Subscribe to Gizbot

ಹೈಕ್ ಮೆಸೆಂಜರ್ ನಲ್ಲಿ ಈಗ ವೀಡಿಯೊ ಕಾಲಿಂಗ್ ಸಾಧ್ಯ:

ವಾಟ್ಸಪ್ ಹೆಚ್ಚಿನ ನಿರೀಕ್ಷೆಯ ವೀಡಿಯೊ ಕಾಲಿಂಗ್ ಫೀಚರ್ ಅನ್ನು ಆಂಡ್ರೊಯಿಡ್ ಮತ್ತು ಐಒಎಸ್ ನಲ್ಲಿ ತಂದು ಒಂದು ದಿನ ವಾಗಿತ್ತಷ್ಟೆ ಅದರ ಸ್ಪರ್ಧಾಳು ಹೈಕ್ ಕೂಡ ಈ ಫೀಚರ್ ಅನ್ನು ತಂದಿತು.

ಹೈಕ್ ಮೆಸೆಂಜರ್ ನಲ್ಲಿ ಈಗ ವೀಡಿಯೊ ಕಾಲಿಂಗ್ ಸಾಧ್ಯ:

ನಾವು ಸುಲಭವಾಗಿ ಹೇಳಬಹುದು ಈ ವಿಷಯದಲ್ಲಿ ಹೈಕ್ ಮುಂದೊಡುತ್ತಿದೆ. ಏಕೆ ಹೇಳುತ್ತಿದ್ದೇವೆಂದರೆ ಈಗ ವಾಟ್ಸಪ್ ವೀಡಿಯೊ ಕಾಲಿಂಗ್ ಬೀಟಾ ಟೆಸ್ಟರ್ಸ್ ಗೆ ಮಾತ್ರ ಲಭ್ಯವಿದೆ ಆದರೆ ಹೈಕ್ ಈಗಾಗಲೆ ಟೆಸ್ಟಿಂಗ್ ಹಂತವನ್ನು ದಾಟಿದೆ.

ಓದಿರಿ: ಏರ್‌ಟೆಲ್‌ ಬಳಕೆದಾರರು ಪ್ರತಿ ತಿಂಗಳು 5GB ಉಚಿತ ಡಾಟಾ ಪಡೆಯುವುದು ಹೇಗೆ?

ಈ ಬಾರಿ ಹೈಕ್ ಮೆಸೆಂಜರ್ ವೀಡಿಯೊ ಕಾಲಿಂಗ್ ಫೀಚರ್ ಅನ್ನು ಎಲ್ಲಾ ಬಳಕೆದಾರರಿಗಾಗಿ ಬಿಡುಗಡೆಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್ ನಿಂದ ಹೈಕ್ ಈ ಫೀಚರ್ ಅನ್ನು ಟೆಸ್ಟ್ ಮಾಡುತ್ತಿತ್ತು ಆಯ್ದ ಗುಂಪಿನೊಳಗೆ.

ಹೈಕ್ ಮೆಸೆಂಜರ್ ನಲ್ಲಿ ಈಗ ವೀಡಿಯೊ ಕಾಲಿಂಗ್ ಸಾಧ್ಯ:

ಭಾರತೀಯ ಐಎಮ್ ಕಂಪನಿ ಈ ಫೀಚರ್ ಅನ್ನು ಎಲ್ಲಾ ನೆಟ್‍ವರ್ಕ್ ಗಳ ಮೇಲೆ ಪರೀಕ್ಷಿಸಿದೆ 2ಜಿ ನೆಟ್‍ವರ್ಕ್ ಸೇರಿಸಿ. ಈಗ ಸಧ್ಯಕ್ಕೆ ಆಂಡ್ರೊಯಿಡ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಐಒಎಸ್ ನಲ್ಲಿ ಕೂಡ ಈ ಫೀಚರ್ ಆದಷ್ಟು ಬೇಗನೆ ಬರಲಿದೆ.

ಓದಿರಿ: ಬಿಎಸ್‌ಎನ್‌ಎಲ್‌ನಿಂದ ಉಚಿತ ಕರೆ ಆಫರ್: ತಿಳಿಯಲೇಬೇಕಾದ 5 ಅಂಶಗಳು

ಈ ವೀಡಿಯೊ ಕಾಲಿಂಗ್ ಫೀಚರ್ ಅನ್ನು ಆಂಡ್ರೊಯಿಡ್ ಬಳಕೆದಾರರು ಬಳಸಲು ಮಾಡಬೇಕಾಗಿರುವುದಿಷ್ಟು

ಹೆಜ್ಜೆ 1: ಅಪ್‍ಡೇಟೆಡ್ ಹೈಕ್ ಮೆಸೆಂಜರ್ ಡೌನ್‍ಲೊಡ್ ಮಾಡಿ ಅಥವಾ ಮೊಬೈಲ್ ನಲ್ಲಿ ಈಗಾಗಲೆ ಇರುವ ಹೈಕ್ ಮೆಸೆಂಜರ್ ಅಪ್‍ಡೇಟ್ ಮಾಡಿ.

ಹೆಜ್ಜೆ 2: ಯಾವ ಗೆಳೆಯರೊಂದಿಗೆ ಮಾತನಾಡಿಸಲು ಇಷ್ಟ ಪಡುವಿರೊ ಅವರ ಚಾಟ್ ಥ್ರೆಡ್ ಆಯ್ಕೆ ಮಾಡಿ.

ಹೆಜ್ಜೆ 3: ಮೇಲೆ ಬಲಗಡೆ ಇರುವ ಕಾಲ್ ಬಟನ್ ಒತ್ತಿ

ಹೆಜ್ಜೆ 4: ವಾಯಸ್ ಅಥವಾ ವೀಡಿಯೊ ಆಯ್ಕೆ ಮಾಡಲು ಕೇಳಲಾಗುತ್ತದೆ. ವೀಡಿಯೊ ಆಯ್ಕೆ ಮಾಡಿ ಅಷ್ಟೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
India's first homegrown messaging app Hike Messenger has launched video calling feature for Android users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot