Subscribe to Gizbot

ಏರ್‌ಟೆಲ್ ಕೂಡ ತರುತ್ತಿದೆ ಅತ್ಯದ್ಭುತ ಫ್ರಿ ಇಂಟರ್ನೆಟ್ ಪ್ಲಾನ್ಸ್!!!

Written By:

ಜಿಯೋ ತನ್ನ 4ಜಿ ಸೇವೆಯನ್ನು ಭಾರತದಲ್ಲಿ ಪ್ರಸ್ತುತಪಡಿಸಿದ ನಂತರ ಇತರ ಟೆಲಿಕಾಮ್ ಕಂಪೆನಿಗಳಿಗೆ ಸಂಕಷ್ಟ ಎದುರಾಗಿರುವುದಂತೂ ನಿಜ. ಇದಕ್ಕಾಗಿಯೇ ಎಲ್ಲಾ ಟೆಲಿಕಾಮ್ ಆಪರೇಟರ್‌ಗಳು ಹೊಸ ಹೊಸ ಆಫರ್‌ಗಳೊಂದಿಗೆ ಬರುತ್ತಿದ್ದು ಜಿಯೋಗೆ ತಕ್ಕ ಸ್ಪರ್ಧೆಯನ್ನು ನೀಡುತ್ತಿದೆ. ಇತ್ತೀಚೆಗೆ ತಾನೇ, ಏರ್‌ಟೆಲ್ ಹೊಸ ಯೋಜನೆಯೊಂದನ್ನು ಲಾಂಚ್ ಮಾಡಿದ್ದು ಇನ್‌ಫಿನಿಟಿ ಪ್ಲಾನ್ ಎಂಬುದಾಗಿ ಇದನ್ನು ಕರೆದಿದೆ. ಈ ಪ್ಲಾನ್ ಮೂಲಕ ಅನಿಯಮಿತ ವಾಯ್ಸ್ ಕಾಲಿಂಗ್, ಸ್ಥಳೀಯ ಮತ್ತು ಎಸ್‌ಟಿಡಿ ಸೇರಿದಂತೆ ರಾಷ್ಟ್ರೀಯ ರೋಮಿಂಗ್ ಅನ್ನು ಇದು ಆಫರ್ ಮಾಡುತ್ತಿದೆ.

ಓದಿರಿ: ಜಿಯೋ ಕುರಿತಾದ ದೂರು ಸಲ್ಲಿಸಲು ಟಾಲ್ ಫ್ರಿ, ಕಸ್ಟಮರ್ ಕೇರ್ ವಿವರಗಳು

ಅನಿಯಮಿತ ವಾಯ್ಸ್ ಕರೆಗಳು, ದಿನಕ್ಕೆ 100 ಎಸ್‌ಎಮ್‌ಎಸ್, 1ಜಿಬಿ 3ಜಿ/4ಜಿ ಡೇಟಾ ಇದರ ಜೊತೆಗೆ ವಯಾಂಕ್ ಮ್ಯೂಸಿಕ್‌ ಮತ್ತು ವಯಾಂಕ್ ಚಲನಚಿತ್ರಕ್ಕೆ ಉಚಿತ ಚಂದಾದಾರಿಕೆ ಹೀಗೆ ಇದೆಲ್ಲಾ ಯೋಜನೆಗಳು ನಿಮಗೆ ರೂ 1,199 ಕ್ಕೆ ಲಭ್ಯವಾಗುತ್ತಿದೆ. ಇಂದಿನ ಲೇಖನದಲ್ಲಿ ಏರ್‌ಟೆಲ್ ಒದಗಿಸುತ್ತಿರುವ ಟಾಪ್ ಫ್ಯಾಮಿಲಿ ಟಾರಿಫ್ ಪ್ಲಾನ್‌ಗಳ ಮಾಹಿತಿಯನ್ನು ನೀಡುತ್ತಿದ್ದು ಇದರ ವಿವರ ಇಲ್ಲಿದೆ.

ಓದಿರಿ: ಮಿಸ್ಡ್ ಕಾಲ್ ನೀಡಿ ಏರ್‌ಟೆಲ್‌ನಿಂದ ಉಚಿತ 4ಜಿ ಡೇಟಾ ಪಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಏರ್‌ಟೆಲ್ ಫ್ಯಾಮಿಲಿ ಪ್ಲಾನ್ (ಪ್ರಿಪೈಡ್)

ಮೈಏರ್‌ಟೆಲ್ ಫ್ಯಾಮಿಲಿ ಪ್ಲಾನ್ (ಪ್ರಿಪೈಡ್)

ಮೈಏರ್‌ಟೆಲ್ ಫ್ಯಾಮಿಲಿ ಪ್ಲಾನ್ 5 ಜನರ ಸಮೂಹವನ್ನು ರಚಿಸಲು ಅವಕಾಶವನ್ನು ಮಾಡಿಕೊಡುತ್ತದೆ. ಈ ಯೋಜನೆಯ ಅಡಿಯಲ್ಲಿ, ಎಲ್ಲಾ ಗುಂಪಿನ ಸದಸ್ಯರು ಏಕೈಕ 3ಜಿ/4ಜಿ ಪ್ಯಾಕ್ ಅನ್ನು ಹಂಚಿಕೊಳ್ಳಬಹುದಾಗಿದೆ. ಗುಂಪನ್ನು ರಚಿಸುವಲ್ಲಿ ಏರ್‌ಟೆಲ್ ನಿಮ್ಮನ್ನು ನಿರ್ಬಂಧಿಸುವುದಿಲ್ಲ ಆದರೆ ನೀವು ಮೊಬೈಲ್ ಡೇಟಾವನ್ನು ಹಾಕಿಕೊಂಡಿಲ್ಲ ಎಂದಾದಲ್ಲಿ ಡೇಟಾ ಪ್ಯಾಕ್ ಅನ್ನು ನೀವು ರಿಫಿಲ್ ಮಾಡಬೇಕಾಗುತ್ತದೆ.

ಏರ್‌ಟೆಲ್ ಮೈಪ್ಲಾನ್ (ಪೋಸ್ಟ್ ಪೇಡ್)

ಏರ್‌ಟೆಲ್ ಮೈಪ್ಲಾನ್ (ಪೋಸ್ಟ್ ಪೇಡ್)

ರೂ 299 ರಿಂದ ತೊಡಗಿ ರೂ 1,599 ರವರೆಗೆ ಆರು ರೆಂಟಲ್ಸ್‌ಗಳು ಈ ಪ್ಲಾನ್‌ನಲ್ಲಿ ಲಭ್ಯವಿದೆ. ರೂ 299 ರೆಂಟಲ್‌ಗೆ ನೀವು 9 ಮೈಪ್ಯಾಕ್‌ಗಳನ್ನು ಗಳಿಸಿಕೊಳ್ಳಬಹುದಾಗಿದೆ. ಅಂತೆಯೇ ರೂ 1,599 ರೆಂಟಲ್‌ಗೆ ನೀವು 90 ರ ಪ್ಯಾಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇದು 3ಜಿ/4ಜಿ ಡೇಟಾ, ಸ್ಥಳೀಯ ಕರೆಗಳು, ಎಸ್‌ಟಿಡಿ ಕರೆಗಳು, ರಾಷ್ಟ್ರೀಯ ಎಸ್‌ಎಮ್‌ಎಸ್, ಹೊರಹೋಗುವ ರೋಮಿಂಗ್, ಅಂತರಾಷ್ಟ್ರೀಯ ಕರೆಗಳನ್ನು ಹೊಂದಿದೆ.

ಏರ್‌ಟೆಲ್ ಮೈ ಪ್ಲಾನ್ ರೂ 949

ಏರ್‌ಟೆಲ್ ಮೈ ಪ್ಲಾನ್ ರೂ 949

ಹೆಸರೇ ಸೂಚಿಸುವಂತೆ, ಈ ಪ್ಲಾನ್ ಪ್ರತೀ ತಿಂಗಳಿಗೆ ರೂ 949 ರಂತೆ ಅನಿಯಮಿತ ಸ್ಥಳೀಯ ಕರೆಗಳನ್ನು ಆಫರ್ ಮಾಡಲಿದೆ. ಇಷ್ಟಲ್ಲದೆ, ಮ್ಯೂಸಿಕ್ ಮತ್ತು ಚಲನ ಚಿತ್ರಗಳ ಆಫರ್ ಅನ್ನು ಪಡೆದುಕೊಳ್ಳುವ ಅವಕಾಶವನ್ನು ಒದಗಿಸುತ್ತಿದೆ. ದಿನಕ್ಕೆ 100 ಎಸ್‌ಎಮ್‌ಎಸ್ ಮತ್ತು 1ಜಿಬಿ 3ಜಿ/4ಜಿ ಡೇಟಾವನ್ನು ನೀಡುತ್ತಿದೆ.

ಏರ್‌ಟೆಲ್ ಮೈಪ್ಲಾನ್ ರೂ 1,599

ಏರ್‌ಟೆಲ್ ಮೈಪ್ಲಾನ್ ರೂ 1,599

ಈ ಪ್ಲಾನ್, ನಿಮಗೆ ಅನಿಯಮಿತ ಎಸ್‌ಟಿಡಿ ಕರೆಗಳು, ಅನಿಯಮಿತ ರೋಮಿಂಗ್ ಮತ್ತು ಹೆಚ್ಚುವರಿ 4ಜಿಬಿ ಡೇಟಾ ರೂ 1,599 ಬೆಲೆಯದ್ದನ್ನು ನೀಡಲಿದೆ.

ಏರ್‌ಟೆಲ್ ಮೈಪ್ಲೇನ್ ರೂ 2,999

ಏರ್‌ಟೆಲ್ ಮೈಪ್ಲೇನ್ ರೂ 2,999

ತಿಂಗಳಿಗೆ ನೀವು ಹೆಚ್ಚುವರಿ ಮೊಬೈಲ್ ಡೇಟಾವನ್ನು ಖರ್ಚು ಮಾಡುತ್ತಿದ್ದೀರಿ ಎಂದಾದಲ್ಲಿ, ಈ ಪ್ಲಾನ್ ನಿಮಗೆ ಸೂಕ್ತವಾದುದಾಗಿದೆ. ನೀವು 2,999 ಕ್ಕೆ ಅನಿಯಮಿತ ಸ್ಥಳೀಯ ಕರೆಗಳು, ಮ್ಯೂಸಿಕ್ ಮತ್ತು ಮೂವೀಗಳನ್ನು ನೋಡುವುದು, ದಿನಕ್ಕೆ 100 ಎಸ್‌ಎಮ್‌ಎಸ್, ಅನಿಯಮಿತ ಎಸ್‌ಟಿಡಿ ಕರೆಗಳು, ಅನಿಯಮಿತ ರೋಮಿಂಗ್, 20 ಜಿಬಿ 3ಜಿ/4ಜಿ ಡೇಟಾವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

100 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳು

100 ಜಿಬಿ ಡೇಟಾ ಮತ್ತು ಅನಿಯಮಿತ ಕರೆಗಳು

16 ಎಮ್‌ಬಿಪಿಎಸ್ ವೇಗದೊಂದಿಗೆ, ನೀವು 100 ಜಿಬಿ ಡೇಟಾವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಅನಿಯಮಿತ ಎಸ್‌ಟಿಡಿ ಮತ್ತು ಸ್ಥಳೀಯ ಕರೆಗಳನ್ನು ರೂ 1,599 ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ರೂ 999 ಕ್ಕೆ 16 ಎಮ್‌ಬಿಪಿಎಸ್‌ಗಿಂತಲೂ ಮೇಲ್ಮಟ್ಟದ ವೇಗ

ರೂ 999 ಕ್ಕೆ 16 ಎಮ್‌ಬಿಪಿಎಸ್‌ಗಿಂತಲೂ ಮೇಲ್ಮಟ್ಟದ ವೇಗ

ಯಶಸ್ವಿ ರಿಜಿಸ್ಟ್ರೇಶನ್ ಅನ್ನು ನೀವು ಪೂರ್ಣಗೊಳಿಸಿದ ಬಳಿಕ, ತಿಂಗಳಿಗೆ 16 ಎಮ್‌ಬಿಪಿಎಸ್ ವೇಗದಲ್ಲಿ 40 ಜಿಬಿ ಡೇಟಾವನ್ನು ರೂ 999 ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಉಚಿತ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ರೂ 99 ಅನ್ನು ಹೆಚ್ಚುವರಿಯಾಗಿ ಪಾವತಿ ಮಾಡುವುದರ ಮೂಲಕ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಮೈ ಫ್ಯಾಮಿಲಿ (ಡಿಟಿಎಚ್)

ಮೈ ಫ್ಯಾಮಿಲಿ (ಡಿಟಿಎಚ್)

ತಿಂಗಳಿಗೆ ರೂ 399 ರ ಚಂದಾದಾರಿಕೆ ಫೀಸ್ ಅನ್ನು ನೀಡುವುದರ ಮೂಲಕ 173 ಚಾನಲ್‌ಗಳ ಪ್ರವೇಶವನ್ನು ನೀವು ಹೊಂದಬಹುದಾಗಿದೆ. ಆರಂಭದಲ್ಲಿ ನೀವು ರೂ 1,520 ಅನ್ನು ಇನ್‌ಸ್ಟಾಲೇಶನ್‌ನಂತೆ ಪಾವತಿಸಬೇಕು.

ಮೈ ಫ್ಯಾಮಿಲಿ ಸೌತ್ (ಡಿಟಿಎಚ್)

ಮೈ ಫ್ಯಾಮಿಲಿ ಸೌತ್ (ಡಿಟಿಎಚ್)

ಯೋಜನೆಯಲ್ಲಿ, ನೀವು ರೂ 333 ಕ್ಕೆ 245 ಚಾನಲ್‌ಗಳ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಆರಂಭ ಶುಲ್ಕ ರೂ 1,360 ಅನ್ನು ನೀವು ಪಾವತಿ ಮಾಡಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
So, for all those who are still with Airtel, here's a list of top10 family tariff plans.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot