ಏಸಸ್ ಝೆನ್ ವಾಚ್ 3 ಹೇಗಿರುತ್ತದೆ ಗೊತ್ತೆ?

|

ಐ.ಎಫ್.ಎ 2016ರ ಟೆಕ್ ಪ್ರದರ್ಶನಕ್ಕೆ ಇನ್ನೂ ಕೆಲವೇ ವಾರಗಳು ಬಾಕಿ ಉಳಿದಿರುವಾಗ, ಪ್ರದರ್ಶನದಲ್ಲಿ ಬಿಡುಗಡೆಗೊಳ್ಳುವ ಸಾಧನಗಳ ಕುರಿತ ಗಾಳಿ ಸುದ್ದಿಗಳು, ಸೋರಿಕೆ ಮಾಹಿತಿಗಳು ಹೆಚ್ಚಾಗುತ್ತಿವೆ.

ಏಸಸ್ ಝೆನ್ ವಾಚ್ 3 ಹೇಗಿರುತ್ತದೆ ಗೊತ್ತೆ?

ಇತ್ತೀಚೆಗೆ, ಏಸಸ್ ಝೆನ್ ವಾಚ್ 3ರ ಸೋರಿಕೆಯಾದ ಚಿತ್ರಗಳ ಪ್ರಕಾರ ಈ ಹೊಸ ವಾಚ್ ದುಂಡಗಿನ ಡಯಲ್ ಹೊಂದಿರುತ್ತದೆ. ಇದು ನಿಜವಾದಲ್ಲಿ, ತೈವಾನಿನ ಕಂಪನಿಯಿಂದ ಹೊರಬರುವ ಮೊದಲ ದುಂಡಗಿನ ಸ್ಮಾರ್ಟ್ ವಾಚ್ ಇದಾಗಲಿದೆ.

ಓದಿರಿ: ಫೋನ್ ಭದ್ರತೆಯಲ್ಲಿ ಎತ್ತಿದ ಕೈ: ಹುವಾವೆ ಹೋನರ್ 7

ಚೀನಾದ ನ್ಯಾಷನಲ್ ಕಮ್ಯುನಿಕೇಷನ್ಸ್ ಕಮಿಷನ್(ಎನ್.ಸಿ.ಸಿ) ತಮ್ಮ ವೆಬ್ ಪುಟದಲ್ಲಿ ಏಸಸ್ ಝೆನ್ ವಾಚ್ 3ರ ಸೋರಿಕೆಯಾದ ಕೆಲವು ಚಿತ್ರಗಳನ್ನು ಹಾಕಿದೆ. ಈ ಸ್ಮಾರ್ಟ್ ವಾಚಿನಲ್ಲಿ ಸ್ಟೇನ್ ಲೆಸ್ ಸ್ಟೀಲ್ ಬಳಸಲಾಗಿದೆ.

ಓದಿರಿ: ಸ್ಮಾರ್ಟ್‌ಫೋನ್ ಪ್ರಿಯರೇ ಹುವಾವೆಯಲ್ಲಿದೆ ವಿಶಿಷ್ಟ ಕ್ಯಾಮೆರಾ ಲೆನ್ಸ್


ಎನ್.ಸಿ.ಸಿ ಸೋರಿಕೆ ಮಾಡಿರುವ ಏಸಸ್ ಝೆನ್ ವಾಚ್ 3ರ ಚಿತ್ರಗಳತ್ತ ಒಮ್ಮೆ ಕಣ್ಣಾಡಿಸಿ. ಬರ್ಲಿನ್ನಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ಐ.ಎಫ್.ಎ 2016ರಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್ ವಾಚಿನ ಬಗ್ಗೆ ವಿವರಗಳನ್ನು ತಿಳಿದುಕೊಳ್ಳಿ.

ಒಂದೇ ಕಡೆ ಮೂರು ಬಟನ್ನುಗಳು.

ಒಂದೇ ಕಡೆ ಮೂರು ಬಟನ್ನುಗಳು.

ಸೋರಿಕೆಯಾದ ಫೋಟೋಗಳ ಪ್ರಕಾರ, ಸ್ಮಾರ್ಟ್ ಫೋನಿನ ಒಂದು ಕಡೆ ಮೂರು ಬಟನ್ನುಗಳಿವೆ. ಸಾಧನದ ಹಿಂದೆ, ಚಾರ್ಜ್ ಮಾಡುವ ಪೋರ್ಟ್ ಇದೆ.

ಆ್ಯಂಡ್ರಾಯ್ಡ್ ವೇರ್ 2.0 ಇರುವ ಸಾಧ್ಯತೆ.

ಆ್ಯಂಡ್ರಾಯ್ಡ್ ವೇರ್ 2.0 ಇರುವ ಸಾಧ್ಯತೆ.

ಆ್ಯಂಡ್ರಾಯ್ಡ್ ವೇರ್ 2.0 ಬಂದು ಕೆಲವು ತಿಂಗಳುಗಳಾಗಿವೆ. ಏಸಸ್ ಝೆನ್ ವಾಚ್ 3ರಲ್ಲಿ ಈ ಹೊಸ ಸಾಫ್ಟ್ ವೇರ್ ಇರುವ ಸಾಧ್ಯತೆಗಳು ಅಧಿಕ. ದುಂಡಗಿನ ಪರದೆಯೊಂದಿರುವ ಸ್ಮಾರ್ಟ್ ವಾಚುಗಳಿಗಾಗಿಯೇ ಆ್ಯಂಡ್ರಾಯ್ಡ್ 2.0 ತಯಾರಿಸಲಾಗಿದೆ. ಯೂಸರ್ ಇಂಟರ್ ಫೇಸ್ ನಲ್ಲೂ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಸ್ಟೇನ್ ಲೆಸ್ ಸ್ಟೀಲ್ ದೇಹ

ಸ್ಟೇನ್ ಲೆಸ್ ಸ್ಟೀಲ್ ದೇಹ

ಏಸಸ್ಸಿನ ಈ ಸ್ಮಾರ್ಟ್ ವಾಚಿನಲ್ಲಿ ಸದೃಡ ಸ್ಟೇನ್ ಲೆಸ್ ಸ್ಟೀಲ್ ದೇಹವಿರುತ್ತದೆ ಎನ್ನಲಾಗಿದೆ. ಜೊತೆಗೆ 5V - 2A ಚಾರ್ಜರ್ ಇರುತ್ತದೆ.

ದುಂಡಗಿನ ಸ್ಮಾರ್ಟ್ ವಾಚ್ ನಿರ್ಮಾಣದತ್ತ ಏಸಸ್

ದುಂಡಗಿನ ಸ್ಮಾರ್ಟ್ ವಾಚ್ ನಿರ್ಮಾಣದತ್ತ ಏಸಸ್

ಈಗಾಗಲೇ ಮೊಟೊ 360, ಸ್ಯಾಮ್ಸಂಗ್ ಗೇರ್ ಎಸ್ 2 ಮತ್ತು ಎಲ್.ಜಿ ಜಿ ವಾಚ್ ಅರ್ಬೇನ್ ನಲ್ಲಿ ದುಂಡಗಿನ ಸ್ಮಾರ್ಟ್ ವಾಚುಗಳು ಲಭ್ಯವಿದೆ. ಏಸಸ್ ಕೂಡ ಇದೇ ಹಾದಿಯಲ್ಲಿ ನಡೆಯುತ್ತಿರುವಂತೆ ತೋರುತ್ತಿದೆ.

ವೈಫೈ ಮತ್ತು ಬ್ಲೂಟೂಥ್ ಸೌಲಭ್ಯದೊಂದಿಗೆ ಝೆನ್ ವಾಚ್ 3

ವೈಫೈ ಮತ್ತು ಬ್ಲೂಟೂಥ್ ಸೌಲಭ್ಯದೊಂದಿಗೆ ಝೆನ್ ವಾಚ್ 3

ಝೆನ್ ವಾಚ್ 3ರಲ್ಲಿ ಬ್ಲೂಟೂಥ್ 4.2 ಮತ್ತು ವೈಫೈ ಸೌಕರ್ಯಗಳಿರುವ ಸಾಧ್ಯತೆಗಳಿವೆ.

Best Mobiles in India

English summary
Asus ZenWatch 3 with a round shaped display has been leaked online via images. The device is rumored to arrive with Android Wear 2.0 platform, stainless steel build and more. Take a look at the photos of the smartwatch that were leaked from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X