Subscribe to Gizbot

ಟ್ವಿಟರ್ ಲುಕ್ ಬದಲಾಗಿದೆ ನೋಡಿದ್ರಾ..?

Written By:

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಆಪ್ ಬಳಕೆ ದಿನೇ ದಿನೇ ಹೆಚ್ಚಾಗುತ್ತಿರು ಹಿನ್ನಲೆಯಲ್ಲಿ ಟ್ವಿಟ್ಟರ್ ಇದೇ ಮೊದಲ ಬಾರಿಗೆ ಆಪ್ ಇಂಟರ್‌ಫೇಸ್‌ನಲ್ಲಿ ಭಾರಿ ಬದಲಾವಣೆಯನ್ನು ಮಾಡಿದೆ. ಹೊಸ ಆಯ್ಕೆಗಳನ್ನು ನೀಡುವುದರೊಂದಿಗೆ ಬಳಕೆದಾರರಿಗೆ ಉತ್ತಮ ಅನುಭವನ್ನು ನೀಡಲು ಮುಂದಾಗಿದೆ.

ಟ್ವಿಟರ್ ಲುಕ್ ಬದಲಾಗಿದೆ ನೋಡಿದ್ರಾ..?

ಓದಿರಿ: ಜಿಯೋ ಬಳಸದಿದ್ದರೂ ಎಲ್ಲರೂ ಅಂಬಾನಿಗೆ ಥ್ಯಾಂಕ್ಸ್ ಹೇಳಲೇಬೇಕು: ಯಾಕೆ ಗೊತ್ತಾ..?

ಈ ಹೊಸ ಆವೃತ್ತಿಯೂ ಡೆಸ್ಕ್‌ಟಾಪ್ ಮತ್ತು ಆಪ್ ಬಳಕೆದಾರರಿಬ್ಬರಿಗೂ ದೊರೆಯಲಿದೆ. ಹೊಸ ಮಾದರಿಯ ಟ್ವಿಟರ್ ನೋಡಲು ಮುದ್ದಾಗಿ ಕಾಣುತ್ತಿದ್ದು, ಲೈಕ್ , ರೀ ಟ್ವಿಟ್ ಮುಂತಾದ ಐಕಾನ್‌ಗಳು ಕೊಂಚ ಬದಲಾವಣೆಯನ್ನು ಕಂಡಿವೆ. ಆಪ್ ನಲ್ಲಿ ಬಳಕೆ ಮಾಡುವವರಿಗೆ ಹೆಚ್ಚಿನ ಮಟ್ಟದಲ್ಲಿ ಬದಲಾವಣೆಯ ಅರಿವಾಗಲಿದೆ.

ಅಲ್ಲದೇ ನಿಮ್ಮ ಫೋಟೋ ಸಹ ಚೌಕಕಾರದಲ್ಲಿ ಇದ್ದದ್ದು ವೃತ್ತಕಾರವಾಗಿ ಬಡಲಾಗಿದ್ದು, ಟ್ವಿಟ್‌ಗಳು ಸಹ ಚೌಕಕಾರದಿಂದ ವೃತ್ತಕಾರದ ಮೂಲೆಗಳನ್ನು ಹೊಂದಿದ್ದು, ಹೊಸ ಲುಕ್ ನಲ್ಲಿ ಮಿಂಚುತ್ತಿವೆ. ಈ ಆಪ್‌ಡೇಟ್ ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರರಿಗೆ ಮುಕ್ತವಾಗಿದೆ.

ಟ್ವಿಟರ್ ಲುಕ್ ಬದಲಾಗಿದೆ ನೋಡಿದ್ರಾ..?

ಓದಿರಿ: ಆಫ್ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೊದಲ ನೋಕಿಯಾ ಸ್ಮಾರ್ಟ್ಪೋನ್: ಆರಂಭಿಕ ಕೊಡಗೆ ಏನು...? ದೊರೆಯುವುದೆಲ್ಲಿ...?

ಈಗಾಗಲೇ ಟ್ವಿಟಿಗರು ಹೊಸ ಆವೃತ್ತಿಯಿಂದ ಖುಷಿಯಾಗಿದ್ದು, ದಿನೇ ದಿನೇ ಬದಲಾಗುತ್ತಿರುವ ಜಗತ್ತಿನಲ್ಲಿ ಟ್ಚಿಟರ್ ಸಹ ಬದಲಾಗಿರುವುದು ಸಂತಸವನ್ನು ತಂದಿದೆ. ಈ ಹೊಸ ವಿನ್ಯಾಸವೂ ಇನ್ನಷ್ಟು ಹೊಸ ಚಂದದಾರರನ್ನು ತನ್ನತ್ತ ಸೆಳೆಯುವಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗಿದೆ.

Read more about:
English summary
Twitter introduces new typography and outlined icons along with other new bunch of upgrades. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot