ಗೂಗಲ್ ಅಲ್ಲೋ: ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುವ ಐದು ಕಾರಣಗಳು.

|

ಗೂಗಲ್ ಅಲ್ಲೋ ಈಗ ತುಂಬಾ ಟ್ರೆಂಡಿಂಗ್ ಆಗುತ್ತಿರುವ ಮತ್ತು ಅತಿ ಹೆಚ್ಚು ಚರ್ಚೆಯಾಗುತ್ತಿರುವ ತಂತ್ರಾಂಶ. ಅದರ ಗೂಗಲ್ ಅಸಿಸ್ಟೆಂಟ್ ಸಪೋರ್ಟ್, ಇನ್ ಕಾಗ್ನಿಷಿಯೋ ಆಯ್ಕೆ, ಸ್ಮಾರ್ಟ್ ರಿಪ್ಲೈಗಳಷ್ಟೇ ಅಲ್ಲ ಆ್ಯಪ್ ನ ತೊಂದರೆಗಳ ಬಗ್ಗೆಯೂ ಚರ್ಚೆಯಾಗುತ್ತಿದೆ.

ಗೂಗಲ್ ಅಲ್ಲೋ: ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುವ ಐದು ಕಾರಣಗಳು.

ಗೂಗಲ್ಲಿನ ಹೊಸ ಚ್ಯಾಟ್ ಆ್ಯಪ್ ಅಲ್ಲೋ ಬಗ್ಗೆ ಹಲವು ಸುದ್ದಿಗಳಿದ್ದವು; ಇದು ವಾಟ್ಸಪ್ಪಿಗಿಂತ ಉತ್ತಮ ಎನ್ನುವ ಮಾತುಗಳೂ ಇವೆ.

ಓದಿರಿ:ಮಿಸ್ಡ್ ಕಾಲ್ ನೀಡಿ ಏರ್‌ಟೆಲ್‌ನಿಂದ ಉಚಿತ 4ಜಿ ಡೇಟಾ ಪಡೆಯುವುದು ಹೇಗೆ?

ಬಿಡುಗಡೆಯಾಗಿ ಇನ್ನೂ ಒಂದು ವಾರವಾಗಿಲ್ಲ, ಆಗಲೇ ಗೂಗಲ್ ಅಲ್ಲೋ ತಂತ್ರಾಂಶವನ್ನು ಸಾವಿರಾರು ಜನರು ಗೂಗಲ್ ಪ್ಲೇ ಸ್ಟೋರಿನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಲ್ಲೋ ಹೇಳಿಕೊಂಡಿದ್ದೇನು?

ಅಲ್ಲೋ ಹೇಳಿಕೊಂಡಿದ್ದೇನು?

ಗೂಗಲ್ ಐ/ಒ ಸಮ್ಮೇಳನದಲ್ಲಿ ಈ ವರ್ಷದಾರಂಭದಲ್ಲಿ ಘೋಷಿಸಿದಂತೆ, ಅಲ್ಲೋದಲ್ಲಿ ಅತ್ಯುತ್ತಮ ಖಾಸಗಿತನ ರಕ್ಷಣಾ ನೀತಿಗಳಿವೆ; ಬಳಕೆದಾರರ ಖಾಸಗಿತನವನ್ನು ರಕ್ಷಿಸುವುದೇ ಪ್ರಮುಖ ಧ್ಯೇಯ ಎಂದು ಅಧಿಕಾರಿಗಳು ಹೇಳಿಕೊಂಡಿದ್ದರು.

ಅಲ್ಲೋ ತಂತ್ರಾಂಶ ನಿಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡಿಕೊಂಡು ಸ್ಟೋರ್ ಮಾಡುತ್ತದೆ.

ಅಲ್ಲೋ ತಂತ್ರಾಂಶ ನಿಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡಿಕೊಂಡು ಸ್ಟೋರ್ ಮಾಡುತ್ತದೆ.

ಅಲ್ಲೋದಲ್ಲಿರುವ ಗೂಗಲ್ ವರ್ಚುಯಲ್ ಅಸಿಸ್ಟೆಂಟ್ ನಲ್ಲಿ ಖಾಸಗಿತನ ರಕ್ಷಿಸುವ ಲಕ್ಷಣಗಳಿಲ್ಲ, ಅದನ್ನು ಉಪಯೋಗಿಸದಿರುವುದು ಒಳ್ಳೆಯದು.

ನಿಮ್ಮ ಸ್ನೇಹಿತರೊಂದಿಗೆ ಇನ್ ಕಾಗ್ನಿಷಿಯೋ ಮೋಡ್ನಲ್ಲಿ ಚ್ಯಾಟ್ ಮಾಡಬಹುದಾದರೂ, ಅಲ್ಲೋ ನಿಮ್ಮ ಸಂದೇಶ ಮತ್ತು ಮೀಡಿಯಾವನ್ನು ಸ್ಟೋರ್ ಮಾಡುತ್ತದೆ, ನೀವಾಗೇ ಡಿಲೀಟ್ ಮಾಡುವವರೆಗೂ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರು ಬೇಕಾದರೂ ನಿಮ್ಮ ಮೆಸೇಜುಗಳನ್ನು ಓದಬಹುದು.

ಯಾರು ಬೇಕಾದರೂ ನಿಮ್ಮ ಮೆಸೇಜುಗಳನ್ನು ಓದಬಹುದು.

ಅಲ್ಲೋ ಆ್ಯಪ್ ಮೆಸೇಜುಗಳನ್ನು ರೆಕಾರ್ಡ್ ಮಾಡುವುದಷ್ಟೇ ಅಲ್ಲದೆ, ಕಾನೂನುಬದ್ಧವಾಗಿ ಯಾರಾದರೂ ಕೋರಿಕೊಂಡರೆ ಅದು ಎಲ್ಲರಿಗೂ ಸಿಗುವಂತೆ ಮಾಡಬಲ್ಲದು. ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಇದರಲ್ಲಿಲ್ಲ.

ನಿಮ್ಮ ಸಂದೇಶಗಳು ಮತ್ತು ನಿಮ್ಮ ವಿವರಗಳನ್ನು ದುರುಪಯೋಗವಾಗದಂತೆ ತಡೆಯುವುದು ಹೇಗೆ?

ಅಲ್ಲೋದಲ್ಲಿ ಖಾಸಗಿತನ ರಕ್ಷಿಸುವ ಸೌಕರ್ಯಗಳಿಲ್ಲದ ಕಾರಣ, ಬಳಕೆದಾರರು ಸಂದೇಶಗಳ ಮೇಲೆ ದೀರ್ಘವಾಗಿ ಒತ್ತಿ ಹಿಡಿದು ಆ ಸಂದೇಶಗಳನ್ನು ಡಿಲೀಟ್ ಮಾಡಿಬಿಡಬೇಕು.

ಅಲ್ಲೋದ ಇತರೆ ಲಕ್ಷಣಗಳು.

ಅಲ್ಲೋದ ಇತರೆ ಲಕ್ಷಣಗಳು.

ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಇನ್ ಕಾಗ್ನಿಷಿಯೋ ಆಯ್ಕೆಯನ್ನು ನಿರ್ವಹಿಸುವುದರ ಜೊತೆಗೆ, ಅಲ್ಲೋ ಹೊಸ ಮೆಸೇಜ್ ರಿಟೆನ್ಶನ್ ನೀತಿಯನ್ನೂ ಪರಿಚಯಿಸಿದೆ. ಮೆಸೇಜುಗಳು ತಾತ್ಕಾಲಿಕವಾಗಿ ಸ್ಟೋರ್ ಆಗುತ್ತವೆ, ಶಾಶ್ವತವಾಗಿಯಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಲ್ಲೋದಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಯಾಕಿಲ್ಲ?

ಅಲ್ಲೋದಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಯಾಕಿಲ್ಲ?

ಗೂಗಲ್ಲಿನ ಪ್ರಕಾರ, ಅಲ್ಲೋದಲ್ಲಿರುವ ಸ್ಮಾರ್ಟ್ ರಿಪ್ಲೈ ಫೀಚರ್ರನ್ನು ಉತ್ತಮಪಡಿಸುವ ಸಲುವಾಗಿ ಮೆಸೇಜುಗಳನ್ನು ರೆಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ.

ಬಹುತೇಕ ಮಿಷಿನ್ ಲರ್ನಿಂಗ್ ವ್ಯವಸ್ಥೆಯಲ್ಲಿರುವಂತೆ, ಸ್ಮಾರ್ಟ್ ರಿಪ್ಲೈ ಆಯ್ಕೆಯು ಹೆಚ್ಚೆಚ್ಚು ಡೇಟಾ ಲಭ್ಯವಿದ್ದರೆ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
What do we see first before even registering for an app and provide our personal details? security and privacy are the words that strike us, Allo surely lacks on these respects.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X