ. ಅದು ಹೇಗೆ ಎಂದು ಕೆಳಗಿನ ಮಾಹಿತಿ ಓದಿ ತಿಳಿಯಿರಿ.

ಇಮೇಜ್‌ ಕ್ರಾಪ್‌ ಮಾಡದೇ ವಾಟ್ಸಾಪ್ ಪ್ರೊಫೈಲ್‌ ಪಿಕ್ ಸೆಟ್ ಹೇಗೆ?

೧ '#SquareDroid' ಆಪ್‌ ಅನ್ನು ಡೌನ್‌ಲೋಡ್ ಮಾಡಿ
ಮೊದಲ ಹಂತದಲ್ಲಿ ನೀವು '#SquareDroid' ಎಂಬ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೊರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ.

೨ ಅಪ್ಲಿಕೇಶನ್‌ ಓಪನ್ ಮಾಡಿ
ಡೌನ್‌ಲೋಡ್‌ ಆದ ಅಪ್ಲಿಕೇಶನ್‌ ಓಪನ್ ಮಾಡಿ ಇಮೇಜ್‌ ಅನ್ನು ಎಡಿಟ್ ಮಾಡಲು ಸೆಲೆಕ್ಟ್ ಮಾಡಿ

ಇಮೇಜ್‌ ಕ್ರಾಪ್‌ ಮಾಡದೇ ವಾಟ್ಸಾಪ್ ಪ್ರೊಫೈಲ್‌ ಪಿಕ್ ಸೆಟ್ ಹೇಗೆ?

೩ ಬ್ಯಾಗ್ರೌಂಡ್ ವಿಧಾನ ಆಯ್ಕೆ ಮಾಡಿ
ಫೋಟೋ ಓಪನ್ 3 ಬ್ಯಾಗ್ರೌಂಡ್ ವಿಧಾನಗಳನ್ನು ಆಯ್ಕೆ ಮಾಡಲು ಕೇಳುತ್ತದೆ ಮತ್ತು ಅದರಲ್ಲಿ ಒಂದನ್ನು ಆಯ್ಕೆ ಮಾಡಿ. ಬ್ಯಾಗ್ರೌಂಡ್‌ ಎಡಿಟ್‌ನಲ್ಲಿ blur, plain ಮತ್ತು gradient ಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಬಹುದು.

೪ ಇಮೇಜ್‌ ಸೇವ್ ಮಾಡಿ
ಬ್ಯಾಗ್ರೌಂಡ್ ಟೈಪ್ ಆಯ್ಕೆ ನಂತರ, ಸೇವ್‌ ಬಟನ್ ಕ್ಲಿಕ್ ಮಾಡಿ ಇಮೇಜ್‌ ಸೇವ್‌ ಮಾಡಿ. ಅದೇ ಇಮೇಜ್‌ ಅನ್ನು ನಿಮ್ಮ ವಾಟ್ಸಾಪ್‌ ಪ್ರೊಫೈಲ್‌ ಇಮೇಜ್‌ ಆಗಿ ಸೆಟ್‌ ಮಾಡಿ.

ವಾಟ್ಸಾಪ್‌ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್‌ ಮಾಡಿದರೆ ಏನಾಗಬಹುದು ಗೊತ್ತೇ?

 

 

English summary
4 Simple Steps to Set Your WhatsApp DP Without Cropping on Android Phones. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot