ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮಗಳನ್ನು ಸೇರಿಸಲು ಐದು ಸರಳ ಕ್ರಮಗಳು.

ಪ್ರಮುಖ ಸಭೆ ಅಥವಾ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳಬೇಡಿ, ಗೂಗಲ್ ಕ್ಯಾಲೆಂಡರಿನಲ್ಲಿ ಸರಳ ಕ್ರಮಗಳಿಂದ ಕಾರ್ಯಕ್ರಮವನ್ನು ಸೇರಿಸಿಕೊಳ್ಳಿ.

|

ನಿನ್ನೆಯಷ್ಟೇ ಮುಂಬರುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿಯನ್ನು ಹಾಗೂ ಗ್ರಾಹಕರೊಡನೆ ಭೇಟಿಯಾಗಲು ನಿಗದಿಗೊಳಿಸಬೇಕಾದ ದಿನ ಹಾಗೂ ಸಮಯವನ್ನು ಗುರುತು ಮಾಡಿಟ್ಟುಕೊಳ್ಳಲು ಒಂದು ತಂತ್ರಾಂಶವನ್ನು ಹುಡುಕುತ್ತಿದ್ದೆ. ನನ್ನ ಜೀವನ ಶೈಲಿಗೆ ಅದು ಅತ್ಯಂತ ಅಗತ್ಯ.

ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮಗಳನ್ನು ಸೇರಿಸಲು ಐದು ಸರಳ ಕ್ರಮಗಳು.

ವಾಸ್ತವದಲ್ಲಿ, ಈ ಲೇಖನವನ್ನು ಓದುತ್ತಿರುವ ನಿಮ್ಮಲ್ಲೇನಕರಿಗೂ ಪ್ರಮುಖ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿಗಳು ಉದ್ಭವಿಸಿರುತ್ತದೆ. ಅದು ಕಾರ್ಯಕ್ರಮವಿರಬಹುದು, ಭೇಟಿಯಿರಬಹುದು, ಪಾಠ, ವಿಮಾನ ಅಥವಾ ಮನೆಗೆ ಖರೀದಿಸುವ ದಿನಸಿ ಸಾಮಗ್ರಿಯೂ ಇರಬಹುದು.

ಓದಿರಿ: ಜಿಯೋ4Gವಾಯ್ಸ್ ವರ್ಕ್‌ ಆಗುತ್ತಿಲ್ಲವೇ? ಸಮಸ್ಯೆ ಏಕೆ ಮತ್ತು ಪರಿಹಾರಗಳನ್ನು ತಿಳಿಯಿರಿ

ಪ್ಲೇ ಸ್ಟೋರಿನಲ್ಲಿ ಇದಕ್ಕೆ ಸಂಬಂಧಿಸಿದಂತಹ ತಂತ್ರಾಂಶವನ್ನು ಹುಡುಕುತ್ತಿರುವಾಗ ನನ್ನ ಕಂಪ್ಯೂಟರ್, ಐಫೋನ್ ಮತ್ತು ಆ್ಯಂಡ್ರಾಯ್ಡ್ ಫೋನುಗಳಲ್ಲಿ ಈಗಾಗಲೇ ಆ ತಂತ್ರಾಂಶವಿದೆ ಎನ್ನುವುದು ಅರಿವಾಯಿತು. ಅದರೆಸರು ಗೂಗಲ್ ಕ್ಯಾಲೆಂಡರ್. ಇದು ತುಂಬಾ ಸರಳ, ದಕ್ಷ ತಂತ್ರಾಂಶ. ಇದನ್ನು ಬಳಸಿ ನೀವು ಕಾರ್ಯಕ್ರಮಗಳ ಪಟ್ಟಿಯನ್ನು ಮತ್ತು ನೀವು ಮರೆತುಬಿಡಬಹುದಾದ ಕೆಲಸವನ್ನು ಗುರುತು ಮಾಡಿಟ್ಟುಕೊಳ್ಳಬಹುದು.

ಓದಿರಿ: 500, 1000 ರೂ ನೋಟು ಬ್ಯಾನ್: ಫ್ಲಿಪ್‌ಕಾರ್ಟ್‌, ಅಮೆಜಾನ್‌ನಲ್ಲಿ 'ಕ್ಯಾಶ್‌ ಆನ್‌ ಡೆಲಿವರಿ' ಬ್ಯಾನ್

ಬಹುತೇಕ ನಾವೆಲ್ಲರೂ ಈಗ ಜಿಮೇಲ್, ಗೂಗಲ್ ಕ್ರೋಮ್ ಮತ್ತು ಆ್ಯಂಡ್ರಾಯ್ಡ್ ಫೋನುಗಳನ್ನು ದಿನನಿತ್ಯದ ಕೆಲಸಕ್ಕೆ ಬಳಸುತ್ತೇವಾದ್ದರಿಂದ ಗೂಗಲ್ ಕ್ಯಾಲೆಂಡರಿನಲ್ಲಿ ಗುರುತು ಹಾಕಿಕೊಳ್ಳುವುದು ಬಲು ಸುಲಭದ ಕೆಲಸ. ಈ ಕೆಳಗಿನ ಸರಳ ಕ್ರಮಗಳನ್ನು ಉಪಯೋಗಿಸಿಕೊಂಡು ನಿಮ್ಮ ಕಂಪ್ಯೂಟರಿನಲ್ಲಿ ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮದ ಪಟ್ಟಿಯನ್ನು ಗುರುತು ಹಾಕಿಕೊಳ್ಳಿ.

ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮಗಳನ್ನು ಸೇರಿಸಲು ಐದು ಸರಳ ಕ್ರಮಗಳು.

ಜಿಮೇಲೆ ಖಾತೆಗೆ ಲಾಗಿನ್ ಆಗಿ.

ಮೊದಲ ಕ್ರಮವೆಂದರೆ ನೀವು ನಿಮ್ಮ ಗೂಗಲ್ ಖಾತೆಗೆ ಲಾಗಿನ್ ಆಗುವುದು. ಇದನ್ನು ನೀವು ಗೂಗಲ್ ಕ್ರೋಮ್ ಅಥವಾ ಯಾವುದೇ ಬ್ರೌಸರಿನಲ್ಲಿ ಮಾಡಬಹುದು.

ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮಗಳನ್ನು ಸೇರಿಸಲು ಐದು ಸರಳ ಕ್ರಮಗಳು.

ಗೂಗಲ್ ಕ್ಯಾಲೆಂಡರ್ ಗೆ ಹೋಗಿ.

ಬಲ ಮೇಲ್ತುದಿಯಲ್ಲಿರುವ ಚೌಕಾಕಾರದ ಪೆಟ್ಟಿಗೆಗಳ ಮೇಲೆ ಕ್ಲಿಕ್ಕಿಸಿ ಗೂಗಲ್ ಕ್ಯಾಲೆಂಡರ್ ಚಿಹ್ನೆಯ ಮೇಲೆ ಕ್ಲಿಕ್ಕಿಸಿ.

ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮಗಳನ್ನು ಸೇರಿಸಲು ಐದು ಸರಳ ಕ್ರಮಗಳು.

ಕಾರ್ಯಕ್ರಮವನ್ನು ಗುರುತು ಮಾಡಿ.

ಎಡ ಮೇಲ್ತುದಿಯಲ್ಲಿರುವ ಕ್ರಿಯೇಟ್ ಬಟನ್ ಮೇಲೆ ಕ್ಲಿಕ್ಕಸಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮಗಳನ್ನು ಸೇರಿಸಲು ಐದು ಸರಳ ಕ್ರಮಗಳು.

ಕಾರ್ಯಕ್ರಮದ ದಿನ, ಸಮಯವನ್ನು ಬರೆಯಿರಿ.

ಈಗ ಬರುವ ಮೆನುವಿನಲ್ಲಿ ನೀವು ಕಾರ್ಯಕ್ರಮದ ಹೆಸರು, ದಿನಾಂಕ, ವಿವರಣೆಯನ್ನು ಸಂಕ್ಷಿಪ್ತವಾಗಿ ಸೇರಿಸಬಹುದು. ದೀರ್ಘ ವಿವರಣೆಯನ್ನೂ ಬರೆಯಲು ಅವಕಾಶವಿದೆ.

ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮಗಳನ್ನು ಸೇರಿಸಲು ಐದು ಸರಳ ಕ್ರಮಗಳು.

ಕಾರ್ಯಕ್ರಮವನ್ನು ಸೇವ್ ಮಾಡಿ.

ದಿನ, ಸಮಯ, ನೋಟ್ಸ್ ಇತ್ಯಾದಿಯನ್ನು ಟೈಪಿಸಿದ ಮೇಲೆ ಪುಟದ ಮೇಲ್ಭಾಗದಲ್ಲಿರುವ ಸೇವ್ ಬಟನ್ ಅನ್ನು ಕ್ಲಿಕ್ಕಿಸಿ. ಅಷ್ಟೇ!

ನಿಮ್ಮ ಕಂಪ್ಯೂಟರಿನಲ್ಲಿ ಗೂಗಲ್ ಕ್ಯಾಲೆಂಡರ್ ಕಾರ್ಯಕ್ರಮ ಹಾಕಿದರೆ ಅದು ನಿಮ್ಮ ಆ್ಯಂಡ್ರಾಯ್ಡ್ ಫೋನಿನಲ್ಲಿ ತನ್ನಿಂತಾನೇ ಸಿಂಕ್ ಆಗಿಬಿಡುತ್ತದೆ, ಆ್ಯಂಡ್ರಾಯ್ಡ್ ಫೋನಿನಲ್ಲಿ ನೀವು ಅದೇ ಗೂಗಲ್ ಖಾತೆ ಉಪಯೋಗಿಸುತ್ತಿರಬೇಕು ಮತ್ತು ಸಿಂಕ್ ಆಯ್ಕೆಯನ್ನು ಆನ್ ಮಾಡಿರಬೇಕು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Follow these steps to add events in Google calendar

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X