ಎಂಐ ಪಿಸ್ಟನ್ ಫ್ರೆಶ್ ಹಿಯರ್ ಮಫ್ಸ್ ಮತ್ತು ಓವರ್ ಹಿಯರ್ ಹೆಡ್ ಫೋನುಗಳನ್ನು ಬಿಡುಗಡೆಗೊಳಿಸಿದ ಶಿಯೋಮಿ.

ಶಿಯೋಮಿ ಎಂಐ ಪಿಸ್ಟನ್ ಫ್ರೆಶ್ ಮತ್ತು ಎಂಐ ಹೆಡ್ ಫೋನುಗಳು ಬಿಡುಗಡೆಯಾಗಿದೆ.

|

ಗ್ರಾಹಕರ ಸಂಗೀತಾಸ್ವಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಯೋಮಿಯು ಅನೇಕ ಆಡಿಯೋ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ. ಕಂಪನಿಯು ಕಳೆದ ತಿಂಗಳು ಇನ್ ಹಿಯರ್ ವೈರ್ಡ್ ಹೆಡ್ ಫೋನಾದ ಪಿಸ್ಟನ್ 3 ಪ್ರೋ ಮತ್ತು ಎಂಐ ಸ್ಪೋರ್ಟ್ಸ್ ಬ್ಲೂಟೂಥ್ ಹೆಡ್ ಸೆಟ್ ಅನ್ನು ಬಿಡುಗಡೆಗೊಳಿಸಿತ್ತು. ಈಗ ಶಿಯೋಮಿಯು ಕೈಗೆಟುಕುವು ದರದಲ್ಲಿ ಎಂಐ ಪಿಸ್ಟನ್ ಫ್ರೆಶ್ ಹಿಯರ್ ಮಫ್ಸ್ ಮತ್ತು ಎಂಐ ಓವರ್ ಹಿಯರ್ ಹೆಡ್ ಫೋನುಗಳನ್ನು ಬಿಡುಗಡೆಗೊಳಿಸಿದೆ/

ಶಿಯೋಮಿ ಬಿಡುಗಡೆ ಮಾಡಿದೆ ನೂತನ ಹಿಯರ್ ಹೆಡ್ ಫೋನ್ ಮತ್ತು ಹಿಯರ್ ಮಫ್ಸ್.

ನೋಡಲು ಪಿಸ್ಟನ್ 3 ಪ್ರೋದಂತೆಯೇ ಇರುವ ಶಿಯೋಮಿ ಎಂಐ ಪಿಸ್ಟನ್ ಫ್ರೆಶ್ ನ ಬೆಲೆ ಸುಮಾರು 280 ರುಪಾಯಿ. ಇದು ಕಪ್ಪು, ಸಿಲ್ವರ್, ನೀಲಿ, ನೇರಳೆ ಮತ್ತು ಪಿಂಕ್ ಬಣ್ಣಗಳಲ್ಲಿ ಲಭ್ಯವಿದೆ. ಈ ಹಿಯರ್ ಫೋನಿನಲ್ಲಿರುವ ಮೆಟಲ್ ಚೇಂಬರ್ ಅನ್ನು ಅನೋಡೈಸ್ಡ್ ಅಲುಮಿನಿಯಂ ಅಲಾಯ್ ಉಪಯೋಗಿಸಿ ಸ್ಯಾಂಡ್ ಬ್ಲ್ಯಾಸ್ಟಿಂಗ್ ಪ್ರಕ್ರಿಯೆಯಿಂದ ತಯಾರಿಸಲಾಗಿದೆ. ಹಾಗಾಗಿ ಇದು ಗೀರು ನಿರೋಧಕವಾಗಿದೆ, ಬೆರಳ ಗುರುತುಗಳು ಇದರ ಮೇಲೆ ಮೂಡುವುದಿಲ್ಲ.

ಓದಿರಿ: 2016ರಲ್ಲಿ ಬಿಡುಗಡೆಯಾಗಿ ವಿಫಲಗೊಂಡ ಆ್ಯಕ್ಸೆಸರೀಸ್ ಗಳು.

ಮೂರನೇ ತಲೆಮಾರಿನ ಸಿಸ್ಟಮ್ ನಿಂದ ವಿನ್ಯಾಸಗೊಳಿಸಲಾಗಿರುವ ಶಿಯೋಮಿ ಎಂಐ ಪಿಸ್ಟನ್ ಫ್ರೆಶ್ ನಲ್ಲಿ ಮುಂದಿನ ಮತ್ತು ಹಿಂದಿನ ಚೇಂಬರ್ ಗಳಲ್ಲಿ ಪ್ರತ್ಯೇಕವಾಗಿ ಗಾಳಿ ಆಡುತ್ತದೆ. ಗಾಳಿ ಮುಂದಿನ ಚೇಂಬರ್ ಅನ್ನು ಪ್ರವೇಶಿಸಿ ಹಿಂದಿನ ಚೇಂಬರ್ ಮೂಲಕ ಹೊರ ಹೋಗುತ್ತದೆ. ಎಂಐ ಪಿಸ್ಟನ್ ಫ್ರೆಶ್ ನಲ್ಲಿರುವ ಡ್ಯಾಂಪಿಂಗ್ ವ್ಯವಸ್ಥೆಯು ಹಿಯರ್ ಫೋನಿನ ಟ್ರೈ ಬ್ಯಾಂಡ್ ಪರ್ಫಾರ್ಮೆನ್ಸ್ ಅನ್ನು ನಿಯಂತ್ರಿಸುತ್ತದೆ. ಎಂಐ ಪಿಸ್ಟನ್ ಫ್ರೆಶ್ ನಲ್ಲಿ ಒಂದು ಮೈಕ್ರೋಫೋನ್ ಮತ್ತು ಸಂಗೀತವನ್ನು ಪ್ಲೇ ಅಥವಾ ಪಾಸ್ ಮಾಡಲು ಮತ್ತು ಕರೆಗಳನ್ನು ಸ್ವೀಕರಿಸಲು ಒಂದು ಬಟನ್ ಇದೆ.

ಶಿಯೋಮಿ ಬಿಡುಗಡೆ ಮಾಡಿದೆ ನೂತನ ಹಿಯರ್ ಹೆಡ್ ಫೋನ್ ಮತ್ತು ಹಿಯರ್ ಮಫ್ಸ್.

ಕಳೆದ ವರ್ಷ ಶಿಯೋಮಿ ಬಿಡುಗಡೆಗೊಳಿಸಿದ ಹೆಡ್ ಫೋನುಗಳು ಕಣ್ಣಿಗೆ ರಾಚುವಂತಿದ್ದವು. ಅವುಗಳಿಗೆ ಹೋಲಿಸಿದರೆ ಈಗ ಬಿಡುಗಡೆಯಾಗಿರುವ ಎಂಐ ಹೆಡ್ ಫೋನುಗಳು ವಿನ್ಯಾಸ ಸರಳವಾಗಿದೆ, ಸುಂದರವಾಗಿದೆ. ಈ ಎಂಐ ಹೆಡ್ ಫೋನುಗಳಿಗೆ ಜಪಾನಿನ ಹೈ ರೆಸ್ ಆಡಿಯೋ ಗುಣಮಟ್ಟದ ಪ್ರಮಾಣವೂ ದೊರೆತಿದೆ. ಎಂಐ ಪಿಸ್ಟನ್ ಫ್ರೆಶ್ ನಂತೆಯೇ ಎಂಐ ಹೆಡ್ ಫೋನುಗಳಲ್ಲಿಯೂ ಮೈಕ್ರೋಫೋನ್ ಇದೆ, ಕಂಟ್ರೋಲರ್ ಇದೆ.

ಓದಿರಿ: ಉಚಿತವಾಗಿ ವಿಂಡೋಸ್ 10 ಆಪ್ಡೇಟ್ ಮಾಡಿಕೊಳ್ಳುವುದು ಹೇಗೆ....? ಇಲ್ಲಿದೆ ಮಾಹಿತಿ

ಪಾಲಿಕಾರ್ಬನೇಟ್ ಶೆಲ್ ನಿಂದ ಮಾಡಲಾಗಿರುವ ಎಂಐ ಹೆಡ್ ಫೋನುಗಳು ಬಿಳಿ, ಕಿತ್ತಳೆ ಮತ್ತು ಮಿಂಟ್ ಬಣ್ಣದಲ್ಲಿ ಲಭ್ಯವಿದೆ. ಇದರ ಬೆಲೆ ಸುಮಾರು 1,950 ರುಪಾಯಿ. ಸಿಲಿಕಾನ್ ನಿಂದ ಮಾಡಲಾಗಿರುವ ಹಿಯರ್ ಮಫ್ ಗಳ ಸುತ್ತ ಉತ್ತಮ ಗುಣಮಟ್ಟದ ಪಿಯು ಲೆದರ್ ಕವಚವಿದೆ. ಇದು ಗ್ರಾಹಕರಿಗೆ ಅನುಕೂಲಕರ, ಯಾವುದೇ ತೊಂದರೆಯಿಲ್ಲದೆ ಘಂಟೆಗಳ ಕಾಲ ಹಾಡುಗಳನ್ನು ಕೇಳಬಹುದಾಗಿದೆ.

ಶಿಯೋಮಿಯ ಈ ಹೆಡ್ ಫೋನುಗಳಲ್ಲಿ ಕ್ಲೋಸ್ಡ್ ಸೌಂಡ್ ಚೇಂಬರ್ ವಿನ್ಯಾಸವಿದೆ, ಈ ವಿನ್ಯಾಸವು ಹೊರಗಿನ ಸದ್ದುಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ. ಹೆಡ್ ಫೋನ್ ಒಳಗಿರುವ ಸ್ಪೀಕರುಗಳ ಇಂಪಿಡೆನ್ಸ್ 32 ohms ಗಳಷ್ಟಿದೆ, ಡ್ಯಾಂಪಿಂಗ್ ವ್ಯವಸ್ಥೆಯಿದೆ. ಇದರಿಂದಾಗಿ ಡಿಸ್ಟಾರ್ಶನ್ ಮಟ್ಟ ಕಡಿಮೆಯಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Xiaomi Mi Piston Fresh and Mi Headphones launched at an affordable price tag and various color variants.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X