ಇನ್ನು ಚೀನಾದಲ್ಲೂ ಸಾಮಾಜಿಕ ಜಾಲತಾಣ ಪ್ರವೇಶ

By Shwetha
|

ಎಪಿಇಸಿ ಸಮ್ಮಿಟ್‌ನಲ್ಲಿ ತನ್ನ ಇರುವನ್ನು ಪ್ರಸ್ತುತಪಡಿಸುವ ಮೂಲಕ ಸಾಮಾಜಿಕ ತಾಣದ ಮೇಲೆ ಚೀನಾ ಇದುವರೆಗೆ ವಿಧಿಸಿದ್ದ ನಿಷೇಧವನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಫೇಸ್‌ಬುಕ್, ಟ್ವಿಟ್ಟರ್ ಅನ್ನು ಪ್ರವೇಶಿಸುವ ಹಕ್ಕನ್ನು ಜನರಿಗೆ ನೀಡಿದೆ. ಈ ಮೂಲಕ ನಿಷೇಧವನ್ನು ಹಿಂದಕ್ಕೆ ಪಡೆದುಕೊಂಡಿದೆ.

ವರದಿಗಾರರು ಟ್ವಿಟ್ಟರ್, ಫೇಸ್‌ಬುಕ್ ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣವನ್ನು ಹುಡುಕಾಡಲು ಅನುಮತಿಯನ್ನು ನೀಡಿದ್ದು ದಲೈ ಲಾಮಾರನ್ನು ವೆಬ್‌ನಲ್ಲಿ ಹುಡುಕಾಡುವ ಮೂಲಕ ನಿಷೇಧಕ್ಕೆ ತಿಲಾಂಜಲಿಯನ್ನು ನೀಡಿದೆ. ದೇಶದಲ್ಲಿ ಇಂತಹ ತಾಣಗಳನ್ನು ಪ್ರವೇಶಿಸುವ ಹಕ್ಕನ್ನು ಚೀನಾ ಸರಕಾರ ನಿಷೇಧಿಸಿತ್ತು. ಈ ಅತಿ ಮುಖ್ಯ ಅಂತರಾಷ್ಟ್ರೀಯ ಈವೆಂಟ್‌ನಲ್ಲಿ ಅಂತರ್ಜಾಲದ ಮೇಲಿನ ತನ್ನ ಕಪಿಮುಷ್ಟಿಯನ್ನು ಚೀನಾ ಸಡಿಲಗೊಳಿಸಿದೆ.

ಸಾಮಾಜಿಕ ತಾಣದ ಮೇಲಿನ ನಿಷೇಧ ತೆರವು

ಇದನ್ನೂ ಓದಿ: ಫೇಸ್‌ಬುಕ್ ಜ್ಞಾನವನ್ನು ಹೆಚ್ಚಿಸುವ ಟಾಪ್ ತಂತ್ರಗಳು

ನವೆಂಬರ್ ನಂತರ ಆರಂಭವಾಗಲಿರುವ 10 ನಾಯಕರ ಅಧಿಪತ್ಯದಲ್ಲಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಬೀಜಿಂಗ್‌ನಲ್ಲಿ ನಡೆಯಲಿರುವ ಎಪಿಇಸಿ ಕಾನ್ಫರೆನ್ಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ಲ್ಯಾಪ್‌ಟಾಪ್‌ಗಳನ್ನು ವೇಗವಾಗಿರುವ ಅಂತರ್ಜಾಲ ವ್ಯವಸ್ಥೆಯೊಂದಿಗೆ ಸುಸಜ್ಜಿತಗೊಳಿಸಲಾಗಿದೆ.

ಇನ್ನು ಈ ತಾಣಗಳನ್ನು ಪ್ರವೇಶಿಸಲು ಅಂತರ್ಜಾಲ ವ್ಯವಸ್ಥೆಯನ್ನು ಹೊಂದದೇ ಇರುವವರಿಗೂ ಹೊರಗಿನಿಂದ ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸಲಾಗಿದೆ. ನೆಟ್‌ನಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದ್ದ ದಲೈಲಾಮಾ ಸುದ್ದಿಯನ್ನು ಮಾಧ್ಯಮ ವ್ಯಕ್ತಿಗಳು ಯಾವುದೇ ನಿರ್ಬಂಧವಿಲ್ಲದೆ ಹುಡುಕಾಡಬಹುದಾಗಿದೆ. ಶಕ್ತಿಯುತವಾದ ಫೈರ್ವಾಲ್‌ಗಳೊಂದಿಗೆ ತನ್ನ ಅಂತರ್ಜಾಲವನ್ನು ಚೀನಾ ನಿಯಂತ್ರಣದಲ್ಲಿರಿಸಿಕೊಂಡಿದ್ದು ಜನರ ಮೇಲೆ ಸಾಮಾಜಿಕ ಮಾಧ್ಯಮ ಋಣಾತ್ಮಕ ಪರಿಣಾಮವನ್ನು ಬೀರಬಹುದು ಎಂಬ ಭಯ ದೇಶಕ್ಕಿತ್ತು. ಆದ್ದರಿಂದಲೇ ಚೀನಾ ಅಂತರ್ಜಾಲ ಪ್ರವೇಶವನ್ನು ನಿಷೇಧಿಸಿತ್ತು.

Best Mobiles in India

English summary
This article tells about China Opens Up to Social Networking Websites.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X