Subscribe to Gizbot

ಲಿನೊವೊ ವೈಬ್ ಸಿ2 ಪವರ್ ಸ್ಮಾರ್ಟ್‍ಫೋನ್ ಈಗ ಅಧಿಕೃತವಾಗಿ ಹೊಂದಿದೆ 3500ಎಮ್‍ಎಎಚ್ ಬ್ಯಾಟರಿ ಮತ್ತು ಆನ್ಡ್ರೊಯಿಡ್ 6.0 ಮಾರ್ಷ್‍ಮ್ಯಾಲೊ

ವೈಬ್ ಸಿ2 ಬಿಡುಗಡೆ ಮಾಡಿದ ಸ್ವಲ್ಪ ಸಮಯದಲ್ಲಿಯೆ ಲಿನೊವೊ ವೈಬ್ ಸಿ2 ಪವರ್ ಸ್ಮಾರ್ಟ್‍ಫೋನನ್ನು ರಷ್ಯಾ ಮಾರುಕಟ್ಟೆಯಲ್ಲಿ ಘೋಷಿಸಿದೆ. ಇಲ್ಲಿಯ ತನಕ ಬೆಲೆಯ ಬಗ್ಗೆ , ರಷ್ಯಾ ಮಾರುಕಟ್ಟೆ ಮತ್ತು ವಿಶ್ವ ಮಾರುಕಟ್ಟೆಯಲ್ಲಿನ ಲಭ್ಯತೆ ಬಗ್ಗೆ ಯಾವುದೆ ಮಾಹಿತಿ ದೊರೆತಿಲ್ಲಾ.

ಲಿನೊವೊ ವೈಬ್ ಸಿ2 ಪವರ್ ಸ್ಮಾರ್ಟ್‍ಫೋನ್ ಈಗ ಅಧಿಕೃತವಾಗಿ ಹೊಂದಿದೆ 3500ಎಮ್‍ಎಎಚ್

ವೈಬ್ ಸಿ2 ವಿನ ಹಾಗೆ ಈ ಪವರ್ ವೇರಿಯಂಟ್ 720 * 1280 ಪಿಕ್ಸೆಲ್ ರಿಸೊಲ್ಯುಷನ್ ಹೊಂದಿದ 5 ಇಂಚಿನ ಎಚ್‍ಡಿ ಡಿಸ್ಪ್ಲೆ ಮತ್ತು ಶಕ್ತಿ ಪಡೆಯಲು 1 ಗಿಗಾ ಹಡ್ಜ್ ಕ್ಚ್ಯಾಡ್ – ಕೊರ್ ಮೀಡಿಯಾಟೆಕ್ ಎಮ್‍ಟಿ6735ಪಿ ಪ್ರೊಸೆಸರ್ ನನ್ನು ತನ್ನೊಳಗೆ ಹೊಂದಿದೆ. ಪ್ರಾರಂಭದಲ್ಲಿ ಈ ಸುದ್ದಿ ಮೊದಲು ಪ್ರಕಟಗೊಳಿಸಿದ್ದು ಊeಟಠಿix.ಡಿu.

ಓದಿರಿ: ಫೇಸ್‌ ಟೈಮ್‌, ಸ್ಕೈಪಿಗೆ ಸ್ಪರ್ಧಿಯಾಗಿ 'ಗೂಗಲ್‌ ಡ್ಯುಯೊ' ವೀಡಿಯೊ ಕರೆ ಆಪ್‌!
ಮುಂದುವರೆದಂತೆ ಈ ಸ್ಮಾರ್ಟ್‍ಫೋನ್‍ನಲ್ಲಿ 2ಜಿಬಿ ರ್ಯಾಮ್, 16 ಜಿಬಿ ಇನ್ ಬಿಲ್ಟ್ ಮೆಮೊರಿ ಜೊತೆಗೆ 32ಜಿಬಿ ಮೈಕ್ರೊ ಎಸ್‍ಡಿ ಕಾರ್ಡ್ ಸ್ಲೊಟ್ ಆನ್ ಬೋರ್ಡ್ ನೊಂದಿಗೆ ಹೆಚ್ಚಿಸಬಹುದಾಗಿದೆ. ಇಮೇಜಿಂಗ್ ಬಗ್ಗೆ ಹೇಳಬೇಕೆಂದರೆ ಎಲ್‍ಇಡಿ ಫ್ಲಾಷ್ ನೊಂದಿಗಿನ 8ಎಮ್‍ಪಿ ರೇರ್ ಕ್ಯಾಮೆರಾ ಮತ್ತು 5 ಎಮ್‍ಪಿ ಫ್ರಂಟ್ ಕ್ಯಾಮೆರಾ ಹೊಂದಿದೆ ಮೊದಲು ಬಂದ ಮೊಬೈಲಿನಂತೆ. ಕನೆಕ್ಟಿವಿಟಿ ಆಯ್ಕೆಗಾಗಿ ಲಿನೊವೊ ವೈಬ್ ಸಿ2 ಪವರ್ 4ಜಿ, ಜಿಪಿಆರ್‍ಎಸ್/ಎಡ್ಜ್ , 3ಜಿ, ವೈ-ಫೈ 802.11 ಬಿ/ಜಿ/ಎನ್, ಬ್ಲೂ ಟೂತ್ 4.0, ಜಿಪಿಎಸ್ ಮತ್ತು ಮೈಕ್ರೊ-ಯುಎಸ್‍ಬಿ ಹೊಂದಿದೆ.

ಲಿನೊವೊ ವೈಬ್ ಸಿ2 ಪವರ್ ಸ್ಮಾರ್ಟ್‍ಫೋನ್ ಈಗ ಅಧಿಕೃತವಾಗಿ ಹೊಂದಿದೆ 3500ಎಮ್‍ಎಎಚ್

ಇದರಲ್ಲಿರುವ ಪ್ರಮುಖ ಬದಲಾವಣೆ ಎಂದರೆ ಇದರ ಬ್ಯಾಟರಿ, ಇದರ ಬ್ಯಾಟರಿ 3500 ಎಮ್‍ಎಎಚ್ ಪವರ್ ನದಾಗಿದೆ. ಅದೇ ವೈಬ್ ಸಿ2 2750 ಎಮ್‍ಎಎಚ್ ಅನ್ನು ಒಳಗೊಂಡಿದೆ. ಈ ಪವರ್ ಫೋನ್ ವಿಶೇಷವೆನ್ನುವಂತೆ ಆನ್ಡ್ರೊಯಿಡ್ 6.0 ಮಾರ್ಷ್‍ಮ್ಯಾಲೊ ಮೇಲೆ ಕಾರ್ಯನಿರ್ವಹಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಸ್ಮಾರ್ಟ್‍ಫೋನ್ ನಿನ ಅಳತೆ 143 * 71.4 * 9.5 ಎಮ್‍ಎಮ್ ಮತ್ತು ಭಾರ 156 ಗ್ರಾಮ್ ಆಗಿದೆ.

ಓದಿರಿ: ಏಸಸ್ ಝೆನ್ ವಾಚ್ 3 ಹೇಗಿರುತ್ತದೆ ಗೊತ್ತೆ?

ಅದೇನಿದ್ದರು, ಬೆಲೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲಾ, ಇದರ ಮಾರುಕಟ್ಟೆ ದರ ಸುಮಾರು ಆರ್‍ಯುಬಿ 11000(ರೂ.11000 ಅಂದಾಜು) ಇರಬಹುದೆಂದು ಊಹಿಸಲಾಗಿದೆ.

English summary
Soon after launching the Vibe C2, Lenovo has announced Vibe C2 Power smartphone in the Russian market. As of now, we don't have any information about the pricing and availability of the device in Russiaand the Global market as well.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot