Subscribe to Gizbot

ಬದಲಾಗಿದೆ ಕ್ರೋಮ್: ಹೊಸ ವಿನ್ಯಾಸ, ಹೊಸ ಆಯ್ಕೆಗಳು..!!

Written By:

ಅತೀ ಹೆಚ್ಚು ಇಂಟರ್ನೆಟ್ ಬಳಕೆದಾರರು ಮಾಹಿತಿಯನ್ನು ಹೂಡಲು ಬಳಸುವ ಬ್ರೌಸರ್ ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಗೂಗಲ್ ಒಡೆತನದ ಕ್ರೋಮ್ ಹೊಸ ಆವೃತ್ತಿಯೂ ಮಾರುಕಟ್ಟೆಗೆ ಬಂದಿದೆ. ವಿಂಡೋಸ್, ಮ್ಯಾಕ್ ಮತ್ತು ಲಿನೆಕ್ಸ್ ಬಳಕೆದಾರಿಗೆ ಈ ಹೊಸ ಕ್ರೋಮ್ ಬಳಕೆಗೆ ದೊರೆಯಲಿದೆ.

ಬದಲಾಗಿದೆ ಕ್ರೋಮ್: ಹೊಸ ವಿನ್ಯಾಸ, ಹೊಸ ಆಯ್ಕೆಗಳು..!!

ಓದಿರಿ: ಜಿಯೋ ಎಫೆಕ್ಟ್: ವೊಡಾಫೋನ್ ನಿಂದ 5 ರೂ.ಗೆ ಅನ್ಲಿಮಿಟೆಡ್ ಡೇಟಾ..!!!

ಕ್ರೋಮ್ ವಿನ್ಯಾಸವು ಬದಲಾಗಿದ್ದು, ಸೆಟ್ಟಿಂಗ್ಸ್ ಮೆನುವಿನಿಂದ ಹಿಡಿದು ಪ್ರತಿಯೊಂದು ಅಂಶಗಳು ಹೊಸದಾಗಿ ಕಾಣಿಸಿಕೊಂಡಿದೆ. ಸೆಕ್ಯೂರಿಟಿ ಮತ್ತಷ್ಟು ಗಟ್ಟಿಯಾಗಿದೆ. ಮೆಟಿರಿಯಲ್ ಡಿಸೈನಿಂದ ಕೂಡಿದ್ದು, ಸೆಟ್ಟಿಂಗ್ಸ್ ಮೆನು ಸಹ ಬದಲಾಗಿದೆ. ಬೆಸಿಕ್ಸ್ ಸೆಟ್ಟಿಂಗ್ಸ್ ನಡುವೆ ಇನ್ನಷ್ಟು ಹೊಸ ಅಂಶಗಳು ಸೇರಿಕೊಂಡಿವೆ.

ಈ ಹೊಸ ಮಾದರಿಯ ಕ್ರೋಮ್ ಕೆಲವೇ ದಿನಗಳಲ್ಲಿ ಬಳಕೆದಾರಿಗೆ ಮುಕ್ತವಾಗಲಿದ್ದು, ಬಳಕೆದಾರರು ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ. ಸದ್ಯ ಡೆಸ್ಕ್ ಟಾಪ್ ಮಾದರಿ ಮಾತ್ರವೇ ಬಿಡುಗಡೆಗೆ ತಯಾರಾಗಿದ್ದು, ಇದಕ್ಕೆ ಕ್ರೋಮ್ 59 ಎಂದು ಹೆಸರಿಡಲಾಗಿದೆ. ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರಿಗೂ ಆಪ್‌ಡೇಟ್ ದೊರೆಯಲಿದೆ.

ಬದಲಾಗಿದೆ ಕ್ರೋಮ್: ಹೊಸ ವಿನ್ಯಾಸ, ಹೊಸ ಆಯ್ಕೆಗಳು..!!

ಓದಿರಿ: GST ಜಾರಿಯಾದರೆ ಸ್ಮಾರ್ಟ್ಫೋನ್ ಬೆಲೆ ಏನಾಗಲಿದೆ..? DTH, ಟೆಲಿಕಾಂ ಮೇಲಾಗುವ ಪರಿಣಾಗಳೇನು.? ಇಲ್ಲಿದೇ ಫುಲ್ ಡಿಟೈಲ್

ವಿಂಡೋ ಬಳಕೆದಾರರು ಹೊಸ ಆವೃತ್ತಿಯನ್ನು ಆಪ್‌ಡೇಟ್ ಮಾಡಿಕೊಳ್ಳಲು ಹೆಲ್ಪ್ ಗೆ ಹೋಗಿ ಅಲ್ಲಿ ಆಬೋಟ್ ಕ್ರೋಮ್ ಆಯ್ಕೆಯಲ್ಲಿ ನೋಡಿದರೆ ಹೊಸ ಆವೃತ್ತಿಗೆ ಆಪ್‌ಡೇಟ್ ಅವಕಾಶ ದೊರೆಯಲಿದೆ. ಇದೇ ಮಾದರಿಯಲ್ಲಿ ಮಾಕ್ಸ್ ಮತ್ತು ಲಿನೆಕ್ಸ್ ಬಳಕೆದಾರರು ಆಪ್‌ಡೇಟ್ ಪಡೆಯಬಹುದಾಗಿದೆ.

Read more about:
English summary
Google’s Chromium team has now rolled out the stable version of Chrome 59 for its desktop users. It brings a lot of under-the-hood changes to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot