Subscribe to Gizbot

2016ರ ಐದು ವಿಚಿತ್ರ ಗ್ಯಾಜೆಟ್ಟುಗಳು!

Written By:

ತಂತ್ರಜ್ಞಾನ ವಿಪರೀತ ವೇಗವಾಗಿ ಮುನ್ನಡೆಯುತ್ತಿದೆ. ನಿಜವಾಗಲೂ! ಒಂದು ದಶಕದ ಕೆಳಗೆ ಆಹಾರವನ್ನಾಗಲೀ ಬಟ್ಟೆಯನ್ನಾಗಲೀ ಅಥವಾ ಏನನ್ನೇ ಆಗಲಿ ಆರ್ಡರ್ ಮಾಡುವ ಸಾಧ್ಯತೆ ಎಷ್ಟೊಂದು ದೂರದ ಕನಸು ಎಂದೆನಿಸುತ್ತಿತ್ತಲ್ಲವೇ?

2016ರ ಐದು ವಿಚಿತ್ರ ಗ್ಯಾಜೆಟ್ಟುಗಳು!

ತಂತ್ರಜ್ಞಾನದ ಬೆಳವಣಿಗೆಯು ಬಹಳಷ್ಟು ಬದಲಾವಣೆಗಳನ್ನು ಹೊತ್ತು ತಂದಿದೆ ಎನ್ನುವುದು ಸತ್ಯ. ಇದು ನಮ್ಮ ಜೀವನಶೈಲಿಯಿಂದಲೇ ಅರಿವಾಗುತ್ತದೆ. ಎಲ್ಲವೂ ಬದಲಾಗಿ ಬಿಟ್ಟಿದೆ, ನಾವು ಸಂವಹಿಸುವ ರೀತಿ, ಅಂತರ್ಜಾಲವನ್ನು ಬಳಸುವ ರೀತಿ, ಹೊಸ ಸಂಗತಿಗಳನ್ನು ಕಲಿಯುವ ರೀತಿ, ಹೆಚ್ಚು ಕಡಿಮೆ ಪ್ರತಿಯೊಂದೂ ಬದಲಾಗಿಬಿಟ್ಟಿದೆ.

ಓದಿರಿ:1GB ಡಾಟಾ ಬೆಲೆಗೆ 10GB 4G ಡಾಟಾ ಆಕ್ಸೆಸ್‌: ವೊಡಾಫೋನ್ ಆಫರ್

ಒಂದಷ್ಟು ಜನರು ನಮ್ಮ ಬದುಕು ಮತ್ತಷ್ಟು ಸಲೀಸಾಗಲೆಂಬ ಕಾರಣದಿಂದ ಹೊಸ ಸಾಧನಗಳನ್ನು ಅನ್ವೇಷಿಸುತ್ತಿದ್ದರೆ, ಕೆಲವರು ನಾವು ಇದುವರೆಗೂ ನೋಡದೇ ಇರುವ ವಿಚಿತ್ರ ವಿಕ್ಷಿಪ್ತ ಗ್ಯಾಜೆಟ್ಟುಗಳನ್ನು ತಯಾರಿಸುತ್ತಿದ್ದಾರೆ! ಈ ವರ್ಷ ಬಿಡುಗಡೆಗೊಂಡ ಅಂತಹ ಕೆಲವು ಗ್ಯಾಜೆಟ್ಟುಗಳು ಇಲ್ಲಿವೆ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆನ್ಸಾರ್ ವೇಕ್, ಆಲ್ಫ್ಯಾಕ್ಟರಿ ಅಲಾರ್ಮ್ ಗಡಿಯಾರ.

ಸೆನ್ಸಾರ್ ವೇಕ್, ಆಲ್ಫ್ಯಾಕ್ಟರಿ ಅಲಾರ್ಮ್ ಗಡಿಯಾರ.

ಹೆಸರಿನಿಮದಲೇ ತಿಳಿದುಹೋಗುತ್ತದೆ, ಈ ಸಾಧನವು ಎಲ್ಲಾ ಅಲಾರ್ಮ್ ಗಡಿಯಾರಗಳಂತೆಯೇ ನಿಮ್ಮನ್ನು ಎಚ್ಚರಗೊಳಿಸಲೆಂದೇ ತಯಾರಿಸಲಾಗಿದೆ. ಆದರೆ, ಬೇರೆ ಅಲಾರ್ಮ್ ಗಳಿಗೆ ಹೋಲಿಸಿದರೆ ಸೆನ್ಸಾರ್ ವೇಕ್ ಶಬ್ದದ ಬದಲಿಗೆ ವಿವಿಧ ರೀತಿಯ ವಾಸನೆಗಳನ್ನು ಉಪಯೋಗಿಸಿ ನಿಮ್ಮನ್ನು ಎಚ್ಚರಗೊಳಿಸುತ್ತದೆ! ವಿಚಿತ್ರವಲ್ಲವೇ? ಜೊತೆಗೆ ಇದು ವಿವಿಧ ವಾಸನೆಗಳನ್ನು ನೀವೇ ಆಯ್ಕೆ ಮಾಡಿಕೊಳ್ಳುವ ಸೌಕರ್ಯವನ್ನೂ ನೀಡುತ್ತದೆ! ಉದಾಹರಣೆಗೆ ಕಾಫಿ ವಾಸನೆ, ಮಿಂಟ್, ಪೀಚ್, ಮತ್ತು ಇನ್ನೂ ಅನೇಕ ವಿಧದ ವಾಸನೆ.

ಇಹಾಂಗ್ 184, ಆಟೊನಾಮಸ್ ಏರಿಯಲ್ ವಾಹನ.

ಇಹಾಂಗ್ 184, ಆಟೊನಾಮಸ್ ಏರಿಯಲ್ ವಾಹನ.

ಚೀನಾದ ಇಹಾಂಗ್ ಕಂಪನಿ ಇದನ್ನು ತಯಾರಿಸಿದೆ. ಇಹಾಂಗ್ 184 ಮಾನವನ ಗಾತ್ರದ ಡ್ರೋನ್. ಇದು ಒಬ್ಬ ಪ್ರಯಾಣಿಕನನ್ನು ಸ್ವಲ್ಪ ಸಮಯದವರೆಗೆ ಅಂದರೆ 20 ನಿಮಿಷಗಳ ಕಾಲ 96 ಕಿಲೋಮೀಟರ್ ವೇಗದಲ್ಲಿ ಸಾಗಿಸಲ್ಲದು! ಇದರಲ್ಲೇನು ವಿಚಿತ್ರ ಎನ್ನುವಿರಾ? ಇದರಲ್ಲಿ ಡ್ರೈವರ್ ಇರುವುದಿಲ್ಲ, ಯಾವುದೇ ರೀತಿಯ ನಿಯಂತ್ರಕಗಳಿರುವುದಿಲ್ಲ. ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಆ್ಯಪ್ ಉಪಯೋಗಿಸಿಕೊಂಡು ತಲುಪಬೇಕಾದ ಜಾಗವನ್ನು ಟೈಪಿಸಿದರೆ ಸಾಕು ಉಳಿದ ಕೆಲಸವನ್ನು ಡ್ರೋನ್ ನೆರವೇರಿಸುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಮಾರ್ಟರ್ಸ್ ಫ್ರಿಡ್ಜ್ ಕ್ಯಾಮ್.

ಸ್ಮಾರ್ಟರ್ಸ್ ಫ್ರಿಡ್ಜ್ ಕ್ಯಾಮ್.

ನಿಮ್ಮ ಫ್ರಿಡ್ಜಿನೊಳಗೊಂದು ಕ್ಯಾಮೆರಾ ಇಟ್ಟು ಅದರಲ್ಲೇನಿದೆಯೆಂದು ನಿಮ್ಮ ಮೊಬೈಲಿನ ಮೂಲಕ ನೋಡುವುದು ಹೇಗಿರುತ್ತದೆ? ಸ್ಮಾರ್ಟರ್ಸ್ ಫ್ರಿಡ್ಜ್ ಕ್ಯಾಮೆರಾದಲ್ಲಿ ನೀವಿದನ್ನು ಮಾಡಬಹುದು! ಜೊತೆಗೆ, ಫ್ರಿಡ್ಜಿನಲ್ಲಿರುವ ವಸ್ತುಗಳ ಅವಧಿ ಮುಗಿದು ಹೋಗುವ ಸಮಯ ಬಂದಾಗ ನಿಮ್ಮ ಮೊಬೈಲಿಗೆ ಸಂದೇಶವೂ ಬರುತ್ತದೆ! ಇದು 2016ರ ವಿಚಿತ್ರ ಗ್ಯಾಜೆಟ್ ತಾನೇ?

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡ್ಯಾವೆಕ್ ಅಲರ್ಟ್ ಸ್ಮಾರ್ಟ್ ಛತ್ರಿ!

ಡ್ಯಾವೆಕ್ ಅಲರ್ಟ್ ಸ್ಮಾರ್ಟ್ ಛತ್ರಿ!

ಡ್ಯಾವೆಕ್ ಅಲರ್ಟ್ ಸ್ಮಾರ್ಟ್ ಛತ್ರಿ, ಛತ್ರಿಯೇ ಹೌದು! ಆದರೆ ಇದರ ಹಿಡಿಯಲ್ಲಿ ಒಂದು ಚಿಕ್ಕ ಚಿಪ್ ಅಡಕವಾಗಿದೆ. ಈ ಚಿಪ್ ಛತ್ರಿಯಿಂದ ನಿಮ್ಮ ಮೊಬೈಲ್ ಫೋನಿಗೆ ಆ್ಯಪ್ ಮೂಲಕ ಸಂದೇಶವನ್ನು ಕಳುಹಿಸುತ್ತದೆ! ಯಾತಕ್ಕೆ ಈ ಸಂದೇಶ?

ನೀವು ಛತ್ರಿಯಿಂದ 30 ಅಡಿಗಳಿಗಿಂತ ದೂರ ಹೋದರೆ ನಿಮಗಿದು ಸಂದೇಶ ಕಳುಹಿಸುತ್ತದೆ! ಪದೇ ಪದೇ ಛತ್ರಿಯನ್ನು ಕಳೆದುಕೊಳ್ಳುವ ಪೈಕಿ ನೀವೂ ಒಬ್ಬರಾಗಿದ್ದರೆ, ಮಳೆಗಾಲದಲ್ಲಿ ಛತ್ರಿ ತೆಗೆದುಕೊಂಡು ಹೋಗಲು ಮರೆಯುವವರು ನೀವಾಗಿದ್ದರೆ, ಈ ಸಾಧನ ನಿಮಗಾಗಿ!

ಡಾಕ್ರಿ ಸ್ಮಾರ್ಟ್ ಹೆಲ್ಮೆಟ್.

ಡಾಕ್ರಿ ಸ್ಮಾರ್ಟ್ ಹೆಲ್ಮೆಟ್.

ಕೈಗಾರಿಕೆಗಳಲ್ಲಿನ ಬಳಕೆಗೆ ತಯಾರಿಸಲಾಗಿರುವ ಈ ಸ್ಮಾರ್ಟ್ ಹೆಲ್ಮೆಟ್, ಅದನ್ನು ಧರಿಸುವವರ ಮುಂದೆ ಅನುಕೂಲಕರ ದೃಶ್ಯಗಳನ್ನು ತೋರಿಸುತ್ತದೆ. ಇದು ಗಟ್ಟಿಯಾಗಿಯೂ ಇದೆ, ಸುರಕ್ಷಾ ಹೆಲ್ಮೆಟ್ ಆಗಿ ಕೂಡ ಬಳಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
While a few folks are innovating new technologies to make our lives more convenient, few others are busy inventing the weirdest of gadgets. Here"s a list of such gadgets introduced this year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot