Subscribe to Gizbot

ವಾಟ್ಸಾಪ್‌ನಲ್ಲಿ ಇತರರಿಗೆ ಹಣ ಸೆಂಡ್ ಮಾಡುವುದು ಹೇಗೆ?

Written By:

ಫ್ರೀಚಾರ್ಜ್(FreeCharge), ಪ್ರಖ್ಯಾತ ಮೊಬೈಲ್‌ನಲ್ಲಿ ಹಣ ಪಾವತಿ(Mobile Payments) ಮಾಡುವ ಅಪ್ಲಿಕೇಶನ್‌. ಅತಿ ಸರಳವಾಗಿ ಮೊಬೈಲ್‌ಗೆ ಆನ್‌ಲೈನ್‌ ರಿಚಾರ್ಜ್‌ ಮಾಡಿಕೊಳ್ಳುವ ಆಂಡ್ರಾಯ್ಡ್‌ ಅಪ್ಲಿಕೇಶನ್‌. ಅಲ್ಲದೇ ಫ್ರೀಚಾರ್ಜ್(FreeCharge) ಇತ್ತೀಚೆಗೆ ವಾಟ್ಸಾಪ್‌ ಬಳಸಿಕೊಂಡು ಹಣ ಸೆಂಡ್ ಮಾಡುವ, ಸ್ವೀಕರಿಸುವ ಮತ್ತು ರಿಚಾರ್ಜ್‌ ಹಣ ವಿನಂತಿಸುವ ಫೀಚರ್ ಅನ್ನು ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಅಭಿವೃದ್ದಿಪಡಿಸಿದೆ.

24 ಗಂಟೆಗಳಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡಿದ್ದಾರೆ ಚೆಕ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಇತರರಿಗೆ ಹಣ ಸೆಂಡ್ ಮಾಡುವುದು ಹೇಗೆ?

'ವಾಟ್ಸಾಪ್'ನಲ್ಲಿ, ಫ್ರೀಚಾರ್ಜ್(FreeCharge) ಒಂದು ವಿಶೇಷ ಫೀಚರ್ ಆಗಿದ್ದು "ಫ್ರೀಚಾರ್ಜ್(FreeCharge)" ಆಂಡ್ರಾಯ್ಡ್‌ ಅಪ್ಲಿಕೇಶನ್‌ ಮತ್ತು ವಾಟ್ಸಾಪ್‌ ಬಳಸುವ ಬಳಕೆದಾರರು ಪ್ರಾಥಮಿಕವಾಗಿ ತಮ್ಮ ವಾಟ್ಸಾಪ್‌ ಸಂಪರ್ಕಗಳಿಗೆ ಹಣ ಶೇರ್‌ ಮಾಡಬಹುದಾಗಿದೆ. ವಾಟ್ಸಾಪ್‌ ಬಳಸಿಕೊಂಡು ಹಣ ಶೇರ್‌ ಮಾಡುವುದು, ಸ್ವೀಕರಿಸುವುದು, ವಿನಂತಿಸುವುದು ಹೇಗೆ ಎಂದು ಲೇಖನ ಓದಿ ತಿಳಿಯಿರಿ.

ವಾಟ್ಸಾಪ್‌ನಲ್ಲಿ ಇತರರಿಗೆ ಹಣ ಸೆಂಡ್ ಮಾಡುವುದು ಹೇಗೆ?

ಫ್ರೀರೀಚಾರ್ಜ್‌ ಆಪ್‌ ಇನ್‌ಸ್ಟಾಲ್ ಮಾಡಿ
ವಾಟ್ಸಾಪ್‌ ಮುಖಾಂತರ ಹಣ ಸೆಂಡ್‌ ಮಾಡಲು ಮೊದಲಿಗೆ ಫ್ರೀರೀಚಾರ್ಜ್‌ ಆಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ನಂತರ ಮೊಬೈಲ್‌ ನಂಬರ್ ಬಳಸಿ ಫ್ರೀರೀಚಾರ್ಜ್ ಆಪ್‌ಗೆ ಸೈನಪ್‌ ಆಗಿರಿ.

ವಾಟ್ಸಾಪ್‌ನಲ್ಲಿ ಇತರರಿಗೆ ಹಣ ಸೆಂಡ್ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಫ್ರೀರೀಚಾರ್ಜ್ ಫೀಚರ್‌ ಎನೇಬಲ್‌ ಮಾಡಿ, ನಂತರ ವಾಟ್ಸಾಪ್ ಓಪನ್ ಮಾಡಿ

ವಾಟ್ಸಾಪ್‌ನಲ್ಲಿ ಇತರರಿಗೆ ಹಣ ಸೆಂಡ್ ಮಾಡುವುದು ಹೇಗೆ?

ಫ್ರೀಚಾರ್ಜ್‌ ಮೂಲಕ ನೀವು ಸೆಂಡ್‌ ಮಾಡಬೇಕು ಎಂದುಕೊಂಡಿರುವ ಹಣವನ್ನು ಟೈಪ್‌ ಮಾಡಿ ನಂತರ ನೀವು ಸೆಂಡ್‌ ಮಾಡಬೇಕೋ, ಸ್ವೀಕರಿಸಬೇಕೋ, ವಿನಂತಿಸಬೇಕೋ ಎಂಬ ಫೀಚರ್‌ ಅನ್ನು ಆಯ್ಕೆ ಮಾಡಿ.

ಉದಾಹರಣೆಗೆ: ವಾಟ್ಸಾಪ್‌ ಮೂಲಕ ಯಾರಿಗಾದರೂ ರೂ. 500 ರೀಚಾರ್ಜ್ ಹಣ ಕಳುಹಿಸಬೇಕು ಎಂದರೆ ವಾಟ್ಸಾಪ್‌ನಲ್ಲಿ ಅವರ ಕಾಂಟ್ಯಾಕ್ಟ್‌ ಚಾಟ್‌ ಓಪನ್‌ ಮಾಡಿ 500FC ಎಂದು ಟೈಪಿಸಿ ಟೆಕ್ಸ್ಟ್‌ ಅನ್ನು ಸೆಂಡ್‌ ಮಾಡಿ. ತಕ್ಷಣ ಫ್ರೀಚಾರ್ಜ್‌ ಆಪ್‌ ನಿಮಗೆ Send, reguest or recharge ಆಯ್ಕೆಗಳನ್ನು ತೋರಿಸುತ್ತದೆ. ಆಗ Send ಅನ್ನು ಟ್ಯಾಪ್‌ ಮಾಡಿ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

 

English summary
How to Send Money on WhatsApp: Check Out. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot