Subscribe to Gizbot

ಆರೋಗ್ಯ ಸಲಹೆಗಳಿಗಾಗಿ ಟಾಪ್‌ 5 ಆಂಡ್ರಾಯ್ಡ್‌ ಆಪ್‌ಗಳು

Written By:

ದಿನನಿತ್ಯದ ಹಲವಾರು ಕೆಲಸಗಳಿಗೆ ಇಂದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸುತ್ತೇವೆ. ಸ್ಮಾರ್ಟ್‌ಫೋನ್‌ಗಳು ಇಂದು ಪ್ರತಿಯೊಬ್ಬರಿಗೂ ಸಹ ಪರ್ಸನಲ್ ಅಸಿಸ್ಟಂಟ್‌ ಇದ್ದಹಾಗೆ. ಸ್ಮಾರ್ಟ್‌ಫೋನ್‌ ಅನ್ನು ಆರೋಗ್ಯ ಸಲಹೆಗಾರನಾಗಿಯೂ ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ. ಅದ್‌ ಹೇಗೆ ಸಾಧ್ಯ ಅಂತಿರಾ? ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ತಿಳಿಸುವ ಅತ್ಯುತ್ತಮ ಆಂಡ್ರಾಯ್ಡ್‌ ಹೆಲ್ತ್ (ಆರೋಗ್ಯ) ಅಪ್ಲಿಕೇಶನ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ ನಿಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು ಸಹ ಈ ಆಪ್‌ಗಳು ನೀಡುತ್ತದೆ. ಅಂದಹಾಗೆ ಅಪ್ಲಿಕೇಶನ್‌ಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಸ್‌ ಹೆಲ್ತ್‌ (S Health)

1

ಎಸ್‌ ಹೆಲ್ತ್‌ ಅಪ್ಲಿಕೇಶನ್‌ ಅನ್ನು ವಿಶೇಷವಾಗಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳಿಗೆಂದೇ ಅಭಿವೃದ್ದಿಪಡಿಸಲಾಗಿದೆ. ಅಲ್ಲದೇ ಇತರೆ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹ ಬಳಸಬಹುದಾಗಿದೆ. "ಎಸ್‌ ಹೆಲ್ತ್" ಅಪ್ಲಿಕೇಶನ್‌ ಅನ್ನು ದಿನನಿತ್ಯದ ವ್ಯಾಯಾಮ ತರಬೇತಿ ಸಲಹೆಗಳನ್ನು ಪಡೆಯಲು ಬಳಸಬಹುದಾಗಿದೆ. ಅಲ್ಲದೇ ವ್ಯಾಯಾಮಕ್ಕೆ ತಕ್ಕನಾಗಿ ಎಷ್ಟು ಆಹಾರ ಸೇವಿಸಬೇಕು ಎಂದು ಸಲಹೆ ನೀಡುತ್ತದೆ.

ಗೂಗಲ್‌ ಫಿಟ್‌ ಫಿಟ್‌ನೆಸ್‌ ಟ್ರ್ಯಾಕಿಂಗ್ (Google Fit Fitness Tracking)

2

ಅಧಕೃತ ಹೆಲ್ತ್‌ ಆಪ್‌ ಮತ್ತು ಆಂಡ್ರಾಯ್ಡ್ ಬಳಕೆದಾರರಲ್ಲಿ ಹೆಚ್ಚು ಪ್ರಖ್ಯಾತವಾದ ಆಪ್‌ ಎಂದರೆ "ಗೂಗಲ್‌ ಫಿಟ್‌ ಫಿಟ್‌ನೆಸ್‌ ಟ್ರ್ಯಾಕಿಂಗ್‌". ವಾಕಿಂಗ್, ರನ್ನಿಂಗ್, ಸೈಕ್ಲಿಂಗ್‌ ಅನ್ನು ಸುಲಭವಾಗಿ ಟ್ರ್ಯಾಕ್‌ ಮಾಡಬಹುದಾಗಿದೆ. ಕ್ಯಾಲೋರಿ, ವ್ಯಾಯಾಮದ ಸಮಯವನ್ನು ಸಹ ಟ್ರ್ಯಾಕ್‌ ಮಾಡಬಹುದಾಗಿದೆ.

ಫಿಟ್‌ಬಿಟ್‌ (Fitbit)

3

ಆರೋಗ್ಯದ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಇರುವ ಇನ್ನೊಂದು ಅಪ್ಲಿಕೇಶನ್‌ ಎಂದರೆ "ಫಿಟ್‌ಬಿಟ್‌". ಯೋಗ ವರ್ಕೌಟ್‌, ಆಹಾರದಿಂದ ಪಡೆದ ಕ್ಯಾಲೋರಿಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ.

1mg Health App For India

4

1mg Health App For India, ಅಪ್ಲಿಕೇಶನ್‌ ವಿಶೇಷ ಅಂದ್ರೆ ಕೇವಲ ಭಾರತೀಯರಿಗಾಗಿ ಮಾತ್ರ ವಿನ್ಯಾಸ ಮಾಡಿ ಅಭಿವೃದ್ದಿಪಡಿಸಲಾಗಿದೆ. ಈ ಅಪ್ಲಿಕೇಶನ್‌ನಿಂದ ಆರೋಗ್ಯದ ಸಮಸ್ಯೆ ಎದುರಾದಾಗ ಹತ್ತಿರ ಪ್ರದೇಶದ ಡಾಕ್ಟರ್‌ಗಳನ್ನು ಹುಡುಕಲು ಸಹಾಯಕವಾಗಿದೆ. ಈ ಸೇವೆ ಪಡೆಯಲು ಆಪ್‌ನಲ್ಲಿ ರಿಜಿಸ್ಟರ್‌ ಮಾಡಿಕೊಳ್ಳಬೇಕು.

 ಹೆಲ್ತ್‌ ಮತ್ತು ನ್ಯುಟ್ರಿಶನ್‌ ಗೈಡ್‌ ( Health and Nutrition Guide)

5

ಗೂಗಲ್‌ ಪ್ಲೇ ಸ್ಟೋರ್‌ ರೇಟಿಂಗ್‌ನಲ್ಲಿ 4.3 ಅಂಕಗಳನ್ನು ತೆಗೆದುಕೊಂಡ ಪ್ರಖ್ಯಾತ ಆಪ್‌ ಇದು. ಈ ಆಪ್‌ ಹೆಚ್ಚು ಹೆಲ್ತ್‌ ಮತ್ತು ನ್ಯುಟ್ರಿಶನ್‌ ಸಲಹೆಗಳನ್ನು ಹೊಂದಿದೆ. ಈ ಆಪ್‌ ಅನ್ನು 0.5 ಮಿಲಿಯನ್‌ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್‌ ಆಪ್‌ಗಳು

ಜಿ.ಫಾಸ್ಟ್‌: ಪ್ರಸ್ತುತ ಇಂಟರ್ನೆಟ್‌ಗಿಂತ 50 ಪಟ್ಟು ವೇಗದ ಇಂಟರ್ನೆಟ್

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Best Health Related Apps For Android. Readm more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot