ಅಪ್ ಡೇಟೆಡ್ ಪೋಕೆಮೊನ್ ಗೋನಲ್ಲಿರುವ ಆರು ಹೊಸ ವಿಶಿಷ್ಟತೆಗಳು

|

ಕಳೆದೊಂದು ತಿಂಗಳಿನಿಂದ ಪೋಕೆಮೊನ್ ಗೋ ಆಟವು ಲಕ್ಷಾಂತರ ಜನರನ್ನು ಪ್ರಪಂಚದಾದ್ಯಂತ ತನ್ನತ್ತ ಸೆಳೆದುಕೊಂಡಿದೆ ಎಂದರದು ಉತ್ಪ್ರೇಕ್ಷೆಯಲ್ಲ. ಹಾಗಿದ್ದರೂ, ವಾರದಿಂದೀಚೆಗೆ ಹಲವು ಕಾರಣಗಳಿಂದಾಗಿ ಈ ರಿಯಾಲಿಟಿ ಆಟದ ಜನಪ್ರಿಯತೆ ಕಡಿಮೆಯಾಗಲಾರಂಭಿಸಿತ್ತು.

ಅಪ್ ಡೇಟೆಡ್ ಪೋಕೆಮೊನ್ ಗೋನಲ್ಲಿರುವ ಆರು ಹೊಸ ವಿಶಿಷ್ಟತೆಗಳು

ಕೆಲವು ದಿನಗಳ ನಂತರ ಆಟವೊಂದರ ಜನಪ್ರಿಯತೆ ಕಡಿಮೆಯಾಗುವುದು ಅಚ್ಚರಿಯ ವಿಷಯವೇನಲ್ಲ. ಆದರೆ ಪೋಕೆಮೊನ್ ಗೋ ಆಟದ ಜನಪ್ರಿಯತೆ ಕಡಿಮೆಯಾಗುವುದಕ್ಕೆ ಕೆಲವು ಗಂಭೀರ ಕಾರಣಗಳಿವೆ.

ಓದಿರಿ: ಬ್ಲಾಕ್ ಆದ ವೆಬ್‌ಸೈಟ್ ಪ್ರವೇಶಿಸುವುದು ಹೇಗೆ?

ಇದರ ಅರಿವು ನಿಯಾಂಟಿಕ್ ಗೂ ಆಗಿರುವಂತಿದೆ, ಆಗಾಗಿಯೇ ಪೋಕೆಮೊನ್ ಗೋದ ಅಪ್ ಡೇಟೆಡ್ ಆವೃತ್ತಿಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈಗ ಆಟದಲ್ಲಿ, ಹತ್ತಿರದ ಪೋಕೆಮೊನ್ ಗಳನ್ನು ಹುಡುಕಲು ಹೊಸ ವಿಧಾನಗಳನ್ನು ಅಳವಡಿಸಲಾಗಿದೆ. ಈ ವಿಧಾನವನ್ನು 'ಸೈಟಿಂಗ್ಸ್’ ಎಂದು ಕರೆಯಲಾಗಿದೆ. ಸದ್ಯಕ್ಕೆ 'ಸೈಟಿಂಗ್ಸ್’ ಪರೀಕ್ಷೆಯಲ್ಲಿದೆ ಮತ್ತದು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ.

ಓದಿರಿ: ವಿಂಡೋಸ್ ವೈಫೈ ಪಾಸ್‌ವರ್ಡ್ ಮರುಪಡೆದುಕೊಳ್ಳುವುದು ಹೇಗೆ?

ಪೋಕೆಮೊನ್ ನ ಈ ಹೊಸ 'ಸೈಟಿಂಗ್ಸ್’ ವಿಶಿಷ್ಟತೆ ಮತ್ತು ಅಪ್ ಡೇಟಿನಲ್ಲಿರುವ ಇನ್ನಿತರೆ ವಿಶೇಷತೆಗಳ ಕಡೆಗೆ ಒಮ್ಮೆ ಗಮನಹರಿಸಿ.

ನಿಮ್ಮ ಬಳಿ ನಿರ್ದಿಷ್ಟ ಪೋಕೆಮೊನ್ ಇದ್ದಾಗ ತಿಳಿದುಕೊಳ್ಳಿ

ನಿಮ್ಮ ಬಳಿ ನಿರ್ದಿಷ್ಟ ಪೋಕೆಮೊನ್ ಇದ್ದಾಗ ತಿಳಿದುಕೊಳ್ಳಿ

ಹಳೆಯ ಹತ್ತಿರದ ಟ್ರ್ಯಾಕರ್ ಮೇಲೆ ಅವಲಂಬಿಸದೆ ‘ಸೈಟಿಂಗ್ಸ್' ಕಾರ್ಯನಿರ್ವಹಿಸುತ್ತದೆ. ಈ ಅಪ್ ಡೇಟ್ ಮುಖಾಂತರ, ನಿರ್ದಿಷ್ಟ ಪೋಕೆಮೊನ್ ನಿಮ್ಮ ಹತ್ತಿರವಿದ್ದಾಗ ಪೋಕೆಸ್ಟಾಪ್ಸ್ ನಿಮಗೆ ಅದರ ಮಾಹಿತಿ ಕೊಡುತ್ತದೆ. ಪೋಕೆಸ್ಟಾಪಿನ ಚಿತ್ರವನ್ನು ತೋರಿಸಿ ನಿರ್ದಿಷ್ಟ ಪೋಕೆಮೊನ್ ಅನ್ನು ಪತ್ತೆ ಹಚ್ಚಲು ಸಹಾಯ ಮಾಡುವುದರ ಜೊತೆಗೆ ಈ ‘ಸೈಟಿಂಗ್ಸ್' ಆ ಪ್ರದೇಶಕ್ಕೆ ಹೋಗುವ ಹಾದಿಯನ್ನೂ ತೋರಿಸುತ್ತದೆ.

ನಕಲಿಗಳ ಬಗ್ಗೆ ಚಿಂತೆ ಬೇಡ

ನಕಲಿಗಳ ಬಗ್ಗೆ ಚಿಂತೆ ಬೇಡ

ಈ ಅಪ್ ಡೇಟ್ ನಿಂದಾಗಿ, ನಿಮ್ಮೆಲ್ಲ ಶಕ್ತಿಯನ್ನು ನಿರ್ದಿಷ್ಟ ಪೋಕೆಮೊನ್ ಅನ್ನು ಪತ್ತೆ ಹಚ್ಚಿ ಹಿಡಿಯಲು ಉಪಯೋಗಿಸಬಹುದು. ನಕಲಿ ಪೋಕೆಮೋನ್ ಗಳನ್ನು ಆ್ಯಪ್ ನಿರ್ವಹಿಸುತ್ತದೆ.

ಐ.ಒ.ಎಸ್ ಗೆ ಮತ್ತೆ ಬಂದ ಬ್ಯಾಟರಿ ಸೇವಿಂಗ್ ಮೋಡ್

ಐ.ಒ.ಎಸ್ ಗೆ ಮತ್ತೆ ಬಂದ ಬ್ಯಾಟರಿ ಸೇವಿಂಗ್ ಮೋಡ್

ಆಟವಾಡುವಾಗೆಲ್ಲ ಇಂಟರ್ನೆಟ್ ಮತ್ತು ಜಿ.ಪಿ.ಎಸ್ ಉಪಯೋಗಿಸುವ ಅವಶ್ಯಕತೆ ಇರುವುದರಿಂದ ಸ್ಮಾರ್ಟ್ ಫೋನಿನ ಬ್ಯಾಟರಿಯನ್ನು ಉಳಿಸುವ ಸಲುವಾಗಿ ಪೋಕೆಮೊನ್ ಗೋ ಆಟದಲ್ಲಿ ಬ್ಯಾಟರಿ ಸೇವಿಂಗ್ ಮೋಡ್ ಇದೆ. ಈ ಸೌಲಭ್ಯವನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗಿತ್ತು, ಮತ್ತೆ ಈಗ ಐ.ಒ.ಎಸ್ ನಲ್ಲಿ ಈ ಸೌಕರ್ಯ ಬಂದಿದೆ. ಕಂಪನಿ ಆಟದಲ್ಲಿದ್ದ ಕೆಲವು ಬಗ್ ಗಳನ್ನು ಸರಿಪಡಿಸಲು ಈ ಸೌಲಭ್ಯವನ್ನು ತೆಗೆದುಹಾಕಿತ್ತು.

ನಿಮ್ಮ ಯೂಸರ್ ನೇಮನ್ನು ಒಮ್ಮೆ ಬದಲಿಸಬಹುದು

ನಿಮ್ಮ ಯೂಸರ್ ನೇಮನ್ನು ಒಮ್ಮೆ ಬದಲಿಸಬಹುದು

ಪೋಕೆಮೊನ್ ಗೋನ ಹೊಸ ಅಪ್ ಡೇಟ್ ನಲ್ಲಿ ನಿಮ್ಮ ಯೂಸರ್ ನೇಮನ್ನು ಒಮ್ಮೆ ಬದಲಿಸಿಕೊಳ್ಳುವ ಸೌಕರ್ಯವಿದೆ. ಮೊದಲು ನೀವು ಕೊಟ್ಟ ಹೆಸರಿನ ಬಗ್ಗೆ ನಿಮಗೆ ತೃಪ್ತಿಯಿರದೇ ಹೋದಲ್ಲಿ ಇದನ್ನು ಉಪಯೋಗಿಸಬಹುದು.

ಕರ್ವ್ ಬಾಲಿನ ನಿಖರತೆ ಉತ್ತಮಗೊಂಡಿದೆ

ಕರ್ವ್ ಬಾಲಿನ ನಿಖರತೆ ಉತ್ತಮಗೊಂಡಿದೆ

ಪೋಕೆಮೊನ್ ಅನ್ನು ಹಿಡಿಯುವಾಗ ಎಸೆಯಲಾಗುವ ಕರ್ವ್ ಬಾಲಿನ ನಿಖರತೆಯನ್ನು ಹೊಸ ಅಪ್ ಡೇಟ್ ನಲ್ಲಿ ಉತ್ತಮಗೊಳಿಸಲಾಗಿದೆ.

ಥ್ರೋ ಚೆನ್ನಾಗಿ ಮಾಡುವ ಮೂಲಕ ಬಹುಮಾನಗಳನ್ನು ಪಡೆಯಿರಿ

ಥ್ರೋ ಚೆನ್ನಾಗಿ ಮಾಡುವ ಮೂಲಕ ಬಹುಮಾನಗಳನ್ನು ಪಡೆಯಿರಿ

ತಾತ್ಕಾಲಿಕ ಬಗ್ ಗಳನ್ನು ಸರಿಪಡಿಸುವುದಕ್ಕಾಗಿ ಈ ಸೌಲಭ್ಯವನ್ನು ತೆಗೆಯಲಾಗಿತ್ತು. ಈಗ ಮತ್ತೆ ಈ ಸೌಲಭ್ಯವನ್ನು ಪರಿಚಯಿಸಲಾಗಿದೆ, ‘ನೈಸ್' ‘ಗ್ರೇಟ್', ‘ಎಕ್ಸಲೆಂಟ್' ಎಸೆತಕ್ಕೆ ಈಗ ಬಹುಮಾನಗಳನ್ನು ಪಡೆದುಕೊಳ್ಳಿ.

Best Mobiles in India

English summary
Pokemon Go has received a new update that has brought 6 new and improved features to the game including the battery saver mode, new tracking feature, username change, rewards, and other enhancements. Take a look at the new features added to Pokemon Go from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X