ಕೆನಾನ್‌ನಿಂದ ಬಜೆಟ್‌ ದರದ ಹೊಸ DSLR ಕ್ಯಾಮೆರಾ ಲಾಂಚ್!

|

ಅತ್ಯುತ್ತಮ ಫೋಟೊ ಸೆರೆಹಿಡಿಯುವುದು ಒಂದು ಕಲೆ ಅದಕ್ಕೆ ಛಾಯಾಗ್ರಾಹಕರ ಆಸಕ್ತಿ ಜೊತೆಗೆ ಅತ್ಯುತ್ತಮ ಕ್ಯಾಮೆರಾ ಒಂದಿದ್ದರೇ ಪೋಟೊ ಅಧ್ಬುತವಾಗಿ ಮೂಡಿಬರಲು ಸಾಧ್ಯ. ಹೀಗಾಗಿ ಪ್ರಸ್ತುತ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳನ್ನು ಬಳೆಸುತ್ತಿದ್ದು, ಮಾರುಕಟ್ಟೆಯಲ್ಲಿ ಹಲವು ಮಾದರಿಯಗಳಲ್ಲಿ ಕ್ಯಾಮೆರಾಗಳು ಲಭ್ಯವಾಗುತ್ತಿವೆ. ಜನಪ್ರಿಯ ಕೆನಾನ್ ಕಂಪನಿಯ ಕ್ಯಾಮೆರಾಗಳು ಫೋಟೊಗ್ರಾಫಿ ಪ್ರಿಯರ ಮೊದಲ ಆಯ್ಕೆ.

ಕೆನಾನ್‌ನಿಂದ ಬಜೆಟ್‌ ದರದ ಹೊಸ DSLR ಕ್ಯಾಮೆರಾ ಲಾಂಚ್!

ಹೌದು, ಕೆನಾನ್ ಕಂಪನಿ ಹೊಸ ರೆಬಲ್ SL3 EOS 250D ಕ್ಯಾಮೆರಾ ಪ್ರದರ್ಶನಗೊಂಡಿದ್ದು, ಫೋಟೊಗ್ರಾಫಿ ಪ್ರಿಯರ ಗಮನ ಸೆಳೆದಿದೆ. ಅತ್ಯುತ್ತಮ ಮುಂದುವರಿದ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಕ್ಯಾಮೆರಾವು 3 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಟಚ್‌ಸ್ಕ್ರೀನ್ ಮಾನಿಟರ್ ಮಾದರಿಯಲ್ಲಿದೆ. 24.1 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುವ ಜೊತೆಗೆ 4K ವಿಡಿಯೊ ರೆಕಾರ್ಡಿಂಗ್‌ಗೆ ಸಹಕರಿಸಲಿದೆ.

ಕೆನಾನ್‌ನಿಂದ ಬಜೆಟ್‌ ದರದ ಹೊಸ DSLR ಕ್ಯಾಮೆರಾ ಲಾಂಚ್!

ಬಜೆಟ್‌ ದರದ ಈ ಕ್ಯಾಮೆರಾದಲ್ಲಿ 5fps ವೇಗದಲ್ಲಿ ಶೂಟ್‌ ಮಾಡಬಹುದಾಗಿದ್ದು, ಸ್ಪೋರ್ಟ್ಸ್ AF ಆಯ್ಕೆಯನ್ನು ಸಹ ಒದಗಿಸಲಾಗಿದೆ. ಆಂಡ್ರಾಯ್ಡ್‌ ಮತ್ತು ಐಎಸ್‌ಓ ಮಾದರಿಗೆಗಳಿಗೆ ಪ್ರತ್ಯೇಕ ಆಪ್‌ ಒಂದನ್ನು ನೀಡಲಾಗಿದ್ದು, ಆ ಮೂಲಕ ನೇರವಾಗಿ ಫೋಟೊಗಳನ್ನು ಆಪ್‌ಗೆ ವರ್ಗಾಯಿಸಬಲ್ಲ ಅವಕಾಶವಿದೆ. ಹಾಗಾದರೇ ಕೆನಾನ್ ಕ್ಯಾಮೆರಾ ಹೊಂದಿರುವ ಇನ್ನಿತರ ವಿಶೇಷ ಫೀಚರ್ಸ್‌ಗಳನ್ನು ನೋಡೋಣ ಬನ್ನಿರಿ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಕೆನಾನ್ EOS 250D ಕ್ಯಾಮೆರಾವು ಕಂಫರ್ಟ್ ಮಾದರಿಯ ರಚನೆಯನ್ನು ಹೊಂದಿದ್ದು, ಇದರ ಸುತ್ತಳತೆಯು 122.4 x 92.6 x 69.8ಎಂಎಂ ಆಗಿದೆ. 449ಗ್ರಾಂ ತೂಕವನ್ನು ಹೊಂದಿರುವ ಕ್ಯಾಮೆರಾವು ಬ್ಲ್ಯಾಕ್ ಮತ್ತು ವೈಟ್‌ ಎರಡು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಫೇಸ್‌ ಡಿಟೆಕ್ಷನ್ ಆಯ್ಕೆ ಸಹ ನೀಡಲಾಗಿದೆ.

ಸೆನ್ಸಾರ್‌ ಫೀಚರ್ಸ್‌

ಸೆನ್ಸಾರ್‌ ಫೀಚರ್ಸ್‌

ಕೆನಾನ್ EOS 250D ಕ್ಯಾಮೆರಾವು 24.1ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುವ ಜತೆಗೆ APS-C ಸೆನ್ಸಾರ್‌ ಅನ್ನು ಹೊಂದಿದೆ. ಸೆನ್ಸಾರ್‌ನ ಐಎಸ್‌ಓ ಗರಿಷ್ಠ ಮಟ್ಟವು 25600 ಆಗಿದ್ದು, ಹಾಗೇ ಎಫ್‌ಪಿಎಸ್‌ ಗರಿಷ್ಠ ಮಟ್ಟವು 59.94 ಆಗಿದೆ. ಇದರ ಸೆನ್ಸಾರ್‌ ಟೆಕ್ನಾಲಜಿಯು ಡ್ಯುಯಲ್ ಪಿಕ್ಸಲ್ CMOS AF ಆಗಿದೆ.

ವ್ಯೂವ್‌ ಫೈಂಡರ್‌

ವ್ಯೂವ್‌ ಫೈಂಡರ್‌

ಐ ಲೆವಲ್ ಎಸ್‌ಎಲ್‌ಆರ್‌ ಮಾದರಿಯ ವ್ಯೂವ್‌ ಫೈಂಡರ್‌ ಅನ್ನು ಹೊಂದಿದ್ದು, ವ್ಯೂವ್‌ ಫೈಂಡರ್‌ ಮ್ಯಾಗ್ನಿಫಿಕೇಶನ್ ಅಂದಾಜು 0.87x/24.5° ಆಗಿದೆ. ವ್ಯೂವ್‌ ಪಾಯಿಂಟ್ ಅಡ್ಜಸ್ಟ್‍ಮೆಂಟ್ ಆಯ್ಕೆ ಇದ್ದು, ಸುಮಾರು -3.0 to +1.0 m ವ್ಯಾಪ್ತಿಯಲ್ಲಿರಲಿದೆ. ಉದ್ದವಾಗಿ ಮತ್ತು ಅಗಲವಾಗಿ ಸುಮಾರು ಶೇ. 95% ರಷ್ಟು ವ್ಯಾಪ್ತಿಯಲ್ಲಿ ವ್ಯೂವ್‌ ಫೈಂಡರ್‌ ಕವರೇಜ್ ನೀಡುತ್ತದೆ.

ಡಿಸ್‌ಪ್ಲೇ ಫೀಚರ್ಸ್‌

ಡಿಸ್‌ಪ್ಲೇ ಫೀಚರ್ಸ್‌

ಕೆನಾನ್ EOS 250D ಕ್ಯಾಮೆರಾವು 3 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಟಚ್‌ಸ್ಕ್ರೀನ್ ಮಾನಿಟರ್ ಮಾದರಿಯಲ್ಲಿದೆ. ಡಿಸ್‌ಪ್ಲೇಯ ರೆಸಲ್ಯೂಶನ್ 1.04 ಮಿಲಿಯನ್ ಡಾಟ್ಸ್‌ಗಳ ಒಗ್ಗೂಡಿಕೆಯಿದ್ದು, ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿ ಕಾಣಿಸಲು ನೆರವಾಗುತ್ತದೆ.

ವಿಡಿಯೊ ಮೋಡ್

ವಿಡಿಯೊ ಮೋಡ್

3840 x 2160 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ 4K ವಿಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದ್ದು, ವಿಡಿಯೊಗಳು ಹೆಚ್ಚು ಗುಣಮಟ್ಟದಲ್ಲಿರಲಿವೆ. ವಿಡಿಯೊ ಮಾದರಿಗಳು MPEG-4 AVC / H.264 ಆಗಿದೆ. ಡಿಜಿಕ್ 8 ಇಮೇಜ್ ಫೋಟೊಗಳ ಗುಣಮಟ್ಟ ಹೆಚ್ಚಿಸಲಿದ್ದು, ವಿಡಿಯೊ ರೆಕಾರ್ಡಿಂಗ್‌ಗೆ ಹಲವು ಮೋಡ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಲಭ್ಯತೆ ಮತ್ತು ಬೆಲೆ

ಲಭ್ಯತೆ ಮತ್ತು ಬೆಲೆ

ಕೆನಾನ್ ಕಂಪನಿ ಹೊಸ ರೆಬಲ್ SL3 EOS 250D ಕ್ಯಾಮೆರಾವು ಅನಾವರಣಗೊಂಡಿದ್ದು, ಈ ತಿಂಗಳ ಅಂತ್ಯದೊಳಗೆ ಯುಎಸ್‌ ನಲ್ಲಿ ಸೇಲ್ ಆರಂಭಿಸಲಿದೆ. ಯುಎಸ್‌ನಲ್ಲಿ ಇದರ ಬೆಲೆಯು $599.99 ಆಗಿರಲಿಸಡ. (ಅಂದಾಜು 41,500ರೂ.ಗಳು)

Best Mobiles in India

English summary
Canon will start selling the EOS Rebel SL3 in the US by the end of the month with a retail price $599.99 (roughly Rs. 41,500) for the body only.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X