ಗೂಗಲ್ ಡುಒ ವೀಡಿಯೊ ಕೊಲಿಂಗ್ ಆಪ್ ಉಪಯೋಗಿಸಲು 5 ಒಲಿಸುವ ಕಾರಣಗಳು

By Prateeksha
|

ಈ ವರ್ಷ, ಕೊಂಪ್ಯುಟೆಕ್ಸ್ 2016 ರಲ್ಲಿ , ಗೂಗಲ್ ಹೊಸ ಡುಒ ಹೆಸರಿನ ವೀಡಿಯೊ ಕೊಲಿಂಗ್ ಆಪ್ ನೊಂದಿಗೆ ಬಂದಿತು. ಇದು ಆನ್ಡ್ರೊಯಿಡ್ ಮತ್ತು ಐಒಎಸ್ ಎರಡಲ್ಲೂ ಲಭ್ಯವಿದೆ. ಮೆಸೆಜಿಂಗ್ ಸರ್ವಿಸ್ ಎಲ್ಲೊ ಇನ್ನೂ ಲಭ್ಯವಾಗಬೇಕಾಗಿದೆ, ಗೂಗಲ್ ಡುಒ ಎರಡೂ ಪ್ಲಾಟ್‍ಫಾರ್ಮ್‍ಗಾಗಿ ಬಿಡುಗಡೆ ಮಾಡಲಾಗಿದೆ.

ಗೂಗಲ್ ಡುಒ ವೀಡಿಯೊ ಕೊಲಿಂಗ್ ಆಪ್ ಉಪಯೋಗಿಸಲು 5 ಒಲಿಸುವ ಕಾರಣಗಳು

ಆಪಲ್ ನ ಫೇಸ್‍ಟೈಮ್ ಗೆ ಗೂಗಲ್ ಡುಒ ಗೂಗಲ್ ನ ಉತ್ತರವಾಗಿದೆ. ಇದು ಆನ್ಡ್ರೊಯಿಡ್ ಫೋನ್ ಮತ್ತು ಐಫೋನ್ ಗಳ ನಡುವೆ ಸರಳವಾಗಿ ವೀಡಿಯೊ ಕಾಲಿಂಗ್ ಮಾಡುತ್ತದೆ. ಇದು ಆನ್ಡ್ರೊಯಿಡ್ ಮತ್ತು ಐಫೋನ್ ಬಳಕೆದಾರರು ಉಪಯೋಗಿಸಬಹುದಾದ ಪರಿಣಾಮಕಾರಿಯಾದ ಆಪ್.

ಓದಿರಿ: 'ಮಹಿಳೆಯರ ಸ್ತನಗಳ' ಗಾತ್ರ ಅಳತೆಗೆ ಜಪಾನಿಯರ ಸ್ಮಾರ್ಟ್‌ಫೋನ್‌ ಆಪ್‌!

ಈ ಗೂಗಲ್ ಆಪ್ ಅನ್ನು ಸ್ಮಾರ್ಟ್‍ಫೋನಿನಲ್ಲಿ ಉಚಿತವಾಗಿ ಡೌನ್‍ಲೋಡ್ ಮಾಡಬಹುದು, ಇದಕ್ಕೆ ಯಾವುದೇ ಕ್ಲಿಷ್ಟಕರವಾದ ರೆಜಿಸ್ಟ್ರೇಷನ್ ಪ್ರೊಸೆಸ್ ಬೇಕಾಗಿಲ್ಲಾ. ನೀವು ಮಾಡಬೇಕಾಗಿರುವುದಿಷ್ಟೆ ನಿಮ್ಮ ಮೊಬೈಲ್ ನಂಬರ್ ಅನ್ನು ರಿಜಿಸ್ಟರ್ ಮಾಡಿ ಮತ್ತು ವೀಡಿಯೊ ಕಾಲಿಂಗ್ ಆಪ್ ಅನ್ನು ಸರಳವಾಗಿ ಉಪಯೋಗಿಸಿ.

ಓದಿರಿ: ಲೀಕ್ಡ್ : ಕ್ಸಿಯೊಮಿ ಮಿ ನೋಟ್ 2 ನೋಡಲು ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7 ರಂತಿದೆ: ನಮಗೆ ಗೊತ್ತಿರುವಂತೆ 8 ವಿಷಯಗಳಿವೆ

ಕೆಳಗಿನ ಸ್ಲೈಡರ್ ನೋಡಿ ಗೂಗಲ್ ಡುಒ ಆಪ್ ನ ಮುಖ್ಯ ಫೀಚರ್‍ಗಳನ್ನು ತಿಳಿಯಲು. ತುಂಬಾ ಚೆನ್ನಾಗಿದೆ ಮತ್ತು ನಿಮಗೆ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವೀಡಿಯೊ ಚಾಟ್ ನಲ್ಲಿ ಮಾತನಾಡಿಸಬೇಕು ಎನ್ನುವಂತೆ ಮಾಡುತ್ತದೆ.

ಹೆಚ್ಚಿನ ಮಾಹಿತಿಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ಡುಒ ಗೆ ಗೂಗಲ್ ಅಕೌಂಟ್ ಬೇಕಿಲ್ಲಾ

ಡುಒ ಗೆ ಗೂಗಲ್ ಅಕೌಂಟ್ ಬೇಕಿಲ್ಲಾ

ನಿಮ್ಮ ಬಳಿ ಗೂಗಲ್ ಅಕೌಂಟ್ ಇಲ್ಲದಿದ್ದಲ್ಲಿ ಚಿಂತೆಯಿಲ್ಲಾ ಈ ಆಪ್ ಅದನ್ನು ಕೇಳುವುದಿಲ್ಲಾ. ನಿಮ್ಮ ಫೋನ್ ನಂಬರ್ ನೊಂದಿಗೆ ಸೈನಪ್ ಆದರೆ ಸಾಕು ನಿಮಗೆ ವೆರಿಫಿಕೇಷನ್ ಕೋಡ್ ಎಸ್‍ಎಮ್‍ಎಸ್ ಬರುತ್ತದೆ ಅಥೊಂಟಿಕೇಷನ್ ಪರೀಕ್ಷಿಸಲು.

ನೊಕ್ ನೊಕ್ ನೊಂದಿಗೆ ನೀವು ಪ್ರೀವ್ಯು ನೋಡಬಹುದು

ನೊಕ್ ನೊಕ್ ನೊಂದಿಗೆ ನೀವು ಪ್ರೀವ್ಯು ನೋಡಬಹುದು

ನೊಕ್ ನೊಕ್ ಫೀಚರ್ ಗೂಗಲ್ ಡುಒ ದಲ್ಲಿ ಅಪರೂಪದ ಫೀಚರ್ ಹೊಂದಿದೆ. ಈ ಫೀಚರ್ ನಿಂದ ನೀವು ಕಾಲರ್ ನ ಪ್ರಿವ್ಯು ಸಿಗುತ್ತದೆ ಬೇರೆ ಕಡೆಯಿಂದ ಇನ್ನೊಬ್ಬರು ನಿಮ್ಮನ್ನು ನೋಡುವ ಮುಂಚೆ. ನೀವು ಕಾಲ್ ಮಾಡುತ್ತಿದ್ದರೆ, ನಿಮಗೆ ನಿಮ್ಮ ವೀಡಿಯೊ ಆ ತುದಿಯ ಇನ್ನೊಬ್ಬರಿಗೆ ತೋರಿಸಲಾಗುತ್ತದೆ ಎಂದು ನಿಮಗೆ ನೋಟಿಸ್ ಬರುತ್ತದೆ. ಆಮೇಲೆ ಆ ಕಡೆ ನೀವು ಕಾಲ್ ಮಾಡುತ್ತಿರುವ ವ್ಯಕ್ತಿ ನೀವೆನು ಮಾಡುತ್ತಿದ್ದೀರಿ ಈ ಕ್ಷಣದಲ್ಲಿ ಎಂದು ನೋಡಬಹುದು. ಆನ್ಡ್ರೊಯಿಡ್ ಬಳಕೆದಾರರು ಲೊಕ್ ಸ್ಕ್ರೀನ್ ಮೇಲೆಯೇ ಕಾಲರ್ ನನ್ನು ಕಾಣಬಹುದು. ಆದರೆ ಐಒಎಸ್ ಬಳಕೆದಾರರಿಗೆ ಈ ಸೌಲಭ್ಯ ಸಿಗುವುದಿಲ್ಲಾ ಅವರು ಫೋನ್ ಅನ್‍ಲೊಕ್ ಮಾಡಿ ಆಪ್ ಅನ್ನು ಸಿದ್ಧ ಮಾಡಿ ಇಡಬೇಕು ಕಾಲರ್ ಅನ್ನು ನೋಡಲು ಉತ್ತರಿಸುವ ಮುಂಚೆ.

ಗೂಗಲ್ ಡುಒ ದಲ್ಲಿ ವ್ಯಕ್ತಿಯನ್ನು ಬ್ಲೊಕ್ ಮಾಡಬಹುದು

ಗೂಗಲ್ ಡುಒ ದಲ್ಲಿ ವ್ಯಕ್ತಿಯನ್ನು ಬ್ಲೊಕ್ ಮಾಡಬಹುದು

ಅದೃಷ್ಟಕ್ಕೆ, ಈ ಆಪ್ ನಲ್ಲಿ ಯಾವುದೇ ವ್ಯಕ್ತಿ ಕಾಲ್ ಮಾಡುವುದನ್ನು ತಡೆಯಬಹುದು ಬ್ಲೊಕ್ ಆಯ್ಕೆ ಇರುವುದರಿಂದ. ಅದೇನಿದ್ದರೂ, ಆ ವ್ಯಕ್ತಿಗೆ ನೀವು ಬ್ಲೊಕ್ ಮಾಡಿದ ವಿಷಯ ಗೊತ್ತಾಗುವುದಿಲ್ಲಾ ಮತ್ತು ಅವರು ಕಾಲ್ ಮಾಡಿದಾಗ ನಿರಂತರವಾಗಿ ರಿಂಗ್ ಕೇಳಿಸುತ್ತದೆ.

ಚಿಂತೆಯಿಲ್ಲಾ, ನೊಕ್ ನೊಕ್ ಡಿಸೇಬಲ್ ಮಾಡಬಹುದು

ಚಿಂತೆಯಿಲ್ಲಾ, ನೊಕ್ ನೊಕ್ ಡಿಸೇಬಲ್ ಮಾಡಬಹುದು

ನೊಕ್ ನೊಕ್ ಫೀಚರ್ ನಿಮಗೆ ಚಿಂತೆಗೀಡು ಮಾಡಬಹುದು ಏಕೆಂದರೆ ಆ ಕಡೆಯಿರುವ ವ್ಯಕ್ತಿ ಉತ್ತರಿಸುವ ಮುಂಚೆಯೆ ನೀವೇನು ಮಾಡುತ್ತಿದ್ದಿರಿ ಎಂದು ನೋಡಬಹುದಾಗಿದೆ. ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ವ್ಯಕ್ತಿಗಳಿಂದ ಮಾತ್ರ ನೊಕ್ ನೊಕ್ ರಿಸೀವ್ ಮಾಡಬಹುದು ಮತ್ತು ಕಾಲ್ ಮಾಡುವುದರಿಂದ ಬ್ಲಾಕ್ ಮಾಡಬಹುದೇನೊ ನಿಜ. ಅದೆಲ್ಲದಕ್ಕೂ ಮಿಗಿಲಾಗಿ, ನೊಕ್ ನೊಕ್ ನಿಮಗೆ ಇಷ್ಟವಾಗದಿದ್ದಲ್ಲಿ ಡುಒ ದ ಸೆಟ್ಟಿಂಗ್ಸ್ ಮೆನು ಗೆ ಹೋಗಿ ಡಿಸೇಬಲ್ ಮಾಡಬಹುದು. ಆದರೆ, ನೆನಪಿಡಿ ವ್ಯಕ್ತಿಗನುಸಾರವಾಗಿ ನೊಕ್ ನೊಕ್ ಡಿಸೆಬಲ್ ಮಾಡಲು ಬರುವುದಿಲ್ಲಾ. ನೊಕ್ ನೊಕ್ ಎಲ್ಲರಿಗಾಗಿ ಇಲ್ಲದಿದ್ದರೆ ಯಾರಿಗೂ ಇಲ್ಲಾ.

ವೀಡಿಯೊ ಕಾಲ್ಸ್ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್

ವೀಡಿಯೊ ಕಾಲ್ಸ್ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್

ಈ ಆಪ್ ವೆಬ್‍ಆರ್‍ಟಿಸಿ ಯ ಮೇಲೆ ಮಾಡಿರುವಂತಹುದು, ಇದೊಂದು ಸ್ಟಾಂಡರ್ಡ್ ವೀಡಿಯೊ, ವಾಯ್ಸ್ ಮತ್ತು ಪಿ2ಪಿ ಫೈಲ್ ಟ್ರಾನ್ಸ್‍ಫರ್ಸ್ ಅನ್ನು ಯಾವುದೇ ಸಾಫ್ಟ್‍ವೇರ್ ಅಥವಾ ಪ್ಲಗ್ ಇನ್ ಇಲ್ಲದೆ ಕಳುಹಿಸುವಂತೆ ಮಾಡುತ್ತದೆ. ನಿಮ್ಮ ವೀಡಿಯೊ ಚಾಟ್ಸ್ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್, ಹೀಗಾಗಿ ಯಾರಾದರು ಗುಪ್ತವಾಗಿ ನಿಮ್ಮನ್ನಾಗಲಿ ಇಲ್ಲಾ ನಿಮ್ಮ ಕಾಲ್ಸ್ ಗಳನ್ನಾಗಲಿ ಗಮನಿಸುತ್ತಿದ್ದಾರೆ ಎನ್ನುವ ಹೆದರಿಕೆ ಇಲ್ಲಾ. ಸರ್ಕಾರ ಕೇಳಿದರೂ ಕೂಡ ಗೂಗಲ್ ಕಾಲ್ಸ್ ಗಳ ಮಾಹಿತಿಯನ್ನು ಡಿಕ್ರಿಪ್ಟ್ ಮಾಡಲಾಗುವುದಿಲ್ಲಾ.

Most Read Articles
Best Mobiles in India

Read more about:
English summary
Google Duo is a new video calling app from Google that lets you call between iOS and Android. Take a look at the reasons to try this app and the features of the same.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more