ಲೀಕ್ಡ್ : ಕ್ಸಿಯೊಮಿ ಮಿ ನೋಟ್ 2 ನೋಡಲು ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7 ರಂತಿದೆ: ನಮಗೆ ಗೊತ್ತಿರುವಂತೆ 8 ವಿಷಯಗಳಿವೆ

By Prateeksha
|

ರೆಡ್ಮಿ ಪ್ರೊ ನ ಬಿಡುಗಡೆ ಗಾಳಿಮಾತಿಗೆ ವಿರಾಮ ನೀಡಿಲ್ಲಾ ಕ್ಸಿಯೊಮಿ ತಯಾರಕರಾದ ಚೈನಿಸ್ ಬಗ್ಗೆ ಮಾತು ಕೇಳಿ ಬರುತ್ತಿದೆ.

ಲೀಕ್ಡ್ : ಕ್ಸಿಯೊಮಿ ಮಿ ನೋಟ್ 2 ನೋಡಲು ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7 ರಂತಿದೆ:

ಕಳೆದ ವಾರ, ಕ್ಸಿಯೊಮಿ ಮಿ ನೋಟ್ 2 ಬಗೆಗಿನ ಮಾತು ಅಂತರ್ಜಾಲದಲ್ಲಿ ಹರಿದಾಡಿತ್ತು ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7 ನಂತೆ ಈ ಫೋನ್ ಕೂಡ ಡುಯಲ್ ಕರ್ವ್‍ಡ್ ಎಡ್ಜಸ್ ಮತ್ತು ಡುಯಲ್ ಕ್ಯಾಮೆರಾ ಸೆಟಪ್ ನೊಂದಿಗೆ ಬರಲಿದೆ ಎಂದು. ಆನ್‍ಲೈನ್ ನಲ್ಲಿ ಕಂಡಂತೆ ಫೋನ್ ನ ಫ್ರಂಟ್ ಪ್ಯಾನಲ್ ಕೂಡ ಡಯಲ್ ಕರ್ವ್‍ಡ್ ಎಡ್ಜ್ ಸ್ಕ್ರೀನ್ ಹೊಂದಿದೆ.

ಓದಿರಿ: ರಿಲಯನ್ಸ್ ಬಳಕೆದಾರರಿಗೆ ಆ್ಯಪ್ ಟು ಆ್ಯಪ್ ಕರೆ ಮಾಡುವ ಯೋಜನೆ.

ಈಗ, ಕ್ಸಿಯೊಮಿ ಮಿ ನೋಟ್ 2 ನ ಬಗ್ಗೆ ಹೊಸ ವಿಷಯಗಳು ಆನ್‍ಲೈನ್ ನಲ್ಲಿ ತೇಲುತ್ತಿವೆ. ಈ ಸುದ್ದಿಗಳು ಈ ಫೋನ್ ನನ್ನು ಪೂರ್ತಿ ವೈಭವಯುತವಾಗಿ ತೋರಿಸಿವೆ. ನೀವು ನೋಡಬಹುದು ಸ್ಲೋಪ್ಡ್ ರೇರ್ ಕವರ್, ಕರ್ವ್‍ಡ್ ಡಿಸ್ಪ್ಲೆ ಮತ್ತು ಮೆಟಲ್ ಗ್ಲಾಸ್ ಎಕ್ಸ್‍ಟಿರಿಯರ್ ನೋಟ್ 7 ನನ್ನೇ ಹೋಲುವಂತೆ ಕಾಣುತ್ತದೆ.

ಓದಿರಿ: ಉತ್ತಮ ಕ್ಯಾಮೆರಾ ಹೊಂದಿದ 15,000 ರುಪಾಯಿಗಳೊಳಗಿನ ಟಾಪ್ 10 ಸ್ಮಾರ್ಟ್ ಫೋನುಗಳು.
ಬರಲಿರುವ ಮಿ ನೋಟ್ 2 ಬಗ್ಗೆ ಹೆಚ್ಚು ತಿಳಿಯಲು ಈ ಕೆಳಗಿನದರ ಮೇಲೆ ಕಣ್ಣು ಹಾಯಿಸಿ.
ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ಡುಯಲ್ ಕ್ಯಾಮೆರಾ ಲೆನ್ಸ್ ಕಡೆ ನೋಡಿ

ಡುಯಲ್ ಕ್ಯಾಮೆರಾ ಲೆನ್ಸ್ ಕಡೆ ನೋಡಿ

ಆನ್‍ಲೈನ್ ನಲ್ಲಿ ಹರಿದಾಡಿದ ಒಂದೆರಡು ಸುದ್ದಿಯ ಪ್ರಕಾರ ಫೋನಿನ ಹಿಂದೆ ಡುಯಲ್ ಕ್ಯಾಮೆರಾ ಸೆಟಪ್ ಜೋಡಿಸಲಾಗಿದೆ. ಇದು ಚೀನಾ ಮೂಲದಿಂದ ಹೊರಟ ಹಳೆ ಮಾತುಗಳಿಗೆ ಇಂಬು ಕೊಟ್ಟಂತೆ.

ಕ್ಯುಎಚ್‍ಡಿ ಡಿಸ್ಪ್ಲೆ ಇರುವ ಸಂಭವ

ಕ್ಯುಎಚ್‍ಡಿ ಡಿಸ್ಪ್ಲೆ ಇರುವ ಸಂಭವ

ಸುದ್ದಿಗಳು ಕ್ಯುಎಚ್‍ಡಿ 2560*1440 ಪಿಕ್ಸೆಲ್ 5.7 ಇಂಚ್ ಡಿಸ್ಪ್ಲೆ ಇದೆ ಎಂದು ಹೇಳುತ್ತಿವೆ. ನೋಟ್ 2 ಸ್ಯಾಮ್ಸಂಗ್ ನಿಂದ ತಯಾರಿಸಲ್ಪಟ್ಟ ಅಮೊಲೆಡ್ ಪ್ಯಾನೆಲ್ ಉಪಯೋಗಿಸಲಿದೆ ಎನ್ನುವ ಸುದ್ದಿ ಇದೆ ಮತ್ತು ಇದನ್ನು ಸೌತ್ ಕೋರಿಯಾ ದ ತಂತ್ರಾಶ ವ್ಯಾಪಾರಿಯ ಹತ್ತಿರ ಹೈ-ಎಂಡ್ ಡಿವೈಜ್ ಆಗಿ ನೋಡಲಾಗಿದೆ.

ಮಿ ನೋಟ್ 2 ಹಾರ್ಡ್‍ವೇರ್ ಪ್ರೊವೇಸ್ಸ್ ಆಗಿರಲಿದೆ

ಮಿ ನೋಟ್ 2 ಹಾರ್ಡ್‍ವೇರ್ ಪ್ರೊವೇಸ್ಸ್ ಆಗಿರಲಿದೆ

ಕೇಳಿದ ಸುದ್ದಿಯ ಪ್ರಕಾರ ಹೋಗುವುದಾದರೆ ಕ್ಸಿಯೊಮಿ ಫೋನ್ ಸ್ನಾಪ್‍ಡ್ರಾಗನ್ 821 ಎಸ್‍ಒಸಿ ಅಳವಡಿಸಿಕೊಳ್ಳಬಹುದು. ಈ ಕ್ವ್ಯಾಲ್‍ಕೊಮ್ ನ ಹೊಸ ಪ್ರೊಸೆಸರ್ ಈಗ ಹೈ-ಎಂಡ್ ಫೋನಿನಲ್ಲಿ ಉಪಯೋಗಿಸುತ್ತಿರುವ ಸ್ನಾಪ್‍ಡ್ರಾಗನ್ 820 ಗಿಂತ ಶೇಕಡಾ 10 ರಷ್ಟು ವೇಗವಾಗಿದೆ. ಬರುತ್ತಾ ಈ ನೋಟ್2 ಪ್ರಭಾವಶಾಲಿ ಹಾರ್ಡ್‍ವೇರ್ ಆಗಲಿದೆ.

ಬೇಕಾಗುವಷ್ಟು ರ್ಯಾಮ್ ಮತ್ತು ಸ್ಟೋರೆಜ್ ಸ್ಪೇಸ್ ಇರುವುದು

ಬೇಕಾಗುವಷ್ಟು ರ್ಯಾಮ್ ಮತ್ತು ಸ್ಟೋರೆಜ್ ಸ್ಪೇಸ್ ಇರುವುದು

ಕೇಳಿರುವ ಪ್ರಕಾರ ನೋಟ್ 2 ವಿನಲ್ಲಿ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಡಿಫೊಲ್ಟ್ ಮೆಮೊರಿ ಕೆಪಾಸಿಟಿ ಫೀಚರ್ ಇರಬಹುದು. ಈ ಅಂಶದಿಂದಾಗಿ ಫೋನ್ ಎಂದಿಗು ಸ್ಟೊರೆಜ್ ಸಮಸ್ಯೆಯಿಂದ ಬಳಲುವುದಿಲ್ಲಾ ಮತ್ತು ಕಾರ್ಯಕ್ಷಮತೆಯಲ್ಲಿ ಯಾವ ಸಮಸ್ಯೆ ಒದಗುವುದಿಲ್ಲಾ.

ಡಿಜೈನ್ ಮನಸೂರೆಗೊಳ್ಳುವಂತಿದೆ

ಡಿಜೈನ್ ಮನಸೂರೆಗೊಳ್ಳುವಂತಿದೆ

ಮಿ ನೋಟ್2 ವಿನ ಡಿಜೈನ್ ಡುಯಲ್ ಕರ್ವ್‍ಡ್ ಎಡ್ಜ್ ಸ್ಕ್ರೀನ್ ನಿಂದಾಗಿ ಸುಂದರವಾಗಿ ಕಾಣಲಿದೆ. ಚಂದದ ಮತ್ತು ವರ್ತುಲದ ರೇರ್ ಪ್ಯಾನೆಲ್ ಹಾಗು ಗಾಜಿನೊಂದಿಗೆ ಪ್ರೀಮಿಯಮ್ ಮೆಟ್ಯಾಲಿಕ್ ಬಿಲ್ಡ್ ಮಿ 5 ರಲ್ಲಿರುವಂತೆ. ಜೊತೆಗೆ ಫಿಂಗರ್‍ಪ್ರಿಂಟ್ ಸ್ಕ್ಯಾನರ್ ಕೂಡ ಫೋನಿನಲ್ಲಿದೆ ಹೆಚ್ಚಿನ ಸುರಕ್ಷತೆಗಾಗಿ.

2 ವಿಧಗಳನ್ನು ಕಾಣಬಹುದೇ ?

2 ವಿಧಗಳನ್ನು ಕಾಣಬಹುದೇ ?

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7 ನಲ್ಲಿ ಫ್ಲಾಟ್ ಸ್ಕ್ರೀನ್ ವಿಧದೊಂದಿಗೆ ಬರುವ ಯೋಚನೆಯನ್ನು ಬಿಟ್ಟಿತು. ಕ್ಸಿಯೊಮಿ 2 ವಿಧಗಳೊಂದಿಗೆ ಬರುವುದೆಂಬ ಸುದ್ದಿ ಇದೆ. ಒಂದು ಫ್ಲಾಟ್ ಸ್ಕ್ರೀನ್ ಮತ್ತೊಂದು ಎರಡು ಕಡೆಗೆ ಕರ್ವ್‍ಡ್ ಎಡ್ಜ್ ನೊಂದಿಗೆ.

ಸ್ಪೆಸಿಫಿಕೇಷನ್‍ಗಳನ್ನು ನಿಖರಪಡಿಸುತ್ತದೆ ಬೆಂಚ್‍ಮಾರ್ಕ್ ಲಿಸ್ಟಿಂಗ್

ಸ್ಪೆಸಿಫಿಕೇಷನ್‍ಗಳನ್ನು ನಿಖರಪಡಿಸುತ್ತದೆ ಬೆಂಚ್‍ಮಾರ್ಕ್ ಲಿಸ್ಟಿಂಗ್

ಬೆಂಚ್‍ಮಾರ್ಕ್ ಲಿಸ್ಟ್ ಪ್ರಕಾರ ನೋಟ್ 2 6 ಜಿಬಿ ರ್ಯಾಮ್ ಮತ್ತು 64ಜಿಬಿ ಅಥವಾ 128 ಜಿಬಿ ಸ್ಟೊರೆಜ್ ಕೆಪಾಸಿಟಿ ಯೊಂದಿಗೆ ಬರಲಿದೆ. ಇದು ಸ್ನಾಪ್‍ಡ್ರಾಗನ್ 821 ಎಸ್‍ಒಸಿ ಮತ್ತು 3600 ಎಮ್‍ಎಎಚ್ ಬ್ಯಾಟರಿಯನ್ನು ಬಳಸಲಿದೆ ಹೆಚ್ಚಿನ ವೇಗದಲ್ಲಿ ಚಾರ್ಜ್ ಮಾಡುವ ಕ್ವಾಲ್ಕೊಮ್ ನ ಫೀಚರ್ ನ ಸಹಾಯ ಪಡೆದು.

ಮಿ ನೋಟ್2 ಗ್ರಾಹಕರನ್ನು ಮೆಚ್ಚಿಸಬಹುದೇ ?

ಮಿ ನೋಟ್2 ಗ್ರಾಹಕರನ್ನು ಮೆಚ್ಚಿಸಬಹುದೇ ?

ಕ್ಸಿಯೊಮಿ ತನ್ನ ಕಡಿಮೆ ದರಕ್ಕೆ ಹೆಸರುವಾಸಿ. ಕೇಳಿರುವ ಹಾಗೆ ನೋಟ್2 ನ ಬೆಲೆ ಬಹುಶಃ 25000 ರೂ. ( ಅಂದಾಜು 2,499 ಯುಆನ್)ಗಳಷ್ಟು ಇರಬಹುದು. ಈ ರೀತಿ ಇದ್ದರೆ, ನೋಟ್ 2 ಖಂಡಿತವಾಗಿಯೂ ಒಂದೊಳ್ಳೆ ಫೋನ್ ಆಗಲಿದೆ ಕ್ಸಿಯೊಮಿ ಪ್ರೀಯರಿಗೆ.

Best Mobiles in India

English summary
Xiaomi Mi Note 2 is all set to be launched in early September and the device is alleged to come with a dual curved edge display as in the Samsung Galaxy Note 7. Take a look at the fresh set of renders of the smartphone that have been leaked lately.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X